ಬೆಂಗಳೂರು: ರಾಜಧಾನಿಯ ಶಾಂತಿನಗರದಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರು (Auto Drivers, Cab Drivers) ಓಲಾ- ಉಬರ್ (Ola, Uber) ಮುಂತಾದ ಆನ್‌ಲೈನ್ ಟ್ಯಾಕ್ಸಿ ವ್ಯವಸ್ಥೆಗಳ ವಿರುದ್ಧ ಸಾರಿಗೆ ಇಲಾಖೆ (Transport department) ಮುಖ್ಯ ಕಚೇರಿಗೆ ಮುತ್ತಿಗೆ (Drivers Protest) ಹಾಕಿದರು. ಬಿಟಿಎಸ್ ರೋಡ್ ಬ್ಲಾಕ್ (Road Block) ಮಾಡಿ ಪ್ರತಿಭಟನೆ (Protest) ನಡೆಸಿದರು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು.
ಸಾವಿರಾರು ಆಟೋ, ಕ್ಯಾಬ್‌ಗಳನ್ನು ತಂದಿರುವ ಚಾಲಕರು ತಮ್ಮ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಆಟೋ ಕ್ಯಾಬ್‌ಗಳನ್ನು ಎಲ್ಲೆಂದಲ್ಲಿ ನಿಲ್ಲಿಸಿದ್ದರಿಂದ ಬಿಟಿಎಸ್ ರೋಡ್‌ನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ವಾಹನಗಳೆಲ್ಲ ರಸ್ತೆಯಲ್ಲೇ ನಿಂತವು.
ರಾಜ್ಯ ಸರ್ಕಾರ ಫೆಬ್ರವರಿಯಲ್ಲಿಯೇ ʼಒನ್ ಸಿಟಿ ಒನ್ ರೇಟ್ʼ ಆದೇಶವನ್ನು ಹೊರಡಿಸಿದೆ. ಆದೇಶ ಆಗಿ ಆರು ತಿಂಗಳಾದರೂ ಓಲಾ- ಉಬರ್ ಸೇರಿ ಯಾವುದೇ ಅಗ್ರಿಗೇಟರ್ ಕಂಪನಿಗಳು ಆದೇಶವನ್ನು ಪಾಲನೆ ಮಾಡ್ತಿಲ್ಲ. ಆರ್ಟಿಓ ಅಧಿಕಾರಿಗಳು ಆದೇಶ ಪಾಲನೆ ಮಾಡದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಾಲಕರು ಆರ್ಟಿಓ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿದ್ದಾರೆ.
ರಾಜ್ಯ ಸರ್ಕಾರ ಪ್ರಯಾಣಿಕರಿಗೆ ತೊಂದರೆ ಆಗಬಾರದು, ಪ್ರಯಾಣಿಕರಿಂದ ದುಪ್ಪಟ್ಟು ದರ ತೆಗೆದುಕೊಳ್ಳಬಾರದು ಎಂದು ಆದೇಶ ನೀಡಿದೆ. ಆದರೆ ಓಲಾ- ಉಬರ್ ಸೇರಿದಂತೆ ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ದುಪ್ಪಟ್ಟು ದರವನ್ನು ಪಡೆದುಕೊಳ್ಳುತ್ತಿವೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಇದರ ಲಾಭವನ್ನು ಚಾಲಕರಿಗೂ ಕೊಡ್ತಿಲ್ಲ. ಇದರಿಂದ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ವಾಹನಗಳನ್ನು ಖರೀದಿ ಮಾಡಿರುವ ಚಾಲಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ಈ ಅಗ್ರಿಗೇಟರ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಂದು ಇನ್ನಷ್ಟು ದೊಡ್ಡ ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಖಾಸಗಿ ಸಾರಿಗೆ (Private Transport) ಸಂಘಟನೆಗಳ ಅಧ್ಯಕ್ಷ ನಟರಾಜ್ ಶರ್ಮ ಹೇಳಿಕೆ ನೀಡಿದ್ದು, ಓಲಾ ಮತ್ತು ಉಬರ್ ಸಂಸ್ಥೆಗಳ ದರಗಳನ್ನು ನಿಯಂತ್ರಿಸಬೇಕು, ಅವುಗಳ ಲಾಭ ಚಾಲಕರಿಗೆ ನೀಡಬೇಕು, ಪೋರ್ಟರ್ ಕಂಪನಿಯನ್ನು ನಿರ್ಬಂಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಅವರ ಹೇಳಿಕೆ ಹೀಗಿದೆ: ಸೆ.11, 2023ರಂದು ಖಾಸಗಿ ಸಾರಿಗೆ ಸಂಘಟನೆಗಳು ಬಂದ್‌ಗೆ ಕರೆಕೊಟ್ಟಿದ್ದೆವು. ಬಸ್, ಆಟೋ, ಟ್ಯಾಕ್ಸಿ, ಗೂಡ್ಸ್, ಶಾಲಾ ವಾಹನಗಳು ಎಲ್ಲರೂ ಸೇರಿ ಸರ್ಕಾರದ ಮುಂದೆ 30 ಬೇಡಿಕೆಗಳನ್ನಿಟ್ಟು ಪ್ರತಿಭಟಿಸಿದೆವು. ಸಾರಿಗೆ ಸಚಿವರು 30 ಬೇಡಿಕೆಗಳಲ್ಲಿ 28 ಬೇಡಿಕೆ ಈಡೇರಿಕೆ ಆಗುತ್ತದೆ ಎಂದಿದ್ದರು. ಅದರಲ್ಲಿ 26 ಬೇಡಿಕೆ ಈಡೇರಿಕೆ ಮಾಡಿದ್ದಾರೆ. ಪೋರ್ಟಲ್, ಬೈಕ್ ಟ್ಯಾಕ್ಸಿ ನಿಲ್ಲಿಸಿದ್ದಾರೆ. ʼಒಂದು ಸಿಟಿ ಒಂದು ದರʼ ಎಲ್ಲದಕ್ಕೂ ಸರ್ಕಾರದಿಂದ ನೋಟಿಫಿಕೇಶನ್ ಬಂದಿದೆ. ಆದರೆ ಸಾರಿಗೆ ಅಧಿಕಾರಿಗಳು ಅವುಗಳನ್ನು ಮಾರ್ಪಾಡು ಮಾಡದೇ ಕಸದ ಬುಟ್ಟಿಗೆ ಬಿಸಾಕಿದ್ದಾರೆ. ನಾವು ಕೇಳಿದರೆ ಕೋರ್ಟ್‌ನಲ್ಲಿ ಇದೆ ಅನ್ನುತ್ತಾರೆ.
ಅನಧಿಕೃತವಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಆಟೋ ಚಾಲಕರು ಕ್ರಮ ಕೈಗೊಳ್ಳಬಾರದು ಅಂತ ಹೇಳಿದ್ದಾರೆ. ನಾವು ಪ್ರಶ್ನೆ ಮಾಡಿದರೆ 10 ಸಾವಿರ, 20 ಸಾವಿರ ಫೈನ್ ಕಟ್ಟಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಪೋನ್ ಪೇ, ಗೂಗಲ್ ಪೇ ಮೂಲಕ ಹಣ ಪಡೆಯುತ್ತಿದ್ದಾರೆ. ಇವತ್ತು ಸರ್ಕಾರದಿಂದ ಕಾನೂನಿನ ಅಡಿಯಲ್ಲಿ ಎಲ್ಲ ರೂಲ್ಸ್‌ಗಳು ಬಂದಿವೆ. ಅದಕ್ಕೆ ಅಧಿಕಾರಿಗಳು ಸಹಿ ಹಾಕೋಕೆ ಹಿಂದೆ ಮುಂದೆ ನೋಡ್ತಿದ್ದಾರೆ. ಓಲಾ ಮತ್ತು ಉಬರ್ ಸಂಸ್ಥೆಗಳು ಚಾಲಕರಿಗೆ ಎಷ್ಟು ದುಡ್ಡು ಕೊಡ್ತಿದ್ದಾರೆ ಇದು ಹೊರಗಡೆ ಬರಬೇಕು. ಪೋರ್ಟರ್ ಅನ್ನುವ ವಾಹನದ ಜಾಹಿರಾತನ್ನು ಕಿತ್ತು ಎಸೆಯುವ ಕೆಲಸವನ್ನು ಪೊಲೀಸ್ ಮತ್ತು ಸಾರಿಗೆ ಇಲಾಖೆ ಮಾಡಬೇಕು. ಆನ್‌ಲೈನ್ ಸ್ಪೆಷಲ್ ಪರ್ಮೀಟ್ ಮಾಡಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ ಸೆಪ್ಟೆಂಬರ್ 11ರಂದು ಮತ್ತೆ ಪ್ರತಿಭಟನೆ ಮಾಡುತ್ತೇವೆ. ಕಳೆದ ಬಾರಿ 90% ವಾಹನಗಳು ಮಾತ್ರ ರಸ್ತೆಗಿಳಿಸದೆ ಪ್ರತಿಭಟಿಸಿದ್ದೆವು. ಈ ಬಾರಿ ಒಂದು ವಾಹನವೂ ರಸ್ತೆಗಿಳಿಯುವುದಿಲ್ಲ. ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದು ನಟರಾಜ್ ಎಚ್ಚರಿಕೆ ನೀಡಿದ್ದಾರೆ.
ವಾಹನಗಳ ಮೌಲ್ಯ ಮತ್ತು ಸರ್ಕಾರ ನಿಗದಿಪಡಿಸಿದ ದರ ಹೀಗಿದೆ:
ಹತ್ತು ಲಕ್ಷಕ್ಕಿಂತ ಕಡಿಮೆ- ನಿಗದಿತ ದರ- ಕನಿಷ್ಠ 4 ಕಿಮೀ, 100 ರುಪಾಯಿ) ಪ್ರತಿ ಕಿಮೀಗೆ- 24 ರುಪಾಯಿ
10ರಿಂದ 15 ಲಕ್ಷದ ವಾಹನ- 115 ರುಪಾಯಿ- 28 ರುಪಾಯಿ
15 ಲಕ್ಷಕ್ಕಿಂತ ಹೆಚ್ಚು – 130 ರುಪಾಯಿ- 32 ರುಪಾಯಿ
ಚಾಲಕರ ಬೇಡಿಕೆಗಳು:
1) ಓನ್ ಸಿಟಿ ಓನ್ ಫೇರ್ ಜಾರಿಯಾಗಬೇಕು
2) ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಲ್ಲಬೇಕು
3) ಆರ್ಟಿಓ ಅಧಿಕಾರಿಗಳು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಕಾರ್ಯಾಚರಣೆ ಮಾಡಬೇಕು
4) ಪೋರ್ಟರ್ ಕಂಪನಿಯನ್ನು ಬ್ಯಾನ್ ಮಾಡಬೇಕು
5) ಸ್ಕೂಲ್ ವಾಹನಗಳಿಗೆ ಪರ್ಮಿಟ್ ನೀಡಬೇಕು
ಇದನ್ನೂ ಓದಿ: Bangalore Water Parks : ಬೆಂಗಳೂರಿನಲ್ಲಿರುವ ಪ್ರಸಿದ್ಧ ವಾಟರ್ ಪಾರ್ಕ್‌ಗಳಿವು…