Site icon Vistara News

ಲೋಕಸಭೆ ಚುನಾವಣೆ; 4,650 ಕೋಟಿ ರೂ. ದಾಖಲೆಯ ಜಪ್ತಿ, ಸ್ವಾತಂತ್ರ್ಯಾ ನಂತರದಲ್ಲೇ ಹೆಚ್ಚು!

Lok Sabha Election

Election Commission seizes Rs 4,650 crore ahead of Lok Sabha Election, highest-ever

ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಹಿಡಿದು ಇದುವರೆಗೆ ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುವುದು, ಚುನಾವಣೆ ವೇಳೆ ಆಯೋಗದ ಅಧಿಕಾರಿಗಳು ಕೋಟ್ಯಂತರ ರೂ. ವಶಪಡಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಈ ಬಾರಿ ಚುನಾವಣಾ ಆಯೋಗದ ಅಧಿಕಾರಿಗಳು ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಹಣವನ್ನು ಜಪ್ತಿ ಮಾಡಿದ್ದಾರೆ. ಹೌದು, ಲೋಕಸಭೆ ಚುನಾವಣೆ (Lok Sabha Election 2024) ಘೋಷಣೆಯಾದಾಗಿನಿಂದ ಇದುವರೆಗೆ ಚುನಾವಣಾ ಆಯೋಗದ (Election Commission of India) ಅಧಿಕಾರಿಗಳು ಇದುವರೆಗೆ 4,650 ಕೋಟಿ ರೂ. ಜಪ್ತಿ ಮಾಡಿದ್ದಾರೆ. ಈ ಕುರಿತು ಆಯೋಗವೇ ಮಾಹಿತಿ ನೀಡಿದೆ.

“ಚುನಾವಣೆ ಆಯೋಗದ ಅಧಿಕಾರಿಗಳು ಇದುವರೆಗೆ ದಾಖಲೆ ಇಲ್ಲದ 4,650 ಕೋಟಿ ರೂ. ಜಪ್ತಿ ಮಾಡಿದ್ದಾರೆ. ಇದು ದೇಶದ ಲೋಕಸಭೆ ಚುನಾವಣೆಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತದ ಹಣ ಎಂಬ ದಾಖಲೆಯಾಗಿದೆ. ಅದರಲ್ಲೂ, ಮಾರ್ಚ್‌ 1ರಿಂದ ಇದುವರೆಗೆ ಅಧಿಕಾರಿಗಳು ನಿತ್ಯ ಸರಾಸರಿ 100 ಕೋಟಿ ರೂ. ಜಪ್ತಿ ಮಾಡಿದಂತಾಗಿದೆ” ಎಂಬುದಾಗಿ ಚುನಾವಣೆ ಆಯೋಗವೇ ಮಾಹಿತಿ ನೀಡಿದೆ. 2019ರಲ್ಲಿ ಚುನಾವಣೆ ಆಯೋಗವು 3,475 ಕೋಟಿ ರೂ. ವಶಪಡಿಸಿಕೊಂಡಿತ್ತು.

ನಗದು, ಉಚಿತ ಕೊಡುಗೆಗಳು, ಉಪಕರಣಗಳು, ಡ್ರಗ್ಸ್‌, ಚಿನ್ನಾಭರಣ ಸೇರಿ ಇಷ್ಟೊಂದು ಮೊತ್ತದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 1,279 ಕೋಟಿ ರೂ. ಮೌಲ್ಯದ ಡ್ರಗ್ಸ್‌ಅನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಈ ಬಾರಿ 2,068 ಕೋಟಿ ರೂ. ಮೌಲ್ಯದ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಹೀಗಿದೆ 7 ಹಂತಗಳಲ್ಲಿ ಚುನಾವಣೆ ದಿನಾಂಕ

ಮೊದಲ ಹಂತ: ಏಪ್ರಿಲ್‌ 19102 ಕ್ಷೇತ್ರಗಳು

2ನೇ ಹಂತ: ಏಪ್ರಿಲ್‌ 2689 ಕ್ಷೇತ್ರಗಳು

3ನೇ ಹಂತ: ಮೇ 794 ಕ್ಷೇತ್ರಗಳು

4ನೇ ಹಂತ: ಮೇ 1396 ಕ್ಷೇತ್ರಗಳು

5ನೇ ಹಂತ: ಮೇ 2049 ಕ್ಷೇತ್ರಗಳು

6ನೇ ಹಂತ: ಮೇ 2557 ಕ್ಷೇತ್ರಗಳು

7ನೇ ಹಂತ: ಜೂನ್‌ 157 ಕ್ಷೇತ್ರಗಳು

ಏಪ್ರಿಲ್‌ 19ರಿಂದ ಜೂನ್‌ 1ರ ಅವಧಿಯಲ್ಲಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನವು ಏಪ್ರಿಲ್‌ 19ರಿಂದ ಆರಂಭವಾಗಲಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 1ರಂದು ಚುನಾವಣೆ ಮುಗಿಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: Modi in Karnataka: ಮಂಗಳೂರಲ್ಲಿ ಮೋದಿ ರೋಡ್ ಶೋ ಪಕ್ಕದಲ್ಲೇ ಬೆಂಕಿ ಅವಘಡ!

Exit mobile version