Site icon Vistara News

Election Results 2024 : ಬಿಜೆಪಿಯ ಭದ್ರಕೋಟೆ ಎನಿಸಿದ್ದ ರಾಜ್ಯಗಳಲ್ಲೇ ಎನ್​​ಡಿಎಗೆ ಭಾರೀ ಹಿನ್ನಡೆ

Election Results 2024

ಬೆಂಗಳೂರು: ಲೋಕ ಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಆರಂಭಿಕ ಟ್ರೆಂಡ್ ಪ್ರಕಾರ ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟಕ್ಕೆ ನಿರೀಕ್ಷೆ ಮಾಡಿದಷ್ಟು ಫಲಿತಾಂಶ ಮೂಡಿಬರುತ್ತಿಲ್ಲ. ಇದರಿಂದಾಗಿ ಭರ್ಜರಿ ಗೆಲುವಿನ ಅಭಿಲಾಷೆಯಲ್ಲಿದ್ದ ಎನ್​ಡಿಎಗೆ ನಿರಾಸೆಯಾಗಿದೆ. ಆದರೆ ಇದಕ್ಕೆ ಮೂಲಕ ಕಾರಣ ಬಿಜೆಪಿಯ ಭದ್ರಕೋಟೆಯಾಗಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ್, ರಾಜಸ್ಥಾನ್​​​ ರಾಜ್ಯಗಳಲ್ಲಿ ಹಿನ್ನಡೆ ಉಂಟಾಗಿರುವುದು. ಜತೆಗೆ ಹರಿಯಾಣ ಹಾಗೂ ಪಂಜಾಬ್​ನಲ್ಲೂ ಬಿಜೆಪಿಗೆ ಯಾವುದೇ ರೀತಿಯಲ್ಲಿ ಲಾಭವಾಗಿಲ್ಲ.

2019ರಲ್ಲಿ ಗುಜರಾತ್​ನಲ್ಲಿ ಬಿಜೆಪಿ 26ಕ್ಕೆ 26 ಕ್ಷೇತ್ರಗಳನ್ನೂ ಗೆದ್ದಿತ್ತು. ಆದರೆ, ಈ ಬಾರಿ ಸುಮಾರು 4 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದಲ್ಲಿ 2019ರಲ್ಲಿ 62 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 43 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಪಡೆದುಕೊಂಡಿದೆ. ಉಳಿದ ಸ್ಥಾನಗಳನ್ನು ಎಸ್​ಪಿಗೆ ಸಿಗಲಿದೆ.

ಮಹಾರಾಷ್ಟ್ರದಲ್ಲಿ ಎನ್​ಡಿಎ 22 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಒಟ್ಟು 48ರಲ್ಲಿ 41 ಸ್ಥಾನಗಳನ್ನು 2019ರಲ್ಲಿ ಗೆದ್ದುಕೊಂಡಿತ್ತು. ಪಂಜಾಬ್​ನಲ್ಲಿಯೂ 13 ಸ್ಥಾನಗಳಲ್ಲಿ ಕಾಂಗ್ರೆಸ್​​ 6, ಆಪ್​ 3 ಹಾಗೂ ಎಸ್​ಡಿಎಮ್​ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಹಿಂದೆ ಇಲ್ಲೂ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. ರಾಜಸ್ಥಾನದಲ್ಲಿ ಬಿಜೆಪಿ 14 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದ್ದು ಕಾಂಗ್ರೆಸ್ 8 ಹಾಗೂ ಇತರರು 3 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. 2019ರಲ್ಲಿ ಅಲ್ಲಿ 25 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದುಕೊಂಡಿತ್ತು. ಇಲ್ಲೂ ಸಾಕಷ್ಟು ನಷ್ಟವಾಗಿದೆ. ಆದರೆ ಮಧ್ಯಪ್ರದೇಶಲ್ಲಿ ಬಿಜೆಪಿಗೆ ಭರ್ಜರಿ ಲಾಭವಾಗಿದೆ.

ಹರಿಯಾಣದಲ್ಲಿ ಕಾಂಗ್ರೆಸ್​ ಪಕ್ಷವೇ 8 ಸ್ಥಾನ ಮುನ್ನಡೆ ಪಡೆದುಕೊಂಡಿದ್ದು, ಬಿಜೆಪಿ ಕೈಯಲ್ಲಿ ಒಂದು ಸ್ಥಾನ ಮಾತ್ರ ಇದೆ. ಆದರೆ, 2019ರಲ್ಲಿ ಇಲ್ಲಿ ಬಿಜೆಪಿ ಎಲ್ಲ 10 ಸೀಟುಗಳನ್ನು ಗೆದ್ದುಕೊಂಡಿತ್ತು.

ಮೋದಿಗೆ ಮತ್ತೆ ಲೀಡ್​

ವಾರಾಣಸಿ: ದೇಶಕ್ಕೆ ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆಯ ಮತಎಣಿಕೆ (Election Results 2024) ಆರಂಭವಾಗಿದ್ದು, ಎನ್‌ಡಿಎ ಮೈತ್ರಿಕೂಟವು (NDA) ಆರಂಭದಲ್ಲಿಯೇ ಭರ್ಜರಿ ಮುನ್ನಡೆ ಸಾಧಿಸಿದೆ. ಎನ್‌ಡಿಎಯು 291ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮುನ್ನಡೆಯಲ್ಲಿಯೇ ಮ್ಯಾಜಿಕ್‌ ನಂಬರ್‌ (272) ದಾಟಿದೆ. ಅತ್ತ, ಇಂಡಿಯಾ ಒಕ್ಕೂಟವೂ (India Bloc) ಎನ್‌ಡಿಎಗೆ ಸ್ಪರ್ಧೆಯೊಡ್ಡುತ್ತಿದ್ದು, 223ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ವಾರಾಣಸಿಯಲ್ಲಿ ಭಾರಿ ಮುನ್ನಡೆಯಾಗಿದೆ.

ಇದನ್ನೂ ಓದಿ: Election Results 2024: ಜಯನಗರ ಮತ ಎಣಿಕೆ ಕೇಂದ್ರದಲ್ಲಿ ಟಿ ಶರ್ಟ್‌ ಕಿರಿಕ್‌; ಕೆಆರ್‌ಎಸ್ ಪಾರ್ಟಿಯ ಅಭ್ಯರ್ಥಿ ಔಟ್‌

ಉತ್ತರ ಪ್ರದೇಶದ ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 33 ಸಾವಿರ ಮತಗಳ ಮುನ್ನಡೆ ಗಳಿಸಿದ್ದರು. ಇದಕ್ಕೂ ಮೊದಲು ಮೋದಿ ಅವರಿಗೆ 6,223 ಮತಗಳ ಹಿನ್ನಡೆಯಾಗಿತ್ತು. ಕಾಂಗ್ರೆಸ್‌ನ ಅಜಯ್‌ ರಾಯ್‌ ಅವರು ಆರಂಭಿಕ ಹಂತದ ಮತಎಣಿಕೆಯಲ್ಲಿ 11,480 ಮತಗಳನ್ನು ಪಡೆದಿದ್ದರೆ, ನರೇಂದ್ರ ಮೋದಿ ಅವರು 5,257 ಮತಗಳನ್ನಷ್ಟೇ ಪಡೆದು ಹಿನ್ನಡೆ ಅನುಭವಿಸಿದ್ದರು. ಆದರೆ, ನಂತರದ ಹಂತಗಳಲ್ಲಿ ಮೋದಿ ಅವರು ಭಾರಿ ಮುನ್ನಡೆ ಸಾಧಿಸಿದರು. ‌

Exit mobile version