ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಅಂತಿಮ ಫಲಿತಾಂಶ ಇಂದು ಮಧ್ಯಾಹ್ನದ ಹೊತ್ತಿಗೆ ಪೂರ್ಣ ಹೊರಬೀಳಲಿದೆ. ಈ ನಡುವೆ ಅಂತಿಮ ಸುತ್ತಿನ ಮತದಾನವಾದ ಕೂಡಲೇ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿದ್ದವು. ಅವುಗಳ ಬಗ್ಗೆ ಒಂದು ನೋಟ ಇಲ್ಲಿದೆ. ಹೆಚ್ಚಿನ ಎಕ್ಸಿಟ್ ಪೋಲ್‌ಗಳು ಎನ್‌ಡಿಎ ಪುನರಾಗಮನವನ್ನು ಖಚಿತಪಡಿಸಿವೆ. ಕಾಂಗ್ರೆಸ್‌ಗೆ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳಿಕೆಯನ್ನು ಅಂದಾಜಿಸಿವೆ.
ಲೋಕಸಭೆ ಚುನಾವಣೆ ಕುರಿತು ಪಿ ಮಾರ್ಕ್ ಸಮೀಕ್ಷಾ ವರದಿ ಪ್ರಕಟಿಸಿದ್ದು, ಚುನಾವಣೆಯಲ್ಲಿ ಎನ್‌ಡಿಎ 359 ಕ್ಷೇತ್ರ, ಇಂಡಿಯಾ ಒಕ್ಕೂಟ 154 ಹಾಗೂ ಇತರೆ ಅಭ್ಯರ್ಥಿಗಳು 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು ಇಂಡಿಯಾ ಟುಡೇ ತಮಿಳುನಾಡಿನ ಸಮೀಕ್ಷೆ ವರದಿ ಪ್ರಕಟಿಸಿದೆ. ಅಷ್ಟೇ ಅಲ್ಲ, ಪೋಲ್ ಸ್ಟ್ರ್ಯಾಟ್ ಕರ್ನಾಟಕದ ಸಮೀಕ್ಷಾ ವರದಿ ತಿಳಿಸಿದೆ.
ಇದರೊಂದಿಗೆ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗುವುದು ಖಚಿತವಾಗಿದೆ. ಲೋಕಸಭೆ ಚುನಾವಣೆಯುದ್ದಕ್ಕೂ ಇಂಡಿಯಾ ಒಕ್ಕೂಟ ಅಬ್ಬರದ ಪ್ರಚಾರ ನಡೆಸಿದರೂ, ಮೂರನೇ ಬಾರಿಗೂ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂಬುದು ಬಹುತೇಕ ಸಮೀಕ್ಷಾ ವರದಿಗಳ ಲೆಕ್ಕಾಚಾರವಾಗಿದೆ. ಅದರಲ್ಲೂ, ತಮಿಳುನಾಡಿನಲ್ಲಿ ಬಿಜೆಪಿಯು ಖಾತೆ ತೆರೆಯಲು ಮುಂದಾಗಿರುವುದು ಬಿಜೆಪಿಗೆ ಪಾಲಿಗೆ ದಕ್ಷಿಣ ಭಾರತದಲ್ಲಿ ವರದಾನವಾಗಲಿದೆ.
ಪ್ರಮುಖ ಸಮೀಕ್ಷಾ ವರದಿಗಳು ಹೀಗಿವೆ
ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ | ಎನ್‌ಡಿಎ 353-368 | ಇಂಡಿಯಾ ಒಕ್ಕೂಟ 118-133 | ಇತರೆ 43-48 |
ಎನ್‌ಡಿಟಿವಿ ಇಂಡಿಯಾ-ಜನ್ ಕಿ ಬಾತ್ | ಎನ್‌ಡಿಎ 365 | ಇಂಡಿಯಾ ಒಕ್ಕೂಟ 142 | ಇತರೆ 36 |
ಜನ್ ಕಿ ಬಾತ್ | ಎನ್‌ಡಿಎ 362-392 | ಇಂಡಿಯಾ ಒಕ್ಕೂಟ 141-161 | ಇತರೆ 10-2 |
ಇಂಡಿಯಾ ನ್ಯೂಸ್-ಡಿ ಡೈನಾಮಿಕ್ಸ್ | ಎನ್‌ಡಿಎ 371 | ಇಂಡಿಯಾ ಒಕ್ಕೂಟ 125 | ಇತರೆ 47 |
ಜೀ ನ್ಯೂಸ್ | ಎನ್‌ಡಿಎ 353-367 | ಇಂಡಿಯಾ ಒಕ್ಕೂಟ 118-133 | ಇತರೆ 46 |
ನ್ಯೂಸ್ ಎಕ್ಸ್ | ಎನ್‌ಡಿಎ 371 | ಇಂಡಿಯಾ ಒಕ್ಕೂಟ 125 | ಇತರೆ 47 |
ನ್ಯೂಸ್ ನೇಷನ್ | ಎನ್‌ಡಿಎ 342-378 | ಇಂಡಿಯಾ ಒಕ್ಕೂಟ 153-169 | ಇತರೆ 21-23 |
ಕರ್ನಾಟಕದ ಕುರಿತು ಹಲವು ಸಮೀಕ್ಷಾ ವರದಿಗಳು
ಇಂಡಿಯಾ ಟುಡೇ | ಬಿಜೆಪಿ 20-22 | ಕಾಂಗ್ರೆಸ್ 03-05 | ಜೆಡಿಎಸ್ 02-03 |
ಇಂಡಿಯಾ ನ್ಯೂಸ್ | ಬಿಜೆಪಿ 21 | ಕಾಂಗ್ರೆಸ್ 05 | ಜೆಡಿಎಸ್ 02 |
ಪೋಲ್ ಸ್ಟ್ರ್ಯಾಟ್ | ಬಿಜೆಪಿ 18 | ಕಾಂಗ್ರೆಸ್ 08 | ಜೆಡಿಎಸ್ 02 |
ಜನ್ ಕಿ ಬಾತ್ | ಬಿಜೆಪಿ 17-23 | ಕಾಂಗ್ರೆಸ್ 04-08 | ಜೆಡಿಎಸ್ 01-02 |
ಸಿಎನ್‌ಎನ್-ನ್ಯೂಸ್ 18 | ಬಿಜೆಪಿ 21-23 | ಕಾಂಗ್ರೆಸ್ 03-07 | ಜೆಡಿಎಸ್ 02-03 |
ಪಿ ಮಾರ್ಕ್
ಎನ್‌ಡಿಎ: 359
ಇಂಡಿಯಾ: ಒಕ್ಕೂಟ 154
ಇತರೆ: 30
ವಿಸ್ತಾರ ನ್ಯೂಸ್-COPS
ಎನ್‌ಡಿಎ: 330-350
ಇಂಡಿಯಾ ಒಕ್ಕೂಟ: 130-150
ಇತರೆ: 20-30
ಇಂಡಿಯಾ ಟುಡೇ: ತಮಿಳುನಾಡು
ಡಿಎಂಕೆ: 20-22
ಬಿಜೆಪಿ: 1-3
ಪೋಲ್ ಸ್ಟ್ರ್ಯಾಟ್: ಕರ್ನಾಟಕ
ಬಿಜೆಪಿ 18
ಕಾಂಗ್ರೆಸ್: 8
ಜೆಡಿಎಸ್: 2
ಇಂಡಿಯಾ ನ್ಯೂಸ್
ಎನ್‌ಡಿಎ: 371
ಇಂಡಿಯಾ ಒಕ್ಕೂಟ: 125
ಮ್ಯಾಟ್ರಿಜ್
ಎನ್‌ಡಿಎ: 353-368
ಇಂಡಿಯಾ ಒಕ್ಕೂಟ: 120
ಮ್ಯಾಟ್ರಿಜ್- ಉತ್ತರ ಪ್ರದೇಶ
ಎನ್‌ಡಿಎ: 69-74
ಇಂಡಿಯಾ ಒಕ್ಕೂಟ: 6-11
ಮುಂಬೈ ಸಟ್ಟಾ ಬಜಾರ್ ವರದಿ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿಯು 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿತ್ತು. ಕಾಂಗ್ರೆಸ್ ಈ ಬಾರಿ 55-65 ಕ್ಷೇತ್ರಗಳಲ್ಲಿ ಮಾತ್ರ ಜಯಿಸಲಿದೆ. ಇನ್ನು, ರಾಮಮಂದಿರ ಕಾರಣದಿಂದ ಬಿಜೆಪಿಗೆ ಪ್ರಮುಖವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 64-66 ಕ್ಷೇತ್ರಗಳು ಲಭಿಸಲಿವೆ ಎಂದು ವರದಿ ತಿಳಿಸಿದೆ. ಇದಕ್ಕೂ ಮೊದಲು ಮುಂಬೈ ಸಟ್ಟಾ ಬಜಾರ್ ಸಮೀಕ್ಷೆಯು ಬಿಜೆಪಿ 270-280 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಕಾಂಗ್ರೆಸ್ 70-80 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ತಿಳಿಸಿತ್ತು. ಈಗ ಬಹುತೇಕ ಸಮೀಕ್ಷೆಗಳು ಇದೇ ಅಂಶವನ್ನು ಉಲ್ಲೇಖಿಸಿವೆ.
ಇದನ್ನೂ ಓದಿ: Modi Meditation: ಕನ್ಯಾಕುಮಾರಿಯಲ್ಲಿ ಧ್ಯಾನಾಸಕ್ತ ಪ್ರಧಾನಿ ಮೋದಿಯಿಂದ ಸೂರ್ಯ ವಂದನೆ; ವಿಡಿಯೊ ನೋಡಿ