Site icon Vistara News

Electricity Theft : ಸರ್ಕಾರ ಫ್ರೀ ಕೊಡುತ್ತಿದ್ದರೂ ಮತ್ತಷ್ಟು ಕರೆಂಟ್‌ ಕದ್ದು ಸಿಕ್ಕಿಬಿದ್ದ ಕಾಂಗ್ರೆಸ್‌ ನಾಯಕಿ!

Electricity theft

ಚಿಕ್ಕಮಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 200 ಯೂನಿಟ್‌ಗಳ ತನಕ ಫ್ರೀ ಕರೆಂಟ್ ನೀಡುತ್ತಿದ್ದರೂ ಅಕ್ರಮವಾಗಿ ಕರೆಂಟ್‌‌ ಸಂಪರ್ಕ ಪಡೆದುಕೊಂಡ (Electricity theft) ಕಾಂಗ್ರೆಸ್‌ ನಾಯಕಿಯೊಬ್ಬರು ಸಿಕ್ಕಿ ಬಿದ್ದು ಲಕ್ಷಾಂತರ ರೂಪಾಯಿ ದಂಡ ಹಾಕಿಸಿಕೊಂಡಿದ್ದಾರೆ. ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಕರೆಂಟ್ ಕದ್ದ ಕಾಂಗ್ರೆಸ್‌ ಮುಖಂಡೆ.

ಕಾಂಗ್ರೆಸ್ ಮಹಿಳಾ ಮೋರ್ಚಾದ ಅಧ್ಯಕ್ಷೆ ಆಶಾ ನಾರಾಯಣ್ ಅವರು ವಂಚನೆ ಮಾಡಿರುವುದನ್ನು ಮೆಸ್ಕಾಂ ಅಧಿಕಾರಿಗಳು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ. ಎನ್‌‌ಆರ್ ಪುರ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿರುವ ಅವರು ಕಡಬಗೆರೆಯಲ್ಲಿ ಮೂರು ಮನೆಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ಅಂತೆಯೇ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಕರೆಂಟ್‌ ಕಳ್ಳತನ ವಿಷಯ ತಿಳಿದು ನಡೆಸಿದ ಮೆಸ್ಕಾಂ ಅಧಿಕಾರಿಗಳು ದಿಢೀರನೆ ದಾಳಿ ಮಾಡಿದ್ದಾರೆ. ಮಂಗಳೂರಿನಿಂದ ಆಗಮಿಸಿ ಮೆಸ್ಕಾಂ ಅಧಿಕಾರಿಗಳು ದಾಳಿ ಮಾಡಿ 1 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಿದ್ದಾರೆ. ಪ್ರಭಾವಿ ಎನ್ನುವ ಕಾರಣಕ್ಕೆ ಸ್ಥಳೀಯ ಅಧಿಕಾರಿಗಳು ಸುಮ್ಮನಾಗಿದ್ದರು. ಹೀಗಾಗಿ ಮಂಗಳೂರಿನಿಂದಲೇ ಅಧಿಕಾರಿಗಳು ಬಂದು ದಾಳಿ ಮಾಡಿದ್ದಾರೆ. ಅಕ್ರಮ ಗೊತ್ತಿದ್ದರೂ ಚಿಕ್ಕಮಗಳೂರು ಮೆಸ್ಕಾಂ ಅಧಿಕಾರಿಗಳು ಸುಮ್ಮನೆ ಇದ್ದರು ಎಂಬ ಆರೋಪವಿದೆ. ಇದೀಗ ಮಂಗಳೂರು ಅಧಿಕಾರಿಗಳು ವಂಚನೆ ಬೆಳಕಿಗೆ ತಂದಿದ್ದಾರೆ.

ಕಳ್ಳರಿಂದ ಸೀಜ್‌ ಮಾಡಿದ ₹72 ಲಕ್ಷ ಗುಳುಂ ಮಾಡಿ ಇನ್‌ಸ್ಪೆಕ್ಟರ್‌ ನಾಪತ್ತೆ!

ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ (Theft Case) ಮುಟ್ಟುಗೋಲು (Seize) ಹಾಕಿಕೊಂಡಿದ್ದ ಹಣವನ್ನು ದುರ್ಬಳಕೆ (misuse) ಮಾಡಿದ ಆರೋಪ ಹೊತ್ತಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ನಾಪತ್ತೆ (Police inspector abscond) ಯಾಗಿದ್ದು, ಸಿಸಿಬಿ ಪೊಲೀಸರಿಂದ (CCB police) ಶೋಧ ನಡೆಯುತ್ತಿದೆ. ಬಿಡದಿ ಠಾಣೆಯಿಂದ ಪರಾರಿಯಾಗಿರುವ ಇನ್‌ಸ್ಪೆಕ್ಟರ್‌ ಶಂಕರ್ ನಾಯ್ಕ್ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದು, ಹತ್ತು ದಿನಗಳಿಂದ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ: Murder Case : ಬೈಕ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿಯನ್ನು ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ

ಕರ್ತವ್ಯದ ವೇಳೆ ಕಳ್ಳತನ ಪ್ರಕರಣವೊಂದರಲ್ಲಿ ಶಂಕರ್ ನಾಯ್ಕ್ ₹72 ಲಕ್ಷ ಜಪ್ತಿ ಮಾಡಿದ್ದರು. ಈ ಹಣವನ್ನು ಸರ್ಕಾರದ ಖಜಾನೆ ಅಥವಾ ಠಾಣೆಯ ಸುಪರ್ದಿಗೆ ಕೊಡದೆ ಸ್ವಂತಕ್ಕೆ ಬಳಸಿಕೊಂಡ ಆರೋಪವಿದೆ. ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಶಂಕರ್ ಹಾಗೂ ಮಧ್ಯವರ್ತಿ ಲೋಕನಾಥ್ ವಿರುದ್ಧ ಕೇಸ್ ದಾಖಲಾಗಿತ್ತು. ಎಸಿಪಿ ಭರತ್ ರೆಡ್ಡಿ ದೂರು ಆಧರಿಸಿ FIR ದಾಖಲಾಗಿತ್ತು.

2023ರ ನವೆಂಬರ್‌ನಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ನಂತರ ಪ್ರಕರಣದ ತನಿಖೆಯನ್ನು ಕಮಿಷನರ್ ಸಿಸಿಬಿಗೆ ವಹಿಸಿಸಲಾಗಿತ್ತು. ಪ್ರಕರಣ ರದ್ದು ಕೋರಿ ಶಂಕರ್‌ ನಾಯ್ಕ್‌ ಹೈಕೋರ್ಟ್ ಮೆಟ್ಟಲೇರಿದ್ದರು. ಪ್ರಕರಣದ ತನಿಖೆಗೆ ಹೈಕೋರ್ಟ್‌ ತಡೆ ನೀಡಿತ್ತು. ಆದರೆ ತಡೆಯಾಜ್ಞೆ ತೆರವುಗೊಳಿಸುವಂತೆ ಸಿಸಿಬಿ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯನ್ನು ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ತಡೆಯಾಜ್ಞೆ ತೆರವುಗೊಳಿಸುತ್ತಿದ್ದಂತೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ನಾಪತ್ತೆಯಾಗಿದ್ದಾರೆ.

Exit mobile version