ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ (Pulwama) ಜಿಲ್ಲೆಯ ಫ್ರಾಸಿಪೊರಾ (Frasipora)ದಲ್ಲಿ ಗುರುವಾರ (ಏಪ್ರಿಲ್ 11) ಮುಂಜಾನೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಓರ್ವ ಉಗ್ರ ಹತನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ (Encounter in Frasipora).
ಜಿಲ್ಲೆಯ ಮುರಾನ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿದ ವೇಳೆ ಈ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ಚಕಮಕಿ ನಡೆದ ನಂತರ ಅರೆಸೈನಿಕ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಪ್ರದೇಶವನ್ನು ಸುತ್ತುವರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
Encounter started in wee hours of Thursday b/w SFs & terrórists in Pulwama’s Frasipora. Local terrórists reportedly trapped!
— Fatima Dar (@FatimaDar_jk) April 11, 2024
Violence only leads to destruction & despair.Lay down your arms & choose the path of peace for a better future!
Don't become idle sitting ducks in graves pic.twitter.com/Uy70bmZyNd
ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಾದ್ಯಂತ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಸರಣಿ ಎನ್‌ಕೌಂಟರ್ ನಡೆದಿವೆ. ಈ ಪೈಕಿ ಅನೇಕ ಭಯೋತ್ಪದಕರು ಹತರಾಗಿದ್ದಾರೆ.
ಕಳೆದ ವಾರವೂ ಓರ್ವ ಉಗ್ರನ ಹತ್ಯೆ
ಕಳೆದ ವಾರವೂ ಎನ್‌ಕೌಂಟರ್ ನಡೆದು ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿತ್ತು. ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಭಯೋತ್ಪಾದಕರು ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಒಳನುಸುಳುವ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಈ ವೇಲೆ ಓರ್ವ ಭಯೋತ್ಪಾದಕನನ್ನು ಕೊಂದಿದ್ದರು. ಬಳಿಕ ಭಾರತೀಯ ಸೇನಾ ಪಡೆಗಳು ಭಯೋತ್ಪಾದಕರ ಗುಂಪನ್ನು ಹಿಮ್ಮೆಟ್ಟಿಸಿದ್ದವು.
ಇದನ್ನೂ ಓದಿ: Terrorists Killed: ಬಾರಾಮುಲ್ಲಾದಲ್ಲಿ ಇಬ್ಬರು ಲಷ್ಕರೆ ತೊಯ್ಬಾ ಉಗ್ರರ ಹತ್ಯೆ; ಶಸ್ತ್ರಾಸ್ತ್ರ ವಶ