Site icon Vistara News

Exit Poll 2024 : ತಮಿಳುನಾಡು, ಕೇರಳದಲ್ಲೂ ಅರಳಲಿದೆ ಕಮಲ; ಮೋದಿಗಿದು ಐತಿಹಾಸಿಕ ಸಾಧನೆ

Exit Poll 2024

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮೂರನೇ ಅವಧಿಯಲ್ಲಿ ಮತ್ತೊಂದು ಮಹತ್ಸಾಧನೆ ಮಾಡಲಿದ್ದಾರೆ. ಲೋಕ ಸಭಾ ಚುನಾವಣೆಯಲ್ಲಿ (Lok Sabha Election) ಅವರ ನೇತೃತ್ವದ ಬಿಜೆಪಿ/ ಎನ್​ಡಿಎ ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳಲ್ಲಿ ತನ್ನ ಖಾತೆ ತೆರೆಯಲಿವೆ. ಅವುಗಳೆಂದರೆ ತಮಿಳುನಾಡು ಮತ್ತು ಕೇರಳ. ಶನಿವಾರ ಸಂಜೆ ಏಳನೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳ (Exit Poll 2024) ಪ್ರಕಾರ ಕೇರಳದಲ್ಲಿ 2ರಿಂದ 3 ಮತ್ತು ತಮಿಳುನಾಡಿನಲ್ಲಿ 2-4 ಸ್ಥಾನಗಳು ಎನ್​ಡಿಎಗೆ ದೊರಕಲಿವೆ. ಒಂದು ವೇಳೆ ಇದು ಸತ್ಯವಾದರೆ ದಕ್ಷಿಣದ ಎರಡು ರಾಜ್ಯಗಳಲ್ಲಿ ಕಮಲ ಅರಳಿಸಲು ತಾವು ಪಟ್ಟ ಶ್ರಮ ಸಾರ್ಥಕವಾದಂತೆ. ಜತೆಗೆ ಆಂಧ್ರ ಪ್ರದೇಶದಲ್ಲೂ 22 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.

ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಗೆ ಏಪ್ರಿಲ್ 19, 2024ರಂದು ನಡೆದಿತ್ತು. ಇದು ಹಾಲಿ ಚುನಾವಣೆಯ ಮೊದಲ ಹಂತದಲ್ಲಿ ಮತದಾನ. 2019 ರ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ 39 ಲೋಕಸಭಾ ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಅವು ಆಯ್ದ ಪ್ರದೇಶಗಳಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಎನ್​ಡಿಎಯಿಂದ ಪ್ರತಿರೋಧ ಎದುರಿಸಿದ್ದಾರೆ. ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ ವ್ಯಾಪಕ ಪ್ರಚಾರ ನಡೆಸಿದೆ. ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳು ಭಾಷಿಕರ ರಾಜ್ಯಕ್ಕೆ 9 ಬಾರಿ ಭೇಟಿ ನೀಡಿದ್ದರು. ಬಹುತೇಕ ಸಮೀಕ್ಷೆಗಳು ತಮಿಳುನಾಡಿನಲ್ಲಿ ಬಿಜೆಪಿ 1-3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ. ಕಾಂಗ್ರೆಸ್ 8-11, ಬಿಜೆಪಿ 36-39 ಮತ್ತು ಇತರರು 0-2 ಸ್ಥಾನಗಳನ್ನು ಪಡೆಯಲಿವೆ. ಬಹು ಕಟ್ಟರ್ ಪ್ರಾಂತೀಯವಾದಿ ಮತದಾರರು ಇರುವ ತಮಿಳುನಾಡಿನಲ್ಲಿ ಖಾತೆ ತೆರೆಯುವುದು ಬಿಜೆಪಿಗೆ ಸುಲಭ ಮಾತಲ್ಲ. ಹೀಗಾಗಿ ಈ ಸಲ ಗೆದ್ದರೆ ಅದೊಂದು ಐತಿಹಾಸಿಕ ಸಾಧನೆಯಾಗಲಿದೆ. ಇದರಲ್ಲಿ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರ ಪಾತ್ರ ದೊಡ್ಡದಿದೆ.

ಕೇರಳದಲ್ಲೂ ಖಾತೆ ಓಪನ್​

ಎನ್​ಡಿಎ ಕೇರಳದಲ್ಲಿ ಒಂದರಿಂದ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆಯಲು ಸಜ್ಜಾಗಿದೆ ಎಂಬುದಾಗಿ ಸಮೀಕ್ಷೆಗಳು ಅಂದಾಜಿಸಿವೆ. ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆದಿದ್ದು, 2019ರಲ್ಲಿ ಶೇ.77.84ರಷ್ಟಿದ್ದ ಮತದಾನ ಪ್ರಮಾಣ ಈ ಬಾರಿ ಶೇ.70.35ಕ್ಕೆ ಕುಸಿದಿತ್ತು.

ಇದನ್ನೂ ಓದಿ: Exit Poll 2024: ಮುaಸ್ಲಿಮರ ಶೇ.72ರಷ್ಟು ಮತಗಳು ಕಾಂಗ್ರೆಸ್‌ಗೆ; ಮೋದಿ ವಿರುದ್ಧ ಒಂದಾದ ಅಲ್ಪಸಂಖ್ಯಾತರು

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇರಳ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. 2019 ರ ಚುನಾವಣೆಯಲ್ಲಿ, ಐಎನ್​ಸಿಎ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದರೆ, ಎನ್​​ಡಿಎ ಒಂದೂ ಸ್ಥಾನ ಗೆದ್ದಿರಲಿಲ್ಲ. ಇಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ಸಿಪಿಐ (ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ನಡುವೆ ನೇರ ಸ್ಪರ್ಧೆ ಇದೆ. ಸಮೀಕ್ಷೆಗಳ ಪ್ರಕಾ ಯುಡಿಎಫ್​​ಗೆ 17-19 ಸ್ಥಾನಗಳು ಮತ್ತು ಎನ್​ಡಿಎಗೆ 1-3 ಸ್ಥಾನಗಳು ಸಿಗಲಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ ಮತದಾರರನ್ನು ಸೆಳೆಯಲು ಬಲವಾದ ಪ್ರಯತ್ನ ನಡೆಸಿದ್ದರು. ಇಲ್ಲಿ ಮಾಜಿ ಸಚಿವ ರಾಜೀವ್​ ಚಂದ್ರಶೇಖರ್​ ಅವರು ಶಶಿ ತರೂರು ವಿರುದ್ಧ ತಿರುವನಂತಪುರ ಹಾಗೂ ಸುರೇಂದ್ರನ್ ಅವರು ರಾಹುಲ್ ಗಾಂಧಿ ವಿರುದ್ಧ ವಯನಾಡ್​ನಲ್ಲಿ ಸ್ಪರ್ಧಿಸಿದ್ದಾರೆ. ಅದೇ ರೀತಿ ಸಿನಿಮಾ ನಟ ಸುರೇಶ್ ಗೋಪಿ ಕೂಡ ತ್ರಿಶೂರ್​ ಲೋಕ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.

ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮತ್ತು ಪುದುಚೇರಿ ಒಂದು ಸ್ಥಾನವು 130 ಸಂಸದರನ್ನು ಕೆಳಮನೆಗೆ ಕಳುಹಿಸುತ್ತದೆ. 2019 ರಲ್ಲಿ ಬಿಜೆಪಿ ಈ ಸ್ಥಾನಗಳಲ್ಲಿ ಕೇವಲ 29 ಸ್ಥಾನಗಳನ್ನು ಗಳಿಸಿದೆ. ಅದರಲ್ಲಿ 25 ಕರ್ನಾಟಕದಿಂದ ಬಂದಿತ್ತು. ತೆಲಂಗಾಣದಿಂದ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ಪಕ್ಷವು ತನ್ನ ಖಾತೆ ತೆರೆಯಲು ವಿಫಲವಾಗಿತ್ತು. ಈ ಬಾರಿ ಆಂಧ್ರದಲ್ಲಿಯೂ ಖಾತೆ ತೆರೆಯುವ ಸಾಧ್ಯತೆಗಳಿವೆ.

Exit mobile version