Site icon Vistara News

Exit Poll 2024 : ಟಿಎಂಸಿಯ ಭದ್ರಕೋಟೆಗೆ ಕಮಲ ಪಕ್ಷದ ಲಗ್ಗೆ; ಮಮತಾ ಬ್ಯಾನರ್ಜಿಗೆ ಮುಖಭಂಗ?

Exit Poll 2024

ನವದೆಹಲಿ: ಲೋಕ ಸಭಾ ಚುನಾವಣೆಯ (Lok Sabha Election 2024) ಮತಗಟ್ಟೆ ಸಮೀಕ್ಷೆಯ (Exit Poll 2024) ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿಗೆ ಮುಖಭಂಗವಾಗುವ ಸಾಧ್ಯತೆ ನಿಚ್ಚಳವಾಗಿದೆ. ಪಶ್ಚಿಮ ಬಂಗಾಳ ಟಿಎಂಸಿಯ ಭದ್ರಕೋಟೆಯಾಗಿರುವ ಹೊರತಾಗಿಯೂ ಅಲ್ಲಿ ಕಮಲ ಪಕ್ಷ ಹೆಚ್ಚು ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಬಿಜೆಪಿಗೆ 21 ರಿಂದ 26 ಸ್ಥಾನಗಳು ಮತ್ತು ಟಿಎಂಸಿಗೆ 16-18 ಸ್ಥಾನಗಳು ಸಿಗಲಿವೆ ಎಂದು ಹೇಳಿದೆ. ಹೀಗಾಗಿ ತೃಣಮೂಲ ಕಾಂಗ್ರೆಸ್​​ಗೆ ಅಸಮಾಧಾನ ಉಂಟಾಗುವುದು ಖಚಿತ.

ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್ ಕೂಡ ಬಿಜೆಪಿಗೆ 21 ಸ್ಥಾನಗಳು ಮತ್ತು ತೃಣಮೂಲ ಕಾಂಗ್ರೆಸ್​ಗೆ 19 ಸ್ಥಾನಗಳನ್ನು ನೀಡಿದೆ. ರಿಪಬ್ಲಿಕ್ ಭಾರತ್-ಮೆಟ್ರಿಜ್ ಬಿಜೆಪಿಗೆ 21 ರಿಂದ 25 ಸ್ಥಾನಗಳು ಸಿಗುತ್ತದೆ ಎಂದು ಹೇಳಿದೆ. ಮಮತಾ ಬ್ಯಾನರ್ಜಿ ಅವರ ಪಕ್ಷವು ರಾಜ್ಯದಲ್ಲಿ 16 ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅದು ಭವಿಷ್ಯ ನುಡಿದಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಬಂಗಾಳದ 42 ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿದ್ದರೆ, ತೃಣಮೂಲ ಕಾಂಗ್ರೆಸ್ 22 ಸ್ಥಾನಗಳನ್ನು ಗಳಿಸಿತ್ತು. ಹೀಗಾಗಿ ಈ ಬಾರಿಯ ಫಲಿತಾಂಶ ಆಡಳಿತಾರೂಢ ಪಕ್ಷಕ್ಕೆ ಸಿಕ್ಕಾಪಟ್ಟೆ ನಷ್ಟ ಉಂಟು ಮಾಡಲಿದೆ.

ಇದನ್ನೂ ಓದಿ: Exit Poll 2024 : ಭರ್ಜರಿ ಗೆಲುವಿನ ಮುನ್ಸೂಚನೆ ಸಿಕ್ಕಿದ ತಕ್ಷಣ ಮತದಾರರಿಗೆ ಧನ್ಯವಾದ ತಿಳಿಸಿದ ಮೋದಿ

ಈ ಸಮೀಕ್ಷೆಗಳ ಪ್ರಕಾರ 2019 ರಲ್ಲಿ ಎರಡು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ತನ್ನ ಕಾರ್ಯಕ್ಷಮತೆಯನ್ನು ಹಾಗೆಯ ಉಳಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿವೆ. ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 0-2, ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್ 2 ಮತ್ತು ರಿಪಬ್ಲಿಕ್ ಭಾರತ್-ಮೆಟ್ರಿಜ್ 0-1 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ರಿಪಬ್ಲಿಕ್ ಬಾಂಗ್ಲಾ ಚುನಾವಣೋತ್ತರ ಸಮೀಕ್ಷೆಯು ಬಂಗಾಳದಲ್ಲಿ ಪಕ್ಷವು ತನ್ನ ಖಾತೆಯನ್ನು ತೆರೆಯಲು ವಿಫಲವಾಗಲಿದೆ ಎಂದು ಹೇಳಿದೆ.

ಎನ್​ಡಿಎಗೆ ಬಹುಮತ

ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ಡಿಎಗೆ ಆರಾಮದಾಯಕ ಬಹುಮತ ಊಹಿಸಿವೆ. ಆಡಳಿತಾರೂಢ ಮೈತ್ರಿಕೂಟವು ತಮಿಳುನಾಡು ಮತ್ತು ಕೇರಳದಲ್ಲಿ ತನ್ನ ಖಾತೆ ತೆರೆಯಲಿದೆ ಮತ್ತು ಕರ್ನಾಟಕದಲ್ಲಿ ಜಯಭೇರಿ ಬಾರಿಸಲಿದೆ ಎಂದು ಅಂದಾಜಿಸಿದೆ. ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಸಮೀಕ್ಷೆಯು 543 ಸದಸ್ಯರ ಲೋಕಸಭೆಯಲ್ಲಿ ಆಡಳಿತಾರೂಢ ಮೈತ್ರಿಕೂಟವು 359 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಪ್ರತಿಪಕ್ಷ ಇಂಡಿಯಾ ಬಣವು 154 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದೆ. ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಸಮೀಕ್ಷೆಯು ಎನ್​ಡಿಎಗೆ 353-368 ಸ್ಥಾನಗಳು ಮತ್ತು ಪ್ರತಿಪಕ್ಷಗಳಿಗೆ 118-133 ಸ್ಥಾನಗಳನ್ನು ನೀಡುತ್ತದೆ ಸಮೀಕ್ಷೆ ಮಾಡಿದೆ.

ಜನ್ ಕಿ ಬಾತ್ ಸಮೀಕ್ಷೆಯು ಆಡಳಿತಾರೂಢ ಎನ್​​ಡಿಎಗೆ 362-392 ಸ್ಥಾನಗಳು ಮತ್ತು ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ 141-161 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದೆ. ಜೂನ್ 4 ರಂದು ವಿದ್ಯುನ್ಮಾನ ಮತದಾನ ಯಂತ್ರಗಳಲ್ಲಿ (ಇವಿಎಂ) ಚಲಾವಣೆಯಾದ ಮತಗಳನ್ನು ಚುನಾವಣಾ ಆಯೋಗ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಿದೆ.

73 ವರ್ಷದ ಮೋದಿ ಗೆಲುವು ಸಾಧಿಸಿದರೆ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್ ನೆಹರೂ ನಂತರ ಸತತ ಮೂರು ಬಾರಿ ಗೆದ್ದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Exit mobile version