Site icon Vistara News

Extramarital Affair: ಮನೆಯಲ್ಲಿ ಗಂಡನೂ ಇರಲಿ, ಪ್ರಿಯತಮನೂ ಇರಲಿ ಎಂದು ವಿದ್ಯುತ್ ಕಂಬ ಏರಿದಳು!

extramarital affair

ಗೋರಖ್ ಪುರ್ : ಉತ್ತರಪ್ರದೇಶದ ಗೋರಖ್‌ಪುರದ 34 ವರ್ಷದ ಸುಮನ್ ದೇವಿ ಎಂಬ ಮಹಿಳೆ ಪಕ್ಕದ ಗ್ರಾಮದ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ (Extramarital Affair) ಹೊಂದಿದ್ದಳು ಎನ್ನಲಾಗಿದೆ. ಪತಿಗೆ ಈ ವಿಷಯ ತಿಳಿಯುತ್ತಿದ್ದಂತೆ ಮನೆಯಲ್ಲಿ ದೊಡ್ಡ ಜಗಳವೇ ನಡೆದಿದೆ. ಹಣದ ಅಗತ್ಯವಿದೆ. ತನ್ನ ಪ್ರಿಯತಮ ಹಣಕಾಸು ಸಹಾಯ ಮಾಡುತ್ತಾನೆ. ಹಾಗಾಗಿ ತಮ್ಮ ಮನೆಯಲ್ಲಿಯೇ ಅವನನ್ನು ಇಟ್ಟುಕೊಳ್ಳುವ ಎಂದು ಹಟ ಹಿಡಿದಿದ್ದಾಳೆ. ಆದರೆ ಹೆಂಡತಿಯ ಈ ಮಾತಿಗೆ ಸೊಪ್ಪು ಹಾಕದ ಗಂಡ ಮನೆಬಿಟ್ಟು ಹೊರ ನಡೆದಿದ್ದಾನೆ. ಪತಿಯ ಮನವೊಲಿಕೆಗಾಗಿ ಹೆಂಡತಿ ಹೈವೋಲ್ಟೇಜ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಖತ್ ಡ್ರಾಮಾ ಮಾಡಿದ್ದಾಳೆ.

ಹೈವೋಲ್ಟೇಜ್ ವಿದ್ಯುತ್ ಕಂಬವೇರಿ, ಆತ್ಮಹತ್ಯೆಯ ಬೆದರಿಕೆ

ಮೂರು ಮಕ್ಕಳ ತಾಯಿಯಾಗಿರುವ ಸುಮನ್ ದೇವಿ ಸುಮಾರು ಏಳು ವರ್ಷಗಳಿಂದ ಪಕ್ಕದ ಗ್ರಾಮದ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳಂತೆ. ತನ್ನ ಈ ಕಳ್ಳ ಸಂಬಂಧದ ಬಗ್ಗೆ ಪತಿಗೆ ತಿಳಿಯುತ್ತಿದ್ದಂತೆ ಹೈವೋಲ್ಟೇಜ್ ವಿದ್ಯುತ್ ಕಂಬವೇರಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಘಟನೆ ನಡೆದಿದೆ.

ಮನೆಬಿಟ್ಟು ಹೊರನಡೆದ ಪತಿ

ಕೂಲಿ ಕೆಲಸ ಮಾಡುವ ಪತಿ ರಾಮ್ ಗೋವಿಂದ್ ತನ್ನ ಹೆಂಡತಿ ಮಾಡುತ್ತಿರುವ ಮೋಸದ ವಿಷಯ ತಿಳಿದು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾನೆ ಹಾಗೇ ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ. ಇದಕ್ಕೆ ಸೊಪ್ಪು ಹಾಕದ ಹೆಂಡತಿ ಆ ಯುವಕನನ್ನು ಮನೆಯಲ್ಲಿರಿಸಿಕೊಳ್ಳಲು ಗಂಡನ ಬಳಿ ಒತ್ತಾಯಿಸಿದ್ದಾಳೆ. ಆತನಿದ್ದರೆ ಹಣಕಾಸಿನ ನೆರವು ಸಿಗುತ್ತದೆ ಎಂಬ ಆಸೆ ಹುಟ್ಟಿಸಿದ್ದಾಳೆ. ಹೆಂಡತಿಯ ಈ ನಾಟಕಕ್ಕೆ ಬಿಲ್ ಕುಲ್ ಒಪ್ಪದ ಪತಿ ಮನೆಯಿಂದ ಹೊರಬಂದಿದ್ದಾನೆ. ಇದೇ ವೇಳೆ ಮಹಿಳೆ ಹೈವೋಲ್ಟೇಜ್ ಕಂಬ ಹತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.

ಈ ಎಲ್ಲ ನಾಟಕವನ್ನು ವೀಡಿಯೋದಲ್ಲಿ ಸೆರೆಹಿಡಿದು ಆನ್‌ ಲೈನ್‌ನಲ್ಲಿ ಹರಿಬಿಡಲಾಗಿದೆ. ಮಹಿಳೆಯು ವಿದ್ಯುತ್ ಕಂಬವನ್ನು ಏರುತ್ತಿರುವುದು ನೋಡುಗರನ್ನು ದಿಗ್ಭ್ರಮೆಗೊಳಿಸಿದೆ. ಅಲ್ಲಿದ್ದ ಜನ ಆಕೆಯನ್ನು ಕಂಬದಿಂದ ಇಳಿಯಲು ಒತ್ತಾಯಿಸಿದರೂ ಆಕೆ ಅಲ್ಲೇ ಕುಳಿತಿದ್ದನ್ನು ಜನಸಮೂಹವು ಭಯಭೀತರಾಗಿ ವೀಕ್ಷಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಸ್ಥಳೀಯ ಅಧಿಕಾರಿಗಳು ಕೂಡಲೇ ಸ್ಪಂದಿಸಿ, ಪೊಲೀಸ್ ಮತ್ತು ವಿದ್ಯುತ್ ಇಲಾಖೆಗಳ ತಂಡಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿದರು. ಮುಂಜಾಗ್ರತಾ ಕ್ರಮವಾಗಿ ವಿದ್ಯುಚ್ಛಕ್ತಿ ಸರಬರಾಜನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಮಹಿಳೆಯ ಮನವೊಲಿಸಿ ಕೆಳಕ್ಕಿಳಿಸಲಾಯಿತು.

ಇದನ್ನೂ ಓದಿ:Japanese Surnames: ಜಪಾನ್‌ನ ಅಷ್ಟೂ ಜನರ ಅಡ್ಡ ಹೆಸರು ಒಂದೇ ಆಗಲಿದೆ!

ಪಕ್ಕದ ಗ್ರಾಮದ ಯುವಕನೊಂದಿಗಿನ ವಿವಾಹೇತರ ಸಂಬಂಧಕ್ಕೆ ಪತಿ ಒಪ್ಪದ ಹಿನ್ನೆಲೆಯಲ್ಲಿ ಮಹಿಳೆ ಒಂದೆರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತಿಂಗಳ ಹಿಂದೆ ಇದೇ ವಿಷಯದಲ್ಲಿ ಆಕೆ 5 ಅಂತಸ್ತಿನ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿ ವರದಿಯಾಗಿದೆ.

Exit mobile version