Site icon Vistara News

Taranjit Singh Sandhu : ಬಿಜೆಪಿ ಸೇರಿದ ಅಮೆರಿಕದ ಮಾಜಿ ರಾಯಭಾರಿ ತರಣ್​ಜಿತ್​ ಸಿಂಗ್

Taranjit Singh Sandhu

ನವದೆಹಲಿ : ಅಮೆರಿಕದ ವಿದೇಶಾಂಗ ವ್ಯವಹಾರಗಳ ಬಗ್ಗೆ ಅಪಾರ ಮಾಹಿತಿ ಹೊಂದಿರುವ ಅನುಭವಿ ಭಾರತೀಯ ರಾಜತಾಂತ್ರಿಕರಲ್ಲಿ ಒಬ್ಬರಾದ ಅಮೆರಿಕದ ಮಾಜಿ ರಾಯಭಾರಿ ತರಣ್​​ಜಿತ್ ಸಿಂಗ್ ಸಂಧು (Taranjit Singh Sandhu) ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ (BJP INIDIA) ಸೇರ್ಪಡೆಗೊಂಡಿದ್ದಾರೆ. ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ತಾವ್ಡೆ ಮತ್ತು ತರುಣ್ ಚುಗ್ ಅವರ ಸಮ್ಮುಖದಲ್ಲಿ ಮಾಜಿ ರಾಯಭಾರಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ 2024ರಲ್ಲಿ ಪಂಜಾಬ್​​ನ ಅಮೃತಸರ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಎಎಪಿಯ ಕುಲದೀಪ್ ಸಿಂಗ್ ಧಲಿವಾಲ್ ವಿರುದ್ಧ ಬಿಜೆಪಿ ಸಂಧು ಅವರನ್ನು ಕಣಕ್ಕಿಳಿಸಬಹುದು ಎಂದು ಹೇಳಲಾಗಿದೆ.

ಭಾರತ-ಯುಎಸ್ ಸಂಬಂಧದ ಬೆಳವಣಿಗೆ ಮತ್ತು ಅಭಿವೃದ್ಧಿ ಮೋದಿ ಸರ್ಕಾರದ ಗಮನ ನೀಡುತ್ತಿದ್ದಾರೆ ಎಂದು ಬಿಜೆಪಿ ಸೇರ್ಪಡೆ ವೇಳೆ ಹೊಗಳಿದ ಸಂಧು, ರಾಷ್ಟ್ರದ ಸೇವೆಯ ಹೊಸ ಮಾರ್ಗಕ್ಕೆ” ಪ್ರೋತ್ಸಾಹಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಮೋದಿಯ ಅಭಿವೃದ್ಧಿ ರಾಜಕಾರಣ

ಕಳೆದ 10 ವರ್ಷಗಳಲ್ಲಿ, ನಾನು ಪ್ರಧಾನಿ ಮೋದಿಯವರ ನಾಯಕತ್ವದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್ ಅಮೆರಿಕ ಮತ್ತು ಶ್ರೀಲಂಕಾದೊಂದಿಗಿನ ಸಂಬಂಧದಲ್ಲಿ ಪ್ರಧಾನಿ ಮೋದಿ ಕಾರ್ಯ ಶ್ಲಾಘನೀಯ. ಅಭಿವೃದ್ಧಿ ಇಂದು ಬಹಳ ಅಗತ್ಯ. ಈ ಬೆಳವಣಿಗೆ ಅಮೃತಸರಕ್ಕೂ ತಲುಪಬೇಕು. ಆದ್ದರಿಂದ, ನಾನು ಪ್ರವೇಶಿಸುತ್ತಿರುವ ರಾಷ್ಟ್ರದ ಸೇವೆಯ ಹೊಸ ಮಾರ್ಗಕ್ಕಾಗಿ ನನ್ನನ್ನು ಪ್ರೋತ್ಸಾಹಿಸಿದ ಪಕ್ಷದ ಅಧ್ಯಕ್ಷರು, ಪ್ರಧಾನಿ ಮತ್ತು ಗೃಹ ಸಚಿವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಂಧು ಹೇಳಿದ್ದಾರೆ.

ಇದನ್ನೂ ಓದಿ : Gujarat BJP : ಒಳಗಿನ ಕರೆಗೆ ಓಗೊಟ್ಟು ಬಿಜೆಪಿಗೆ ರಾಜೀನಾಮೆ ನೀಡಿದ ಗುಜರಾತ್ ಶಾಸಕ!

2020ರಿಂದ 24ರವರೆಗೆ ಅಮೆರಿಕದಲ್ಲಿ ಸೇವೆ

ಸಂಧು ಫೆಬ್ರವರಿ 2020 ರಿಂದ ಜನವರಿ 2024 ರವರೆಗೆ ಅಮೆರಿಕದಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸಿದರು. ವಾಷಿಂಗ್ಟನ್ ಡಿಸಿಗೆ ನೇಮಕಗೊಳ್ಳುವ ಮೊದಲು, ಸಂಧು ಜನವರಿ 2017 ರಿಂದ ಜನವರಿ 2020 ರವರೆಗೆ ಶ್ರೀಲಂಕಾಕ್ಕೆ ಭಾರತದ ಹೈಕಮಿಷನರ್ ಆಗಿದ್ದರು. ಡಿಸೆಂಬರ್ 2000 ರಿಂದ ಸೆಪ್ಟೆಂಬರ್ 2004 ರವರೆಗೆ ರಾಜಕೀಯ ವಿಭಾಗದ ಮುಖ್ಯಸ್ಥರಾಗಿ ಕೊಲಂಬೊದ ಭಾರತೀಯ ಹೈಕಮಿಷನ್​ನಲ್ಲಿ ಸೇವೆ ಸಲ್ಲಿಸಿದ್ದರು.

ಸಂಧು ಅವರು ಸೆಪ್ಟೆಂಬರ್ 2011 ರಿಂದ ಜುಲೈ 2013 ರವರೆಗೆ ಫ್ರಾಂಕ್​ಫರ್ಟ್​​ನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿದ್ದರು. ಅವರು ವಿದೇಶಾಂಗ ಸಚಿವಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಮಾರ್ಚ್ 2009 ರಿಂದ ಆಗಸ್ಟ್ 2011 ರವರೆಗೆ ಜಂಟಿ ಕಾರ್ಯದರ್ಶಿಯಾಗಿ (ಯುಎನ್) ; ಮತ್ತು ನಂತರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿ ಜಂಟಿ ಕಾರ್ಯದರ್ಶಿಯಾಗಿ (ಆಡಳಿತ) ಕಾರ್ಯನಿರ್ವಹಿಸಿದರು. ಡಿಸೆಂಬರ್ 1995 ರಿಂದ ಮಾರ್ಚ್ 1997 ರವರೆಗೆ ವಿದೇಶಾಂಗ ಸಚಿವಾಲಯದಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (ಪತ್ರಿಕಾ ಸಂಬಂಧಗಳು) ಸೇವೆ ಸಲ್ಲಿಸಿದರು.

Exit mobile version