Site icon Vistara News

Karnataka Budget 2024: 30 ಲಕ್ಷ ಉದ್ಯೋಗ, ಇ-ಆಫೀಸ್‌, ರಸ್ತೆ; ಗ್ರಾಮೀಣಾಭಿವೃದ್ಧಿಗೆ ಸಿಕ್ಕಿದ್ದೇನು?

Siddaramaiah Budget

Funds To Rural Development And Panchayat Raj In Karnataka Budget 2024

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ (Karnataka Budget 2024) ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ಗೂ (Rural Development And Panchayat Raj) ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಗ್ರಾಮೀಣ ರಸ್ತೆ, ಆರೋಗ್ಯ, ಗ್ರಂಥಾಲಯ ಸೇರಿ ಹಲವು ಘೋಷಣೆ, ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಕಲ್ಯಾಣ ಕರ್ನಾಟಕಕ್ಕೂ ಸಿದ್ದರಾಮಯ್ಯ ಆದ್ಯತೆ ನೀಡಿದ್ದಾರೆ. ಹಾಗಾದರೆ, ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ಗೆ ಏನೆಲ್ಲ ಸಿಕ್ಕಿದೆ? ಇಲ್ಲಿದೆ ಮಾಹಿತಿ.

ಕಲ್ಯಾಣ ಕರ್ನಾಟಕಕ್ಕೆ ರಸ್ತೆ ಭಾಗ್ಯ

ರಾಜ್ಯದಲ್ಲಿ ಸುಮಾರು 5,200 ಕೋಟಿ ರೂ. ವೆಚ್ಚದಲ್ಲಿ 9,450 ಕಿಲೋಮೀಟರ್‌ ರಸ್ತೆ ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಪ್ರಗತಿ ಪಥ ಯೋಜನೆ ಅಡಿಯಲ್ಲಿ 189 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ 50 ಕಿ.ಮೀ ಉದ್ದದ ರಸ್ತೆ ನಿರ್ಮಿಸಲಾಗುತ್ತದೆ. ಹಾಗೆಯೇ, ಕಲ್ಯಾಣ ಪಥ ಯೋಜನೆಯಡಿ ಕಲ್ಯಾಣ ಕರ್ನಾಟಕದ 38 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ ಮಾದರಿಯಲ್ಲಿ ಒಟ್ಟು 1,150 ಕಿ.ಮೀ. ರಸ್ತೆಗಳನ್ನು 1,000 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

30 ಲಕ್ಷ ಕುಟುಂಬಗಳಿಗೆ ಉದ್ಯೋಗ

ರಾಜ್ಯವು ಎಂದಿನಂತೆ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. 2024-25ನೇ ಸಾಲಿನಲ್ಲಿ 16 ಕೋಟಿ ಮಾನವ-ದಿನಗಳನ್ನು ಸೃಜಿಸಿ, ಸುಮಾರು 30 ಲಕ್ಷ ಕುಟುಂಬಗಳಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ. ಪ್ರಮುಖವಾಗಿ ಜಲಾನಯನ ಇಲಾಖೆಯ ಒಗ್ಗೂಡಿಸುವಿಕೆಯೊಂದಿಗೆ 5,000 ಎಕರೆ ಸವಳು-ಜವಳು ಭೂಮಿಯನ್ನು ಸುಧಾರಿಸುವ ಮತ್ತು ಪ್ರತಿ ತಾಲೂಕಿಗೆ ಕನಿಷ್ಠ 2ರಂತೆ ಬೂದು ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ರಮುಖ ಅಂಶಗಳು

ಇದನ್ನೂ ಓದಿ: Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version