Site icon Vistara News

Gautam Adani: ಬಿಲಿಯನೇರ್‌ ಗೌತಮ್ ಅದಾನಿ ಗೊತ್ತು; ಅವರ ಪತ್ನಿಯ ಬಗ್ಗೆ ತಿಳಿದಿದೆಯೆ?

Gautam Adani

ಬೆಂಗಳೂರು: ಫೋರ್ಬ್ಸ್‌ನ 2024ರ ವಿಶ್ವದ ಶತಕೋಟ್ಯಧಿಪತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ (Gautam Adani) ಜಾಗತಿಕವಾಗಿ 17ನೇ ಶ್ರೀಮಂತ ವ್ಯಕ್ತಿಯಾಗಿ ಸ್ಥಾನ ಪಡೆದುಕೊಂಡಿರುವುದು ನಿಮಗೆ ಗೊತ್ತೇ ಇದೆ. ಇವರ ನಿವ್ವಳ ಆದಾಯ ಮೌಲ್ಯವು 84 ಬಿಲಿಯನ್ ಡಾಲರ್ (ಸುಮಾರು 6.9 ಲಕ್ಷ ಕೋಟಿ ರೂ.)ಗೆ ಏರಿಕೆಯಾಗಿದೆ. ಆದರೆ ಗೌತಮ್ ಅದಾನಿಯವರು ತಮ್ಮ ಈ ಯಶಸ್ಸಿಗೆ ಪತ್ನಿ ದಂತವೈದ್ಯೆ ಪ್ರೀತಿ ಅದಾನಿ ಅವರು ಕಾರಣ ಎಂಬುದಾಗಿ ಸಾರ್ವಜನಿಕವಾಗಿ ಹೇಳಿದ್ದಾರೆ!

ಪತ್ನಿಯ ವೈದ್ಯಕೀಯ ಕಾರ್ಯಗಳನ್ನು ಅದಾನಿ ಶ್ಲಾಘಿಸಿದ್ದಾರೆ. ಹಾಗಾದರೆ ದಂತವೈದ್ಯೆ, ಉದ್ಯಮಿ ಡಾ. ಪ್ರೀತಿ ಅದಾನಿ ಬಗ್ಗೆ ತಿಳಿದುಕೊಳ್ಳೋಣ.

1986ರಲ್ಲಿ ಡಾ. ಪ್ರೀತಿ ಅದಾನಿಯವರು ಗೌತಮ್ ಅದಾನಿಯನ್ನು ವಿವಾಹವಾದರು. ಅಹಮದಾಬಾದ್ ನ ಸರ್ಕಾರಿ ದಂತ ಕಾಲೇಜಿನಲ್ಲಿ ದಂತ ಶಸ್ತ್ರಚಿಕಿತ್ಸೆಯಲ್ಲಿ (ಬಿಡಿಎಸ್) ಪದವಿ ಪಡೆದಿರುವ ಪ್ರೀತಿ ಅದಾನಿಯವರು 1 ಬಿಲಿಯನ್ ಡಾಲರ್ (ಸುಮಾರು 8,327 ಕೋಟಿ ರೂ) ನಿವ್ವಳ ಆದಾಯ ಮೌಲ್ಯವನ್ನು ಹೊಂದಿದ್ದಾರೆ.

1996ರಲ್ಲಿ ಪ್ರೀತಿ ಅದಾನಿಯವರು ಅದಾನಿ ಫೌಂಡೇಶನ್ ಅನ್ನು ಸ್ಥಾಪಿಸಿದರು. ಇದು ಈಗ 19 ರಾಜ್ಯಗಳ 5,753 ಹಳ್ಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದು 7.3 ದಶಲಕ್ಷಕ್ಕೂ ಹೆಚ್ಚು ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಿದೆ. ಅದಾನಿ ಗ್ರೂಪ್ ನ ಲಾಭದ 3% ಅನ್ನು ಈ ಫೌಂಡೇಶನ್ ಗೆ ಹಾಕಲಾಗುತ್ತಿದ್ದು, ಇದು ಶಿಕ್ಷಣ, ಸಾರ್ವಜನಿಕ ಆರೋಗ್ಯ, ಸುಸ್ಥಿರ ಜೀವನೋಪಾಯ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹವಾಮಾನ ಕ್ರಮಕ್ಕೆ ಆದ್ಯತೆ ನೀಡುತ್ತದೆ.

ಗುಜರಾತ್ ನಲ್ಲಿ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸುವುದು ಪ್ರೀತಿ ಅದಾನಿಯವರು ಉದ್ದೇಶವಾಗಿರುವ ಕಾರಣ 2001ರ ಭುಜ್ ಭೂಕಂಪದ ನಂತರ ಮುದ್ರಾದಲ್ಲಿ ಅದಾನಿ ಪಬ್ಲಿಕ್ ಸ್ಕೂಲ್ ಅನ್ನು ಪ್ರಾರಂಭಿಸಿದರು.

ಇದನ್ನೂ ಓದಿ: Cow Milk: ಹಸುವಿನ ಹಾಲು ಕುಡಿಯುತ್ತೀರಲ್ಲವೆ? ಇದರ ಪ್ರಯೋಜನಗಳ ಬಗ್ಗೆ ತಿಳಿದಿರಲಿ

ಗೌತಮ್ ಅದಾನಿ ಮತ್ತು ಪ್ರೀತಿ ಅದಾನಿ ದಂಪತಿಗೆ ಕರಣ್ ಅದಾನಿ ಮತ್ತು ಜೀತ್ ಅದಾನಿ ಎಂಬ ಇಬ್ಬರು ಮಕ್ಕಳಿದ್ದಾರೆ. ಕರಣ್ ಅದಾನಿ ಪೋರ್ಟ್ಸ್ ಮತ್ತು ಎಸ್ ಇ ಝಡ್ ಲಿಮಿಟೆಡ್ (ಎಪಿಎಸ್ ಇಝಡ್)ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರೆ, ಜೀತ್ ಅದಾನಿ ಅದಾನಿ ಗ್ರೂಪ್ ನ ಹಣಕಾಸು ವಿಭಾಗದಲ್ಲಿ ಉಪಾಧ್ಯಕ್ಷರ ಪಾತ್ರವನ್ನು ವಹಿಸಿಕೊಂಡಿದ್ದಾರೆ. ಒಟ್ಟಾರೆ ಅವರ ಮಕ್ಕಳು ಕೂಡ ಅವರ ಉದ್ಯಮಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಸಾಕಾರಗೊಳಿಸಲಿದ್ದಾರೆ. ಯಶಸ್ಸಿನ ಹಾದಿಯಲ್ಲೇ ನಡೆಯುತ್ತಾರೆ.

Exit mobile version