Site icon Vistara News

IPL 2024 : ಕೊಹ್ಲಿಯನ್ನು ಗಂಭೀರ್ ಅಪ್ಪಿಕೊಂಡಿದ್ದು ಫೇರ್​ಪ್ಲೇ ಅವಾರ್ಡ್​ಗಾಗಿಯಾ? ಅವರ ಮಾತಲ್ಲೇ ಕೇಳಿ

Virat kohli

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ನಲ್ಲಿ ಉತ್ತಮ ಪ್ರಯತ್ನಗಳ ಹೊರತಾಗಿಯೂ ಕೆಕೆಆರ್ ತಂಡು ಫೇರ್​ಪ್ಲೇ ಪ್ರಶಸ್ತಿ ಗೆಲ್ಲಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ಮಾರ್ಗದರ್ಶಕ ಗೌತಮ್ ಗಂಭೀರ್ (Gautam Gambhir) ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ, ಕೋಲ್ಕತಾ ನೈಟ್ ರೈಡರ್ಸ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರ ಲೀಗ್ ಹಂತದಲ್ಲಿ ಫೇರ್​ಪ್ಲೇ ಪ್ರಶಸ್ತಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ.

ಕೆಕೆಆರ್ ಮಾರ್ಗದರ್ಶಕರಾಗಿರುವ ಗಂಭೀರ್​ ಫೇರ್​ಪ್ಲೇ ಪ್ರಶಸ್ತಿಗಾಗಿ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದರು. ಆದರೆ ತಂಡವು ಇನ್ನೂ ಈ ರ್ಯಾಂಕ್​ ಪಟ್ಟಿಯಲ್ಲಿ ಕೆಳಗಿದೆ. ಈ ಕುರಿತು ಮಾತನಾಡಿದ ಅವರು ಜನಪ್ರಿಯ ಕ್ರಿಕೆಟಿಗ ಅಥವಾ ತಂಡವಾಗುವ ಬದಲು ಐಪಿಎಲ್ ಟ್ರೋಫಿಯನ್ನು ಗೆಲ್ಲುವುದೇ ಆದ್ಯತೆ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದಾಗಿ ಅವರು ಕೊಹ್ಲಿಯನ್ನು ಇತ್ತೀಚೆಗೆ ತಬ್ಬಿಕೊಂಡಿರುವುದು ಫೇರ್​ಪ್ಲೇ ಪ್ರಶಸ್ತಿಗಾಗಿಯೇ ಎಂಬ ಅನುಮಾನಗಳು ಸೃಷ್ಟಿಯಾಗಿವೆ.

ಕೊಹ್ಲಿಯನ್ನು ತಬ್ಬಿದ್ದರೂ ಅಂಕ ಬರಲಿಲ್ಲ ಎಂದ ಗಂಭೀರ್​

ಪರಸ್ಪರ ತಬ್ಬಿಕೊಂಡ ಹೊರತಾಗಿಯೂ ಫೇರ್ ಪ್ಲೇ ಪ್ರಶಸ್ತಿಗಳಲ್ಲಿ ತಮ್ಮ ತಂಡದ ಸ್ಥಾನದ ಬಗ್ಗೆ ಗಂಭೀರ್ ನಿರಾಶೆ ವ್ಯಕ್ತಪಡಿಸಿದ್ದರು. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆಯಿಂದಾಗಿ ನ್ಯಾಯೋಚಿತ ಫೇರ್​ಪ್ಲೇ ಅಂಕಗಳಲ್ಲಿ ಹೆಚ್ಚಿನ ಶ್ರೇಯಾಂಕ ಅವರು ನಿರೀಕ್ಷಿಸಿದ್ದರು. ಆದರೆ ತಂಡಗಳು ನ್ಯಾಯೋಚಿತ (ಫೇರ್​ಪ್ಲೇ) ಆಟದ ಅಂಕಗಳಲ್ಲಿ ಕೊನೆಯ ಸ್ಥಾನದಲ್ಲಿವೆ.

ಇದನ್ನೂ ಓದಿ: IPL 2024 : ಕೊಹ್ಲಿಯನ್ನೂ ಟೀಕಿಸುವುದರ ನಡುವೆಯೂ ಆರ್​​ಸಿಬಿ ಕಪ್​ ಗೆಲ್ಲುತ್ತದೆ ಎಂದ ಗವಾಸ್ಕರ್​

ಪ್ರಾಮಾಣಿಕವಾಗಿ ಹೇಳುವುದಾದರೆ ಚಿನ್ನಸ್ವಾಮಿಯಲ್ಲಿ ನಡೆದ ಘಟನೆಯ ನಂತರ ನಾವು ಫೇರ್​ಪ್ಲೇ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿರುತ್ತೇವೆ ಎಂದು ನಾನು ಭಾವಿಸಿದ್ದೆ. ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮವಾಗಿರಲು ಯತ್ನಿಸಿದ್ದೇವೆ ಎಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಮತ್ತು ವಿರಾಟ್ ಕೊಹ್ಲಿ ನಡುವಿನ ಅಪ್ಪುಗೆಯನ್ನು ಉಲ್ಲೇಖಿಸಿ ಗಂಭೀರ್ ಹೇಳಿದ್ದಾರೆ.

ಫೇರ್ ಪ್ಲೇ ಪ್ರಶಸ್ತಿಯನ್ನು ಗೆಲ್ಲಲು ಕೆಕೆಆರ್ ಸಹ ಮಾಲೀಕ ಶಾರುಖ್ ಖಾನ್ ಒತ್ತಾಯಿಸಿದ್ದರೇ ಎಂದು ಅಶ್ವಿನ್ ಕೇಳಿದ ಪ್ರಶ್ನೆಗೆ, ಕೆಕೆಆರ್ ಮಾರ್ಗದರ್ಶಕ ನೇರ ಉತ್ತರ ನೀಡಲಿಲ್ಲ. ನಾನು ಅವರೊಂದಿಗೆ ಇರುವವರೆಗೂ ಆ ತಂಡ ಪ್ರಶಸ್ತಿ ಗೆಲ್ಲುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ.

ಫೇರ್​ಪ್ಲೇ ಪ್ರಶಸ್ತಿ ಗೆಲ್ಲಬೇಕಾದರೆ ಡಗ್​ಔಟ್​ನಲ್ಲಿ ಬೇರೆ ಯಾರಾದರೂ ಬೇಕು. ನಾನು ಅಲ್ಲಿರುವವರೆಗೂ ನಿಮಗೆ ಪ್ರಶಸ್ತಿ ಸಿಗುವುದಿಲ್ಲ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾದದ್ದನ್ನು ಮಾಡಿದ್ದೇನೆ. ಆದರೂ, ಫೇರ್ ಪ್ಲೇ ಪ್ರಶಸ್ತಿಯಲ್ಲಿ ನಾವು 10 ನೇ ಸ್ಥಾನದಲ್ಲಿದ್ದೇವೆ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.

Exit mobile version