IPL 2024 : ಕೊಹ್ಲಿಯನ್ನು ಗಂಭೀರ್ ಅಪ್ಪಿಕೊಂಡಿದ್ದು ಫೇರ್​ಪ್ಲೇ ಅವಾರ್ಡ್​ಗಾಗಿಯಾ? ಅವರ ಮಾತಲ್ಲೇ ಕೇಳಿ - Vistara News

ಪ್ರಮುಖ ಸುದ್ದಿ

IPL 2024 : ಕೊಹ್ಲಿಯನ್ನು ಗಂಭೀರ್ ಅಪ್ಪಿಕೊಂಡಿದ್ದು ಫೇರ್​ಪ್ಲೇ ಅವಾರ್ಡ್​ಗಾಗಿಯಾ? ಅವರ ಮಾತಲ್ಲೇ ಕೇಳಿ

IPL 2024: ಕೆಕೆಆರ್ ಮಾರ್ಗದರ್ಶಕರಾಗಿರುವ ಗಂಭೀರ್​ ಫೇರ್​ಪ್ಲೇ ಪ್ರಶಸ್ತಿಗಾಗಿ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದರು. ಆದರೆ ತಂಡವು ಇನ್ನೂ ಈ ರ್ಯಾಂಕ್​ ಪಟ್ಟಿಯಲ್ಲಿ ಕೆಳಗಿದೆ. ಈ ಕುರಿತು ಮಾತನಾಡಿದ ಅವರು ಜನಪ್ರಿಯ ಕ್ರಿಕೆಟಿಗ ಅಥವಾ ತಂಡವಾಗುವ ಬದಲು ಐಪಿಎಲ್ ಟ್ರೋಫಿಯನ್ನು ಗೆಲ್ಲುವುದೇ ಆದ್ಯತೆ ಎಂದು ಹೇಳಿದ್ದಾರೆ.

VISTARANEWS.COM


on

Virat kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ನಲ್ಲಿ ಉತ್ತಮ ಪ್ರಯತ್ನಗಳ ಹೊರತಾಗಿಯೂ ಕೆಕೆಆರ್ ತಂಡು ಫೇರ್​ಪ್ಲೇ ಪ್ರಶಸ್ತಿ ಗೆಲ್ಲಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ಮಾರ್ಗದರ್ಶಕ ಗೌತಮ್ ಗಂಭೀರ್ (Gautam Gambhir) ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ, ಕೋಲ್ಕತಾ ನೈಟ್ ರೈಡರ್ಸ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರ ಲೀಗ್ ಹಂತದಲ್ಲಿ ಫೇರ್​ಪ್ಲೇ ಪ್ರಶಸ್ತಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ.

ಕೆಕೆಆರ್ ಮಾರ್ಗದರ್ಶಕರಾಗಿರುವ ಗಂಭೀರ್​ ಫೇರ್​ಪ್ಲೇ ಪ್ರಶಸ್ತಿಗಾಗಿ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದರು. ಆದರೆ ತಂಡವು ಇನ್ನೂ ಈ ರ್ಯಾಂಕ್​ ಪಟ್ಟಿಯಲ್ಲಿ ಕೆಳಗಿದೆ. ಈ ಕುರಿತು ಮಾತನಾಡಿದ ಅವರು ಜನಪ್ರಿಯ ಕ್ರಿಕೆಟಿಗ ಅಥವಾ ತಂಡವಾಗುವ ಬದಲು ಐಪಿಎಲ್ ಟ್ರೋಫಿಯನ್ನು ಗೆಲ್ಲುವುದೇ ಆದ್ಯತೆ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದಾಗಿ ಅವರು ಕೊಹ್ಲಿಯನ್ನು ಇತ್ತೀಚೆಗೆ ತಬ್ಬಿಕೊಂಡಿರುವುದು ಫೇರ್​ಪ್ಲೇ ಪ್ರಶಸ್ತಿಗಾಗಿಯೇ ಎಂಬ ಅನುಮಾನಗಳು ಸೃಷ್ಟಿಯಾಗಿವೆ.

ಕೊಹ್ಲಿಯನ್ನು ತಬ್ಬಿದ್ದರೂ ಅಂಕ ಬರಲಿಲ್ಲ ಎಂದ ಗಂಭೀರ್​

ಪರಸ್ಪರ ತಬ್ಬಿಕೊಂಡ ಹೊರತಾಗಿಯೂ ಫೇರ್ ಪ್ಲೇ ಪ್ರಶಸ್ತಿಗಳಲ್ಲಿ ತಮ್ಮ ತಂಡದ ಸ್ಥಾನದ ಬಗ್ಗೆ ಗಂಭೀರ್ ನಿರಾಶೆ ವ್ಯಕ್ತಪಡಿಸಿದ್ದರು. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆಯಿಂದಾಗಿ ನ್ಯಾಯೋಚಿತ ಫೇರ್​ಪ್ಲೇ ಅಂಕಗಳಲ್ಲಿ ಹೆಚ್ಚಿನ ಶ್ರೇಯಾಂಕ ಅವರು ನಿರೀಕ್ಷಿಸಿದ್ದರು. ಆದರೆ ತಂಡಗಳು ನ್ಯಾಯೋಚಿತ (ಫೇರ್​ಪ್ಲೇ) ಆಟದ ಅಂಕಗಳಲ್ಲಿ ಕೊನೆಯ ಸ್ಥಾನದಲ್ಲಿವೆ.

ಇದನ್ನೂ ಓದಿ: IPL 2024 : ಕೊಹ್ಲಿಯನ್ನೂ ಟೀಕಿಸುವುದರ ನಡುವೆಯೂ ಆರ್​​ಸಿಬಿ ಕಪ್​ ಗೆಲ್ಲುತ್ತದೆ ಎಂದ ಗವಾಸ್ಕರ್​

ಪ್ರಾಮಾಣಿಕವಾಗಿ ಹೇಳುವುದಾದರೆ ಚಿನ್ನಸ್ವಾಮಿಯಲ್ಲಿ ನಡೆದ ಘಟನೆಯ ನಂತರ ನಾವು ಫೇರ್​ಪ್ಲೇ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿರುತ್ತೇವೆ ಎಂದು ನಾನು ಭಾವಿಸಿದ್ದೆ. ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮವಾಗಿರಲು ಯತ್ನಿಸಿದ್ದೇವೆ ಎಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಮತ್ತು ವಿರಾಟ್ ಕೊಹ್ಲಿ ನಡುವಿನ ಅಪ್ಪುಗೆಯನ್ನು ಉಲ್ಲೇಖಿಸಿ ಗಂಭೀರ್ ಹೇಳಿದ್ದಾರೆ.

ಫೇರ್ ಪ್ಲೇ ಪ್ರಶಸ್ತಿಯನ್ನು ಗೆಲ್ಲಲು ಕೆಕೆಆರ್ ಸಹ ಮಾಲೀಕ ಶಾರುಖ್ ಖಾನ್ ಒತ್ತಾಯಿಸಿದ್ದರೇ ಎಂದು ಅಶ್ವಿನ್ ಕೇಳಿದ ಪ್ರಶ್ನೆಗೆ, ಕೆಕೆಆರ್ ಮಾರ್ಗದರ್ಶಕ ನೇರ ಉತ್ತರ ನೀಡಲಿಲ್ಲ. ನಾನು ಅವರೊಂದಿಗೆ ಇರುವವರೆಗೂ ಆ ತಂಡ ಪ್ರಶಸ್ತಿ ಗೆಲ್ಲುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ.

ಫೇರ್​ಪ್ಲೇ ಪ್ರಶಸ್ತಿ ಗೆಲ್ಲಬೇಕಾದರೆ ಡಗ್​ಔಟ್​ನಲ್ಲಿ ಬೇರೆ ಯಾರಾದರೂ ಬೇಕು. ನಾನು ಅಲ್ಲಿರುವವರೆಗೂ ನಿಮಗೆ ಪ್ರಶಸ್ತಿ ಸಿಗುವುದಿಲ್ಲ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾದದ್ದನ್ನು ಮಾಡಿದ್ದೇನೆ. ಆದರೂ, ಫೇರ್ ಪ್ಲೇ ಪ್ರಶಸ್ತಿಯಲ್ಲಿ ನಾವು 10 ನೇ ಸ್ಥಾನದಲ್ಲಿದ್ದೇವೆ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Bajaj Freedom 125 CNG : ಬಜಾಜ್​ ಕಂಪನಿಯ ಸಿಎನ್​ಜಿ ಬೈಕ್​ ಬಿಡುಗಡೆ; ಕೆ.ಜಿಗೆ 102 ಕಿಲೋ ಮೀಟರ್​​ ಮೈಲೇಜ್​

Bajaj Freedom 125 CNG: ಇದು ಸಿಲಿಂಡರ್​​ನ ರಕ್ಷಣಾ ಪಂಜರವಾಗಿ ಕಾರ್ಯನಿರ್ವಹಿಸುತ್ತದೆ. 147 ಕೆಜಿ ತೂಕವನ್ನು ಹೊಂದಿರುವ ಫ್ರೀಡಂ 125 ಬೈಕ್​​ ಸಿಟಿ 125ಎಕ್ಸ್ ಗಿಂತ 16 ಕೆಜಿ ಭಾರ. ಇದು 785 ಎಂಎಂ ಉದ್ದದ ಸಿಂಗಲ್ ಪೀಸ್ ಸೀಟ್ ಅನ್ನು ಹೊಂದಿದೆ. ಇದು ಬಜಾಜ್ ತನ್ನ ವಿಭಾಗದಲ್ಲಿ ಅತಿ ಉದ್ದದ ಸೀಟ್ ಎಂದು ಹೇಳಿಕೊಂಡಿದೆ.

VISTARANEWS.COM


on

Bajaj Freedom 125
Koo

ಬೆಂಗಳೂರು: ಬಜಾಜ್ ಕಂಪನಿಯು ತನ್ನ ಬಹುನಿರೀಕ್ಷಿತ ಫ್ರೀಡಂ 125 ಬೈಕ್ (Bajaj Freedom 125 CNG) ಶುಕ್ರವಾರ (ಜುಲೈ 5ರಂದು) ಬಿಡುಗಡೆಗೊಂಡಿದೆ. ಇದು ವಿಶ್ವದ ಮೊದಲ ಸಿಎನ್ ಜಿ ಬೈಕ್ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿ. ಮೈಲೇಜ್​ಗೆ ಬೇಡಿಕೆ ಇರುವ ಭಾರತದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಲು ಕಂಪನಿ ಮುಂದಾಗಿದೆ. ಇದರ ಬೆಲೆಗಳು ಭಾರತದಲ್ಲಿ ಎಕ್ಸ್ ಶೋರೂಂ ದರದಂತೆ 95,000 ರೂಪಾಯಿಂದ ಪ್ರಾರಂಭವಾಗುತ್ತವೆ. ರೇಂಜ್ ಹಾಗೂ ವೇರಿಯೆಂಟ್ ಹಾಗೂ ಬಣ್ಣಗಳ​ ಪ್ರಕಾರ ಗರಿಷ್ಠ ರೂ.1.10 ಲಕ್ಷಗಳವರೆಗೆ ಬೆಲೆ ನಿಗದಿ ಮಾಡಲಾಗಿದೆ.

ಫ್ರೀಡಂ ಬೈಕ್​ 125 ಸಿಸಿ ಹಾರಿಜಾಂಟಲ್​ ಮೌಂಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ 8,000 ಆರ್ ಪಿಎಂನಲ್ಲಿ 9.5 ಬಿಹೆಚ್ ಪಿ ಪವರ್ ಮತ್ತು 6,000 ಆರ್ ಪಿಎಂನಲ್ಲಿ 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೋಟರ್ ಸ್ವಿಚ್ ಬದಲಾಯಿಸುವ ಮೂಲಕ ಸಿಎನ್ ಜಿ ಅಥವಾ ಪೆಟ್ರೋಲ್ ಆಯ್ಕೆಯೊಂದಿಗೆ ಸವಾರಿ ಮಾಡಬಹುದು. ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ 2 ಲೀಟರ್ ಆಗಿದ್ದರೆ ಸಿಎನ್ ಜಿ 2 ಕೆ.ಜಿ ತುಂಬಿಸಬಹುದು. ಆದರೆ, ಸಿಎನ್​​ಜಿ ಟ್ಯಾಂಕ್ ೧8 ಕೆ.ಜಿ ತೂಕವಿರುತ್ತದೆ. ಕಂಪನಿಯು ಸಿಎನ್ ಜಿಯಲ್ಲಿ ಪ್ರತಿ ಕೆ.ಜಿ.ಗೆ 102 ಕಿ.ಮೀ ಮೈಲೇಜ್ ಮತ್ತು ಪೆಟ್ರೋಲ್​​ನಲ್ಲಿ 65 ಕಿ.ಮೀ ಮೈಲೇಜ್​ ನೀಡುತ್ತದೆ.

ಸಿಎನ್ ಜಿ ಟ್ಯಾಂಕ್ ಅನ್ನು ಟ್ರೆಲ್ಲಿಸ್ ಫ್ರೇಮ್ ನ ಸಹಾಯದಿಂದ ತಯಾರಿಸಲಅಗಿದೆ. ಇದು ಸಿಲಿಂಡರ್​​ನ ರಕ್ಷಣಾ ಪಂಜರವಾಗಿ ಕಾರ್ಯನಿರ್ವಹಿಸುತ್ತದೆ. 147 ಕೆಜಿ ತೂಕವನ್ನು ಹೊಂದಿರುವ ಫ್ರೀಡಂ 125 ಬೈಕ್​​ ಸಿಟಿ 125ಎಕ್ಸ್ ಗಿಂತ 16 ಕೆಜಿ ಭಾರ. ಇದು 785 ಎಂಎಂ ಉದ್ದದ ಸಿಂಗಲ್ ಪೀಸ್ ಸೀಟ್ ಅನ್ನು ಹೊಂದಿದೆ. ಇದು ಬಜಾಜ್ ತನ್ನ ವಿಭಾಗದಲ್ಲಿ ಅತಿ ಉದ್ದದ ಸೀಟ್ ಎಂದು ಹೇಳಿಕೊಂಡಿದೆ. ಈ ಸೀಟ್ 825 ಎಂಎಂ ಎತ್ತರವಿದ್ದು, ಸಿಟಿ 125ಎಕ್ಸ್ ಗಿಂತ 15 ಎಂಎಂ ಹೆಚ್ಚಾಗಿದೆ. ಸಸ್ಪೆಂಷನ್ ಸಿಸ್ಟಂಗಳನ್ನು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಲಿಂಕ್ಡ್ ಮೊನೊಶಾಕ್ ಇದೆ.

ಹೇಗಿದೆ ನೋಟ?

ನೋಟದ ಬಗ್ಗೆ ಹೇಳುವುದಾದರೆ, ಬಜಾಜ್ ಫ್ರೀಡಂ 125 ರಲ್ಲಿ ದೃಢವಾದ ವಿನ್ಯಾಸವನ್ನು ಅನುಸರಿಸಲಾಗಿದೆ. ಇದು ಪೂರ್ಣ ಪ್ರಮಾಣದ ಎಲ್ಇಡಿ ಹೆಡ್ ಲೈಟ್ ಮತ್ತು ಟೈಲ್-ಲೈಟ್ ಹೊಂದಿದ್ದರೆ, ಹ್ಯಾಲೋಜೆನ್ ಇಂಡಿಕೇಟರ್​ಗಳಿವೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೊನೊಕ್ರೋಮ್ ಎಲ್​​ಸಿಡಿ ಡಿಸ್​ಪ್ಲೇ ಹೊಂದಿದೆ. ಮೊಬೈಲ್​ ಬ್ಲೂಟೂತ್ ಸಂಪರ್ಕ ಸಾಧಿಸಹುದು. ಫ್ಯೂಯಲ್ ಟ್ಯಾಂಕ್ ಗಳು ಮತ್ತು ಏರ್ ಫಿಲ್ಟರ್ ಎರಡನ್ನೂ ದೊಡ್ಡ ಫ್ಲಾಪ್ ಮೂಲಕ ನೀಡಲಾಗಿದೆ.

ಬ್ರೇಕಿಂಗ್​ ವ್ಯವಸ್ಥೆ

ಫ್ರೀಡಂ 125 ಬೈಕ್, ಡಿಸ್ಕ್ ಎಲ್ಇಡಿ, ಡ್ರಮ್ ಎಲ್ಇಡಿ ಮತ್ತು ಡ್ರಮ್ ಎಂಬ ಮೂರು ವೇರಿಯೆಂಟ್​​ಗಳಲ್ಲಿ ಲಭ್ಯವಿದೆ. ಈ ಬೈಕ್ ಒಟ್ಟು ಏಳು ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳನ್ನು ಗ್ರಾಹಕರಿಗೆ ನೀಡಿದೆ. ಅವುಗಳನ್ನು ವೇರಿಯೆಂಟ್​ಗಳ ಪ್ರಕಾರ ವಿಂಗಡಿಸಲಾಗಿದೆ. ಎಲ್ಲಾ ಡೀಲರ್ ಶಿಪ್ ಗಳಲ್ಲಿ ಹಾಗೂ ಬಜಾಜ್ ವೆಬ್ ಸೈಟ್ ನಲ್ಲಿ ಬುಕಿಂಗ್ ಆರಂಭವಾಗಿದೆ.

ಈ ಬೈಕ್ ಉದ್ಯಮದ ಮಾನದಂಡಗಳು ಮತ್ತು ಬಜಾಜ್ ಕಂಪನಿಯ ಆಂತರಿಕ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಲಾಗಿದ್ದು 11 ಸುರಕ್ಷತಾ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ. ಕಂಪನಿಯು ಫ್ರೀಡಂ 125 ಅನ್ನು ಈಜಿಪ್ಟ್, ಟಾಂಜಾನಿಯಾ, ಕೊಲಂಬಿಯಾ, ಪೆರು, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾದಂತಹ ದೇಶಗಳಿಗೆ ರಫ್ತು ಮಾಡಲು ಯೋಜಿಸಿದೆ.

Continue Reading

ಪ್ರಮುಖ ಸುದ್ದಿ

Keir Starmer: ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ

Keir Starmer: ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟಿದೆ. ಹಾಗಾಗಿ, ಕೀರ್‌ ಸ್ಟಾರ್ಮರ್‌ ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

VISTARANEWS.COM


on

Keir Starmer
Koo

ಲಂಡನ್: ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಲೇಬರ್‌ ಪಕ್ಷವು (Labour Party) ಅಭೂತಪೂರ್ವ ಗೆಲುವು ಸಾಧಿಸಿದ್ದು, ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ ಅವರು ಬ್ರಿಟನ್‌ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ 61 ವರ್ಷದ ಕೀರ್‌ ಸ್ಟಾರ್ಮರ್‌ (Keir Starmer) ಅವರು ಬ್ರಿಟನ್‌ ಅರಸ ಕಿಂಗ್‌ ಚಾರ್ಲ್ಸ್‌ III (King Charles III) ಅವರನ್ನು ಭೇಟಿಯಾಗಿ, ನೂತನ ಸರ್ಕಾರ ರಚಿಸುವ ಕುರಿತು ಮನವಿ ಮಾಡಿದರು. ಕಿಂಗ್‌ ಚಾರ್ಲ್ಸ್‌ III ಅವರು ಅನುಮೋದನೆ ನೀಡುತ್ತಲೇ ಅಧಿಕೃತವಾಗಿ ಕೀರ್‌ ಸ್ಟಾರ್ಮರ್‌ ಅವರು ಬ್ರಿಟನ್‌ ಪ್ರಧಾನಿ ಎನಿಸಿದ್ದಾರೆ.

ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ದೇಶದ ಜನರ ಸೇವೆ ಮಾಡುವುದೇ ನಮಗೆ ಭಾಗ್ಯವಾಗಿದೆ. ನೀವು ಲೇಬರ್‌ ಪಕ್ಷಕ್ಕೆ ಮತ ಹಾಕಿದ್ದೀರೋ, ಬಿಟ್ಟಿದ್ದೀರೋ ಅದು ಬೇಕಾಗಿಲ್ಲ. ದೇಶದ ಪ್ರತಿಯೊಬ್ಬರಿಗೂ ಉತ್ತಮ ಆಡಳಿತ ನೀಡುವುದು ನಮ್ಮ ಆದ್ಯತೆಯಾಗಿದೆ. ರಾಜಕೀಯ ಎಂದರೆ ಉತ್ತಮ ಆಡಳಿತ ನೀಡುವುದು, ರಾಜಕೀಯವನ್ನು ಸಕಾರಾತ್ಮಕ ಸಂಗತಿಗಾಗಿ ಬಳಸಿಕೊಳ್ಳುತ್ತೇವೆ. ಮತಗಳನ್ನು ನೀಡಿ ಗೆಲ್ಲಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು. ಕೀರ್‌ ಸ್ಟಾರ್ಮರ್‌ ಅವರು ನಿರ್ಗಮಿತ ಪ್ರಧಾನಿ ರಿಷಿ ಸುನಕ್‌ ಅವರ ಆಡಳಿತವನ್ನೂ ಹೊಗಳಿದ್ದು ವಿಶೇಷವಾಗಿತ್ತು.

ನರೇಂದ್ರ ಮೋದಿ ಅಭಿನಂದನೆ

ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ಅವರು ಆಯ್ಕೆಯಾಗುತ್ತಲೇ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕೀರ್‌ ಸ್ಟಾರ್ಮರ್‌ ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ-ಬ್ರಿಟನ್‌ ಒಗ್ಗೂಡಿ, ಸಂಬಂಧವನ್ನು ವೃದ್ಧಿಸಿಕೊಂಡು ಉಭಯ ದೇಶಗಳ ಏಳಿಗೆಗೆ ಶ್ರಮಿಸುವ ವಿಶ್ವಾಸವಿದೆ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಇದುವರೆಗೆ ಆಡಳಿತ ನಡೆಸಿದ, ಭಾರತದ ಮೂಲದ ರಿಷಿ ಸುನಕ್‌ ಅವರ ಬಗ್ಗೆಯೂ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟಿದೆ. ಕನ್ಸರ್ವೇಟಿವ್‌ ಪಕ್ಷವು ಮುಖಭಂಗ ಅನುಭವಿಸಿದ್ದು, ಕೇವಲ 81 ಸ್ಥಾನಗಳನ್ನು ಪಡೆದಿದೆ. ಫಲಿತಾಂಶ ಪ್ರಕಟವಾಗುತ್ತಲೇ ರಿಷಿ ಸುನಕ್‌ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಭಾರತದ ಬಗ್ಗೆ ಸ್ಟಾರ್ಮರ್‌ ನಿಲುವೇನು?

ಜಾಗತಿಕ ಭದ್ರತೆ, ಹವಾಮಾನ ಭದ್ರತೆ ಮತ್ತು ಆರ್ಥಿಕ ಭದ್ರತೆಗೆ ಸಂಬಂಧಿಸಿದಂತೆ ಭಾರತದೊಂದಿಗೆ ಉತ್ತಮ ಬಾಂದವ್ಯ ಹೊಂದುವ ಬಗ್ಗೆ ಸ್ಟಾರ್ಮರ್‌ ತಮ್ಮ ಭಾಷಣದಲ್ಲಿ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ. ಚುನಾವಣಾ ಭಾಷಣದಲ್ಲಿ ಮಾತನಾಡುತ್ತಾ ಅವರು, ನಮ್ಮ ಲೇಬರ್‌ ಪಕ್ಷ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಅಲ್ಲದೇ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಬಯಸುತ್ತದೆ. ಜಾಗತಿಕ ಭದ್ರತೆ, ಹವಾಮಾನ ಭದ್ರತೆ, ಆರ್ಥಿಕ ಭದ್ರತೆಗಾಗಿ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಹ ಹಂಚಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: UK Election: ಯುಕೆ ಎಲೆಕ್ಷನ್‌ನಲ್ಲಿ ಹೀನಾಯ ಸೋಲು; ರಿಶಿ ಸುನಕ್‌ ಫಸ್ಟ್‌ ರಿಯಾಕ್ಷನ್‌

Continue Reading

Latest

Bikini Day: ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಉಡಾಯಿಸಿದ ಸುಂದರಿಯರಿವರು!

Bikini Day: ಪ್ರತಿವರ್ಷ ಜುಲೈ 5ರಂದು ಬಿಕಿನಿ ದಿನ ಆಚರಿಸಲಾಗುತ್ತದೆ. ಸಂಪ್ರದಾಯವಾದಿಗಳು ಈ ಉಡುಗೆಯನ್ನು ಕೆಂಗಣ್ಣಿನಿಂದ ನೋಡುತ್ತಾರಾರೂ, 60 ವರ್ಷಗಳ ಹಿಂದೆಯೇ ಶರ್ಮಿಳಾ ಟ್ಯಾಗೋರ್‌ ಬಿಕಿನಿ ತೊಟ್ಟು ಸಂಚಲನ ಮೂಡಿಸಿದ್ದರು. ದೀಪಿಕಾ ಪಡುಕೋಣೆ, ದಿಶಾ, ಪಟಾನಿ, ಶ್ರದ್ಧಾ ಕಪೂರ್, ಕತ್ರಿನಾ ಕೈಫ್ ಮತ್ತಿತರರೂ ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

Bikini Dress
Koo

ಬಿಕಿನಿಯನ್ನು ಮಹಿಳೆಯರ ಸ್ಟೈಲಿಶ್ ಮತ್ತು ಸೆಕ್ಸಿ ಉಡುಗೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬೇಸಿಗೆಗೂ ಬಿಕಿನಿಗೂ ಎಲ್ಲಿಲ್ಲಂದ ನಂಟು. ಹಾಗಾಗಿ ಬೇಸಿಗೆಯಲ್ಲಿ ಬೀಚ್‌ಗಳಲ್ಲಿ ಬಿಕಿನಿ(Bikini Day) ಸುಂದರಿಯರನ್ನು ಹೆಚ್ಚಾಗಿ ಕಾಣಬಹುದು! ಈ ಬಿಕಿನಿ ಉಡುಗೆ ಜುಲೈ 5, 1946ರಲ್ಲಿ ಮೊದಲ ಬಾರಿ ಕಾಣಿಸಿಕೊಂಡಿತು ಎನ್ನಲಾಗುತ್ತದೆ. ಹಾಗಾಗಿ ಪ್ರತಿವರ್ಷ ಜುಲೈ 5ರಂದು ಬಿಕಿನಿ ದಿನವನ್ನು ಆಚರಿಸಲಾಗುತ್ತದೆ.

ವಿದೇಶಗಳಲ್ಲಿ ಬಿಕಿನಿ ಉಡುಗೆಗಳು ಸಾಮಾನ್ಯವಾದರೂ ಭಾರತದಲ್ಲಿ ಸುಮಾರು 60 ವರ್ಷಗಳ ಹಿಂದೆಯೇ ಈ ಉಡುಗೆಯಲ್ಲಿ ಸುಂದರಿಯರು ಮಿಂಚಿದ್ದರು. ಬಾಲಿವುಡ್‌ ನಟಿ ಶರ್ಮಿಳಾ ಟ್ಯಾಗೋರ್‌ ಅವರು ಆರು ದಶಕಗಳ ಹಿಂದೆಯೇ ಬಿಕಿನಿ ಧರಿಸಿ ಸಂಚಲನ ಮೂಡಿಸಿದ್ದರು. ಭಾರತದ ಬಿಕಿನಿ ಸುಂದರಿಯರ ಹಿನ್ನೋಟ (ಮುನ್ನೋಟ ಕೂಡ!) ಇಲ್ಲಿದೆ.

ಶರ್ಮಿಳಾ ಟ್ಯಾಗೋರ್:

1966ರಲ್ಲಿ ನಿಯತಕಾಲಿಕಯೊಂದರ ಮುಖಪುಟಕ್ಕಾಗಿ ಶರ್ಮಿಳಾ ಟ್ಯಾಗೋರ್ ಅವರು ಬಿಕಿನಿಯಲ್ಲಿ ಪೋಸ್ ನೀಡುವ ಮೂಲಕ ಈ ಉಡುಗೆ ಧರಿಸಿದ ಮೊದಲ ಬಾಲಿವುಡ್ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ನಟಿಯ ಈ ಫೋಸ್‌ಗೆ ಜನರು ಕೆಟ್ಟ ಪ್ರತಿಕ್ರಿಯೆ ನೀಡಿದ್ದಕ್ಕೆ ನಟಿ ಆಗ ಆಘಾತಕ್ಕೊಳಗಾಗಿದ್ದರು. ಸಂಪ್ರದಾಯವಾದಿ ಸಮಾಜದಲ್ಲಿ ನಾನೇಕೆ ಈ ಉಡುಗೆ ಧರಿಸಿದೆ ಎಂಬುದು ತಿಳಿದಿಲ್ಲ, ಆದರೆ ಏನಾದರೂ ವಿಭಿನ್ನವಾಗಿ ಮಾಡಲು ಮುಂದಾಗಿದ್ದೆ. ಹಾಗಾಗಿ ಈ ಡ್ರೆಸ್ ಧರಿಸಿದೆ ಎಂಬುದಾಗಿ ಇವರು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು.

ದೀಪಿಕಾ ಪಡುಕೋಣೆ :

ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಅವರು ಕೂಡ ಬಿಕಿನಿ ಧರಿಸಿ ಪೋಸ್ ನೀಡಿದ್ದರು. ಇವರು ಪಠಾನ್, ಪ್ಲೇಯರ್ಸ್, ಫೈಟರ್ ಮತ್ತು ಹೌಸ್ ಫುಲ್ ಚಿತ್ರಗಳಲ್ಲಿ ಈ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ದಿಶಾ ಪಟಾನಿ:

ಬಾಲಿವುಡ್ ಬ್ಯೂಟಿ ಕ್ವೀನ್‌ ಎನಿಸಿಕೊಂಡ ನಟಿ ದಿಶಾ ಪಟಾನಿಯವರು ಆಗಾಗ ಬೀಚ್‌ನಲ್ಲಿ ಬಿಕಿನಿ ಪ್ರದರ್ಶನ ಮಾಡುತ್ತಾರೆ. ವಾಸ್ತವವಾಗಿ, ʼಮಲಾಂಗ್‍ʼ ಚಿತ್ರದಲ್ಲಿ ಅವರು ಬಿಕಿನಿ ಅವತಾರದಲ್ಲಿ ನಟಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದರು.

ಶ್ರದ್ಧಾ ಕಪೂರ್ :

ರಣಬೀರ್ ಕಪೂರ್ ಅಭಿನಯದ ʼತು ಜೂತಿ ಮೈ ಮಕ್ಕರ್ʼ ಚಿತ್ರದಲ್ಲಿ ಶ್ರದ್ಧಾ ಕಪೂರ್ ತನ್ನ ಬಿಕಿನಿ ಅವತಾರದೊಂದಿಗೆ ಪ್ರೇಕ್ಷಕರ ಮನ ಕದ್ದಿದ್ದರು. ನಾನಾ ಭಂಗಿಯ ಇವರ ಬಿಕಿನಿ ಉಡುಗೆ ಯುವ ಜನರ ನಿದ್ದೆಗೆಡಿಸಿತ್ತು.

ಇದನ್ನೂ ಓದಿ: ತಲೆಕೂದಲಿನಲ್ಲಿ ಟೀಪಾಟ್ ತಯಾರಿಸಿ ಅದರಿಂದ ನೀರು ಕುಡಿದ ಕೇಶ ವಿನ್ಯಾಸಕಿ!

ಕತ್ರಿನಾ ಕೈಫ್ :

ಆಗಾಗ ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ನಟಿ ಕತ್ರಿನಾ ಕೈಫ್ ಅವರು ಬ್ಯಾಂಗ್ ಬ್ಯಾಂಗ್, ಬಾರ್ ಬಾರ್ ದೇಖೋ ಮತ್ತು ಇತರ ಕೆಲವು ಚಿತ್ರಗಳಲ್ಲಿ ತಮ್ಮ ಬಿಕಿನಿ ಲುಕ್ ಅನ್ನು ಹುಡುಗರು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.

Continue Reading

ಪ್ರಮುಖ ಸುದ್ದಿ

Narendra Modi : ಚಾಂಪಿಯನ್ನರ ಜತೆ ಸ್ಮರಣೀಯ ಸಂಭಾಷಣೆ; ಭಾರತ ಕ್ರಿಕೆಟ್ ತಂಡದ ಜತೆಗಿನ ಮಾತುಕತೆಯ ವಿಡಿಯೊ ಬಿಡುಗಡೆ ಮಾಡಿದ ಮೋದಿ

Narendra Modi: ಮೋದಿ ಹಾಗೂ ಕ್ರಿಕಟಿಗರ ನಡುವಿನ ಸಂಭ್ರಮದ ಕ್ಷಣಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಕ್ರಿಕೆಟಿಗರು ಚಾಂಪಿಯನ್ ಎಂದು ಬರೆದುಕೊಂಡಿದ್ದ ಜೆರ್ಸಿಯನ್ನ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು, ಮೋದಿಯೊಂದಿಗೆ ಕೈ ಕುಲುಕಿ ಮಾತನಾಡಿರುವುದು, ಟ್ರೋಫಿಯೊಂದಿಗೆ ಫೋಟೊ ತೆಗೆಸಿಕೊಂಡಿರುವುದು ವಿಶೇವಾಗಿತ್ತು.

VISTARANEWS.COM


on

Narendra Modi
Koo

ಬೆಂಗಳೂರು: ವೆಸ್ಟ್​​ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವ ಕಪ್​ನಲ್ಲಿ (T20 World Cup) ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಕ್ರಿಕೆಟ್​ ಪ್ರೇಮಿಗಳ ಪಾಲಿಗೆ ಅತ್ಯಂತ ಸಂಭ್ರಮದ ವಿಷಯ. ಅಂತೆಯೇ ಭಾರತಕ್ಕೆ ವಾಪಸಾದ ಟೀಮ್ ಇಂಡಿಯಾ ಸದಸ್ಯರಿಗೆ ಮುಂಬೈನ ಬೀದಿ ಬೀದಿಗಳಲ್ಲಿ ಅದ್ಧೂರಿ ಸ್ವಾಗತ ದೊರಕಿದೆ. ತೆರೆದ ಬಸ್​​ನಲ್ಲಿ ಮೆರವಣಿ, ಐತಿಹಾಸಿಕ ವಾಂಖೆಡೆ ಸ್ಟೇಡಿಯಮ್​​ನಲ್ಲಿ ಅವಿಸ್ಮರಣೀಯ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಈ ಎಲ್ಲ ಕ್ಷಣಗಳು ಭಾರತೀಯ ಕ್ರಿಕೆಟ್ ಇತಿಹಾಸದ ಪುಸ್ತಕದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗಿದೆ. ಆದರೆ, ಇದಕ್ಕಿಂತ ಮೊದಲು ಭಾರತಕ್ಕೆ ಏರ್​ ಇಂಡಿಯಾದ ವಿಶೇಷ ವಿಮಾನದಲ್ಲಿ ಬಂದಿಳಿದ ಚಾಂಪಿಯನ್ ಭಾರತ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ತಮ್ಮ ನಿವಾಸದಲ್ಲಿ ವಿಶೇಷ ಆತಿಥ್ಯ ನೀಡಿದ್ದರು. ಗುರುವಾರ (ಜುಲೈ4ರಂದು) ಬೆಳಗ್ಗೆ 11 ಗಂಟೆಯಿಂದ 12 ಗಂಟೆಯ ತನಕ ಮೋದಿ ಕ್ರಿಕೆಟಿಗರೊಂದಿಗೆ ಮಾತುಕತೆ ನಡೆಸಿದ್ದರು.

ಮೋದಿ ಹಾಗೂ ಕ್ರಿಕಟಿಗರ ನಡುವಿನ ಸಂಭ್ರಮದ ಕ್ಷಣಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಕ್ರಿಕೆಟಿಗರು ಚಾಂಪಿಯನ್ ಎಂದು ಬರೆದುಕೊಂಡಿದ್ದ ಜೆರ್ಸಿಯನ್ನ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು, ಮೋದಿಯೊಂದಿಗೆ ಕೈ ಕುಲುಕಿ ಮಾತನಾಡಿರುವುದು, ಟ್ರೋಫಿಯೊಂದಿಗೆ ಫೋಟೊ ತೆಗೆಸಿಕೊಂಡಿರುವುದು ವಿಶೇವಾಗಿತ್ತು. ಕೊನೆಯಲ್ಲಿ ಮೋದಿ ಅವರಿಗೆ ಚಾಂಪಿಯನ್​ ಎಂದು ಬರೆದಿದ್ದ 1 ಸಂಖ್ಯೆಯ ಜೆರ್ಸಿಯನ್ನೂ ನೀಡಿದ್ದರು. ಈ ಎಲ್ಲ ಕ್ಷಣಗಳು ಮೋದಿ ಅವರಿಗೆ ಖುಷಿ ಕೊಟ್ಟಿತ್ತು. ಈ ಬಗ್ಗೆ ಅವರು ಶುಕ್ರವಾರ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ‘ವಿಶ್ವ ಟಿ 20 ಚಾಂಪಿಯನ್ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಅವಿಸ್ಮರಣೀಯ ಸಂಭಾಷಣೆ,’ ಎಂದು ಬರೆದುಕೊಂಡಿದ್ದಾರೆ.

ವಿಶ್ವ ಕಪ್​ ಗೆದ್ದುಕೊಂಡು ಭಾರತಕ್ಕೆ ಬಂದಿದ್ದ ಆಟಗಾರರಿಗೆ ಪ್ರೇರಣಾದಾಯಕ ಮಾತುಗಳಿಂದ ಮೋದಿ ಹುರಿದುಂಬಿಸಿದ್ದರು. ಅಲ್ಲದೆ ಆಟಗಾರರು ಕಠಿಣ ಹಾಗೂ ಒತ್ತಡದ ಸಂದರ್ಭದಲ್ಲಿ ತೋರಿದ ಮನಸ್ಥಿತಿಯನ್ನು ಹೊಗಳಿದ್ದರು. ಈ ಎಲ್ಲ ಮಾತುಕತೆಯ ತುಣುಕುಗಳನ್ನು ಒಟ್ಟಾಗಿಸಿ ಸಣ್ಣ ವಿಡಿಯೊವೊಂದನ್ನು ಮಾಡಿ ನರೇಂದ್ರ ಮೋದಿ ಅವರು ಅಧಿಕೃತ ಹ್ಯಾಂಡಲ್​ ಮೂಲಕ ಶೇರ್ ಮಾಡಲಾಗಿದೆ.

ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಿರುವ ವಿಡಿಯೊ ಸುಮಾರು 41 ನಿಮಿಷವಿದೆ. ಅದರಲ್ಲಿ ಆಟಗಾರರು ಹಾಗೂ ಮೋದಿ ನಡುವಿನ ನೇರ ಸಂಭಾಷಣೆಯಿದೆ. ಕೋಚ್​ ದ್ರಾವಿಡ್​, ನಾಯಕ ರೋಹಿತ್​, ಸ್ಟಾರ್ ಬ್ಯಾಟರ್​ ವಿರಾಟ್​ ಸೇರಿದಂತೆ ಎಲ್ಲರ ನಡುವಿನ ಸಂಭಾಷಣೆಯನ್ನು ವಿಡಿಯೊ ಮೂಲಕ ವೀಕ್ಷಿಸಬಹುದು.

ಇದನ್ನೂ ಓದಿ: T20 World Cup :​ ವಿಜಯೋತ್ಸವದ ಕ್ಷಣಗಳನ್ನು ಉಲ್ಲೇಖಿಸಿ ಬಿಸಿಸಿಐಗೆ ಕುಟುಕಿದ ಆದಿತ್ಯ ಠಾಕ್ರೆ

ಮೋದಿ ಅವರ ಜತೆ ಆಟಗಾರರು ಉಪಾಹಾರ ಸೇವಿಸಿದರು. ನಂತರ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮೋದಿ ವಿಶ್ವಕಪ್‌ ಹೀರೋಗಳನ್ನು ಸನ್ಮಾನಿಸಿ, ಅಭಿನಂದಿಸಿದರು. ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಗೆದ್ದುಕೊಂಡ ರೋಹಿತ್‌ ಶರ್ಮ ಮತ್ತು ತಂಡದ ಗೆಲುವನ್ನು ಪ್ರಧಾನಿ ಕೊಂಡಾಡಿದರು.

ಆಟಗಾರರಿಗೆ ಕರೆ ಮಾಡಿದ್ದ ಮೋದಿ

ಜೂನ್‌ 29ರಂದು ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ 7 ರನ್‌ಗಳಿಂದ ಜಯ ಸಾಧಿಸಿತ್ತು. ಆ ವೇಳೆ ಆಟಗಾರರಿಗೆ ಕರೆ ಮಾಡಿ ಮೋದಿ ಅಭಿನಂದನೆ ಸಲ್ಲಿಸಿದ್ದರು. ಮೋದಿ ಅವರು ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ, ಅದ್ಭುತ ನಾಯಕತ್ವಕ್ಕಾಗಿ ಅಭಿನಂದನೆ ತಿಳಿಸಿದರು. ಅವರ ಟಿ20 ವೃತ್ತಿ ಜೀವನವನ್ನು ಶ್ಲಾಘಿಸಿದರು. ಜತೆಗೆ ಪ್ರಧಾನಿ ಫೈನಲ್‌ ಪಂದ್ಯದಲ್ಲಿ ಭಾರತವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ಸಹಾಯ ಮಾಡಿದ ವಿರಾಟ್ ಕೊಹ್ಲಿ (76 ರನ್) ಅವರ ಆಟವನ್ನೂ ಮೆಚ್ಚಿಕೊಂಡರು. ಜತೆಗೆ ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ನೀಡಿದ ಕೊಡುಗೆಯನ್ನೂ ನೆನಪಿಸಿಕೊಂಡಿದ್ದರು.

Continue Reading
Advertisement
Bajaj Freedom 125
ಪ್ರಮುಖ ಸುದ್ದಿ2 mins ago

Bajaj Freedom 125 CNG : ಬಜಾಜ್​ ಕಂಪನಿಯ ಸಿಎನ್​ಜಿ ಬೈಕ್​ ಬಿಡುಗಡೆ; ಕೆ.ಜಿಗೆ 102 ಕಿಲೋ ಮೀಟರ್​​ ಮೈಲೇಜ್​

Keir Starmer
ಪ್ರಮುಖ ಸುದ್ದಿ7 mins ago

Keir Starmer: ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ

Bikini Dress
Latest10 mins ago

Bikini Day: ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಉಡಾಯಿಸಿದ ಸುಂದರಿಯರಿವರು!

Narendra Modi
ಪ್ರಮುಖ ಸುದ್ದಿ11 mins ago

Narendra Modi : ಚಾಂಪಿಯನ್ನರ ಜತೆ ಸ್ಮರಣೀಯ ಸಂಭಾಷಣೆ; ಭಾರತ ಕ್ರಿಕೆಟ್ ತಂಡದ ಜತೆಗಿನ ಮಾತುಕತೆಯ ವಿಡಿಯೊ ಬಿಡುಗಡೆ ಮಾಡಿದ ಮೋದಿ

Monsoon Fashion
ಫ್ಯಾಷನ್12 mins ago

Monsoon Fashion: ಮಾನ್ಸೂನ್‌ಗೆ ರೀ ಎಂಟ್ರಿ ನೀಡಿದ ಪ್ರಿಂಟೆಡ್‌ ಕಲರ್‌ ನೆಕ್‌ ಕುರ್ತಾ ಫ್ಯಾಷನ್‌

BJP Karnataka
ಕರ್ನಾಟಕ24 mins ago

BJP Karnataka: ರಾಜ್ಯ ಬಿಜೆಪಿಗೆ ನೂತನ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

Sudha Murty
ಬೆಂಗಳೂರು43 mins ago

Sudha Murty: ಸುಧಾ ಮೂರ್ತಿ 30 ವರ್ಷಗಳಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ; ಇದಕ್ಕೆ ಕಾರಣ ಕಾಶಿಯಂತೆ!

Neet UG
ದೇಶ55 mins ago

NEET UG: ನೀಟ್‌ ಅಕ್ರಮ: ಪರೀಕ್ಷೆಯನ್ನು ರದ್ದುಗೊಳಿಸುವುದು ಸಮಂಜಸವಲ್ಲ ಎಂದ ಕೇಂದ್ರ

Assault case
ತುಮಕೂರು1 hour ago

Assault Case : ಜಮೀನು ವಿವಾದ; ನೀರಿನಲ್ಲಿ ಮುಳುಗಿಸಿ, ಕುಡುಗೋಲು, ಕಲ್ಲಿನಿಂದ ವ್ಯಕ್ತಿ ಮೇಲೆ ಹಲ್ಲೆ!

Samantha Ruth Prabhu Doctor Calls Health Illiterate
ಟಾಲಿವುಡ್1 hour ago

Samantha Ruth Prabhu: ಸಮಂತಾಗೆ ಜೈಲಿಗೆ ಕಳಿಸಿ ಎಂದ ವೈದ್ಯ ; ನಟಿ ಹೇಳಿದ್ದೇನು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lovers Fighting
ಚಿಕ್ಕಬಳ್ಳಾಪುರ2 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ4 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ6 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು7 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು7 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ12 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ24 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ1 day ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

ಟ್ರೆಂಡಿಂಗ್‌