ಡೆಹ್ರಾಡೂನ್: ತನ್ನ ಪ್ರೀತಿಗೆ ವಿರೋಧ ಮಾಡಿದ್ದ ತಂದೆ ಹಾಗೂ ತಮ್ಮನನ್ನು ಕೊಲೆ ಮಾಡಿ ತುಂಡಾಗಿ ಕತ್ತರಿಸಿ ಫ್ರಿಜ್ನಲ್ಲಿಟ್ಟಿದ್ದ 16ರ ಬಾಲಕಿಯೊಬ್ಬಳನ್ನು (Murder News) ಹರಿದ್ವಾರ ಪೊಲೀಸರು ಬಂಧಿಸಿದ್ದಾರೆ. ಆಕೆ 19 ವರ್ಷದ ಬಾಯ್ಫ್ರೆಂಡ್ ಜತೆ ಸೇರಿಕೊಂಡು ಇಬ್ಬರನ್ನು ಕತ್ತರಿಸಿ ಫ್ರಿಜ್ನಲ್ಲಿಟ್ಟು ಪರಾರಿಯಾಗಿದ್ದಳು. ಒಂದು ತಿಂಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು ಬಳಿಕ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಮಾರ್ಚ್ 15 ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಈ ಕೊಲೆ ನಡೆದಿದ್ದು, ಅಂದಿನಿಂದ ಬಾಲಕಿ ಪರಾರಿಯಾಗಿದ್ದಳು. ಆಕೆಯ 19 ವರ್ಷದ ಗೆಳೆಯ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಪಟ್ಟಣದಲ್ಲಿ ಪತ್ತೆ ಹಚ್ಚಿದ ಬಳಿಕ ಮಂಗಳವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ. ತಾನು ತನ್ನ ಗೆಳೆಯನೊಂದಿಗೆ ಹರಿದ್ವಾರಕ್ಕೆ ಬಂದಿದ್ದೇನೆ ಎಂದು ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.
19 ವರ್ಷದ ಯುವಕನೊಂದಿಗಿನ ಸಂಬಂಧವನ್ನು ಅಪ್ಪ ವಿರೋಧಿಸಿದ ಕಾರಣ ಅವರನ್ನು ಮೊದಲು ಕೊಂದಿದ್ದಳು. ಅದನ್ನು ನೋಡಿದ ಸಹೋದರನನ್ನೂ ಅಪರಾಧಕ್ಕೆ ಸಾಕ್ಷಿಯಾಗುತ್ತಾನೆ ಹೆದರಿ ಕೊಂದಿದ್ದಾರೆ ಎಂದು ದೋಭಾಲ್ ಹೇಳಿದ್ದಾರೆ. ಅವರು ಶವಗಳನ್ನು ತುಂಡುಗಳಾಗಿ ಕತ್ತರಿಸಿ ಫ್ರಿಜ್ನಲ್ಲಿಟ್ಟು ತುಂಬಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಪ್ರಕಾರ ಆಕೆಯ ಗೆಳೆಯ ಕೊಗೆ ಸಂಚು ರೂಪಿಸಿದ್ದ. ಬಾಲಕಿಯನ್ನು ಮಧ್ಯಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಆಕೆಯ ಪ್ರಿಯಕರನಿಗಾಗಿ ಶೋಧ ನಡೆಯುತ್ತಿದೆ ಎಂದು ದೋಭಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ ಮರುಜೀವ ನೀಡಿದ ಪೊಲೀಸ್ ಅಧಿಕಾರಿ; ಮನ ಮಿಡಿಯೋ ವಿಡಿಯೊ ಇಲ್ಲಿದೆ
ಸಿಸಿಬಿ ತೆಕ್ಕೆಗೆ ವಕೀಲೆ ಚೈತ್ರಾ ಡೆತ್ ಕೇಸ್; 15 ದಿನಗಳ ಸಿಸಿಟಿವಿ ಪರಿಶೀಲನೆ
ಬೆಂಗಳೂರು: ವಕೀಲೆ ಚೈತ್ರಾ ಅವರ (Advocate Chaitra Gowda Case) ಸಾವು ಅವರ ಆಪ್ತರಿಗೆ ಇನ್ನೂ ಕೂಡ ನಿಗೂಢವಾಗಿಯೇ ಇದೆ. ಪೊಲೀಸರ ವರದಿಯಲ್ಲಿ ಇದೊಂದು ಆತ್ಮಹತ್ಯೆ ಎಂದರೂ ಕೂಡ ಅದನ್ನು ಚೈತ್ರಾ ಆಪ್ತರು ಒಪ್ಪುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಸಿಬಿ ತೆಕ್ಕೆಗೆ (Suspicious Death) ವಹಿಸಲಾಗಿದೆ.
ಇದೇ ತಿಂಗಳ ಮೇ 11ರಂದು ಚೈತ್ರಾ ಗೌಡ ಅವರ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದೊಂದದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಚೈತ್ರಾ ಸಾವು ಆತ್ಮಹತ್ಯೆಯಿಂದಲೇ (Self Harming) ಆಗಿದೆ ಎಂಬುದು ದೃಢಪಟ್ಟಿತ್ತು. ಆದರೆ ಅವರ ಆಪ್ತ ವಲಯ ಚೈತ್ರಾಗೌಡ ಅವರ ಸಾವು ಸಹಜವಲ್ಲ ಎಂದು ಇಂದಿಗೂ ಕೂಡ ವಾದಿಸುತ್ತಲೆ ಇದೆ. ಹೀಗಾಗಿ ವಕೀಲರ ಸಂಘದವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಈ ಸಾವಿನ ಬಗ್ಗೆ ತನಿಖೆ ನಡೆಸಿ ಎಂದಿದ್ದರು. ಇದರ ಫಲವಾಗಿ ಪ್ರಕರಣದ ಹೆಚ್ಚಿನ ತನಿಖೆಗೆ ಪೊಲೀಸ್ ಆಯುಕ್ತರು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು ಮೊದಲು ಆಕೆಯ ಸಾವಿನ 15 ದಿನಗಳ ಹಿಂದಿನ ಸಿಸಿಟಿವಿಗಳನ್ನು ಕಲೆ ಹಾಕುವ ಕೆಲಸ ಶುರು ಮಾಡಿದೆ. ಜತೆಗೆ ಚೈತ್ರಾರ ಮೊಬೈಲ್‌ಗೆ ಬಂದ ಕರೆಗಳ ಸಿಡಿಆರ್‌ಗಳನ್ನು ಸಂಗ್ರಹಿಸಿದೆ. ಚೈತ್ರಾರಿಗೆ ಯಾರಾದರೂ ತೊಂದರೆ ಕೊಟ್ಟಿರುವುದು ಅಥವಾ ಬೆದರಿಕೆ ಹಾಕಿದ್ದರಾ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹೀಗಾಗಿ ಚೈತ್ರ ಗೌಡ ಅವರ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.