Site icon Vistara News

ಯಾವ ಗ್ರೂಪಿನ ರಕ್ತದವರು ಯಾರಿಗೆ ರಕ್ತ ಕೊಡಬಹುದು? ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Blood Donation Camp in Bengaluru on 11th July

ನವದೆಹಲಿ: ರಕ್ತದಾನ ಮಹಾದಾನ ಎನ್ನುತ್ತಾರೆ. ಬೇರೆಯವರ ಪ್ರಾಣ ಉಳಿಯಲಿ, ಬೇರೆಯವರ ಮೈಯಲ್ಲೂ ನಮ್ಮ ರಕ್ತ ಹರಿಯಲಿ ಎಂದು ಜನ ರಕ್ತದಾನ (Blood Donation) ಮಾಡುತ್ತಾರೆ. ಆಸ್ಪತ್ರೆಗಳಲ್ಲಿ ರೋಗಿಯು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂದರೆ ಹೋಗಿ ರಕ್ತದಾನ ಮಾಡಿ, ಅವರ ಜೀವ ಉಳಿಸುತ್ತಾರೆ. ಆದರೆ, ತುಂಬ ಸಂದರ್ಭಗಳಲ್ಲಿ ಯಾವ ಗ್ರೂಪ್‌ನ ರಕ್ತ ಹೊಂದಿವರು, ಯಾವ ಗ್ರೂಪ್‌ನ ರಕ್ತ (Blood Group) ಹೊಂದಿರುವರಿಗೆ ದಾನ ಮಾಡಬಹುದು ಎಂಬುದು ತುಂಬ ಜನರಿಗೆ ಗೊತ್ತಾಗುವುದಿಲ್ಲ. ಆದರೆ, ಈ ಗೊಂದಲವನ್ನು ನಿವಾರಿಸಲು ಕೇಂದ್ರ ಸರ್ಕಾರವು ಯಾರಿಗೆ ಯಾರು ರಕ್ತದಾನ ಮಾಡಬಹುದು ಎಂಬುದರ ಪಟ್ಟಿ ಇರುವ ವಿಡಿಯೊ ಒಂದನ್ನು ಹಂಚಿಕೊಂಡಿದೆ.

ಹಾಗಾದರೆ, ಯಾವ ಗ್ರೂಪ್‌ನ ರಕ್ತ ಹೊಂದಿದವರು, ಯಾವ ಗ್ರೂಪ್‌ನ ರಕ್ತ ಹೊಂದಿದವರಿಗೆ ದಾನ ಮಾಡಬಹುದು? ಯಾರು ಯಾರಿಗೆ ಕೊಡಬಾರದು ಎಂಬುದರ ಕುರಿತ ಸಂಕ್ಷಿಪ್ತ ಮಾಹಿತಿ ಹೀಗಿದೆ.

ಒ ಪಾಸಿಟಿವ್ (O+):‌ ಒ ಪಾಸಿಟಿವ್‌ ರಕ್ತ ಇರುವವರು ಒ ಪಾಸಿಟಿವ್‌, ಎ ಪಾಸಿಟಿವ್‌, ಬಿ ಪಾಸಿಟಿವ್‌ ಹಾಗೂ ಎಬಿ ಪಾಸಿಟಿವ್‌ ರಕ್ತದ ಗ್ರೂಪ್‌ನವರಿಗೆ ರಕ್ತ ಕೊಡಬಹುದಾಗಿದೆ.

ಎ ಪಾಸಿಟಿವ್‌ (A+): ರಕ್ತ ಹೊಂದಿದವರು ಎ ಪಾಸಿಟಿವ್‌ ಹಾಗೂ ಎಬಿ ಪಾಸಿಟಿವ್‌ ಗ್ರೂಪ್‌ನವರಿಗೆ ರಕ್ತ ಕೊಡಬಹುದು

ಬಿ ಪಾಸಿಟಿವ್‌ (B+): ಬಿ ಪಾಸಿಟಿವ್‌ ರಕ್ತ ಇರುವವರು ಬಿ ಪಾಸಿಟಿವ್‌ ಹಾಗೂ ಎಬಿ ಪಾಸಿಟಿವ್‌ ಇರುವವರಿಗೆ ರಕ್ತದಾನ ಮಾಡಬಹುದು

ಎಬಿ ಪಾಸಿಟಿವ್‌ (AB+): ಎಬಿ ಪಾಸಿಟಿವ್‌ ರಕ್ತ ಹೊಂದಿದವರು ಎಬಿ ಪಾಸಿಟಿವ್‌ ರಕ್ತ ಹೊಂದಿವರಿಗೆ ಮಾತ್ರ ಕೊಡಬಹುದು

ಒ ಮೈನಸ್‌ (O-): ಒ ಮೈನಸ್‌ ರಕ್ತ ಹೊಂದಿದವರು ಎಲ್ಲರಿಗೂ ಅಂದರೆ, ಒ ಪಾಸಿಟಿವ್‌, ಎ ಪಾಸಿಟಿವ್‌, ಬಿ ಪಾಸಿಟಿವ್‌, ಎಬಿ ಪಾಸಿಟಿವ್‌, ಒ ನೆಗೆಟಿವ್‌, ಎ ನೆಗೆಟಿವ್‌, ಬಿ ನೆಗೆಟಿವ್‌, ಎಬಿ ನೆಗೆಟಿವ್‌ ಇರುವವರಿಗೆ ರಕ್ತದಾನ ಮಾಡಬಹುದು

ಎ ನೆಗೆಟಿವ್‌ (A-): ಈ ರಕ್ತ ಹೊಂದಿದವರು ಎ ಪಾಸಿಟಿವ್‌, ಎಬಿ ಪಾಸಿಟಿವ್‌, ಎ ನೆಗೆಟಿವ್‌ ಹಾಗೂ ಎಬಿ ನೆಗೆಟಿವ್‌ ರಕ್ತದ ಗುಂಪಿನವರಿಗೆ ರಕ್ತದಾನ ಮಾಡಬಹುದು

ಬಿ ಪಾಸಿಟಿವ್‌ (B+): ಈ ರಕ್ತದ ಗುಂಪಿನವರು ಬಿ ಪಾಸಿಟಿವ್‌, ಎಬಿ ಪಾಸಿಟಿವ್, ಬಿ ನೆಗೆಟಿವ್‌ ಹಾಗೂ ಎಬಿ ನೆಗೆಟಿವ್‌ನವರಿಗೆ ರಕ್ತ ಕೊಡಬಹುದು

ಇದನ್ನೂ ಓದಿ: Foods That Prevent Blood Sugar: ರಕ್ತದಲ್ಲಿ ಸಕ್ಕರೆ ಅಂಶ ಏರದಂತೆ ತಡೆಯುವ ಆಹಾರಗಳಿವು

ಎಬಿ ನೆಗೆಟಿವ್‌ (AB-): ಈ ರಕ್ತದ ಗುಂಪಿನವರು ಎಬಿ ಪಾಸಿಟಿವ್‌ ಹಾಗೂ ಎಬಿ ನೆಗೆಟಿವ್‌ ರಕ್ತ ಹೊಂದಿರುವವರಿಗೆ ಕೊಡಬಹುದಾಗಿದೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version