-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಜಾನ್ ಸೀಸನ್‌ನಲ್ಲಿ ನಾನಾ ಬಗೆಯ ಅನಾರ್ಕಲಿ ಫ್ಲೋರ್ ಲೆಂಥ್ ಗೌನ್, ಲಾಂಗ್ ಸೂಟ್ಸ್, ಕುರ್ತಿ ಸೂಟ್ಸ್, ಗರಾರ ಸೂಟ್ಸ್, ಲಾಂಗ್ ಕುರ್ತಿ ವಿತ್ ಪಲ್ಹಾಜ್ಹೂ, ಸಲ್ವಾರ್ ಸೂಟ್, ವೆಲ್ವೆಟ್ ಎಂಬ್ರಾಯ್ಡರಿ ದುಪಟ್ಟಾಗಳು, ಬಗೆಬಗೆಯ ಶರಾರಗಳು, ಗಾಗ್ರಾ, ಲಾಂಗ್ ಬ್ಲೌಸ್ ಲೆಹೆಂಗಾ, ಮಿನುಗುವ ಡಿಸೈನರ್ ಸೀರೆಗಳು ಸೇರಿದಂತೆ ವೆರೈಟಿ ಗ್ರ್ಯಾಂಡ್ ಡಿಸೈನರ್‌ವೇರ್‌ಗಳು ಮಾರುಕಟ್ಟೆಗೆ ಆಗಮಿಸಿವೆ. ಈ ಸೀಸನ್‌ನ ಸಂಭ್ರಮ ಹೆಚ್ಚಿಸಲು ಈಗಾಗಲೇ ಲಗ್ಗೆ ಇಟ್ಟಿರುವ ಗ್ರ್ಯಾಂಡ್ ಉಡುಗೆ- ತೊಡುಗೆಗಳು ಲೆಕ್ಕವಿಲ್ಲದಷ್ಟು ಡಿಸೈನ್‌ಗಳಲ್ಲಿ (Festive Fashion) ಆಗಮಿಸಿವೆ. ಇವುಗಳೊಂದಿಗೆ ಗ್ರ್ಯಾಂಡ್ ವರ್ಕ್ ಇರುವ ಹೆಡ್ ಸ್ಕಾರ್ಫ್, ಹಿಜಾಬ್, ಅಬಯಾ ಹಾಗೂ ಸಿಂಪಲ್ ಬಾರ್ಡರ್ ಬೀಡ್ಸ್ ಅಥವಾ ಕ್ರಿಸ್ಟಲ್ ಡಿಸೈನ್ ಇರುವಂತಹ ಬುರ್ಖಾಗಳು ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿವೆ.
ಮಹಿಳೆಯರಿಗೆ ಗ್ರ್ಯಾಂಡ್ ಲುಕ್ ಡಿಸೈನರ್‌ವೇರ್ಸ್
ಮಿರರ್ ವರ್ಕ್, ಥ್ರೆಡ್ ವರ್ಕ್, ಹ್ಯಾಂಡ್‌ಮೇಡ್ ವರ್ಕ್, ಬೀಡ್ಸ್ ಬಾರ್ಡರ್, ಜರ್ದೋಸಿ, ಕಲಾಂಕಾರಿ, ಪ್ರಿಂಟೆಡ್ ಡಿಸೈನ್ಸ್, ಪರ್ಲ್ ಬಾರ್ಡರ್ ಸೇರಿದಂತೆ ನಾನಾ ಬಗೆಯ ಗ್ರ್ಯಾಂಡ್ ವಿನ್ಯಾಸ ಹೊಂದಿರುವಂತಹ ಲಾಂಗ್ ಗೌನ್‌ಗಳು, ಅಂಬ್ರೆಲ್ಲಾ-ಅನಾರ್ಕಲಿ ಗೌನ್‌ಗಳು, ಸ್ಲಿಟ್ ಲಾಂಗ್ ಸಲ್ವಾರ್ ಕಮೀಝ್‌ಗಳು ಈ ಸೀಸನ್‌ನಲ್ಲಿ ಮಹಿಳೆಯರನ್ನು ಹೆಚ್ಚು ಸೆಳೆದಿವೆ. ಇನ್ನು ಟಿನೇಜ್ ಹುಡುಗಿಯರಿಗಾಗಿ ಸೆಮಿ ಫಾರ್ಮಲ್ ಡಿಸೈನರ್‌ವೇರ್‌ಗಳು ಎಂಟ್ರಿ ನೀಡಿವೆ. ಚಿಣ್ಣರಿಗೂ ಎಥ್ನಿಕ್ ಶೈಲಿಯ ಮಿನಿ ಡಿಸೈನರ್‌ವೇರ್‌ಗಳು ಬಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕಲರ್‌ಫುಲ್ ವೈಬ್ರೆಂಟ್ ದುಪಟ್ಟಾ
ವೆಲ್ವೆಟ್, ಲ್ರೆಪ್, ಜಾರ್ಜೆಟ್, ಸಿಲ್ಕ್, ಕಾಟನ್ ಮಿಕ್ಸ್ ಸಿಲ್ಕ್ ಹೀಗೆ ನಾನಾ ಬಗೆಯ ಗ್ರ್ಯಾಂಡ್ ವಿನ್ಯಾಸ ಮಾಡಿದಂತಹ ದುಪಟ್ಟಾಗಳು ಎಲ್ಲೆಡೆ ಮಿನುಗುತ್ತಿವೆ.
ಹೆಚ್ಚಿದ ಬೋಟಿಕ್ ಆರ್ಡರ್
ಇನ್ನು ಬಹಳಷ್ಟು ಮಂದಿ ಮೆಟಿರೀಯಲ್ ಅಥವಾ ಫ್ಯಾಬ್ರಿಕ್ ಕೊಂಡು ಬೋಟಿಕ್ ಇಲ್ಲವೇ ಮಾಸ್ಟರ್ ಟೈಲರ್‌ಗಳ ಬಳಿ ಹೊಲೆಸುವುದು ಈಗಾಗಲೇ ಆರಂಭವಾಗಿದೆ. ಅಷ್ಟೇಕೆ! ಈ ಸೀಸನ್‌ನಲ್ಲಿ ಬಹುತೇಕ ಬೋಟಿಕ್‌ಗಳು ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸುವುದರಲ್ಲೆ ಬ್ಯುಝಿಯಾಗಿವೆ.
“ರಂಜಾನ್ ಸೀಸನ್‌ನಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಡಿಸೈನರ್‌ವೇರನ್ನು ಸಿದ್ಧಪಡಿಸುತ್ತೇವೆ. ಇದಕ್ಕಾಗಿ ನಮಗೆ ಒಂದೆರೆಡು ತಿಂಗಳ ಮುನ್ನವೇ ಆರ್ಡರ್ ಪಡೆದಿರುತ್ತೇವೆ. ಗ್ರೀನ್, ವೈಟ್, ರೆಡ್, ಕ್ರೀಮ್ ಹಾಗೂ ಎಮರಾಲ್ಡ್ ವರ್ಣಗಳ ಡಿಸೈನರ್ ಫ್ಯಾಬ್ರಿಕ್‌ಗಳು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಸಿಂಪಲ್ ಡಿಸೈನ್ ಆಯ್ಕೆ ಮಾಡುವವರು ತೀರಾ ಕಡಿಮೆ” ಎನ್ನುತ್ತಾರೆ ಡಿಸೈನರ್ ರಶೀದ್ ಹಾಗೂ ಸಲ್ಮಾ.
ಡಿಸೈನರ್ ಹೆಡ್ ಸ್ಕಾರ್ಫ್-ಅಬಯಾ
ಇನ್ನು ಮಹಿಳೆಯರು ಧರಿಸುವ ಹೆಡ್ ಸ್ಕಾರ್ಫ್(ಹಿಜಾಬ್)ಗಳು ನಾನಾ ಹ್ಯಾಂಡ್‌ವರ್ಕ್ ಮಾಡಿದ ಡಿಸೈನ್‌ನಲ್ಲಿ ದೊರೆಯುತ್ತಿವೆ. ಇನ್ನು ಉಡುಪುಗಳ ಮೇಲೆ ಧರಿಸುವ ಲಾಂಗ್ ಕೋಟ್‌ನಂತೆ ಕಾಣುವ ಪಾದದವರೆಗಿನ ಅಬಯಾಗಳು ನಾನಾ ಹ್ಯಾಂಡ್‌ವರ್ಕ್ ಹಾಗೂ ಡಿಸೈನರ್ ವಿನ್ಯಾಸಗಳಲ್ಲಿ ದೊರೆಯುತ್ತಿವೆ. ಮಾನೋಕ್ರೋಮ್ ಶೇಡ್‌ಗಳು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರಾದ ಸಯ್ಯದ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
(ಚಿತ್ರಕೃಪೆ : ಪಿಕ್ಸೆಲ್)