ಬೆಂಗಳೂರು: ಬೆಂಗಳೂರಿನ ಜಿಟಿ ವರ್ಲ್ಡ್ ಮಾಲ್‌ನಲ್ಲಿ (GT World Mall) ಪಂಚೆ (Dhoti) ಧರಿಸಿ ಬಂದ ರೈತರೊಬ್ಬರಿಗೆ ಮಾಲ್ ಸೆಕ್ಯುರಿಟಿ ಒಳಗೆ ಬಿಡದೆ ಅವಮಾನ (Insult) ಮಾಡಿ ಕಳಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಬಳಿ ಇರುವ ಜಿಟಿ ವರ್ಲ್ಡ್ ಮಾಲ್‌ಗೆ ಇಂದು ಬಂದ ರೈತರೊಬ್ಬರನ್ನು ಪಂಚೆ ಧರಿಸಿದ್ದಾರೆ ಎಂಬ ಕಾರಣದಿಂದ ಮಾಲ್‌ನ ಸಿಬ್ಬಂದಿ ಒಳಗೆ ಬಿಡಲಿಲ್ಲ. ಈ ಕುರಿತು ಪ್ರಶ್ನಿಸಿದಾಗ, ʼಪಂಚೆ ಧರಿಸಿದವರನ್ನು ಒಳಗೆ ಬಿಡುವುದಿಲ್ಲ, ಈ ಬಗ್ಗೆ ನಮಗೆ ಸೂಚನೆ ಇದೆʼ ಎಂದು ಸೆಕ್ಯುರಿಟಿ ಸಿಬ್ಬಂದಿ ಮುಖ್ಯಸ್ಥರು ಹೇಳಿದ್ದಾರೆ. ಯಾಕೆ ಬಿಡುವುದಿಲ್ಲ ಎಂದು ಮರುಪ್ರಶ್ನಿಸಿದ ರೈತರ ಮಗನಿಗೆ ʼನಿಮ್ಮ ಮೇಲೆ ಕೇಸ್ ಹಾಕುತ್ತೇವೆʼ ಎಂದು ಕೂಡ ಬೆದರಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ವಿಜಯನಗರದ ನಿವಾಸಿಯಾದ ನಾಗರಾಜ್ ಎಂಬವರ ತಂದೆ ಮೂಲತಃ ರೈತರಾಗಿದ್ದು ಅವರು ಹಾವೇರಿಯಿಂದ ಬೆಂಗಳೂರಿನಲ್ಲಿರುವ ಮಗನ ಮನೆಗೆ ಬಂದಿದ್ದರು. ಜು. 16ರಂದು ತಮ್ಮ ವೃದ್ಧ ತಂದೆಯವರಿಗೆ ಸಿನಿಮಾ ತೋರಿಸಿ ಖುಷಿಪಡಿಸಲು ನಿರ್ಧರಿಸಿದ ನಾಗರಾಜ್, ತಂದೆಯನ್ನು ಜಿಟಿ ಮಾಲ್‌ಗೆ ಕರೆದೊಯ್ದಿದ್ದರು. ಸಾಮಾನ್ಯವಾಗಿ ಪಂಚೆ ಉಡುವ ಹವ್ಯಾಸವಿರುವ ಅವರು ಎಂದಿನಂತೆಯೇ ಪಂಚೆ ಉಟ್ಟು ಮಗನ ಜೊತೆಗೆ ಮಾಲ್‌ಗೆ ತೆರಳಿದ್ದರು.
ಇದರಿಂದ ಆಕ್ರೋಶಗೊಂಡಿರುವ ರೈತ ವೇದಿಕೆಯ ಮುಖಂಡರು ಜಿಟಿ ವರ್ಲ್ಡ್ ಮಾಲ್‌ಗೆ ಪಂಚೆ ಧರಿಸಿ ಪ್ರವೇಶಿಸುವ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಪಂಚೆ ಧರಿಸಿದವರನ್ನು, ರೈತರನ್ನು ಕೀಳಾಗಿ ಕಾಣುವ ಈ ಮನೋಭಾವ ಕೊನೆಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಚಡ್ಡಿ ಧರಿಸಿ ಬಂದವರನ್ನು ಒಳಗೆ ಬಿಡುತ್ತೀರಿ, ಪಂಚೆ ಧರಿಸಿದ ರೈತರನ್ನು ಯಾಕೆ ಬಿಡುವುದಿಲ್ಲ ಎಂದು ಆಕ್ರೋಶಿತ ಜನತೆ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಶ್ನಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಪಂಚೆ ಧರಿಸಿ ಬಂದ ರೈತರೊಬ್ಬರನ್ನು ಮೆಟ್ರೋ ಸಿಬ್ಬಂದಿ ಒಳಗೆ ಬಿಟ್ಟಿರಲಿಲ್ಲ. ಇದು ಬಹಳ ದೊಡ್ಡ ಸುದ್ದಿಯಾಗಿತ್ತು. ಬಳಿಕ ಮೆಟ್ರೋ ಎಂಡಿಯೇ ಈ ಬಗ್ಗೆ ಕ್ಷಮೆ ಯಾಚಿಸಿ, ಹೀಗೆ ಮಾಡಿದ ಮೆಟ್ರೋ ಸಿಬ್ಬಂದಿಯ ಮೇಲೆ ಕ್ರಮ ಕೈಗೊಂಡಿದ್ದರು.
ಇಂದು ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಚಾಲನೆ
ಬೆಂಗಳೂರು: ರಾಜಧಾನಿಯ ಬಹು ನಿರೀಕ್ಷಿತ 3.3 ಕಿಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ (Double-Decker Flyover), ದಕ್ಷಿಣ ಭಾರತದ (South India) ಮೊದಲ ಮೆಟ್ರೋ ಕಂ ಮೇಲ್ಸೇತುವೆ (Metro Cum Flyover) ಇಂದು (Inauguration) ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 3 ಗಂಟೆಗೆ ಇದನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DCM DK Shivakumar) ಉದ್ಘಾಟಿಸಲಿದ್ದಾರೆ. ಸಾರಿಗೆ ಸಚಿವ ಮತ್ತು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ (Ramalinga Reddy) ಮತ್ತು ಶಾಸಕರು ಇರಲಿದ್ದಾರೆ.
ಈ ಫ್ಲೈಓವರ್ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್‌ವರೆಗೆ (Silk Board Junction) ಜೋಡಿಸಲಿದೆ. ಈ ಡಬಲ್ ಡೆಕ್ಕರ್-ಫ್ಲೈಓವರ್ ಮೇಲಿನ ಡೆಕ್‌ನಲ್ಲಿ ಎಲಿವೇಟೆಡ್ ಮೆಟ್ರೋ ಕಾರಿಡಾರ್ ಇದೆ. ಕೆಳಗಿನ ಡೆಕ್‌ನಲ್ಲಿ ವಾಹನ ಸಂಚಾರಕ್ಕಾಗಿ ಎಲಿವೇಟೆಡ್ ರಸ್ತೆಯನ್ನು ಒಳಗೊಂಡಿದೆ. ವಾಹನ ದಟ್ಟಣೆಗಾಗಿ ಕುಖ್ಯಾತವಾಗಿರುವ ಸಿಎಸ್‌ಬಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಅವ್ಯವಸ್ಥೆಯನ್ನು ಈ ಮೇಲ್ಸೇತುವೆ ಹಗುರಗೊಳಿಸಲಿದೆ.
ಫ್ಲೈಓವರ್ ನಿರ್ಮಿತವಾಗಿದ್ದರೂ ಅದನ್ನು ವಾಹನ ಸಂಚಾರಕ್ಕೆ ತೆರೆಯಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿಳಂಬ ಮಾಡಿತ್ತು. ಬಲವಂತವಾಗಿ ತೆರೆಯುವುದಾಗಿ ಕಳೆದ ವಾರ ಎಎಪಿ ನಾಯಕರು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: Steel Flyover: ಬೆಂಗಳೂರಿನ ಮೊದಲ ಸ್ಟೀಲ್ ಫ್ಲೈಓವರ್ ಸೇತುವೆಯಲ್ಲಿ ಬಿರುಕು