Site icon Vistara News

Gyanvapi Case: ಏನಿದು ಪೂಜೆಗೆ ಅವಕಾಶ ಕಲ್ಪಿಸಿದ ಮಸೀದಿಯ ‘ವ್ಯಾಸ್‌ಜಿ ಕಾ ತೆಹಖಾನಾ’?

Gyanvapi Case, What is Vyas ji Ka Tehkhana where hindus allowed to worship?

ವಾರಾಣಸಿ: ‘ವ್ಯಾಸ್‌ಜಿ ಕಾ ತೆಹಖಾನಾ’ (Vyas ji ka Tehkhana) ಎಂದು ಕರೆಯಲಾಗುವ ಜ್ಞಾನವಾಪಿ ಮಸೀದಿಯ (Gyanvapi Case) ದಕ್ಷಿಣ ಭಾಗದ ನೆಲ ಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ವಾರಾಣಸಿ ಜಿಲ್ಲಾ ನ್ಯಾಯಾಲಯವು ಬುಧವಾರ ಅನುಮತಿ ನೀಡಿದೆ(Varanasi court ). ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವ ಕೋರ್ಟ್, ಪೂಜೆ ಸಲ್ಲಿಸಲು ಅರ್ಜಿದಾರರಿಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡುವಂತೆ ಹೇಳಿದೆ. ಅಲ್ಲದೇ, ಮುಂದಿನ 7 ದಿನಗಳಲ್ಲಿ ಪೂಜೆ ಕೈಗೊಳ್ಳಬೇಕೆಂದೂ ಷರತ್ತು ವಿಧಿಸಿದೆ. ಏನಿದು ವ್ಯಾಸ್‌ಜಿ ಕಾ ತೆಹಖಾನಾ, ಏನಿದು ವಿವಾದ ತಿಳುದಕೊಳ್ಳೋಣ ಬನ್ನಿ…(Vistara Explainer)

ಜ್ಞಾನವಾಪಿ ಮಸೀದಿಯಲ್ಲಿ ಒಟ್ಟು ನಾಲ್ಕು ತೆಹಖಾನಾ(ನೆಲ ಮಾಳಿಗೆಗಳು)ಗಳಿವೆ. ಈ ಪೈಕಿ ಒಂದು, ಇಲ್ಲಿ ವಾಸಿಸುತ್ತಿದ್ದ ವ್ಯಾಸ ಕುಟಂಬದ ವಶದಲ್ಲಿದೆ. ಈ ಕುಟುಂಬಕ್ಕೆ ಸೇರಿದ ಅರ್ಜಿದಾರ ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಅವರು ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಕಮಿಟಿ ವಿರುದ್ಧ ಮೊಕದ್ದಮೆ ಹೂಡಿದರು, ಸೆಲ್ಲಾರ್ ರಿಸೀವರ್ ಆಗಿ ಜಿಲ್ಲಾಧಿಕಾರಿಯನ್ನು ನೇಮಿಸಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದ್ದರು.

ಅರ್ಜಿಯ ಪ್ರಕಾರ, ಅರ್ಚಕ ಸೋಮನಾಥ ವ್ಯಾಸ್ ಅವರು 1993ರವರೆಗೂ ನೆಲ ಮಾಳಿಗೆಯಲ್ಲಿ ಪೂಜೆ ಮಾಡುತ್ತಿದ್ದರು. ಆ ಬಳಿಕ ಜಿಲ್ಲಾಡಳಿತವು ನೆಲಮಾಳಿಗೆಯನ್ನು ಬಂದ್ ಮಾಡಿದ್ದರಿಂದ ಅವರಿಗೆ ಪೂಜೆ ಮಾಡಲು ಸಾಧ್ಯವಾಗಲಿಲ್ಲ. ಸೋಮನಾಥ ವ್ಯಾಸ್ ಅವರ ತಾಯಿಯ ಮೊಮ್ಮಗನಾಗಿ, ತೆಹಖಾನಾವನ್ನು ಪ್ರವೇಶಿಸಲು ಮತ್ತು ಪೂಜೆಯನ್ನು ಪುನರಾರಂಭಿಸಲು ಅವಕಾಶ ನೀಡಬೇಕು ಎಂದು ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ, ಮಸೀದಿ ಸಮಿತಿಯ ಜನರು ನೆಲಮಾಳಿಗೆಗೆ ಭೇಟಿ ನೀಡುತ್ತಲೇ ಇರುತ್ತಾರೆ ಮತ್ತು ಅವರು ಅದನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ಅವರು ಆರೋಪಿಸಿದರು, ಎಐಎಂಸಿಯ ವಕೀಲ ಅಖ್ಲಾಕ್ ಅಹ್ಮದ್ ಅವರು ಆಧಾರರಹಿತ ಆರೋಪವನ್ನು ತಳ್ಳಿಹಾಕಿದರು.

ಇನ್ನೂ ಹಲವು ಅರ್ಜಿಗಳು ಇತ್ಯರ್ಥವಾಗಬೇಕಿದೆ..

ಹಿಂದೂ ಅರ್ಜಿದಾರರು ಪ್ರಾರ್ಥನಾ ಹಕ್ಕುಗಳನ್ನು ಕೋರಿ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಹಲವಾರು ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆಯು ಇನ್ನೂ ನ್ಯಾಯಾಲಯದಲ್ಲಿವೆ. ಶೃಂಗಾರ ಗೌರಿ ಪೂಜೆಗೆ ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ನ್ಯಾಯಾಲಯವು ವೈಜ್ಞಾನಿಕ ಸಮೀಕ್ಷೆಗೆ ಆದೇಶ ನೀಡಿತ್ತು. ಅದರ ಅನ್ವಯ ಭಾರತೀಯ ಪುರಾತತ್ವ ಸಮೀಕ್ಷೆಯ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿನ ಮಾಹಿತಿಯೂ ಸಾರ್ವಜನಿಕವಾಗಿ ಲಭ್ಯವಿದೆ.

ಅಲ್ಲಿ ದೊಡ್ಡ ಹಿಂದೂ ದೇವಾಲಯವಿತ್ತು

ಎಎಸ್ಐ ವರದಿಯ ಪ್ರಕಾರ, ಜ್ಞಾನವಾಪಿ ಮಸೀದಿ ಮುಂಚೆಯೇ ಅಲ್ಲಿ ಬೃಹತ್ ಹಿಂದೂ ದೇವಾಲಯವಿತ್ತು. ಈ ಕುರಿತು ಆಳವಾದ ಅಧ್ಯಯನ ಮತ್ತು ಸಂಬಂಧಿತ ಸಾಕ್ಷ್ಯಗಳನ್ನು ವರದಿಯು ಒದಗಿಸಿದೆ. ಮಸೀದಿಯ ಒಳಗೆ ಹಿಂದೂ ದೇವಾಲಯಗಳ ಕುರುಹುಗಳ ದೊರೆತಿವೆ. ಸಂಸ್ಕೃತ, ಗ್ರಂಥ, ತೆಲುಗು ಮತ್ತು ಕನ್ನಡ ಭಾಷೆಯಲ್ಲಿರುವ 34 ಶಾಸನಗಳು ದೊರೆತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Gyanvapi Case: ಏನಿದು ಜ್ಞಾನವಾಪಿ ಮಸೀದಿ ವಿವಾದ?

Exit mobile version