Site icon Vistara News

HD Kumaraswamy: ಸುದ್ದಿಗೋಷ್ಠಿ ನಡೆಸುವಾಗಲೇ ಎಚ್‌.ಡಿ. ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ; ಆಸ್ಪತ್ರೆಗೆ ದಾಖಲು

HD Kumaraswamy

ಬೆಂಗಳೂರು: ಸುದ್ದಿಗೋಷ್ಠಿ ನಡೆಸುವಾಗಲೇ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಮೂಗಿನಿಂದ ರಕ್ತಸ್ರಾವ ಆಗಿರುವ ಘಟನೆ ಭಾನುವಾರ ನಡೆದಿದೆ. ಮುಡಾ ನಿವೇಶನ ಹಗರಣ ವಿರೋಧಿಸಿ ಆ.3ರಿಂದ ಪಾದಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ಜೆಡಿಎಸ್‌ ಕಚೇರಿಯಲ್ಲಿ ಬಿಜೆಪಿ-ಜೆಡಿಎಸ್‌ ನಾಯಕರ ಸಮನ್ವಯ ಸಭೆ ಏರ್ಪಡಿಸಲಾಗುತ್ತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರ ಮೂಗಿನಿಂದ ರಕ್ತಸ್ರಾವವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಮೂಗಿನಿಂದ ರಕ್ತಸ್ರಾವವಾಗಿದೆ. ಈ ವೇಳೆ ಬಟ್ಟೆಯಿಂದ ಮೂಗನ್ನು ಎಚ್‌ಡಿಕೆ ಒರೆಸಿಕೊಂಡರು. ಅದರೂ ರಕ್ತಸ್ರಾವ ನಿಲ್ಲಲಿಲ್ಲ. ಮತ್ತೆ ಮೂಗಿನಿಂದ ರಕ್ತಸ್ರಾವ ಹೆಚ್ಚಾದ ಹಿನ್ನೆಲೆ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ತಂದೆಯನ್ನು ಜಯನಗರ ಅಪೋಲೋ ಆಸ್ಪತ್ರೆಗೆ ಕರೆದೊಯ್ದರು. ಮೂಗಿನಿಂದ ರಕ್ತಸ್ರಾವ ಹಿನ್ನೆಲೆಯಲ್ಲಿ ಬಿಳಿ ಶರ್ಟ್ ರಕ್ತಮಯವಾಗಿದೆ.

ಈ ಬಗ್ಗೆ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರಿಗೆ ಎರಡನೇ ಬಾರಿ ಈ ರೀತಿ ಆಗುತ್ತಿದೆ. ರಕ್ತ ಹೆಪ್ಪುಗಟ್ಟಬಾರದು ಎಂದು ಥಿನ್ನರ್‌ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಬಿಪಿ ನಾರ್ಮಲ್‌ ಇದೆ, ನಿತ್ಯ ಶುಗರ್‌ ಲೆವೆಲ್‌ ಚೆಕ್‌ ಮಾಡಿಕೊಳ್ಳುತ್ತಿದ್ದರು. ಪ್ರವಾಸ ಹೆಚ್ಚಾಗಿ ಓವರ್‌ ಹೀಟ್‌ನಿಂದ ರಕ್ತಸ್ರಾವ ಆಗಿರಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Dog Meat Controversy: ಬೆಂಗಳೂರಿನಲ್ಲಿ ಸಿಕ್ಕಿರೋದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ: ಗೃಹ ಸಚಿವ ಪರಮೇಶ್ವರ್‌

ಸದನದಲ್ಲಿ ಉತ್ತರ ಕೊಡದೆ ಸಿಎಂ ಪಲಾಯನ

ಇಂದು ಬಿಜೆಪಿ-ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಕೇಂದ್ರ ಸಚಿವರು ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಸಭೆ ಮಾಡಿದ್ದೇವೆ. ರಾಜ್ಯದಲ್ಲಿ ಜನರನ್ನು ಸುಳ್ಳು ಮಾತಿನ ಮೂಲಕ ದಾರಿ ತಪ್ಪಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ತಿಂಗಳಿಂದಲೇ ಇವರ ಭ್ರಷ್ಟಾಚಾರ ಆರಂಭವಾಯಿತು. ವರ್ಗಾವಣೆ ವಿಚಾರದಿಂದ ಭ್ರಷ್ಟಾಚಾರ ಆರಭವಾಗಿದೆ. ಸದನದ ಕಲಾಪ ಎದುರಿಸಲಾಗದೆ ಮಾಧ್ಯಮದ ಮೂಲಕ ಹೇಳಿಕೆ ಪ್ರಾರಂಭ ಮಾಡಿದ್ದಾರೆ. ವಿಧಾನಸಭೆ ಅಷ್ಟು ವರ್ಷದ ಅನುಭವ ಇರುವ ಸಿಎಂ, ವಿಧಾನಸಭೆಯಲ್ಲಿ ಉತ್ತರ ಕೊಡದೆ ಪಲಾಯನ ಮಾಡಿದ ಘಟನೆ ಎಂದೂ ನಡೆದಿರಲಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು.

HD Kumaraswamy

ವಿಧಾನಸಭೆ, ವಿಧಾನಪರಿಷತ್‌ನಲ್ಲಿ ದಾಖಲೆ ಸಹಿತ ವಾಲ್ಮೀಕಿ ಹಗರಣ ಕುರಿತು ಮಾಹಿತಿ ನೀಡಲಾಗಿದೆ. ಆದರೆ, SC, ST ಸಮುದಾಯಕ್ಕೆ ಯಾವುದೇ ಸರ್ಕಾರ ಕೊಡದ ಭರವಸೆ ಕೊಟ್ಟು, ಪರಿಶಿಷ್ಟರ ಹಣವನ್ನೇ ಲೂಟಿ ಹೊಡೆಯಲಾಗುತ್ತಿದೆ. ಅದರ ನಾಯಕತ್ವ ಸಿದ್ದರಾಮಯ್ಯ ವಹಿಸಿದ್ದಾರೆ . ಮೊದಲ ಬಾರಿಗೆ ಉತ್ತರ ಕೊಡುವ ನೈತಿಕತೆ ಕಳೆದುಕೊಂಡಿದ್ದಾರೆ. ಯಾರೋ ಬರೆದುಕೊಟ್ಟ ಭಾಷಣ ಓದಿದ್ದಾರೆ. ಸಿಎಂ ಪತ್ನಿ 14 ಸೈಟಿಗೆ ನಮ್ಮ ತಕರಾರು ಇಲ್ಲ. ಇನ್ನೂ 50 ಸೈಟು ಖರೀದಿ ಮಾಡಲಿ. ಅವರವರ ಸಾಮರ್ಥ್ಯದ ಆಸ್ತಿ ಹೊಂದಲು ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಆ ಜಮೀನು ಯಾರಿಗೆ ಸೇರಿದ್ದು ಅನ್ನೋದು ಪ್ರಶ್ನೆ.. ಅಂತಿಮ ಅಧಿಸೂಚನೆಯಲ್ಲಿ 3 ಲಕ್ಷ ಹಣವನ್ನು ಕೋರ್ಟಿನಲ್ಲಿ ಸಂದಾಯ ಮಾಡಿದ್ದಾರೆ ಎಂದು ಎಚ್‌ಡಿಕೆ ತಿಳಿಸಿದರು.

Exit mobile version