1. ಲೋಕಸಭೆ ಚುನಾವಣೆ ಗೆಲುವಿಗಾಗಿ ಕಾರ್ಯಕರ್ತರಿಗೆ 100 ದಿನಗಳ ಟಾಸ್ಕ್ ಕೊಟ್ಟ ಮೋದಿ!
ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಣಕಹಳೆ ಮೊಳಗಿಸಿದ್ದಾರೆ. ದೆಹಲಿಯಲ್ಲಿ ಎರಡು ದಿನಗಳಿಂದ ನಡೆದ ಬಿಜೆಪಿ ರಾಷ್ಟ್ರೀಯ ಸಮಾವೇಶದ (BJP National Council Meeting)” ಸಮಾರೋಪ ಭಾಷಣ ಮಾಡಿದ ಮೋದಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ 100 ದಿನಗಳ ಟಾಸ್ಕ್ ನೀಡಿದ್ದಾರೆ. ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : BJP’s national convention : ಜುಲೈ, ಆಗಸ್ಟ್ನ ವಿದೇಶ ಪ್ರವಾಸ ಬುಕ್ ಆಗಿದೆ; ಹ್ಯಾಟ್ರಿಕ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮೋದಿ
ಈ ಸುದ್ದಿಯನ್ನೂ ಓದಿ : ಮುಂದಿನ 1,000 ವರ್ಷ ರಾಮರಾಜ್ಯ ಸ್ಥಾಪನೆಗೆ ರಾಮ ಮಂದಿರ ನಾಂದಿ; ಬಿಜೆಪಿ ನಿರ್ಣಯದಲ್ಲಿ ಪ್ರಶಂಸೆ
2. ದ್ರೋಹ ಮಾಡಿದ ಬಿಜೆಪಿಗೆ ಮತ ಹಾಕಬೇಡಿ, ಮೋದಿ ಸುಳ್ಳು ಹೇಳುವ ಪ್ರಧಾನಿ: ಸಿಎಂ ಸಿದ್ದರಾಮಯ್ಯ
ಮಂಡ್ಯ, (ಮಳವಳ್ಳಿ): ಕರ್ನಾಟಕಕ್ಕೆ ತೆರಿಗೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದರೆ ಅವಮಾನ ಆಯಿತು ಎಂದು ಬಿಜೆಪಿಯವರು (BJP Karnataka) ಹೇಳುತ್ತಾರೆ. ಈ ದ್ರೋಹದ ವಿರುದ್ಧ ಅವರಿಗೆ ಪಾಠ ಕಲಿಸಬೇಕು ಎಂದರೆ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಗೆ ಒಂದೇ ಒಂದು ಮತವನ್ನೂ ನೀಡಬೇಡಿ. ಕಾಂಗ್ರೆಸ್‌ಗೆ ಬೆಂಬಲ ನೀಡಿ. ಬಿಜೆಪಿಯ ಅನ್ವರ್ಥ ನಾಮವೆಂದರೆ ಸುಳ್ಳಿನ ಪಕ್ಷ. ಸ್ವತಂತ್ರ ಭಾರತದಲ್ಲಿ ಪ್ರಧಾನಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಮತ್ತೊಬ್ಬರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
3. ನಾಳೆ ಕಲಾಪದಲ್ಲಿ ಬಜೆಟ್ ಕಾದಾಟ; ಏಟು-ಎದುರೇಟಿಗೆ ವಿಪಕ್ಷ – ಆಡಳಿತ ಪಕ್ಷ ಸಜ್ಜು!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ 2024-25ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ (Karnataka Budget 2024) ಮಂಡಿಸಿದ್ದಾರೆ. ಆದರೆ, ಬಜೆಟ್ ಮಂಡನೆ ವೇಳೆ ಬಾಯ್ಕಾಟ್ ಮಾಡಿದ್ದ ವಿಪಕ್ಷಗಳು ಈಗ ಸರ್ಕಾರದ ಮೈಮೇಲೆ ಬೀಳಲು ರೆಡಿಯಾಗಿ ಕುಳಿತಿವೆ. ಇತ್ತ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತಿರುಗೇಟು ಕೊಡಲು ಕಾಂಗ್ರೆಸ್ ಸಹ ಪ್ಲ್ಯಾನ್ ಮಾಡಿಕೊಂಡಿದೆ. ಸೋಮವಾರದಿಂದ ಬಜೆಟ್ ಮೇಲೆ ಚರ್ಚೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ವಿಧಾನಸಭಾ ಕಲಾಪವು ರಂಗೇರಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
4. ವಿಜಯʼ ಸಾರಥ್ಯಕ್ಕೆ 100 ದಿನ; ಕಾರ್ಯಕರ್ತರ ಮನಗೆದ್ದ ವಿಜಯೇಂದ್ರಗೆ ಈಗ ಲೋಕಸಭೆಯೇ ಟಾರ್ಗೆಟ್!
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಕಣ್ಣ ಮುಂದಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಹಳಿ ತಪ್ಪಿದ್ದ ರಾಜ್ಯ ಬಿಜೆಪಿಯನ್ನು ಸರಿದಾರಿಗೆ ತರುವುದು ಬಿಜೆಪಿ ಹೈಕಮಾಂಡ್‌ಗೆ (BJP high command) ತಲೆನೋವಾಗಿತ್ತು. ಈ ಹಿನ್ನೆಲೆಯಲ್ಲಿ ಅಳೆದೂ ತೂಗಿ ಬಿಜೆಪಿಯಿಂದ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ನೇಮಕ ಮಾಡಲಾಗಿತ್ತು. ಈಗ ವಿಜಯೇಂದ್ರ ಅವರು ಅಧಿಕಾರ ಸ್ವೀಕಾರ ಮಾಡಿ ನೂರು ದಿನಗಳು ಪೂರೈಸಿದ್ದು, ಹಲವಾರು ಸವಾಲುಗಳನ್ನು ಮೆಟ್ಟಿ ನಿಂತಿದ್ದಾರೆ. ಅಲ್ಲದೆ, 100 ದಿನದಲ್ಲಿ 10 ಸಾವಿರ ಕಿ.ಮೀ. ಸಂಚಾರ ಮಾಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
5. ಜೈಸ್ವಾಲ್ ದ್ವಿಶತಕ, ಜಡೇಜಾ ಸ್ಪಿನ್ ಜಾದು; ಭಾರತಕ್ಕೆ 434 ರನ್ ಭರ್ಜರಿ ಜಯ
ರಾಜ್ಕೋಟ್: ಭಾರತ(IND vs ENG) ವಿರುದ್ಧ ಇಲ್ಲಿ ನಡೆದ ಮೂರನೇ ಟೆಸ್ಟ್(India vs England 3rd Test) ಪಂದ್ಯದಲ್ಲಿ ಇಂಗ್ಲೆಂಡ್ ತಂಡ 434 ರನ್ಗಳ ಹೀನಾಯ ಸೋಲು ಕಂಡಿದೆ. ರೋಹಿತ್ ಪಡೆ ಈ ಗೆಲುವಿನೊಂದಿಗೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿಯೂ ಭಾರತ ಸಾಧಿಸಿದ ಅಮೋಘ ಗೆಲುವು ಇದಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. ಶಿವಮೊಗ್ಗದಲ್ಲಿ ಆತಂಕ ಹುಟ್ಟಿಸಿದ್ದ ಸಿಡಿಮದ್ದು ಸ್ಫೋಟ! ದಂಪತಿ ವಶಕ್ಕೆ, ವಿಚಾರಣೆ
ಶಿವಮೊಗ್ಗ : ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಸಿಡಿಮದ್ದು ಸ್ಫೋಟಗೊಂಡು ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಶಿರಾಳಕೊಪ್ಪದ ಬಸ್ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದೆ. ಸಿಡಿಮದ್ದು ತಂದಿದ್ದ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ ಪಡೆದ ಸರ್ಕಾರ! ಗ್ಯಾರಂಟಿಯಿಂದ ಖಾಲಿಯಾಯ್ತಾ ಬೊಕ್ಕಸ?
ತುಮಕೂರು: ಈ ಬಾರಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು 3,71,383 ಕೋಟಿ ರೂ. ಬಜೆಟ್ (Karnataka Budget 2024) ಗಾತ್ರವನ್ನು ಮಂಡಿಸಿದ್ದರೂ ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲವೇ? ಗ್ಯಾರಂಟಿ ಯೋಜನೆಗಳಿಗೆ (Congress Guarantee Scheme) ಅನುದಾನವನ್ನು ಕೊಟ್ಟು ಸರ್ಕಾರ ಬಡವಾಯಿತೇ? ಇಂಥ ಹೀನಾಯ ಸ್ಥಿತಿ ರಾಜ್ಯ ಸರ್ಕಾರ ತಲುಪಿತೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ, ತುಮಕೂರಿನ ಸಿದ್ಧಗಂಗಾ ಮಠದಿಂದ (Tumkur Siddaganga Mutt) ಅಕ್ಕಿ ಸಾಲವನ್ನು ಪಡೆಯಲಾಗಿದೆ. ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ಸರ್ಕಾರಿ ಉದ್ಯೋಗ ಹುಡುಕುವವರಿಗೆ ಗುಡ್‌ನ್ಯೂಸ್; ಶೀಘ್ರ 504 ಕೆಎಎಸ್ ಹುದ್ದೆ ಭರ್ತಿ
ಬೆಂಗಳೂರು: ಸರ್ಕಾರಿ ಉದ್ಯೋಗ ಹೊಂದಬೇಕು (Government Jobs) ಎಂದು ಕನಸು ಕಾಣುವವರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಶೀಘ್ರದಲ್ಲಿಯೇ ವಿವಿಧ ಇಲಾಖೆಗಳ 504 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka Cm Siddaramaia) ತಿಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದ ದರ್ಶನ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರು ಕನ್ನಡ ಚಿತ್ರರಂಗಕ್ಕೆ (Actor Darshan) ಪದಾರ್ಪಣೆ ಮಾಡಿ 25 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸಲು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶನಿವಾರ ರಾತ್ರಿ ಅದ್ಧೂರಿಯಾಗಿ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ಬೆಂಕಿ ಆಕಸ್ಮಿಕದಿಂದ ಪಾರಾಗುವುದು ಹೇಗೆ? ಈ ʼಸ್ಮಾರ್ಟ್ ನಾಯಿʼ ಹೇಳಿ ಕೊಡುತ್ತಿದೆ ನೋಡಿ
ಬೆಂಗಳೂರು: ನಂಬಿಕೆಗೆ ಇನ್ನೊಂದು ಹೆಸರು ಶ್ವಾನ. ಶತಮಾನಗಳಿಂದಲೂ ಮಾನವನ ಒಡನಾಡಿಯಾಗಿರುವ ಇವು ಚಾಣಾಕ್ಷ ಪ್ರಾಣಿಗಳು ಎಂದೂ ಗುರುತಿಸ್ಪಡುತ್ತವೆ. ಇದಕ್ಕೆ ಉದಾಹರಣೆಯಾಗಿ ತರಬೇತಿ ಪಡೆದುಕೊಂಡ ನಾಯಿಗಳು ತನಿಖೆಯ ವೇಳೆ, ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ನೆರವಾಗುವುದುನ್ನು ನಾವು-ನೀವೆಲ್ಲ ಕಂಡಿದ್ದೇವೆ. ಇದೀಗ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಈ ಬಗ್ಗೆ ಸಾಕು ನಾಯಿಗೆ ಎಚ್ಚರಿಕೆ ವಹಿಸುವ ರೀತಿ ಮತ್ತು ತಕ್ಷಣ ಅದು ಬೆಂಕಿ ಹರಡದಂತೆ ತಡೆಯುವ ವಿಡಿಯೊ ವೈರಲ್ (Viral Video) ಆಗಿದ್ದು, ನೆಟ್ಟಿಗರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.