Site icon Vistara News

ವಿಸ್ತಾರ TOP 10 NEWS : ಪ್ರತಿಪಕ್ಷ ಕೂಟಕ್ಕೆ ಬಿಜೆಪಿ ಹೊಡೆತ, ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕನ ಕುರ್ಚಿ ಖಾಲಿ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು

Vistara top 10

1. ಪ್ರತಿಪಕ್ಷ ಕೂಟಕ್ಕೆ ಬಿಜೆಪಿಯಿಂದ ‘ಮಹಾ’ ಹೊಡೆತ; ಎನ್​ಸಿಪಿಯ 9 ಶಾಸಕರಿಗೆ ಮಂತ್ರಿಗಿರಿ
ಮಹಾರಾಷ್ಟ್ರ ರಾಜಕಾರಣದಲ್ಲಿ (Maharashtra Politics)ಈಗ ಮತ್ತೊಂದು ‘ಮಹಾ’ ಬದಲಾವಣೆ ಆಗಿದೆ. ಎನ್​ಸಿಪಿ ನಾಯಕ ಅಜಿತ್ ಪವಾರ್ (Ajit Pawar)​ ಇಷ್ಟುದಿನ ಪಕ್ಷದೊಳಗೆ ಮುಸುಕಿನಲ್ಲೇ ಗುದ್ದಾಟ ನಡೆಸಿ, ಇದೀಗ ಬಹಿರಂಗ ಸಮರ ಸಾರಿದ್ದಾರೆ. ಮಹಾರಾಷ್ಟ್ರದ ಶಿವಸೇನೆ (ಏಕನಾಥ ಶಿಂದೆ ಬಣ) -ಬಿಜೆಪಿ ಮೈತ್ರಿ ಪಕ್ಷವನ್ನು ಸೇರಿಕೊಂಡಿದ್ದಾರೆ. ಅವರು ತಾವಷ್ಟೇ ಹೋಗಿಲ್ಲ, ತಮ್ಮೊಂದಿಗೆ ಹಲವು ಶಾಸಕರನ್ನೂ ಕರೆದುಕೊಂಡು ಹೋಗಿದ್ದಾರೆ. ಅದರಲ್ಲಿ ಇಂದು ಅಜಿತ್​ ಪವಾರ್ ಮತ್ತು ಇತರ 8 ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅಂದಹಾಗೇ, ಅಜಿತ್ ಪವಾರ್​ ಜತೆ ಇಂದು ಶಿಂದೆ ಸಂಪುಟ ಸೇರಿದವರು ಧರ್ಮರಾವ್ ಅತ್ರಮ್, ಸುನಿಲ್ ವಲ್ಸಾಡೆ, ಅದಿತಿ ತತ್ಕರೆ, ಹಸನ್ ಮುಶ್ರೀಫ್, ಛಗನ್ ಭುಜಬಲ್, ಧನನಿ ಮುಂಡೆ, ಅನಿಲ್ ಪಾಟೀಲ್, ದಿಲೀಪ್ ವಲ್ಸೆ ಪಾಟೀಲ್. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್​ ಮಾಡಿ.
ಮತ್ತಷ್ಟು ಓದಿಗಾಗಿ: ಮೋದಿಯಿಂದ ದೇಶದ ಏಳಿಗೆ; ಶಿಂಧೆ ಸರ್ಕಾರ ಸೇರಿದ ಬೆನ್ನಲ್ಲೇ ಅಜಿತ್‌ ಹೇಳಿಕೆ; ಈಗ NCP VS NCP

2. ಸೋಮವಾರದಿಂದ ಶುರುವಾಗುವ ಅಧಿವೇಶನಕ್ಕೆ ಪ್ರತಿಪಕ್ಷ ನಾಯಕರೇ ಇಲ್ಲ! ಆಯ್ಕೆ ಪ್ರಕಟಿಸದ ಬಿಜೆಪಿ ಹೈಕಮಾಂಡ್
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು, ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಒಂದು ತಿಂಗಳಾದರೂ ಬಿಜೆಪಿಗೆ ಮಾತ್ರ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದರೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಹಾಗಾಗಿ, ಸೋಮವಾರದಿಂದ ಆರಂಭವಾಗುವ ರಾಜ್ಯ ಬಜೆಟ್‌ ಅಧಿವೇಶನದ ವೇಳೆ ಪ್ರತಿಪಕ್ಷ ನಾಯಕನ ಕುರ್ಚಿ ಖಾಲಿಯೇ ಇರಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​.

3. Power Point with HPK : ಸಿದ್ದರಾಮಯ್ಯ ಸೆಕ್ಯುಲರ್‌ ಅಲ್ಲ, ಗ್ಯಾರಂಟಿಯಿಂದ ಬದುಕೇ ಸರ್ವನಾಶ: ಸಿ.ಟಿ. ರವಿ
ಉಚಿತ ಯೋಜನೆ ಎಂಬುದು ಎರೆಹುಳು ಇದ್ದಂತೆ. ನಾವು ಮೀನು ಹಿಡಿಯಬೇಕಾದರೆ ಎರೆಹುಳುವನ್ನು ಗಾಳಕ್ಕೆ ಸಿಕ್ಕಿಸುತ್ತಿದ್ದೆವು. ಆ ಎರೆ ಹುಳುವಿನ ಆಸೆಗೆ ಮೀನು ಗಾಳಕ್ಕೆ ಬೀಳುತ್ತಿತ್ತು. ಈಗ ಇಲ್ಲಾಗಿರುವುದೂ ಅದೇ. ಗ್ಯಾರಂಟಿ ಎನ್ನುವಂತಹ ಎರೆಹುಳುವನ್ನು ಗಾಳಕ್ಕೆ ಸಿಕ್ಕಿಸಿ ಮತ ಎನ್ನುವಂತಹ ಮೀನನ್ನು ಕಾಂಗ್ರೆಸ್‌ನವರು ಹಿಡಿದರು. ಆದರೆ, ಇದರಲ್ಲಿ ತನ್ನ ಬದುಕೇ ಹೋಗುತ್ತದೆ ಎಂಬುದು ಆ ಮೀನಿಗೆ ಗೊತ್ತಿಲ್ಲದಂತೆ, ಬದುಕೇ ನಾಶವಾಗುತ್ತದೆ ಎಂಬುದು ಮತದಾರನಿಗೂ ಗೊತ್ತಿಲ್ಲ. ಒಮ್ಮೆ ಅರಿವಿಗೆ ಬಂದಾಗ ಉಳಿದ ಮೀನುಗಳು ಎಚ್ಚರಿಸುತ್ತವೆ ಎಂದು ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಪವರ್‌ ಪಾಯಿಂಟ್‌ ವಿಥ್‌ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಮಾರ್ಮಿಕವಾಗಿ ರಾಜ್ಯ ಸರ್ಕಾರವನ್ನು ತಿವಿದಿದ್ದಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

4. ಇನ್ನೈದು ದಿನ ಭರ್ಜರಿ ಮಳೆಯಾಟ; ಇದು ಕರಾವಳಿಗೆ ಮಾತ್ರ! ಜಲಾಶಯದ ಕತೆ?
ಕರ್ನಾಟಕದ ಕರಾವಳಿ (Coastal Districts) ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಹೀಗಾಗಿ ಮುಂದಿನ 5 ದಿನಗಳ ಕಾಲ ಕರಾವಳಿಗೆ ಆರೆಂಜ್‌ ಅಲರ್ಟ್‌ (Orange warning) ನೀಡಲಾಗಿದೆ. ಜತೆಗೆ ಮಲೆನಾಡು ಜಿಲ್ಲೆಗಳಲ್ಲೂ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಆದರೆ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

5. ಗೃಹಲಕ್ಷ್ಮಿಗೆ ಜುಲೈ 14ಕ್ಕೆ ಮುಹೂರ್ತ?; ಮನೆಗೆ ಬರಲಿದ್ದಾರೆ ಪ್ರಜಾಪ್ರತಿನಿಧಿ!
ರಾಜ್ಯ ಕಾಂಗ್ರೆಸ್‌ ಸರ್ಕಾರ ಐದು ಗ್ಯಾರಂಟಿಯಲ್ಲಿ ಒಂದಾದ “ಗೃಹಲಕ್ಷ್ಮಿ” ಯೋಜನೆ (Gruha Lakshmi Scheme) ಜಾರಿಗೆ ಸಾಕಷ್ಟು ಸಿದ್ಧತೆಗಳು ನಡೆಯುತ್ತಿದೆ. ಅಲ್ಲದೆ, ಈ ಸಂಬಂಧ ಈಗ ಪ್ರಜಾಪ್ರತಿನಿಧಿಗಳ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇವರು ಅರ್ಹರ ಮನೆ ಬಾಗಿಲಿಗೆ ಹೋಗಲಿದ್ದು, ಅವರ ಊರಿಗೇ ಬಂದು ಅರ್ಜಿಯನ್ನು ಭರ್ತಿ ಮಾಡಲಿದ್ದಾರೆ. ಈ ಮೂಲಕ ಮೊಬೈಲ್‌ ತಂತ್ರಾಂಶದ ಬಳಕೆ ಬಗ್ಗೆ ಮಾಹಿತಿ ಇಲ್ಲದಿರುವ, ಅರಿವಿಲ್ಲದಿರುವವರಿಗೆ ಇದು ಅನುಕೂಲವನ್ನುಂಟು ಮಾಡಲಿದೆ. ಇದೇ ಜುಲೈ 14ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ ಎಂದು ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್​ ಮಾಡಿ.

6. ಕ್ರಿಕೆಟ್‌ ಜಗತ್ತನ್ನು ಆಳಿದ್ದ ವಿಂಡೀಸ್‌ ಈಗ ಪಾತಾಳಕ್ಕೆ ಕುಸಿಯಲು ಇದುವೇ ಪ್ರಮುಖ ಕಾರಣ
ಅದೊಂದು ಕಾಲವಿತ್ತು… ವೆಸ್ಟ್​ ಇಂಡೀಸ್(West Indies Cricket)​ ವಿರುದ್ಧ ಆಡುವುದೆಂದರೆ ಎಂತಹ ಆಟಗಾರರ ಎದೆಯೂ ಒಮ್ಮೆ ನಡುಗಲಾರಂಭಿಸುತಿತ್ತು. ಸೋಲಿನ ಭಯ ಮಾತ್ರವಲ್ಲ, ದೇಹದ ಯಾವ ಭಾಗಕ್ಕೆ ಎಷ್ಟು ಹಾನಿ ಆಗಲಿದೆ ಎಂಬ ಆತಂಕ ಕಾಡುತಿತ್ತು. ಈ ಬಾರಿ ಏನು ಕಾದಿದೆಯೊ ಎನ್ನುವಷ್ಟು ಹೆದರಿಕೆ. ವೆಸ್ಟ್‌ ಇಂಡೀಸ್‌ ತಂಡದ ಹೆಸರು ಕೇಳಿದರೆ ಆಟಗಾರರ ಕುಟುಂಬದವರೂ ಆತಂಕಕ್ಕೆ ಒಳಗಾಗುತ್ತಿದ್ದ ಕಾಲವದು. ಅಂತಹ ತಂಡದ ವಿರುದ್ಧ ಇಂದು ಯಾರು ಬೇಕಾದರೂ ಗೆಲ್ಲಬಹುದು ಎಂಬ ಸ್ಥಿತಿ ಬಂದೊದಗಿದೆ. ವಿಂಡೀಸ್​ ತಂಡದ ಈ ಸ್ಥಿತಿಗೆ ಇಲ್ಲಿನ ಕ್ರಿಕೆಟ್​ ಮಂಡಳಿಯ ದಿವಾಳಿಯೇ ಪ್ರಮುಖ ಕಾರಣ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

7. ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಲೋಕದ ಇಂಟಲಿಜನ್ಸ್: ನಿಮ್ಮ ಯಾವ ಮಾಹಿತಿಯೂ ಇಲ್ಲಿ ರಹಸ್ಯವಲ್ಲ!
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಗೊತ್ತಾಗಲ್ಲ ಎನ್ನುವುದು ಸೈಬರ್ ಲೋಕಕ್ಕೆ (cyber world) ಅನ್ವಯವಾಗುವುದಿಲ್ಲ. ಇಲ್ಲಿ ನೀವು ಏನೇ ಮಾಡಿದರೂ, ಏಲ್ಲೇ ಹೋದರೂ, ಏನೇ ನೋಡಿದರೂ ಅದನ್ನು ಯಾರು ಬೇಕಾದರೂ ಕಂಡುಹಿಡಿಯಬಹುದು. ನಿಮ್ಮ ಬಗ್ಗೆ ನೀವೇ ತಿಳಿಸುವ ವಿಷಯಗಳು, ಅಂತರ್ಜಾಲದಲ್ಲಿ (internet) ನಿಮ್ಮ ಅಲೆದಾಟ, ನಿಮಗೆ ಆಸಕ್ತಿ ಇರುವ ವಿಚಾರಗಳು ಮುಂತಾದ ಜಗತ್ತಿಗೆ ತೆರೆದಿಟ್ಟ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಿಸಿ ಫ್ರೊಫೈಲಿಂಗ್ ಮಾಡಬಹುದು. ನಿಮ್ಮ ಬಗ್ಗೆ ನಿಮಗಿಂತ ಹೆಚ್ಚು ನಿಮ್ಮ ವಿಶ್ಲೇಷಕರಿಗೆ ತಿಳಿದಿರುತ್ತದೆ. ಇದನ್ನು OSINT ಮತ್ತು SOCMINT ಎಂದು ಕರೆಯುತ್ತಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

8. ಯುದ್ಧದ ಮುನ್ನುಡಿ ಬರೆದ ಆರಡಿ ಕಟೌಟ್; ಕಿಚ್ಚ 46′ ಟೀಸರ್‌ ಔಟ್‌!
ಕಿಚ್ಚ ಸುದೀಪ್ (Kichcha Sudeep) ಅವರ ಮುಂದಿನ ಚಿತ್ರ, ‘ಕಿಚ್ಚ 46’ ಸಿನಿಮಾವನ್ನು ತಮಿಳು ನಿರ್ಮಾಪಕ ಕಲೈಪುಲಿ ಎಸ್‌ ಧಾನು ಇತ್ತೀಚೆಗೆ ಘೋಷಿಸಿದ್ದರು. ಇದೀಗ ಈ ಸಿನಿಮಾದ ಟೀಸರ್‌ (Kiccha 46 Teaser) ಬಿಡುಗಡೆಗೊಂಡಿದೆ. ʻಕಿಚ್ಚ 46ʼ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ರಣರಣ ರಕ್ಕಸನಾಗಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಟೀಸರ್‌ನಲ್ಲಿ ಕಿಚ್ಚನ ಮಾಸ್‌ ಡೈಲಾಗ್‌ ಹೈಲೈಟ್‌ ಆಗಿದೆ. ʻಯುದ್ಧ ಹುಟ್ಟಾಕೋರ್‌ ಕಂಡ್ರು ನಂಗಗಾಗಲ್ಲ. ಯುದ್ಧಕ್ಕೆ ಹೆದರ್‌ಕೊಂಡು ಓಡೋಗರ್‌ ಕಂಡ್ರು ನಂಗಾಗಲ್ಲ. ಅಖಾಡಕ್ಕೆ ಇಳಿದು, ಎದುರಾಳಿಗಳ ಎದೆ ಬಗ್ದು ರಕ್ತ ಚೆಲ್ಲಾಡಿ, ಆ ರಕ್ತ ಸುರ್ಸ್‌ಕೊಂಡು ಓಡೋಗದನ್ನ ನೋಡೋನು ನಾನುʼʼ ಎಂಬ ಖಡಕ್‌ ಡೈಲಾಗ್‌ ಹೊಡೆದಿದ್ದಾರೆ ಕಿಚ್ಚ. ಇದೀಗ ಈ ಡೈಲಾಗ್‌ ಟ್ರೆಂಡ್‌ ಆಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

9. ಜುಲೈನಲ್ಲಿ ಭಾರತದ ಮಾರುಕಟ್ಟೆಗೆ ಇಳಿಯಲಿರುವ ಹೊಸ ಕಾರುಗಳ ವಿವರ ಇಲ್ಲಿದೆ
2023 ರ ದ್ವಿತೀಯಾರ್ಧವು ಆರಂಭಗೊಂಡಿದೆ. ಅಂತೆಯೇ ಜುಲೈ ತಿಂಗಳ ಆರಂಭದಲ್ಲಿ ಎರಡು ಕಾರುಗಳು (New Cars) ಬಿಡುಗಡೆಯಾಗಲಿದ್ದು. ಮತ್ತೊಂದು ಪದಾರ್ಪಣೆ ಮಾಡಲಿದೆ. ತಿಂಗಳ ಅಂತ್ಯದಲ್ಲಿ ಐಷಾರಾಮಿ ಕಾರೊಂದರ ಬಿಡಗಡೆಯೂ ಇದೆ. ಅವುಗಳೆಂದರೆ ಕಿಯಾ ಸೆಲ್ಟೋಸ್​, ಮಾರುತಿ ಸುಜುಕಿ ಇನ್ವಿಕ್ಟೊ, ಹ್ಯುಂಡೈ ಎಕ್ಸ್​ಟೆರ್​ ಹಾಗೂ ಮರ್ಸಿಡೀಸ್​ ಬೆಂಜ್​ ಜಿಎಲ್​​ಸಿ. ಕಿಯಾ ತನ್ನ ಮಧ್ಯಮ ಗಾತ್ರದ ಎಸ್​ಯುವಿ ಸೆಲ್ಟೋಸ್​ಗೆ ಹೊಸ ಸ್ಪರ್ಶ ನೀಡಿ ಬಿಡುಗಡೆ ಮಾಡಲು ಮುಂದಾಗಿದ್ದರೆ ಮಾರುತಿ ಮೊದಲ ಬಾರಿಗೆ ಪ್ರೀಮಿಯಂ ಎಂಪಿವಿಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಇಳಿಯಲಿದೆ. ಇದೇ ವೇಳೆ ಹ್ಯುಂಡೈ ತನ್ನ ಅತ್ಯಂತ ಸಣ್ಣ ಮತ್ತು ಅತ್ಯಂತ ಕೈಗೆಟುಕುವ ಎಸ್ ಯುವಿ ಎಕ್ಸ್​ಟೆರ್​ ಅನ್ನು ಭಾರತಕ್ಕೆ ಪರಿಚಯಿಸಲಿದೆ. ಮರ್ಸಿಡೀಸ್​ ತನ್ನ ಐಷಾರಾಮಿ ವಿಭಾಗ ಜಿಎಲ್​ಸಿಯ ಫೇಸ್​ಲಿಸ್ಟ್​ ಕಾರನ್ನು ಗ್ರಾಹಕರಿಗೆ ಪರಿಚಯಿಸಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

10. ನೆಲಕ್ಕೆ ಬಿದ್ದ ಚ್ಯೂಯಿಂಗ್​ ಗಮ್ ಹೆಕ್ಕಿ ತಿಂದ ಆಸೀಸ್​ ಆಟಗಾರ; ವಿಡಿಯೊ ವೈರಲ್
ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ(England vs Australia) ನಡುವೆ ಸಾಗುತ್ತಿರುವ ಆ್ಯಶಸ್(The Ashes, 2023)​ ಟೆಸ್ಟ್ ಸರಣಿಯ ದ್ವಿತೀಯ ಒಂದ್ಯ ಅತ್ಯಂತ ರೋಚಕ ಘಟ್ಟ ತಲುಪಿದೆ. ಇಂಗ್ಲೆಂಡ್​ ಅಂತಿಮ ದಿನ(ಭಾನುವಾರ) 257 ರನ್​ ಬಾರಿಸಿದರೆ ಗೆಲುವು ಸಾಧಿಸಲಿದೆ. ಆದರೆ ಈ ಪಂದ್ಯದ ನಾಲ್ಕನೇ ದಿನದಾಟದ ವೇಳೆ ನಡೆದ ಘಟನೆಯೊಂದರ ವಿಡಿಯೊ ಇದೀಗ ಎಲ್ಲಡೆ ವೈರಲ್(Viral Video)​ ಆಗಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್​ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version