Site icon Vistara News

Vistara Top 10 News : ಕೇಂದ್ರದ ‘ನಿರ್ಮಲ’ ಬಜೆಟ್, ದೇಶ ವಿಭಜನೆ ಕಿಡಿ ಹಚ್ಚಿದ ಡಿ. ಕೆ ಸುರೇಶ್​ ಇತ್ಯಾದಿ ಪ್ರಮುಖ ಸುದ್ದಿಗಳು

Top 10 news

1. ಇದು ‘ನಿರ್ಮಲ’ ಬಜೆಟ್! ತೆರಿಗೆ ಬದಲಾವಣೆಯೂ ಇಲ್ಲ, ಪುಕ್ಕಟೆ ಯೋಜನೆಯೂ ಇಲ್ಲ!
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ (Lok sabha Election 2024) ಹಿನ್ನೆಲೆಯಲ್ಲಿ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Seetharaman) ಇಂದು ಮಧ್ಯಂತರ ಬಜೆಟ್ 2024 (Budget 2024) ಅನ್ನು ಮಂಡಿಸಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರ ಸತತ ಆರನೇ ಬಜೆಟ್ ಮಂಡನೆ. ಅವರು ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬಜೆಟ್‌ನಲ್ಲಿ ಹಣಕಾಸು ಸಚಿವರು ಯಾವುದೇ ಜನಪ್ರಿಯ ಘೋಷಣೆಗಳನ್ನು ಮಾಡಿಲ್ಲ. ನೇರ ಮತ್ತು ಪರೋಕ್ಷ ತೆರಿಗೆಗಳ ತೆರಿಗೆ ದರಗಳನ್ನು ಬದಲಾಯಿಸಿಲ್ಲ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ: Budget 2024 highlights: ತೆರಿಗೆ ಬದಲಾವಣೆಯೂ ಇಲ್ಲ, ಪುಕ್ಕಟೆ ಯೋಜನೆಯೂ ಇಲ್ಲ: ಮಧ್ಯಂತರ ಬಜೆಟ್‌ನಲ್ಲಿ ಏನೇನಿದೆ?
ಇದನ್ನೂ ಓದಿ : Budget 2024: ಬಡವರು ಸೇರಿ ಎಲ್ಲರ ಏಳಿಗೆಗೆ ಬಜೆಟ್‌ ಏಣಿ; ಪ್ರಧಾನಿ ಮೋದಿ ಬಣ್ಣನೆ
ಇದನ್ನೂ ಓದಿ : Budget 2024: ಇದು ಮೋದಿ ಸರ್ಕಾರದ ಕೊನೆಯ ಬಜೆಟ್! ಪ್ರತಿಪಕ್ಷ ನಾಯಕರ ಪ್ರತಿಕ್ರಿಯೆ ಹೀಗಿದೆ…
ಇದನ್ನೂ ಓದಿ : Budget 2024: ವಿನಾಶಕಾರಿ ಭಾರತ ಬಜೆಟ್‌; 190 ಲಕ್ಷ ಕೋಟಿ ರೂ. ಸಾಲ ಮಾಡಿದ ಮೋದಿ: ಸಿಎಂ ಸಿದ್ದರಾಮಯ್ಯ

2. ಬಜೆಟ್‌ನಲ್ಲಿ ಅನ್ಯಾಯ; ದೇಶ ವಿಭಜನೆ ಮಾಡಲೇಬೇಕು ಎಂದ ಡಿ.ಕೆ. ಸುರೇಶ್!
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಡಿಸಿರುವ ಮಧ್ಯಂತರ ಬಜೆಟ್‌ಗೆ (Budget 2024) ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಸಂಸದ ಡಿ.ಕೆ. ಸುರೇಶ್‌ ಪ್ರತಿಕ್ರಿಯೆ ನೀಡಿದ್ದು, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಬಜೆಟ್‌ ಅನ್ನು ಖಂಡಿಸಿದ್ದಾರೆ. ಅಲ್ಲದೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬುದಾಗಿ ತಾರತಮ್ಯ ಮಾಡುತ್ತಿದ್ದು, ಹೀಗೇ ಮುಂದುವರಿದರೆ ದೇಶವನ್ನು ವಿಭಜನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Budget 2024: ಇದು ‘ನಿರ್ಮಲ’ ಬಜೆಟ್! ತೆರಿಗೆ ಬದಲಾವಣೆಯೂ ಇಲ್ಲ, ಪುಕ್ಕಟೆ ಯೋಜನೆಯೂ ಇಲ್ಲ!
ಈ ಸುದ್ದಿಯನ್ನೂ ಓದಿ: Budget 2024: ಭಾರತ ವಿಭಜನೆ; ಡಿ.ಕೆ. ಸುರೇಶ್‌ ಹೇಳಿಕೆಯನ್ನು ಸಮರ್ಥಿಸಿಕೊಂಡ ಡಿಕೆಶಿ!
ಈ ಸುದ್ದಿಯನ್ನೂ ಓದಿ :Budget 2024: ಡಿ.ಕೆ. ಸುರೇಶ್‌ ʼಭಾರತ ವಿಭಜನೆʼ ಹೇಳಿಕೆ; ಬಿಜೆಪಿಯಿಂದ ವ್ಯಾಪಕ ಖಂಡನೆ

3. ಗರ್ಭಕಂಠ ಕ್ಯಾನ್ಸರ್‌ ತಡೆಗೆ ಬಾಲಕಿಯರಿಗೆ ಉಚಿತ ಲಸಿಕೆ; ‘ಆರೋಗ್ಯ’ಕ್ಕೆ ಸಿಕ್ಕಿದ್ದೇನು?
ನವದೆಹಲಿ: ‌ಗರ್ಭಕಂಠ ಕ್ಯಾನ್ಸರ್‌ ತಡೆಗಾಗಿ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದೆ. ಗರ್ಭಕಂಠ ಕ್ಯಾನ್ಸರ್‌ ತಡೆಗಾಗಿ ದೇಶಾದ್ಯಂತ 9-14 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು (Cervical Cancer Vaccine) ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ (Budget 2024) ಮಂಡಿಸುವ ವೇಳೆ ಘೋಷಣೆ ಮಾಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ : Budget 2024: ಬಜೆಟ್‌ನಲ್ಲಿ ಬಾಲಕಿಯರಿಗೆ ಲಸಿಕೆ ಕೊಡುಗೆ; ಏನಿದು ಸರ್ವಿಕಲ್ ಕ್ಯಾನ್ಸರ್?

4. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್‌ ಭಾರತ್‌ ವಿಸ್ತರಣೆ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ: ಆಯುಷ್ಮಾನ್ ಭಾರತ್ (Ayushman Bharat) ಅಡಿಯಲ್ಲಿ ಆರೋಗ್ಯ ರಕ್ಷಣೆಯನ್ನು ಎಲ್ಲಾ ಆಶಾ, ಅಂಗನವಾಡಿ (Asha workers, Anganwadi workers) ಕಾರ್ಯಕರ್ತೆಯರಿಗೂ ವಿಸ್ತರಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (‌Nirmala Seetharaman) ತಿಳಿಸಿದ್ದಾರೆ. 2024ರ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ (Budget 2024) ಅವರು ಈ ಅಂಶವನ್ನು ಪ್ರಸ್ತಾಪಿಸಿದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

5.ರೈಲ್ವೆಗೆ 2.4 ಲಕ್ಷ ಕೋಟಿ ರೂ.! ಇತರ ನಗರಗಳಿಗೂ ನಮೋ, ಮೆಟ್ರೋ ರೈಲು!
ನವದೆಹಲಿ: ಮೆಟ್ರೋ ರೈಲು (Metro Rail) ಮತ್ತು ನಮೋ ಭಾರತ್ ರೈಲು (Namo Bharat Rail) ಸೇವೆಯನ್ನು ಇತರ ಎಲ್ಲ ನಗರಗಳಿಗೂ ವಿಸ್ತರಿಸುವ ಬಗ್ಗೆ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ (Niramla Sitharaman) ಅವರು ಘೋಷಣೆ ಮಾಡಿದ್ದಾರೆ. ಹಾಗೆಯೇ, ವಂದೇ ಭಾರತ್ ಹಂತಕ್ಕೆ 40 ಸಾವಿರ ಬೋಗಿಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆಯೂ ವಾಗ್ದಾನ ಮಾಡಲಾಗಿದೆ. ಇದರ ಜೊತೆಗೆ, ಮೂರು ಪ್ರಮುಖ ಆರ್ಥಿಕ ರೈಲ್ವೇ ಕಾರಿಡಾರ್ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ. ಅನುಷ್ಠಾನ-ಶಕ್ತಿ, ಬಂದರು ಸಂಪರ್ಕ, ಹೆಚ್ಚಿನ ಸಂಚಾರ ಸಾಂದ್ರತೆ ಮತ್ತು ಖನಿಜ ಮತ್ತು ಸಿಮೆಂಟ್ ಕಾರಿಡಾರ್ ಬಗ್ಗೆ ಪ್ರಕಟಿಸಲಾಗಿದೆ(budget 2024). ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

6. ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಆರಂಭ; ತುರ್ತು ವಿಚಾರಣೆಗೆ ಸುಪ್ರೀಂ ನಕಾರ
ನವದೆಹಲಿ/ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತಿರುವ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಹಿಂದುಗಳು ಪೂಜೆ ಸಲ್ಲಿಸಬಹುದು ಎಂದು ವಾರಾಣಸಿ ನ್ಯಾಯಾಲಯವು (Varanasi Court) ಅನುಮತಿ ನೀಡಿದ ಬೆನ್ನಲ್ಲೇ ಗುರುವಾರ (ಫೆಬ್ರವರಿ 1) ಮಸೀದಿಯಲ್ಲಿ ಹಿಂದುಗಳು ಪೂಜೆ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಿರುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂಬುದಾಗಿ ಮುಸ್ಲಿಮರು ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ (Supreme Court) ನಿರಾಕರಿಸಿದೆ ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

7. 10ನೇ ತರಗತಿಗೆ 7 ವಿಷಯ, 3 ಭಾಷೆ, 12ನೇ ತರಗತಿಗೆ 6 ವಿಷಯ: ಸಿಬಿಎಸ್‌ಇ ಶಿಫಾರಸು
ಹೊಸದಿಲ್ಲಿ: 10ನೇ ತರಗತಿಗೆ 7 ಹೆಚ್ಚುವರಿ ವಿಷಯಗಳು, 3 ಭಾಷೆಗಳು ಹಾಗೂ 12ನೇ ತರಗತಿಗೆ ಆರು ಪಠ್ಯ ವಿಷಯಗಳ (CBSE Text) ಪ್ರಶ್ನೆಪತ್ರಿಕೆಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಶಿಫಾರಸು (CBSE Recommendation) ಮಾಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

8. ಇನ್ನು ಆನ್‌ಲೈನ್‌ನಲ್ಲೇ ವಿವಾಹ ನೋಂದಣಿ; ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ
ಬೆಂಗಳೂರು: ಹಿಂದು ವಿವಾಹ ನೋಂದಣಿ ಕಾಯ್ದೆಯಡಿ ವಿವಾಹ ನೋಂದಣಿ ಬಯಸುವವರು ಇನ್ನುಮುಂದೆ ಉಪ ನೋಂದಣಾಧಿಕಾರಿ (ಸಬ್‌ ರಿಜಿಸ್ಟ್ರಾರ್‌) ಕಚೇರಿಗಳಿಗೆ ಅಲೆಯುವ ಅಗತ್ಯವಿರುವುದಿಲ್ಲ. ಯಾಕೆಂದರೆ, ಇನ್ನುಮುಂದೆ ಆನ್‌ಲೈನ್‌ನಲ್ಲೇ ವಿವಾಹ ನೋಂದಣಿ ಮಾಡಿಸಬಹುದಾಗಿದೆ. ಈ ಸಂಬಂಧ ವಿವಾಹ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಹಿಂದು ವಿವಾಹ ಕಾಯ್ದೆ 2024 ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ (Cabinet Meeting) ಅನುಮೋದನೆ ನೀಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

9. ಲೈಸೆನ್ಸ್‌ ಪಡೆಯದೆ ಡ್ರೋನ್‌ ಹಾರಾಟ-ಮಾರಾಟ; ಡ್ರೋನ್‌ ಪ್ರತಾಪ್‌ ವಿರುದ್ಧ ಮತ್ತೊಂದು ದೂರು
ಬೆಂಗಳೂರು: ಬಿಗ್‌ಬಾಸ್‌ ಸೀಸನ್‌ 10ರ ರನ್ನರ್ ಅಪ್‌ ಆಗಿರುವ ಡ್ರೋನ್‌ ಪ್ರತಾಪ್‌ (Drone Pratap) ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.‌ ಈಗಾಗಲೇ ಪ್ರತಾಪ್‌ ವಿರುದ್ಧ ಬಿಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಂತರ ಡ್ರೋನ್ ಪ್ರತಾಪ್ ಅವರ ಬ್ಯುಸಿನೆಸ್ ಪಾರ್ಟನರ್ ಸಾರಂಗ್ ಮಾನೆಗೆ ಮೋಸ ಮಾಡಿರುವ ಸುದ್ದಿಯು ಬೆಳಕಿಗೆ ಬಂದಿತ್ತು. ಇದೀಗ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

10. ಕಾಂಗ್ರೆಸ್ ‌ಸರ್ಕಾರದ ವಿರುದ್ಧ ನಿಲುವು; ‌’ವೈರಲ್ ಆಂಟಿ’ ಫುಡ್‌ ಸ್ಟಾಲ್‌ಗೆ ಬೀಗ!
ಹೈದರಾಬಾದ್:‌ ಆಳುವ ಸರ್ಕಾರಗಳು ಯಾವ ಪಕ್ಷವೇ ಆಗಿರಲಿ, ಅವು ಎಲ್ಲರ ಪರವಾಗಿ ಕೆಲಸ ಮಾಡಬೇಕು. ಆದರೆ, ತೆಲಂಗಾಣದ ಹೈದರಾಬಾದ್‌ನಲ್ಲಿ ಬೀದಿ ಬದಿ ಫುಡ್‌ ಸ್ಟಾಲ್‌ ಇಟ್ಟುಕೊಂಡಿದ್ದ ಮಹಿಳೆಯೊಬ್ಬರು ರಾಜ್ಯ ಸರ್ಕಾರದ ವಿರುದ್ಧ ನಿಲುವು ತಾಳಿದ್ದಕ್ಕೆ, ಅವರ ಹೋಟೆಲ್‌ಅನ್ನು ಸ್ಥಗಿತಗೊಳಿಸಲಾಗಿದೆ. ಕುಮಾರಿ ಆಂಟಿ (Kumari Aunty) ಎಂದೇ ಖ್ಯಾತಿಯಾಗಿರುವ ಮಹಿಳೆಯ ಗೂಡಂಗಡಿ ವ್ಯಾಪಾರ ಸ್ಥಗಿತಗೊಳಿಸಿದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ, ಮಧ್ಯಪ್ರವೇಶಿಸಿರುವ ಮುಖ್ಯಮಂತ್ರಿ ರೇವಂತ್‌ ರೆಡ್ಡಿ (Revanth Reddy), ಗೂಡಂಗಡಿ ವ್ಯಾಪಾರ ಸ್ಥಗಿತಗೊಳಿಸದಂತೆ ಆದೇಶಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

Exit mobile version