Site icon Vistara News

Crime News : ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ, ಆಘಾತಕಾರಿ ವಿಡಿಯೊ ಇಲ್ಲಿದೆ

crime news

crime news

ಬೆಂಗಳೂರು: ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಜೀವನ್​ಭಿಮಾನಗರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ನಾಯಿ ಸಾಕುವ ವಿಚಾರದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಈ ಕುರಿತು ಪೊಲೀಸ್​ ದೂರು ದಾಖಲಾಗಿಲ್ಲ ಎಂದು ಹೇಳಲಾಗಿದೆ.

ಬಾಡಿಗೆ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಗಲಾಟೆ ಎಂದು ಹೇಳಲಾಗಿದೆ. ರಾತ್ರಿ ವೇಳೆ ನಾಲ್ಕೈದು ಜನ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಮದ್ಯರಾತ್ರಿ ಒಂದು ಗಂಟೆ ಸಂಧರ್ಭದಲ್ಲಿ ನಡೆದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ

ನಾಯಿ ಸಾಕುವ ವಿಚಾರದಲ್ಲಿ ಮೊದಲಿನಿಂದಲೂ ನಡೆಯುತ್ತಿದ್ದ ಗಲಾಟೆ ತಾರಕ್ಕೇರಿದೆ ಎಂದು ಹೇಳಲಾಗಿದೆ. ನಾಯಿ ಸಾಕಬಾರದು ಎಂದು ಮನೆ ಮಾಲೀಕರು ಹೇಳಿದ್ದ ಹೊರತಾಗಿಯೂ ಬಾಡಿಗೆದಾರರು ಒಪ್ಪಿರಲಿಲ್ಲ. ನಾಯಿ ಸಾಕುವ ಕಾರಣ ಮನೆ ಖಾಲಿ ಮಾಡುವಂತೆ ಮಾಲೀಕರು ಹೇಳಿದ್ದರು. ಈ ವಿಚಾರದಲ್ಲಿ ಅವರಿಬ್ಬರ ನಡುವೆ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ. ತಾವು ದೂರು ನೀಡಿದರೂ ಎಫ್ಐಆರ್ ದಾಖಲಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ಲೈಂಗಿಕ ಕ್ರಿಯೆಗೆ ಒಪ್ಪದ ಅನಾಥ ಮಹಿಳೆಯನ್ನು ಜಜ್ಜಿ ಕೊಂದ ದುಷ್ಟ; ಶೇಖ್‌ ಎಂಬಾತನ ಬಂಧನ

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ (Mumbai) ವ್ಯಕ್ತಿಯೊಬ್ಬ ಬೀದಿ ಬದಿ ಮಲಗುತ್ತಿದ್ದ ಮಹಿಳೆಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಮನೆ ಇಲ್ಲದೆ, ಸಂಬಂಧಿಕರು ಇಲ್ಲದೆ ಅನಾಥರಾಗಿದ್ದ 40 ವರ್ಷದ ಮಹಿಳೆಯು (Homeless Woman) ಲೈಂಗಿಕ ಕ್ರಿಯೆಗೆ ಒಪ್ಪಲಿಲ್ಲ ಎಂದು ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ (Murder) ಮಾಡಿದ್ದಾನೆ. ಮಹಿಳೆಯನ್ನು ಕೊಂದು, ಬೀದಿ ಬದಿ ಎಸೆದು ಹೋಗಿದ್ದ ದುಷ್ಟನನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಫೆಬ್ರವರಿ 2ರಂದು ಪೊಲೀಸರು ರಂಜಾನ್‌ ಶೇಖ್‌ (37) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತನು ಕಳೆದ ಜನವರಿಯಲ್ಲಿ ಮುಂಬೈ ನಗರದ ಸೆವ್ರೀ ಎಂಬಲ್ಲಿ ಮಹಿಳೆಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಘಟನೆ ನಡೆದು ಹಲವು ದಿನಗಳ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಎಸಗಿರುವ ಹೀನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಜನವರಿ 14ರಂದು ನಡೆದಿದ್ದು ಏನು?

ಯಾರೂ ದಿಕ್ಕಿಲ್ಲದ, ಸಪ್ನಾ ಸತೀಶ್‌ ಬಾಥಮ್‌ ಎಂಬ ಮಹಿಳೆಯು ಮುಂಬೈ ಸೆಂಟ್ರಲ್‌ನ ಬೀದಿ ಬದಿ ಮಲಗುತ್ತಿದ್ದರು. ಇವರ ಅಸಹಾಯಕ ಸ್ಥಿತಿಯನ್ನು ಮನಗಂಡಿದ್ದ ರಂಜಾನ್‌ ಶೇಖ್‌, ಜನವರಿ 14ರಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದ. ನಿನಗೆ ಮದ್ಯ ಕೊಡಿಸುತ್ತೇನೆ ಬಾ ಎಂದು ಕರೆದುಕೊಂಡು ಹೋಗಿದ್ದ. ಸಿವ್ರಿ ಪ್ರದೇಶಕ್ಕೆ ಕರೆದುಕೊಂಡು ಹೋದ ಆತ, ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದಾನೆ. ಆದರೆ, ಈತನ ಬೇಡಿಕೆ ಈಡೇರಿಸಲು ಮಹಿಳೆಯು ಒಪ್ಪಿಲ್ಲ. ಎಷ್ಟು ಒತ್ತಾಯ ಮಾಡಿದರೂ ಒಪ್ಪಿಲ್ಲ.

ಇದನ್ನೂ ಓದಿ :

ಇದರಿಂದ ಕುಪಿತಗೊಂಡ ರಂಜಾನ್‌ ಶೇಖ್‌, ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನಲ್ಲಿ ಕೆಲಸ ಮಾಡುವ ಈತ, ಮಹಿಳೆಯನ್ನು ಕೊಂದು ರಸ್ತೆ ಬದಿ ಬಿಸಾಡಿ ಪರಾರಿಯಾಗಿದ್ದಾನೆ. ಜನವರಿ 22ರಂದು ರಸ್ತೆ ಬದಿ ಮಹಿಳೆಯ ಶವ ಪತ್ತೆಯಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ, ಮಹಿಳೆ ಇದ್ದ ಪ್ರದೇಶದಲ್ಲಿ ರಂಜಾನ್‌ ಶೇಖ್‌ ಪದೇಪದೆ ಸುತ್ತಾಡಿರುವ ದೃಶ್ಯಗಳು ಲಭಿಸಿವೆ. ಈ ದೃಶ್ಯಗಳನ್ನು ಆಧರಿಸಿ ಪೊಲೀಸರು ಶೇಖ್‌ನನ್ನು ಬಂಧಿಸಿದ್ದಾರೆ.

Exit mobile version