Site icon Vistara News

Other Backward Classes: 2011ರ ನಂತರ ನೀಡಿದ್ದ ಒಬಿಸಿ ಪ್ರಮಾಣಪತ್ರಗಳನ್ನು ರದ್ದು ಮಾಡಿದ ಕೋಲ್ಕೊತಾ ಹೈಕೋರ್ಟ್​​

Calcutta High Court

ಕೋಲ್ಕತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ 2011ರಿಂದ ಪಶ್ಚಿಮ ಬಂಗಾಳದಲ್ಲಿ ನೀಡಲಾಗುತ್ತಿರುವ ಇತರ ಹಿಂದುಳಿದ ವರ್ಗಗಳ (Other Backward Classes) ಎಲ್ಲಾ ಪ್ರಮಾಣಪತ್ರಗಳನ್ನು ಕೋಲ್ಕೊತಾ ಹೈಕೋರ್ಟ್ ರದ್ದುಗೊಳಿಸಿದೆ. ಅದು ಹೊಸದಾಗಿ ಪಟ್ಟಿಗೆ ಸೇರ್ಪಡೆ ಮಾಡಲಾಗಿರುವ ಜಾತಿಗಳಿಗೆ ಅನ್ವಯ. ಅಂತೆಯೇ ಇದು ಹಾಲಿ ಈ ಸಮುದಾಯದ ಜನರು ಹೊಂದಿರುವ ಉದ್ಯೋಗಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಆದೇಶವನ್ನು ಸ್ವೀಕರಿಸಿವುದಿಲ್ಲ ಎಂದು ಹೇಳಿದ್ದಾರೆ. ತಪಶಿಲಿ ಸಮುದಾಯಕ್ಕೆ ನೀಡಲಾದ ಹಕ್ಕುಗಳನ್ನು ಕಸಿದುಕೊಳ್ಳುವ ಆದೇಶವನ್ನು ತಾವು ಒಪ್ಪುವುದಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ.

2012ರಲ್ಲಿ ಅಂಗೀಕರಿಸಿದ ರಾಜ್ಯ ಸರ್ಕಾರದ ಹೊಸ ಕಾನೂನಿನ ಅಡಿಯಲ್ಲಿ ಹಲವಾರು ಸಮುದಾಯಗಳಿಗೆ ಇತರ ಹಿಂದುಳಿದ ವರ್ಗಗಳ ಮೀಸಲಾತಿ ನೀಡಲಾಗಿತ್ತು. ಅದನ್ನು ನ್ಯಾಯಾಲಯ ರದ್ದುಗೊಳಿಸಿದೆ. ಆದಾಗ್ಯೂ, ನ್ಯಾಯಮೂರ್ತಿಗಳಾದ ತಪಬ್ರತಾ ಚಕ್ರವರ್ತಿ ಮತ್ತು ರಾಜಶೇಖರ್ ಮಂಥಾ ಅವರು, 2010 ಕ್ಕಿಂತ ಮೊದಲು ವರ್ಗೀಕರಿಸಿದ ಒಬಿಸಿಯ 66 ವರ್ಗಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಈ ವರ್ಗಗಳ ಕುರಿತು ಕೋರ್ಟ್​ಗೆ ಸಲ್ಲಿಸಲಾಗಿದ್ದ ಅರ್ಜಿಗಳಲ್ಲಿ ಪ್ರಶ್ನಿಸಲಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅರ್ಜಿಯಲ್ಲಿ ಏನಿತ್ತು?

“2010 ರ ನಂತರ ನೀಡಲಾದ ಎಲ್ಲಾ ಒಬಿಸಿ ಪ್ರಮಾಣಪತ್ರಗಳು 1993 (ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಆಯೋಗ) ಕಾಯ್ದೆಯನ್ನು ಕಡೆಗಣಿಸಿವೆ ಎಂದು 2011 ರಲ್ಲಿ ಸಲ್ಲಿಸಲಾದ ಪಿಐಎಲ್​ನಲ್ಲಿ ಪ್ರಶ್ನಿಸಲಾಗಿತ್ತು . ವಾಸ್ತವವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಅವರ ಸರಿಯಾದ ಪ್ರಮಾಣಪತ್ರಗಳನ್ನು ನೀಡಲಾಗಿಲ್ಲ. 2010ರ ನಂತರ ನೀಡಲಾದ ಎಲ್ಲ ಒಬಿಸಿ ಪ್ರಮಾಣಪತ್ರಗಳನ್ನು ವಿಭಾಗೀಯ ಪೀಠ ರದ್ದುಪಡಿಸಿದೆ. 2010ಕ್ಕಿಂತ ಮೊದಲು ಒಬಿಸಿ ಪ್ರಮಾಣಪತ್ರ ಹೊಂದಿರುವವರು ಕೋಲ್ಕೊತಾ ಹೈಕೋರ್ಟ್ ವಿಚಾರಣೆಯ ಭಾರವನ್ನು ಹೊರುವುದಿಲ್ಲ” ಎಂದು ವಕೀಲ ಸುದೀಪ್ತಾ ದಾಸ್ ಗುಪ್ತಾ ವಾದಿಸಿದ್ದರು.

ಆದಾಗ್ಯೂ, ಈ ಆದೇಶವು ಈಗಾಗಲೇ ಸೇವೆಯಲ್ಲಿರುವ ಅಥವಾ ಮೀಸಲಾತಿಯಿಂದ ಪ್ರಯೋಜನ ಪಡೆದ ಅಥವಾ ರಾಜ್ಯದ ಯಾವುದೇ ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ವಿಯಾದ ಹೊರಹಾಕಲ್ಪಟ್ಟ ವರ್ಗಗಳ ನಾಗರಿಕರ ಸೇವೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಮತಾ ವಿರೋಧ

ಪಶ್ಚಿಮ ಬಂಗಾಳ ಸರ್ಕಾರ ಪರಿಚಯಿಸಿದ ಒಬಿಸಿ ಮೀಸಲಾತಿ ಕೋಟಾ ಮುಂದುವರಿಯುತ್ತದೆ. ಮನೆ-ಮನೆ ಸಮೀಕ್ಷೆ ನಡೆಸಿದ ನಂತರ ನಾವು ಮಸೂದೆ ಸಿದ್ಧಪಡಿಸಿದ್ದೇವೆ. ಅದನ್ನು ಕ್ಯಾಬಿನೆಟ್ ಮತ್ತು ವಿಧಾನಸಭೆ ಅಂಗೀಕರಿಸಿದೆ ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ: Bomb Threat : ಗೃಹ ಸಚಿವಾಲಯಕ್ಕೆ ಬಾಂಬ್ ಬೆದರಿಕೆ; ದೆಹಲಿಯಲ್ಲಿ ಆತಂಕ

ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಜನರಿಗೆ ನೀಡುವ ಸೌಲಭ್ಯಗಳನ್ನು ತಡೆಯಲು ಬಿಜೆಪಿ ಪಿತೂರಿ ನಡೆಸಿದೆ. ಅಂತಹ ಧೈರ್ಯವನ್ನು ಅವರು ಹೇಗೆ ತೋರಿಸುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. ನ್ಯಾಯಾಲಯದ ತೀರ್ಪು ತಪಶಿಲಿ ಸಮುದಾಯಕ್ಕೆ ಮೀಸಲಾತಿಯನ್ನು ರದ್ದುಗೊಳಿಸುವ ಬಿಜೆಪಿಯ ಪ್ರಯತ್ನಗಳ ಭಾಗವಾಗಿದೆ ಎಂದು ಪಕ್ಷದ ಹಿರಿಯ ಮುಖಂಡ ಮತ್ತು ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.

ಒಬ್ಬ ನ್ಯಾಯಾಧೀಶರು ‘ನಾನು ಆರ್‌ಎಸ್‌ಎಸ್‌ ವ್ಯಕ್ತಿ’ ಎಂದು ಹೇಳುತ್ತಿದ್ದಾರೆ/ ಇನ್ನೊಬ್ಬರು ಬಿಜೆಪಿಗೆ ಸೇರುತ್ತಾರೆ… ತಪಶಿಲಿಗಳಿಗೆ ಮೀಸಲಾತಿಯನ್ನು ರದ್ದುಗೊಳಿಸಲು ಮೋದಿ ಬಯಸಿದ್ದಾರೆ. ನಾನು ಅದಕ್ಕೆ ಅವಕಾಶ ನೀಡುವುದಿಲ್ಲ. ಅವರು ಆದಿವಾಸಿಗಳ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತಾರೆ ಎಂದು ಅವರು ಅಭಿಷೇಕ್ ಹೇಳಿದ್ದಾರೆ.

Exit mobile version