ನವದೆಹಲಿ: ಭಾರತೀಯ ಷೇರು ಮಾರುಕಟ್ಟೆಗೆ (Stock Market) ಹಾನಿ ಮಾಡಬೇಕು ಎಂಬ ಉದ್ದೇಶದಿಂದ ಅಮೆರಿಕದ ಮೂಲಕ ಶಾರ್ಟ್ ಸೆಲ್ಲಿಂಗ್ ಸಂಸ್ಥೆ ಹಿಂಡೆನ್ಬರ್ಗ್ ರೀಸರ್ಚ್ ಎಲ್ಎಲ್ಸಿ ಬಿಡುಗಡೆ ಮಾಡಿರುವ ವರದಿ (Hindenburg Report) ಠುಸ್ ಎಂದಿದೆ. ಸೋಮವಾರ ಭಾರತೀಯ ಷೇರು ಮಾರುಕಟ್ಟೆಗೆ ಯಾವುದೇ ಯಾನಿ ಉಂಟಾಗಿಲ್ಲ ಎಂಬುದಾಗಿ ವರದಿಯಾಗಿದೆ. ಈ ಮೂಲಕ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯ ಅಧ್ಯಕ್ಷರಾದ ಮಾಧಾಬಿ ಪುರಿ ಬುಚ್ ಮತ್ತು ಅವರ ಪತಿ ಧವಳ್ ಬುಚ್ ವಿರುದ್ಧದ ಹಿಂಡನ್ಬರ್ಗ್ ಆರೋಪಗಳನ್ನು ಭಾರತೀಯ ಹೂಡಿಕೆದಾರರು ಸಾರಾಸಗಟು ತಿರಸ್ಕರಿಸಿದ್ದಾರೆ.
Indians treated to Hindenberg Report be like🤣..
— Ashutosh Srivastava 🇮🇳 (@sri_ashutosh08) August 12, 2024
शेयर मार्केट :- #HindenburgResearchReport#HindenbergReport #Hindenburg #HindenburgResearch #StockMarket pic.twitter.com/UqMJtqFaZP
ಸೆಬಿ ಮುಖ್ಯಸ್ಥರ ವಿರುದ್ಧದ ಗಂಭೀರ ಆರೋಪಗಳ ಬಗ್ಗೆ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸುವುದಾಗಿ ಪ್ರಧಾನಿ ಘೋಷಿಸಬೇಕು ಎಂದು ರಾಹುಲ್ ಗಾಂಧಿ ಭಾನುವಾರ ವೀಡಿಯೊ ಸಂದೇಶದಲ್ಲಿ ಒತ್ತಾಯಿಸಿದರು, “ಸಣ್ಣ ಚಿಲ್ಲರೆ ಹೂಡಿಕೆದಾರರ ಸಂಪತ್ತನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವ ಸೆಕ್ಯುರಿಟೀಸ್ ನಿಯಂತ್ರಕದ ಸಮಗ್ರತೆಗೆ ಅದರ ಅಧ್ಯಕ್ಷರ ವಿರುದ್ಧದ ಆರೋಪಗಳಿಂದ ತೀವ್ರವಾಗಿ ಹಾನಿಯಾಗಿದೆ ” ಎಂದು ಹೇಳಿದರು. ಹೀಗಾಗಿ ಸೋಮವಾರ ವರದಿಯು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆ ವರದಿಯನ್ನು ಭಾರತೀಯ ಹೂಡಿಕೆದಾರರು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.
ಆದಾಗ್ಯೂ, ಸೆನ್ಸೆಕ್ಸ್ ಇಂಟ್ರಾ-ಡೇ ವಹಿವಾಟಿನಲ್ಲಿ 300 ಪಾಯಿಂಟ್ಗಳ ಜಿಗಿತ ಕಂಡು ಅಲ್ವಾವಧಿಯವರೆಗೆ 80,000 ಅಂಕಗಳ ಮಟ್ಟವನ್ನು ದಾಟಿತ್ತು. ಇದು ಮಾರುಕಟ್ಟೆಯಒಟ್ಟಾರೆ ಆರ್ಥಿಕ ಬೆಳವಣಿಗೆಯಲ್ಲಿ ಭಾರತೀಯ ಹೂಡಿಕೆದಾರರ ನಂಬಿಕೆಯನ್ನು ಪ್ರತಿಬಿಂಬಿಸಿದೆ. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ ಕೇವಲ 57 ಪಾಯಿಂಟ್ಸ್ ಕುಸಿದು 79,648 ಕ್ಕೆ ನಿಂತಿದ್ದು. ನಿಫ್ಟಿ 20 ಪಾಯಿಂಟ್ಸ್ ಕುಸಿದು 24,347 ಕ್ಕೆ ತಲುಪಿದೆ. ಹೀಗಾಗಿ ಭಾರೀ ಕುಸಿತ ಕಾಣುತ್ತದೆ ಎಂಬ ಅಂದಾಜಿ ಸುಳ್ಳಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಸೆಬಿ ಅಧ್ಯಕ್ಷೆ ಮಾಧಾಬಿ ಪುರಿ ಬುಚ್ ಮತ್ತು ಅವರ ಪತಿ ಧವಳ್ ಬುಚ್ ವಿರುದ್ಧ ಹಿಂಡೆನ್ಬರ್ಗ್ ಅವರ ಆರೋಪಗಳ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ದೃಢತೆಯನ್ನು ಪ್ರದರ್ಶಿಸಿದೆ, ನಕಾರಾತ್ಮಕ ವರದಿಯ ಹೊರತಾಗಿಯೂ, ದೇಶೀಯ ಷೇರು ಮಾರುಕಟ್ಟೆಗಳು ಅವರನ್ನು ತಿರಸ್ಕರಿಸಿದೆ.
ಜಾಗತಿಕ ಮಾರುಕಟ್ಟೆಗಳಿಂದ ಸಕಾರಾತ್ಮಕ ಸೂಚನೆ ಪಡೆದುಕೊಂಡು ಮಾರುಕಟ್ಟೆಯು ಹಿಂಡೆನ್ಬರ್ಗ್ ಆರೋಪಗಳಿಗೆ ಕಿಮ್ಮತ್ತು ನೀಡಲಿಲ್ಲ. ಹಿಂಡೆನ್ಬರ್ಗ್ ವರದಿಯು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಮತ್ತು ಗೂಳಿಯ ಓಟವು ಉತ್ತಮವಾಗಿದೆ ಎಂದು ಮಾರುಕಟ್ಟೆ ವೀಕ್ಷಕರು ಹೇಳಿದ್ದಾರೆ.
ತಪ್ಪಾದ ವರದಿ
ಹಿಂಡೆನ್ಬರ್ಗ್ನಂಥ ಆಧಾರವಿಲ್ಲದ ವರದಿಗಳಿಗೆ ಪ್ರತಿಕ್ರಿಯಿಸುವ ಬದಲು ಶಾಂತವಾಗಿರುವಂತೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಹೂಡಿಕೆದಾರರಿಗೆ ಭಾನುವಾರ ಸಲಹೆ ನೀಡಿತ್ತು. ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್ಬರ್ಗ್ ರಿಸರ್ಚ್ ಮಾಡಿದ ಆರೋಪಗಳಿಗೆ ಸೆಬಿ ಅಧ್ಯಕ್ಷರು ಮತ್ತು ಅವರ ಪತಿ ವಿವರವಾದ ಪ್ರತಿಕ್ರಿಯೆ ನೀಡಿದ್ದಾರೆ. ಶೋಕಾಸ್ ನೋಟಿಸ್ಗೆ ಉತ್ತರಿಸುವ ಬದಲು, ಅವರು ಸೆಬಿಯ ವಿಶ್ವಾಸಾರ್ಹತೆಯ ಮೇಲೆ ದಾಳಿ ಮಾಡಲು ಮತ್ತು ಅದರ ಅಧ್ಯಕ್ಷರ ಚಾರಿತ್ರ್ಯ ಹರಣ ಮಾಡಲು ಪ್ರಯತ್ನಿಸಲು ನಿರ್ಧರಿಸಿರುವುದು ದುರದೃಷ್ಟಕರ ಎಂದು ಹೇಳಿದರು.
ದಂಪತಿ ಎಲ್ಲಾ ಆರೋಪಗಳನ್ನು ದೃಢವಾಗಿ ವಿವರಣೆ ನೀಡಿದ್ದಾರೆ. ಸೆಬಿಯಲ್ಲಿ ಮಾಧಾಬಿ ಅವರ ಅಧಿಕಾರಾವಧಿಗೆ ಮುಂಚಿತವಾಗಿ ಹೂಡಿಕೆ ನಡೆದಿದೆ ಎಂಬುದಾಗಿ ಹೇಳಿದ್ದಾರೆ.