ಮೀರತ್: ಉತ್ತರ ಪ್ರದೇಶದ ಮೀರತ್ ನ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ಡಜನ್ ಗಟ್ಟಲೆ ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ (Physical Abuse) ಪ್ರಕರಣ ಬಯಲಾಗಿದೆ. ಅವರಿಗೆ ಲೈಂಗಿಕ ಕಿರುಕುಳ ನೀಡುವ ವಿಡಿಯೊ ಮಾಡಿಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂಬುದಾಗಿ ಆರೋಪಿಯನ್ನು ಬಂಧಿಸಿದ ಪೊಲೀಸರು ಹೇಳಿದ್ದಾರೆ. ಗ್ರಾಮದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ 37 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಫ್ಐಆರ್‌ನಲ್ಲಿ ಆರು ಬಲಿಪಶುಗಳನ್ನು ಹೆಸರಿಸಲಾಗಿದೆ. ಅವರಲ್ಲಿ ನಾಲ್ವರು ಅಪ್ರಾಪ್ತ ವಯಸ್ಕರು ಎಂದು ಪೊಲೀಸರು ಹೇಳಿದ್ದಾರೆ.
ಸಾಮಗ್ರಿಗಳನ್ನು ಖರೀದಿಸಲು ಅಂಗಡಿಗೆ ಬಂದ ಮಕ್ಕಳನ್ನು ಆರೋಪಿ ಗುರಿಯಾಗಿಸಿಕೊಂಡಿದ್ದ. ಅವರಿಗೆ ಮಾದಕವಸ್ತುಗಳನ್ನು ಬೆರೆಸಿದ ಪಾನೀಯಗಳನ್ನು ನೀಡುತ್ತಿದ್ದ. ನಂತರ ಅವರನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದ, ತನ್ನ ಕೃತ್ಯವನ್ನು ಚಿತ್ರೀಕರಿ ನಂತರ ಅವರು ವೀಡಿಯೊಗಳನ್ನು ಬಳಸಿಕೊಂಡು ಮಕ್ಕಳ ಮೇಲೆ ಬೆದರಿಕೆ ಒಡ್ಡುತ್ತಿದ್ದ. ವೀಡಿಯೊಗಳನ್ನು ಬಹಿರಂಗ ಮಾಡುವುದಾಗಿ ಅವರಿಂದ ಹಣ ಸುಲಿಗೆ ಮಾಡುತ್ತಿದ್ದ.
ಒಂದು ದಿನ ನಾನು ಆರೋಪಿಯ ಅಂಗಡಿಯಿಂದ ವಸ್ತುಗಳನ್ನು ಖರೀದಿಸಲು ಹೋಗಿದ್ದೆ. ಆತ ನನಗೆ ತಂಪು ಪಾನೀಯ ನೀಡಿದ. ಅದನ್ನು ಕುಡಿದ ನಂತರ ನಾನು ಮೂರ್ಛೆ ಹೋದೆ. ಎಚ್ಚರವಾದ ನಂತರ, ನಾನು ನೋವಿಗೆ ಒಳಗಾದೆ. ಕೆಲವು ದಿನಗಳ ನಂತರ ನಾನು ನೋವಿನ ಬಗ್ಗೆ ನನ್ನ ತಾಯಿಗೆ ಹೇಳಿದೆ. ಅವರು ನನ್ನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಂತ್ರಸ್ತರಲ್ಲಿ ಒಬ್ಬರು ತಿಳಿಸಿದ್ದಾರೆ.
ಸಂತ್ರಸ್ತರ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಲೈಂಗಿಕ ದೌರ್ಜನ್ಯವು ನಮ್ಮನ್ನು ತೀವ್ರವಾಗಿ ಆಘಾತಗೊಳಿಸಿದೆ. ನನ್ನ ಮಗ ತಿನ್ನುವುದನ್ನು ಅಥವಾ ನೀರು ಕುಡಿಯುವುದನ್ನು ನಿಲ್ಲಿಸಿದ್ದಾನೆ. ಯಾರೊಂದಿಗೂ ಮಾತನಾಡುವುದಿಲ್ಲ” ಎಂದು ಸಂತ್ರಸ್ತರಲ್ಲಿ ಒಬ್ಬನ ತಾಯಿ ಹೇಳಿದ್ದಾರೆ.
ಇನ್ನೊಬ್ಬರು ಘಟನೆ ಬಳಿಕ ಮಗ ಮನೆಯಿಂದ ಓಡಿಹೋಗಿದ್ದಾನೆ. ಹಿಂತಿರುಗಲು ನಿರಾಕರಿಸಿದ್ದಾನೆ ಎಂದು ಹೇಳಿದ್ದಾರೆ. ಆತ ನಮ್ಮೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿಲ್ಲ. ಘಟನೆಯ ನಂತರ ತಲೆನೋವು ಜಾಸ್ತಿಯಾಗಿದೆ ಎಂದು ಹೇಳಿದ್ದಾನೆ ಎಂದು ಅವರು ಹೇಳಿದ್ದಾರೆ.
ಅಪರಾಧವನ್ನು ವರದಿ ಮಾಡದಂತೆ ತಡೆಯಲು ದೌರ್ಜನ್ಯದ ನಂತರ ಸಂತ್ರಸ್ತರು ಆರೋಪಿ ಒತ್ತಡ ಹೇರಿದ್ದ. ಪೊಲೀಸರು ನಮ್ಮ ಮನೆಗೆ ಬಂದಾಗ ಮಾತ್ರ ಏನಾಯಿತು ಎಂದು ನಮಗೆ ತಿಳಿಯಿತು. ನನ್ನ ಮಗ ಕೆಲವು ದಿನಗಳ ಹಿಂದೆ ಕಾರಣವನ್ನು ಹೇಳದೆ 3,000 ರೂಪಾಯಿ ತೆಗೆದುಕೊಂಡು ಹೋಗಿದ್ದ. ಅದನ್ನು ಆ ವ್ಯಕ್ತಿಗೆ ನೀಡಿದ್ದಾನೆ ಎಂದು ಈಗ ನನಗೆ ತಿಳಿಯಿತು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.
ಇದನ್ನೂ ಓದಿ: Kangana Ranaut : ರೈತರನ್ನು ಬಾಂಗ್ಲಾ ಪ್ರತಿಭಟನಾಕಾರರಿಗೆ ಹೋಲಿಸಿದ ಕಂಗನಾ; ಅಂತರ ಕಾಪಾಡಿಕೊಂಡ ಬಿಜೆಪಿ
ಆರೋಪಿಯು ದೀರ್ಘಕಾಲದಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಅದರೆ, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರವೇ ಗ್ರಾಮಸ್ಥರಿಗೆ ಈ ಬಗ್ಗೆ ತಿಳಿದಿದೆ.
ಕೈಲಾಶ್ ಸತ್ಯಾರ್ಥಿ ಫೌಂಡೇಶನ್ ಸಂತ್ರಸ್ತರ ಪರವಾಗಿ ಹೋರಾಡುವುದಾಗಿ ಹೇಳಿದೆ. “ನಮ್ಮ ಫೌಂಡೇಶನ್ ಆರೋಪಿಗಳ ವಿರುದ್ಧ ಕಾನೂನು ಹೋರಾಟ ನಡೆಸಲಿದೆ. ಮಕ್ಕಳಿಗೆ ನ್ಯಾಯಕ್ಕಾಗಿ ಒತ್ತಾಯಿಸಲಿದೆ” ಎಂದು ಕೈಲಾಶ್ ಸತ್ಯಾರ್ಥಿ ಮಕ್ಕಳ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಸೆಂಗಾರ್ ಹೇಳಿದ್ದಾರೆ. ಅಸ್ವಾಭಾವಿಕ ಲೈಂಗಿಕತೆ, ಕ್ರಿಮಿನಲ್ ಬೆದರಿಕೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳಡಿ ಎಫ್ಐಆರ್ ದಾಖಲಿಸಲಾಗಿದೆ.