Site icon Vistara News

Rat Cyborgs | ಮಾಯಾವಿ ಸಾಯ್‌ಬಾಗ್ ಇಲಿಗಳನ್ನು ಸೃಷ್ಟಿಸಿದ ಭಾರತೀಯ ವಿಜ್ಞಾನಿಗಳು! ಸೇನೆಗೆ ಹೇಗೆ ನೆರವು?

Rat Cyborgs By India

ನವದೆಹಲಿ: ಭಾರತೀಯ ರಕ್ಷಣಾ ವಿಜ್ಞಾನಿಗಳು ವಿಶಿಷ್ಟ ಸಂಶೋಧನೆಯಲ್ಲಿ ಯಶಸ್ವಿಯಾಗಿದ್ದಾರೆ. ಅವರು ‘ರ್ಯಾಟ್ ಸಾಯ್‌ಬಾಗ್ಸ್'(Rat Cyborgs) ಮೊದಲ ಬ್ಯಾಚ್ ಸೃಷ್ಟಿಸಿದ್ದಾರೆ. ಪ್ರಯೋಗಾಲಯಗಳಲ್ಲಿ ಈ ಬಗ್ಗೆ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಈ ಸಾಯ್‌‌ಬಾಗ್ಸ್ ಇಲಿಗಳು, ಮುಂಬೈ ದಾಳಿಯಂಥ ವಿಶಿಷ್ಟ ಅಪಾಯಕಾರಿ ಸನ್ನಿವೇಶಗಳಲ್ಲಿ ರಕ್ಷಣಾ ಪಡೆಗಳಿಗೆ ಲೈವ್ ಫೀಡ್ ಒದಗಿಸಲು ನೆರವು ನೀಡುತ್ತವೆ. ವೈರಿಗಳು ನಮ್ಮ ಬಿಲ್ಡಿಂಗ್ ಅಥವಾ ಇನ್ನಾವುದೇ ಪ್ರದೇಶಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾಗ, ಈ ಇಲಿಗಳನ್ನು ಬಳಸಿಕೊಂಡು, ಅಲ್ಲಿನ ನೈಜ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ನೆರವಾಗಲಿದೆ.

ಹೈದ್ರಬಾದ್‌ನ ವಿಜ್ಞಾನಿಗಳ ತಂಡವು ಈ ಇಲಿಗಳನ್ನು ಸೃಷ್ಟಿಸಿದೆ. ಇವು ಬೇರೇನೂ ಅಲ್ಲ, ಪ್ರಯೋಗಾಲಯಗಳಲ್ಲಿ ಬಳಸಲಾಗುವ ಇಲಿಗಳೇ ಆಗಿವೆ. ಈ ಇಲಿಗಳ ಮೆದುಳಿನಲ್ಲಿ ವಿಜ್ಞಾನಿಗಳು ಎಲೆಕ್ಟ್ರೋಡ್(ವಿದ್ಯುತ್ ಪ್ರಚೋದಕ) ಅಳವಡಿಸಿರುತ್ತಾರೆ. ಈ ಮೂಲಕ ಇಲಿಗಳು ಹೊರಗಿನಿಂದ ಸಿಗ್ನಲ್‌ಗಳನ್ನು ಪಡೆದುಕೊಳ್ಳುತ್ತವೆ. ಇಲಿಯ ಬೆನ್ನಿಗೆ ಕಟ್ಟಲಾಗಿರುವ ಚಿಕ್ಕ ಕ್ಯಾಮೆರಾ ಮೂಲಕ ಲೈವ್ ಇಮೇಜ್‌ಗಳನ್ನು ಸೆರೆ ಹಿಡಿಯಬಹುದು. ಹಾಗೆಯೇ, ಹೊರಗಿನಿಂದ ಸಿಗ್ನಲ್‌ಗಳನ್ನು ಇಲಿ ಬ್ರೈನ್‌ಗೆ ಕಳುಹಿಸಿ, ತಮಗೆ ಹೇಗೆ ಬೇಕೋ ಹಾಗೆ ನಿಯಂತ್ರಿಸಬಹುದು.

ವೈರಿಯ ಪಡೆಯ ವಶದಲ್ಲಿರುವ ಬಿಲ್ಡಿಂಗ್‌ಗಳಲ್ಲಿ ಈ ಇಲಿಗಳನ್ನು ಒಳ ಬಿಡಲಾಗತ್ತದೆ. ಈ ಇಲಿಗಳು ಯಾರ ಅರಿವಿಗೆ ಬಾರದಂತೆ ಎಲ್ಲಿಬೇಕಾದರೂ ಹೋಗಬಹುದು. ಗೋಡೆಯನ್ನು ಏರಬಹುದು ಮತ್ತು ಮರೆಮಾಚುವ ತಮ್ಮ ನೈಸರ್ಗಿಕ ಸಾಮರ್ಥ್ಯವನ್ನು ಬಳಸಿಕೊಂಡು ಶತ್ರುಗಳಿಂದ ಕಣ್ಮಿಗೆ ಮಣ್ಣೆರೆಚುಬಹುದು. ಈಗ ಬಾಹ್ಯ ಸಂಕೇತಗಳನ್ನು ಬಳಸಿಕೊಂಡು ಕುಶಲತೆಯಿಂದ ನಿರ್ವಹಿಸುವ ವಿಧಾನವನ್ನು ವಿಜ್ಞಾನಿಗಳು ಪರಿಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ.

ಏನಿದ ಸಾಯ್‌ಬಾಗ್ಸ್?
ಈಗಾಗಲೇ ಹೇಳಿದಂತೆ ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿ ಬಳಸುವ ಇಲಿಗಳೇ ಆಗಿವೆ ಇವು. ಸಾಯ್‌ಬಾಗ್ ವ್ಯವಸ್ಥೆಯು ಇಲಿಯ ಮೆದುಳಿನಲ್ಲಿ ಮೈಕ್ರೊಎಲೆಕ್ಟ್ರೋಡ್‌ಗಳನ್ನು ಅಳವಡಿಸಲಾಗಿರುತ್ತದೆ. ಅದರ ಮೂಲಕ ಹೊರಗಿನ ವಿದ್ಯುತ್ ಪ್ರಚೋದಕಗಳನ್ನು ಅದರ ನಡವಳಿಕೆಗಳನ್ನು ನಿಯಂತ್ರಿಸಲು ಸಂಕೇತಗಳನ್ನು ಮೆದುಳಿಗೆ ತಲುಪಿಸಬಹುದು. ತುರ್ತು ಪರಿಸ್ಥಿತಿಯಲ್ಲಿ ಅಪಾಯಕಾರಿ ಸನ್ನಿವೇಶದಲ್ಲಿ ಶತ್ರುಗಳ ಸಾಮರ್ಥ್ಯ, ಅಲ್ಲಿನ ನೈಜ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಭದ್ರತಾಪಡೆಗಳು ಈ ಇಲಿಗಳನ್ನು ಬಳಸಿಕೊಳ್ಳುತ್ತವೆ.

ಇದನ್ನೂ ಓದಿ | ವಿಸ್ತಾರ Explainer | ಪಾಕಿಸ್ತಾನದ ಡ್ರೋನ್‌ ಉರುಳಿಸಲಿದೆ ಭಾರತೀಯ ಸೇನೆಯ ಗಿಡುಗ, ಹೇಗಿದರ ಆಪರೇಷನ್‌?

Exit mobile version