ಬೆಂಗಳೂರು: ಪ್ರಯಾಣಿಕ ಕಾರುಗಳ ತಯಾರಿಕೆಯಲ್ಲಿ ದಿನದಿಂದ ದಿನಕ್ಕೆ ಹೊಸತನ ತೋರುತ್ತಿರುವ ಟಾಟಾ ಮೋಟಾರ್ಸ್ ಮತ್ತೊಂದು ಮುಂಚೂಣಿ ಯೋಜನೆಯೊಂದನ್ನು ಪ್ರಕಟಿಸಿದೆ. ಅದೇನೆಂದರೆ ಸಿಎನ್ಜಿ ಕಾರುಗಳಲ್ಲಿ (CNG Car) ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ. ನಮ್ಮಲ್ಲೇ ಮೊದಲು ಎಂಬುದು ಟಾಟಾ ಮೋಟಾರ್ಸ್ನ ಇತ್ತೀಚಿನ ಮಾರಾಟ ಕಾರ್ಯತಂತ್ರ. ಅಂತೆಯೇ ಕಂಪನಿಯು ಇತ್ತೀಚೆಗೆ ನಡೆದ ಭಾರತ್ ಮೊಬಿಲಿಟಿ ಎಕ್ಸ್ ಪೋ 2024 ರಲ್ಲಿ ನೆಕ್ಸಾನ್ ಐ-ಸಿಎನ್ ಜಿಯನ್ನು ಪ್ರದರ್ಶಿಸಿದೆ. ಇದು ಭಾರತದ ಮೊದಲ ಟರ್ಬೊ ಪೆಟ್ರೋಲ್ ಸಿಎನ್ ಜಿ ವಾಹನವಾಗಿದೆ. ಈಗ, ಕಂಪನಿಯು ಟಿಯಾಗೊ ಐ-ಸಿಎನ್ ಜಿ ಮತ್ತು ಟಿಗೋರ್ ಐ-ಸಿಎನ್ ಜಿಯ ಆಟೊಮ್ಯಾಟಿಕ್ ಗೇರ್ಬಾಕ್ಸ್ ವೇರಿಯೆಂಟ್ ಕೂಡ ಬಿಡುಗಡೆ ಮಾಡಿದೆ. ಇದು ಭಾರತದ ಮೊದಲ ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿರು ಸಿಎನ್ ಜಿ ಕಾರುಗಳಾಗಿವೆ.
ಹೆಚ್ಚುತ್ತಿರುವ ಇಂಧನ ಬೆಲೆಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳು ಅನಿವಾರ್ಯವಾಗುತ್ತಿವೆ. ಆದರೆ ಹೆಚ್ಚಿನ ಬೆಲೆ, ಚಾರ್ಜಿಂಗ್ ಮೂಲಸೌಕರ್ಯದ ಕೊರತೆ ಖರೀದಿದಾರರನ್ನು ಸಿಎನ್ಜಿ ಕಡೆಗೆ ವಾಲುವಂತೆ ಮಾಡಿದೆ. ಅನೇಕ ತಯಾರಕರು ಸಿಎನ್ ಜಿಯನ್ನು ಕಾರುಗಳನ್ನು ಮಾರುಕಟ್ಟೆಗೆ ಇಳಿಸಿದೆ.
ಕಡಿಮೆ ಚಾಲನೆಯ ವೆಚ್ಚಗಳು, ಹೆಚ್ಚಿನ ದಕ್ಷತೆಯೊಂದಿಗೆ ಸಿಎನ್ ಜಿ ಅನೇಕ ಕಾರು ಖರೀದಿದಾರರಿಗೆ ಕಾರ್ಯಸಾಧ್ಯವಾದ ಆಯ್ಕೆಯಾಗಿ ಹೊರಹೊಮ್ಮಿದೆ. ಟಾಟಾ ಮೋಟಾರ್ಸ್ ಹೊರತುಪಡಿಸಿ, ಹ್ಯುಂಡೈ, ಮಾರುತಿ ಸುಜುಕಿ ಮತ್ತು ಟೊಯೊಟಾ ಸಹಭಾಗಿತ್ವದಲ್ಲಿ ಸಿಎನ್ ಜಿ ವಾಹನಗಳನ್ನು ನೀಡುತ್ತಿವೆ. ಆದಾಗ್ಯೂ, ಸಿಎನ್ ಜಿಯಲ್ಲಿ ಆಟೊಮ್ಯಾಟಿಕ್ ಗೇರ್ಬಾಕ್ಸ್ ತಂದಿರುವುದು ಟಾಟಾ ಎಂಬುದು ಅವರ ಹೆಗ್ಗಳಿಕೆ.
ಟಿಯಾಗೊ ಸಿನ್ಜಿ ಕಾರಿನ ವಿಶೇಷತೆ
ಟಿಯಾಗೊ ಐ-ಸಿಎನ್ ಜಿ ಎಎಂಟಿಯನ್ನು ಎಕ್ಸ್ ಟಿಎ, ಎಕ್ಸ್ ಝಡ್ಎ +, ಎಕ್ಸ್ ಝಡ್ ಎ + ಡಿಟಿ ಮತ್ತು ಎಕ್ಸ್ ಝಡ್ ಎನ್ ಆರ್ ಜಿ ಎಂಬ ನಾಲ್ಕು ವೇರಿಯೆಂಟ್ಗಳಲ್ಲಿ ಬಿಡುಗಡೆ ಮಾಡಲಾಗಿದ್ದು. ಎಕ್ಸ್ ಟಿಎಗೆ ಆರಂಭಿಕ ಬೆಲೆ 7.9 ಲಕ್ಷ ರೂ. ಟಿಗೋರ್ ಐ-ಸಿಎನ್ ಜಿ ಎಎಂಟಿ ಬಗ್ಗೆ ಹೇಳುವುದಾದರೆ ಎಕ್ಸ್ ಝಡ್ಎ ಮತ್ತು ಎಕ್ಸ್ ಝಡ್ಎ + ಎಂಬ ಎರಡು ವೇರಿಯೆಂಟ್ಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತದೆ. ಬೆಲೆಗಳು ರೂ.8.85 ಲಕ್ಷದಿಂದ ರೂ.9.55 ಲಕ್ಷಗಳವರೆಗೆ (ಎರಡೂ ಬೆಲೆಗಳು ಎಕ್ಸ್ ಶೋರೂಂ) ಇವೆ.
ಇದನ್ನೂ ಓದಿ : Tata Motors : ಟಾಟಾದ ಕಾರುಗಳಿಗೆ ಭರ್ಜರಿ 1.25 ಲಕ್ಷ ತನಕ ಡಿಸ್ಕೌಂಟ್; ಯಾವ ಕಾರಿಗೆ ಎಷ್ಟು? ಇಲ್ಲಿದೆ ವಿವರ
ಟಾಟಾ ಮೋಟಾರ್ಸ್ ಟಿಯಾಗೊ, ಟಿಯಾಗೊ ಎನ್ ಆರ್ ಜಿ ಮತ್ತು ಟಿಗೋರ್ ನೊಂದಿಗೆ ಹೊಸ ಬಣ್ಣವನ್ನು ಪರಿಚಯಿಸುತ್ತಿದೆ. ಟಿಯಾಗೊ ಐ-ಸಿಎನ್ ಜಿ ಎಎಂಟಿ ಟೊರ್ನಾಡೊ ಬ್ಲೂ, ಟಿಯಾಗೊ ಎನ್ ಆರ್ ಜಿ ಗ್ರಾಸ್ ಲ್ಯಾಂಡ್ ಬೀಜ್ ಮತ್ತು ಟಿಗೋರ್ ನೊಂದಿಗೆ ಹೊಸ ಮೆಟಿಯೋರ್ ಕಂಚಿನ ಛಾಯೆಯನ್ನು ಪಡೆಯುತ್ತದೆ.
ಡ್ಯುಯಲ್ ಸಿಲಿಂಡರ್
ಪವರ್ ಟ್ರೇನ್ ಮತ್ತು ಸ್ಪೆಕ್ಸ್: ಟಾಟಾ ಮೋಟಾರ್ಸ್ ತನ್ನ ಐ-ಸಿಎನ್ ಜಿ ಶ್ರೇಣಿಯೊಂದಿಗೆ ಪ್ರಶಂಸನೀಯ ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನ ನೀಡುತ್ತದೆ. ಇದನ್ನು ಬೂಟ್ ಪ್ರದೇಶದಲ್ಲಿ ಇಡಲಾಗಿದೆ. ಸಾಂಪ್ರದಾಯಿಕ ಸಿಂಗಲ್ ಸಿಲಿಂಡರ್ ಸಿಎನ್ ಜಿ ವಾಹನಗಳಲ್ಲಿ ಬೂಟ್ನಲ್ಲಿ ಸಾಮಗ್ರಿಗಳನ್ನು ಇಡುವುದಕ್ಕೆ ಜಾಗ ಇರುವುದಿಲ್ಲ. ಆದರೆ ಇಲ್ಲಿ ಈ ಸಮಸ್ಯೆ ಇಲ್ಲ.
ಪವರ್ ಟ್ರೇನ್ ಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಅದೇ 1.2 ಲೀಟರ್ 3-ಸಿಲಿಂಡರ್ ಎನ್ ಎ ಪೆಟ್ರೋಲ್ ರೆವೊಟ್ರಾನ್ ಎಂಜಿನ್ ಟಿಗೋರ್, ಟಿಯಾಗೊ ಮತ್ತು ಟಿಯಾಗೊ ಎನ್ ಆರ್ ಜಿಯ ಐ-ಸಿಎನ್ ಜಿ ವೇರಿಯೆಂಟ್ಗಲಲ್ಲಿ ನೀಡಲಾಗಿದೆ. ಸಿಂಗಲ್ ಇಸಿಯು, ಸಿಎನ್ ಜಿ ಮೋಡ್ ನಲ್ಲಿ ಎಂಜಿನ್ ಸ್ಟಾರ್ಟ್, ಆಟೋ ಸ್ವಿಚಿಂಗ್ ಮತ್ತು ಇತರ ಫೀಚರ್ಗಲನ್ನು ಪಡೆಯುತ್ತದೆ. ಟಾಟಾ ಮೋಟಾರ್ಸ್ ಪ್ರತಿ ಕೆ.ಜಿ.ಗೆ 28.06 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಿದೆ.