Site icon Vistara News

IIP Growth : ಕೈಗಾರಿಕಾ ಬೆಳವಣಿಗೆ ಜನವರಿಯಲ್ಲಿ 5.2%ಕ್ಕೆ ಏರಿಕೆ, ಸತತ 3ನೇ ತಿಂಗಳಿಗೆ ವಿಸ್ತರಣೆ

IIP

IIP

ನವ ದೆಹಲಿ: ಕಳೆದ ಜನವರಿಯಲ್ಲಿ ಕೈಗಾರಿಕಾ ವಲಯದ ಬೆಳವಣಿಗೆ 5.2%ಕ್ಕೆ ಏರಿಕೆಯಾಗಿದೆ. (Index of Industrial growth) ಸತತ ಮೂರನೇ ತಿಂಗಳಿಗೆ ವಿಸ್ತರಣೆಯಾಗಿದೆ ಎಂದು ಮಾರ್ಚ್‌ 10ರಂದು ಬಿಡುಗಡೆಯಾಗಿರುವ ಅಂಕಿ ಅಂಶಗಳು ತಿಳಿಸಿವೆ. 2022ರ ಡಿಸೆಂಬರ್‌ನಲ್ಲಿ (IIP Growth) ಐಐಪಿಯು 4.3%ರಿಂದ 4.7%ಕ್ಕೆ ಚೇತರಿಸಿತ್ತು.

2022-23ರ ಮೊದಲ ಹತ್ತು ತಿಂಗಳುಗಳಲ್ಲಿ ಐಐಪಿ ಬೆಳವಣಿಗೆ 5.4%ರಷ್ಟಿತ್ತು. 2021-22ರ ಇದೇ ಅವಧಿಯಲ್ಲಿ 13.7% ಇತ್ತು.

ಐಐಪಿ ಆರ್ಥಿಕ ಚಟುವಟಿಕೆಗಳ ಪ್ರಮುಖ ಮಾನದಂಡಗಳಲ್ಲೊಂದು. ಇತ್ತೀಚಿನ ಅಂಕಿ ಅಂಶಗಳು ಕೋವಿಡ್‌ ಬಿಕ್ಕಟ್ಟಿನ ಮಂದಗತಿಯ ಬಳಿಕ ಆರ್ಥಿಕತೆಯ ಚೇತರಿಕೆಯನ್ನು ಬಿಂಬಿಸಿದೆ. 2022-23ರ ಮೊದಲ 10 ತಿಂಗಳು ಐಐಪಿ ಬೆಳವಣಿಗೆ 5.4% ಕ್ಕೆ ಇಳಿದಿತ್ತು. 2021-22ರ ಇದೇ ಅವಧಿಯಲ್ಲಿ 13.7% ರ ಪ್ರಗತಿ ದಾಖಲಿಸಿತ್ತು.

Exit mobile version