ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಅರಮನೆಯ ಮೈದಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಬೆಳಗ್ಗೆ ೪ ಗಂಟೆಯಿಂದಲೇ ಸಾಲು ಸಾಲಾಗಿ ಯೋಗ ಪಟುಗಳು ಆಗಮಿಸುತ್ತಿದ್ದು, ನಿಗದಿತ ಸ್ಥಳದಲ್ಲಿ ಸೇರಿದ್ದಾರೆ. ಯೋಗ ದಿನಾಚರಣೆಯ ಕಾರ್ಯಕ್ರಮ ಇನ್ನು ಕೆಲವೇ ಕೆಲವು ಕ್ಷಣಗಳಲ್ಲಿ ಆರಂಭವಾಗಲಿದೆ.
ಅರಮನೆ ಎದುರಿನ ಜಯಮಾರ್ತಂಡ ಗೇಟ್ ನಿಂದ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಚಿವರೊಂದಿಗೆ ಆಗಮಿಸಲಿದ್ದಾರೆ.
ಅರಮನೆ ಹಿಂಭಾಗದ ಕರಿಕಲ್ಲು ತೊಟ್ಟಿ ಗೇಟ್‌ನಲ್ಲಿ ಗಣ್ಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅರಮನೆಯ ಆವರಣದ ಉಳಿದ ಎರಡು ಧ್ವಾರಗಳಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ.
ಪ್ರಧಾನಿ ಜತೆಗೆ ಯೋಗಾಭ್ಯಾಸ ಮಾಡುವವರ ವಿವರ:
ರಾಜ್ಯ ಸರ್ಕಾರದ 12 ಸಾವಿರ ಮತ್ತು ಕೇಂದ್ರದ 3 ಸಾವಿರ ಮಂದಿ ಯೋಗ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ. ಎಸ್ಪಿಐಎಸ್ಎಸ್-2,500, ಜಿಎಸ್‌ಎಸ್ಎಸ್-233, ಯೋಗ-201, ಜಿಎಸ್‌ಎಸ್-1,773, ಡಿಡಿಪಿಐ-1098, ಡಿಡಿಪಿಯು 595, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು-1541, ಕಾಲೇಜು ಶಿಕ್ಷಣ ಇಲಾಖೆ-418, ನ್ಯಾಚುರೋಪತಿ, ಯೋಗ ಕಾಲೇಜುಗಳಿಂದ 133, ಆಯುರ್ವೇದ ಕಾಲೇಜು-158, ಎಂಎಂಸಿ ಹಾಗೂ ಅರ್‌ಐ-6 ಮಂದಿ ಪಾಲ್ಗೊಳ್ಳುವವರು.
ಡಿಎಫ್‌ಆರ್‌ಎಲ್-11, ಡಿಎಚ್‌ಒ-87, ಲಡಾಕ್ ಅಂಡ್ ನಾರ್ತ್ ಈಸ್ಟ್ ಸ್ಕೂಡೆಂಟ್ಸ್ -50, ಜನರಲ್ ಪಬ್ಲಿಕ್ – 631, ರೈಲ್ವೆ ಇಲಾಖೆ- 47, ಆಯುಷ್-48, ಎನ್‌ಎಸ್‌ಎಸ್-148, ಉಜಿರೆ ಎಸ್‌ಡಿಎಂಸಿ ಎನ್‌ವೈಸಿ-35, ಜಿಲ್ಲಾ ಆಯುಷ್ ಕಚೇರಿ-72, ಅರಣ್ಯ ಇಲಾಖೆ-31, ಮೈಸೂರು ಅರಮನೆ-39, ಎಚ್‌ಡಬ್ಲೂಸಿ ಮೈಸೂರು-55, ತೃತೀಯ ಲಿಂಗಿಗಳು-14, ಭಾರತ್ ಕ್ಯಾನ್ಸರ್ ಆಸ್ಪತ್ರೆಯ – 13 ಮಂದಿ ಭಾಗವಹಿಸಲಿದ್ದಾರೆ.
ವಿಶೇಷಚೇತನರ ಇಲಾಖೆ-123, ಬಿಸಿಎಂ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳು-475, ಎನ್‌ಸಿಸಿ ಗ್ರೂಪ್ ಕಮಾಂಡೆಂಟ್-53, ಕೆಎಸ್ಆರ್‌ಪಿ-93, ಸರಸ್ವತಿಪುರಂ ಮಹಾಬೋದಿ-27, ಕಾವೇರಿ ಶಿಕ್ಷಣ ಸಂಸ್ಥೆ-533, ಪಾರಸ್ ಜೈನ್ಸ್ಕೂ ಲ್-31, ಕಾಮಧೇನು ಕಾನ್ವೆಂಟ್-34, ಡಿಎವಿ
ಪಬ್ಲಿಕ್ ಸ್ಕೂಲ್-91, ಬಿ.ಎಂ.ಶ್ರೀ ಯುಜಿ-5, ಅಪೋಲೋ ಆಸ್ಪತ್ರೆ -12, ಸಿಎಫ್‌ಟಿಆರ್-64, ಸಿಎಫ್‌ಟಿಆರ್ ಸ್ಕೂಲ್-53, ಐಸಿಎಐ-11, ಮೈಸೂರು ಮಹಾನಗರ ಪಾಲಿಕೆ-21, ಆರ್‌ಎಂಆರ್ ಪಿಬಿಎಆರ್‌ಸಿ-20, ಸರ್ಕಾರಿ ಹೈಟೆಕ್ -6, ಸ್ವಯಂಸೇವಕರು -225, ಡೆಫ್ ಸ್ಕೂಲ್-27, ಯೂತ್ ಫಾರ್ ಸೇವಾ-57, ಗಿರಿಯಾ ಭೋವಿ ಪಾಳ್ಯ-8,
ಸಿವಿಆರ್ ಜ್ಯುವೆಲರ್ಸ್-5, ಇನ್ಫೋಸಿಸ್ -4, ಬಿಇಒ ಕಚೇರಿ-10 ಹೀಗೆ ಯೋಗ ದಿನಾಚರಣೆಯಲ್ಲಿ ಯಾರಿಗೆಲ್ಲಾ ಅವಕಾಶ ಮಾಡಿಕೊಡಬೇಕೆಂಬುದನ್ನು ನಿಗದಿಪಡಿಸಲಾಗಿದೆ.
ಇದನ್ನೂ ಓದಿ |Yoga Day 2022 | ಐತಿಹಾಸಿಕ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಕ್ಷಣಗಣನೆ