Site icon Vistara News

ರಸ್ತೆಯಲ್ಲೇ ಮೈಕಲ್‌ ಜಾಕ್ಸನ್‌ನಂತೆ ಡಾನ್ಸ್‌ ಮಾಡಿದ ಜೊಮ್ಯಾಟೊ ಡೆಲಿವರಿ ಬಾಯ್;‌ ನೀವೂ ನೋಡಿ

Zomato Delivery Boy

Internet applauds as Zomato delivery boy dances on job to Uljha Jiya; Watch The Video

ನವದೆಹಲಿ: ‘ಪ್ರತಿಭೆ ಎಂಬುದು ಯಾರಪ್ಪನ ಸ್ವತ್ತೂ ಅಲ್ಲ’ ಎಂಬ ಮಾತಿದೆ. ಅದರಲ್ಲೂ, ಆಧುನಿಕ ಸೋಷಿಯಲ್‌ ಮೀಡಿಯಾ (Social Media) ಕಾಲದಲ್ಲಿ ಸಾಮಾನ್ಯ ಜನರ ಪ್ರತಿಭೆಗೆ ಹತ್ತಾರು ವೇದಿಕೆಗಳಿವೆ. ಹಾಡು, ನೃತ್ಯ, ಮಾತು, ಕಾಮಿಡಿ, ನಟನೆ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಯಾರು ಬೇಕಾದರೂ ಜನಪ್ರಿಯತೆ, ಖ್ಯಾತಿ, ಹಣ ಗಳಿಸಬಹುದು. ಈ ಮಾತಿಗೆ ನಿದರ್ಶನ ಎಂಬಂತೆ, ಜೊಮ್ಯಾಟೊ ಡೆಲಿವರಿ ಬಾಯ್‌ (Zomato Delivery Boy) ಒಬ್ಬ ನಡುರಸ್ತೆಯಲ್ಲೇ ಬಾಲಿವುಡ್‌ ಹಾಡಿಗೆ ನೃತ್ಯ ಮಾಡಿದ್ದು, ರಾತ್ರೋರಾತ್ರಿ ಜನರ ಮನ ಗೆದ್ದಿದ್ದಾನೆ. ಈತನು ಸ್ಟೆಪ್ಸ್‌ ಹಾಕಿದ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಹೌದು, ಜೊಮ್ಯಾಟೊ ಜಾಕೆಟ್‌ ಧರಿಸಿದ ಯುವಕನು ಬಾಲಿವುಡ್‌ ಹಾಡೊಂದಿಗೆ ಭರ್ಜರಿಯಾಗಿ ಡಾನ್ಸ್‌ ಮಾಡಿದ್ದಾನೆ. ಇತ್ತೀಚೆಗೆ ಬಿಡುಗಡೆಯಾದ ಶಾಹಿದ್‌ ಕಪೂರ್‌ ನಟನೆಯ ‘ತೇರಿ ಬಾತೋ ಮೆ ಮೈ ಉಲ್ಝಾ ಜಿಯಾ’ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದ್ದಾನೆ. ಮೊಸಾನ್2ಒ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜೊಮ್ಯಾಟೊ ಬಾಯ್ ಡಾನ್ಸ್‌ ವಿಡಿಯೊವನ್ನು ಅಪ್‌ಲೋಡ್‌ ಮಾಡಲಾಗಿದೆ. ವಿಡಿಯೊವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ಸಾವಿರಾರು ಜನ ಕಮೆಂಟ್‌ ಮಾಡಿದ್ದಾರೆ.

ವೈರಲ್‌ ಆಗಿರುವ ವಿಡಿಯೊ ಇಲ್ಲಿದೆ

ಜೊಮ್ಯಾಟೊ ಡೆಲಿವರಿ ಬಾಯ್ ಡಾನ್ಸ್‌ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಭರ್ಜರಿಯಾಗಿ ಡಾನ್ಸ್‌ ಮಾಡಿದ್ದೀಯ ಬ್ರದರ್”‌ ಎಂದು ಒಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಮತ್ತೊಬ್ಬರು, “ಈ ಡಾನ್ಸ್‌ ವಿಡಿಯೊ ವೈರಲ್‌ ಆದ ಬಳಿಕ ಜೊಮ್ಯಾಟೊ ಷೇರುಗಳ ಮೌಲ್ಯ ಜಾಸ್ತಿಯಾಗಿದೆ” ಎಂದು ಕಾಲೆಳೆದಿದ್ದಾರೆ. “ಈ ಡೆಲಿವರಿ ಬಾಯ್‌ ಡಾನ್ಸ್‌ ಮಾಡಿದ ಕಾರಣಕ್ಕಾಗಿಯೇ ನಾನು ಆರ್ಡರ್‌ ಮಾಡಿದ ಮಟರ್‌ ಚಿಕನ್‌ ತರುವುದು ತಡವಾಗಿದೆ” ಎಂದು ಇನ್ನೊಬ್ಬರು ಕಿಚಾಯಿಸಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಯುವಕನ ಡಾನ್ಸ್‌ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Virat Kohli: ಕೊಹ್ಲಿ- ಶುಭ್​ಮನ್​ ​ ಡಾನ್ಸ್​ಗೆ ಅಭಿಮಾನಿಗಳು ಪಿಧಾ, ಇಲ್ಲಿದೆ ವಿಡಿಯೊ

ಕೆಲ ತಿಂಗಳ ಹಿಂದಷ್ಟೇ ಹೈದರಾಬಾದ್‌ನಲ್ಲಿ ಫುಡ್‌ ಡೆಲಿವರಿ ಬಾಯ್‌ ಒಬ್ಬ ಕುದುರೆ ಸವಾರಿಯಲ್ಲಿ ತೆರಳಿ ಫುಡ್‌ ಡೆಲಿವರಿ ಮಾಡಿದ್ದ. ಟ್ರಕ್ ಚಾಲಕರು ನಡೆಸಿದ ಪ್ರತಿಭಟನೆಯ ನಡುವೆ ಹೈದರಾಬಾದ್‌ನ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡು ಬಂದಿದ್ದವು.

ಪೆಟ್ರೋಲ್‌ ಅಲಭ್ಯತೆಯ ಹೊತ್ತಿನಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್‌ ಒಬ್ಬ ನಗರದ ಬೀದಿಗಳಲ್ಲಿ ಕುದುರೆಯೇರಿ ನಾಗಾಲೋಟ ಮಾಡಿದ್ದ. ಈತನ ವೀಡಿಯೊ ವೈರಲ್‌ ಆಗಿತ್ತು. ಇಂಪೀರಿಯಲ್ ಹೋಟೆಲ್‌ನ ಪಕ್ಕದಲ್ಲಿರುವ ಚಂಚಲಗುಡಕ್ಕೆ ಜೊಮ್ಯಾಟೊ ಡೆಲಿವರಿ ಏಜೆಂಟ್ ಕುದುರೆಯ ಮೇಲೆ ತೆರಳಿದ್ದು ವಿಡಿಯೊದಲ್ಲಿ ದಾಖಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version