ಚೆನ್ನೈ : ಮಿನಿ ಹರಾಜಿನ ವೇಳೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಸೇರಿದ್ದ ಯುವ ಬ್ಯಾಟರ್ ಸಮೀರ್ ರಿಜ್ವಿ (Sameer Rizwi) ಮಂಗಳವಾರ (ಮಾರ್ಚ್ 26) ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಚೊಚ್ಚಲ ಬ್ಯಾಟಿಂಗ್ ಅವಕಾಶ ಪಡೆದರು. ಆದರೆ, ಅವರು ಮೊದಲ ಪಂದ್ಯದಲ್ಲಿಯೇ ಗಮನ ಸೆಳೆಯುವ ಜತೆಗೆ ಹೊಸ ದಾಖಲೆಯೊಂದನ್ನು ಸೃಷ್ಟಿಸಿದರು. ಬಲಗೈ ಬ್ಯಾಟರ್ ಕಳೆದ ವಾರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಂಡದ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಪಾದಾರ್ಪಣೆ ಮಾಡಿದ್ದರು. ಆದಾಗ್ಯೂ, ಆ ಪಂದ್ಯವನ್ನು ಸಿಎಸ್ಕೆ ಆರು ವಿಕೆಟ್ಗಳಿಂದ ಗೆದ್ದ ಕಾರಣ ಸಮೀರ್ ರಿಜ್ವಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದರೆ, ಗುಜರಾತ್ ವಿರುದ್ಧ ಎಲ್ಲರ ಗಮನ ಸೆಳೆದರು.
Sameer Rizvi has announced his arrival at the #TATAIPL 😎
— IndianPremierLeague (@IPL) March 26, 2024
Two confident strokes with maximum result 💪
Head to @JioCinema & @StarSportsIndia to watch the match LIVE 💻📱#CSKvGT pic.twitter.com/fKnWHV3Ltz
ಗುಜರಾತ್ ಟೈಟಾನ್ಸ್ ವಿರುದ್ಧ ಶಿವಂ ದುಬೆ ಮತ್ತು ಡ್ಯಾರಿಲ್ ಮಿಚೆಲ್ ಉತ್ತಮ ಪ್ರದರ್ಶನ ನೀಡಿದ್ದರಿಂದ ರಿಜ್ವಿಗೆ ಈ ಬಾರಿಯೂ ಆಡಲುವ ಅವಕಾಶ ಕ್ಷೀಣಿಸಿತ್ತು. ಆದಾಗ್ಯೂ, ರಶೀದ್ ಖಾನ್ 19 ನೇ ಓವರ್ನಲ್ಲಿ ದುಬೆಯನ್ನು 51 ರನ್ಗಳಿಗೆ ಔಟ್ ಮಾಡಿದರು. ಹೀಗಾಗಿ ಸಮೀರ್ ರಿಜ್ವಿಯನ್ನು ಸಿಎಸ್ಕೆ ತಂಡದ ಮ್ಯಾನೇಜ್ಮೆಂಟ್ ಬ್ಯಾಟಿಂಗ್ಗೆ ಕಳುಹಿಸಿತು.
ಎಲೈಟ್ ಪಟ್ಟಿಗೆ ಸಮೀರ್ ರಿಜ್ವಿ ಸೇರ್ಪಡೆ
ಸಮೀರ್ ರಿಜ್ವಿ ಅವರ ಪ್ರತಿಭೆ ಎಲ್ಲರಿಗೂ ತಿಳಿದಿದ್ದರೂ, ವಿಶ್ವದ ಅತ್ಯುತ್ತಮ ಸ್ಪಿನ್ನರ್ಗಳಲ್ಲಿ ಒಬ್ಬರಾದ ರಶೀದ್ ಖಾನ್ ಅವರ ಎಸೆತಕ್ಕೆ ದೊಡ್ಡ ಸಾಧನೆ ಮಾಡಿದರು. ಅದು ಅವರ ಪಾಲಿಗೆ ಐಪಿಎಲ್ನ ಮೊದಲ ಎಸೆತ. 20 ವರ್ಷದ ಆಟಗಾರ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎದುರಿಸಿದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ದಾಖಲೆಮಾಡಿದರು.
ಬಲಗೈ ಬ್ಯಾಟ್ಸ್ಮನ್ ಒಂದು ಮೊಣಕಾಲಿನ ಮೇಲೆ ಕುಳಿತು ಅಫ್ಘಾನ್ ಸೂಪರ್ಸ್ಟಾರ್ ಎಸೆತಕ್ಕೆ ಸಿಕ್ಸರ್ ಬಾರಿಸಿದರು. ಅದೇ ಓವರ್ನಲ್ಲಿ ಉತ್ತರ ಪ್ರದೇಶದ ಯುವ ಆಟಗಾರ ರಶೀದ್ಗೆ ಮತ್ತೊಂದು ಸಿಕ್ಸರ್ ಬಾರಿಸಿದರು. ಅವರು ಅಂತಿಮವಾಗಿ 14 ರನ್ ಬಾರಿಸಿದರು.
ಇದನ್ನೂ ಓದಿ: PL 2024 : ಚೆನ್ನೈಗೆ ಮಣಿದ ಗುಜರಾತ್ ಟೈಟಾನ್ಸ್, ಚಾಂಪಿಯನ್ನರಿಗೆ ಸತತ ಎರಡನೇ ಜಯ
ಸಿಎಸ್ಕೆ ಬ್ಯಾಟರ್ ತಮ್ಮ ಚೊಚ್ಚಲ ಐಪಿಎಲ್ ಇನಿಂಗ್ಸ್ನಲ್ಲಿ ಕೇವಲ 6 ಎಸೆತಗಳನ್ನು ಎದುರಿಸಿದರೂ, ಎಲೈಟ್ ಪಟ್ಟಿಗೆ ಪ್ರವೇಶಿಸಲು ಇದು ಸಾಕಾಯಿತು. ಐಪಿಎಲ್ ಇತಿಹಾಸದಲ್ಲಿ ತಮ್ಮ ವೃತ್ತಿಜೀವನದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಒಂಬತ್ತನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಬ್ ಕ್ವಿನಿ 2009ರಲ್ಲಿ ಈ ಸಾಧನೆ ಮಾಡಿದ್ದರು.
ಈ ಮೈಲಿಗಲ್ಲನ್ನು ಸಾಧಿಸಿದ ಮೊದಲ ಭಾರತೀಯ ಅನಿಕೇತ್ ಚೌಧರಿ. 2017 ರಲ್ಲಿ ಈ ಸಾಧನೆ ಮಾಡಿದ್ದರು. ಸಮೀರ್ ರಿಜ್ವಿ ಈ ಸಾಧನೆ ಮಾಡಿದ ಸಿಎಸ್ಕೆಯ ಮೊದಲ ಆಟಗಾರ ಮತ್ತು ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Hitting the first ball in IPL career for a six
— Deepu Narayanan (@deeputalks) March 26, 2024
Rob Quiney
Kevon Cooper
Andre Russell
Carlos Brathwaite
Aniket Choudhary
Javon Searles
Siddesh Lad
Mahesh Theekshana
Sameer Rizvi#CSKvGT
ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ:
- ರಾಬ್ ಕ್ವಿನಿ
- ಕೆವೊನ್ ಕೂಪರ್
- ಆಂಡ್ರೆ ರಸೆಲ್
- ಕಾರ್ಲೋಸ್ ಬ್ರಾಥ್ವೇಟ್
- ಅನಿಕೇತ್ ಚೌಧರಿ
- ಜಾವೊನ್ ಸೀರ್ಲೆಸ್
- ಸಿದ್ದೇಶ್ ಲಾಡ್
- ಮಹೀಶ್ ದೀಕ್ಷಾ
- ಸಮೀರ್ ರಿಜ್ವಿ