Sameer Rizvi : ಚೊಚ್ಚಲ ಪಂದ್ಯದಲ್ಲಿಯೇ ದಾಖಲೆ ನಿರ್ಮಿಸಿದ ಸಿಎಸ್​ಕೆ ಯುವ ಆಟಗಾರ - Vistara News

ಪ್ರಮುಖ ಸುದ್ದಿ

Sameer Rizvi : ಚೊಚ್ಚಲ ಪಂದ್ಯದಲ್ಲಿಯೇ ದಾಖಲೆ ನಿರ್ಮಿಸಿದ ಸಿಎಸ್​ಕೆ ಯುವ ಆಟಗಾರ

Sameer Rizvi : ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದ ಐಪಿಎಲ್​ನ 9ನೇ ಹಾಗೂ ಅತ್ಯಂತ ಕಿರಿಯ ಆಟಗಾರ ಎಂಬ ಸಾಧನೆ ರಿಜ್ವಿ ಅವರದ್ದಾಯಿತು.

VISTARANEWS.COM


on

Sameer Rizwi- IPL 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ : ಮಿನಿ ಹರಾಜಿನ ವೇಳೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಸೇರಿದ್ದ ಯುವ ಬ್ಯಾಟರ್​ ಸಮೀರ್ ರಿಜ್ವಿ (Sameer Rizwi) ಮಂಗಳವಾರ (ಮಾರ್ಚ್ 26) ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2024) ಚೊಚ್ಚಲ ಬ್ಯಾಟಿಂಗ್ ಅವಕಾಶ ಪಡೆದರು. ಆದರೆ, ಅವರು ಮೊದಲ ಪಂದ್ಯದಲ್ಲಿಯೇ ಗಮನ ಸೆಳೆಯುವ ಜತೆಗೆ ಹೊಸ ದಾಖಲೆಯೊಂದನ್ನು ಸೃಷ್ಟಿಸಿದರು. ಬಲಗೈ ಬ್ಯಾಟರ್​ ಕಳೆದ ವಾರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಂಡದ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಪಾದಾರ್ಪಣೆ ಮಾಡಿದ್ದರು. ಆದಾಗ್ಯೂ, ಆ ಪಂದ್ಯವನ್ನು ಸಿಎಸ್​ಕೆ ಆರು ವಿಕೆಟ್​ಗಳಿಂದ ಗೆದ್ದ ಕಾರಣ ಸಮೀರ್ ರಿಜ್ವಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದರೆ, ಗುಜರಾತ್ ವಿರುದ್ಧ ಎಲ್ಲರ ಗಮನ ಸೆಳೆದರು.

ಗುಜರಾತ್ ಟೈಟಾನ್ಸ್ ವಿರುದ್ಧ ಶಿವಂ ದುಬೆ ಮತ್ತು ಡ್ಯಾರಿಲ್ ಮಿಚೆಲ್ ಉತ್ತಮ ಪ್ರದರ್ಶನ ನೀಡಿದ್ದರಿಂದ ರಿಜ್ವಿಗೆ ಈ ಬಾರಿಯೂ ಆಡಲುವ ಅವಕಾಶ ಕ್ಷೀಣಿಸಿತ್ತು. ಆದಾಗ್ಯೂ, ರಶೀದ್ ಖಾನ್ 19 ನೇ ಓವರ್ನಲ್ಲಿ ದುಬೆಯನ್ನು 51 ರನ್​ಗಳಿಗೆ ಔಟ್ ಮಾಡಿದರು. ಹೀಗಾಗಿ ಸಮೀರ್ ರಿಜ್ವಿಯನ್ನು ಸಿಎಸ್ಕೆ ತಂಡದ ಮ್ಯಾನೇಜ್ಮೆಂಟ್ ಬ್ಯಾಟಿಂಗ್​​ಗೆ ಕಳುಹಿಸಿತು.

ಎಲೈಟ್ ಪಟ್ಟಿಗೆ ಸಮೀರ್ ರಿಜ್ವಿ ಸೇರ್ಪಡೆ

ಸಮೀರ್ ರಿಜ್ವಿ ಅವರ ಪ್ರತಿಭೆ ಎಲ್ಲರಿಗೂ ತಿಳಿದಿದ್ದರೂ, ವಿಶ್ವದ ಅತ್ಯುತ್ತಮ ಸ್ಪಿನ್ನರ್​ಗಳಲ್ಲಿ ಒಬ್ಬರಾದ ರಶೀದ್ ಖಾನ್ ಅವರ ಎಸೆತಕ್ಕೆ ದೊಡ್ಡ ಸಾಧನೆ ಮಾಡಿದರು. ಅದು ಅವರ ಪಾಲಿಗೆ ಐಪಿಎಲ್​ನ ಮೊದಲ ಎಸೆತ. 20 ವರ್ಷದ ಆಟಗಾರ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎದುರಿಸಿದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ದಾಖಲೆಮಾಡಿದರು.

ಬಲಗೈ ಬ್ಯಾಟ್ಸ್ಮನ್ ಒಂದು ಮೊಣಕಾಲಿನ ಮೇಲೆ ಕುಳಿತು ಅಫ್ಘಾನ್ ಸೂಪರ್​​ಸ್ಟಾರ್​ ಎಸೆತಕ್ಕೆ ಸಿಕ್ಸರ್ ಬಾರಿಸಿದರು. ಅದೇ ಓವರ್ನಲ್ಲಿ ಉತ್ತರ ಪ್ರದೇಶದ ಯುವ ಆಟಗಾರ ರಶೀದ್​ಗೆ ಮತ್ತೊಂದು ಸಿಕ್ಸರ್ ಬಾರಿಸಿದರು. ಅವರು ಅಂತಿಮವಾಗಿ 14 ರನ್ ಬಾರಿಸಿದರು.

ಇದನ್ನೂ ಓದಿ: PL 2024 : ಚೆನ್ನೈಗೆ ಮಣಿದ ಗುಜರಾತ್ ಟೈಟಾನ್ಸ್​, ಚಾಂಪಿಯನ್ನರಿಗೆ ಸತತ ಎರಡನೇ ಜಯ

ಸಿಎಸ್​ಕೆ ಬ್ಯಾಟರ್​ ತಮ್ಮ ಚೊಚ್ಚಲ ಐಪಿಎಲ್ ಇನಿಂಗ್ಸ್​ನಲ್ಲಿ ಕೇವಲ 6 ಎಸೆತಗಳನ್ನು ಎದುರಿಸಿದರೂ, ಎಲೈಟ್ ಪಟ್ಟಿಗೆ ಪ್ರವೇಶಿಸಲು ಇದು ಸಾಕಾಯಿತು. ಐಪಿಎಲ್ ಇತಿಹಾಸದಲ್ಲಿ ತಮ್ಮ ವೃತ್ತಿಜೀವನದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಒಂಬತ್ತನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಬ್ ಕ್ವಿನಿ 2009ರಲ್ಲಿ ಈ ಸಾಧನೆ ಮಾಡಿದ್ದರು.

ಈ ಮೈಲಿಗಲ್ಲನ್ನು ಸಾಧಿಸಿದ ಮೊದಲ ಭಾರತೀಯ ಅನಿಕೇತ್ ಚೌಧರಿ. 2017 ರಲ್ಲಿ ಈ ಸಾಧನೆ ಮಾಡಿದ್ದರು. ಸಮೀರ್ ರಿಜ್ವಿ ಈ ಸಾಧನೆ ಮಾಡಿದ ಸಿಎಸ್ಕೆಯ ಮೊದಲ ಆಟಗಾರ ಮತ್ತು ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ:

  • ರಾಬ್ ಕ್ವಿನಿ
  • ಕೆವೊನ್ ಕೂಪರ್
  • ಆಂಡ್ರೆ ರಸೆಲ್
  • ಕಾರ್ಲೋಸ್ ಬ್ರಾಥ್​ವೇಟ್​
  • ಅನಿಕೇತ್ ಚೌಧರಿ
  • ಜಾವೊನ್ ಸೀರ್ಲೆಸ್
  • ಸಿದ್ದೇಶ್ ಲಾಡ್
  • ಮಹೀಶ್ ದೀಕ್ಷಾ
  • ಸಮೀರ್ ರಿಜ್ವಿ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Prajwal Revanna Case: ಸಂತ್ರಸ್ತ ಮಹಿಳೆ ಸಿಕ್ಕಿದ್ದು ಸಂಬಂಧಿಕರ ಮನೆಯಲ್ಲಿ! ತೋಟದ ಮನೆಯಲ್ಲಲ್ಲ; ಸಾ.ರಾ. ಮಹೇಶ್‌ ಸ್ಫೋಟಕ ಮಾಹಿತಿ

Prajwal Revanna Case: ಹುಣಸೂರಿನ ಕರಿಗೌಡ ರಸ್ತೆಯಲ್ಲಿ ಪವಿತ್ರಾ ಹರೀಶ್ ಎಂಬುವವರ ಮನೆಯಿಂದ ಕಿಡ್ನ್ಯಾಪ್ ಆಗಿದ್ದಾಳೆ ಎನ್ನಲಾದ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಪವಿತ್ರಾ ಹರೀಶ್ ಸಂತ್ರಸ್ತ ಮಹಿಳೆಯ ಸಂಬಂಧಿಯಾಗಿದ್ದಾರೆ. ಯಾರು ಕರೆದುಕೊಂಡು ಹೋದರು? ಯಾವ ಅಧಿಕಾರಿಯ ಲೊಕೇಷನ್ ಇತ್ತು? ಎಲ್ಲದಕ್ಕೂ ದಾಖಲೆಗಳನ್ನು ತೆಗೆಯಿರಿ. ಎಸ್‌ಐಟಿಗೆ ಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ. ಎಸ್‌ಐಟಿಯಲ್ಲಿರುವ ಕೆಲ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಾ.ರಾ. ಮಹೇಶ್ ಆರೋಪಿಸಿದ್ದಾರೆ.

VISTARANEWS.COM


on

Prajwal Revanna Case Victim found at relative house Not in a farmhouse Sa Ra Mahesh Explosive Information
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಿಸಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಮೇಲೆ ಕೇಳಿ ಬಂದಿರುವ ಅಪಹರಣ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ. ಸಂತ್ರಸ್ತ ಮಹಿಳೆ ಸಿಕ್ಕಿದ್ದು ತೋಟದ ಮನೆಯಲ್ಲಿ ಅಲ್ಲ. ಹುಣಸೂರಿನ ಸಂಬಂಧಿಕರ ಮನೆಯಲ್ಲಿ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ. ಈ ಮೂಲಕ ತನಿಖೆಯ ಸತ್ಯಾಂಶದ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಹಾಗೂ ಎಚ್‌.ಡಿ. ರೇವಣ್ಣ ಕಿಡ್ನ್ಯಾಪ್‌ ಕೇಸ್‌ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಾ.ರಾ. ಮಹೇಶ್‌, ಕೇಸ್ ರಿಜಿಸ್ಟರ್ ಆಗುವುದಕ್ಕೂ ಮುಂಚೆಯೇ ನ್ಯಾಷನಲ್ ಮೀಡಿಯಾದಲ್ಲಿ ಸುದ್ದಿ ಬರುತ್ತದೆ. ಹಾಗಾದರೆ ಇದರ ರೂವಾರಿ ಯಾರು? ರಾಜಗೋಪಾಲ್ ಅವರು ತೋಟದಲ್ಲಿ ಇದ್ದ ಬಗ್ಗೆ ವಿಡಿಯೊ ಯಾಕೆ ಆಚೆ ಬಂದಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಹುಣಸೂರಿನ ಕರಿಗೌಡ ರಸ್ತೆಯಲ್ಲಿ ಪವಿತ್ರಾ ಹರೀಶ್ ಎಂಬುವವರ ಮನೆಯಿಂದ ಕಿಡ್ನ್ಯಾಪ್ ಆಗಿದ್ದಾಳೆ ಎನ್ನಲಾದ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಪವಿತ್ರಾ ಹರೀಶ್ ಸಂತ್ರಸ್ತ ಮಹಿಳೆಯ ಸಂಬಂಧಿಯಾಗಿದ್ದಾರೆ. ಯಾರು ಕರೆದುಕೊಂಡು ಹೋದರು? ಯಾವ ಅಧಿಕಾರಿಯ ಲೊಕೇಷನ್ ಇತ್ತು? ಎಲ್ಲದಕ್ಕೂ ದಾಖಲೆಗಳನ್ನು ತೆಗೆಯಿರಿ. ಎಸ್‌ಐಟಿಗೆ ಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ. ಎಸ್‌ಐಟಿಯಲ್ಲಿರುವ ಕೆಲ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಾ.ರಾ. ಮಹೇಶ್ ಆರೋಪಿಸಿದ್ದಾರೆ.

ಪೆನ್‌ಡ್ರೈವ್‌ ಸೂತ್ರಧಾರಿ ಕಾರ್ತಿಕ್‌ ಹಿಂದೆ ಯಾರಿದ್ದಾರೆ? ಎಚ್‌ಡಿಕೆ ಪ್ರಶ್ನೆ

ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದ (Hassan Pen Drive Case) ಸೂತ್ರಧಾರಿ ಕಾರ್ತಿಕ್‌ ಗೌಡ ಕಥೆ ಏನು? ಆತ ಎಲ್ಲಿದ್ದಾನೆ? ಆತನ ಹಿಂದೆ ಯಾರಿದ್ದಾರೆ? ನಿಮ್ಮ ಈ ತನಿಖೆಯ ವಿಸ್ತಾರ ಎಷ್ಟು? ಕೇವಲ ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ. ರೇವಣ್ಣ ವಿರುದ್ಧ ಅಷ್ಟೇ ನಿಮ್ಮ ತನಿಖೆಯೇ? ಇಲ್ಲವೇ ಆಯೋಗ ಹೇಳಿದಂತೆ ಎಲ್ಲ ರಾಜಕಾರಣಿಗಳ ವಿರುದ್ಧ ತನಿಖೆ ಮಾಡುತ್ತಿದ್ದೀರಾ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ರೇವಣ್ಣ ಅರೆಸ್ಟ್ ಆದಾಗ ನನಗೆ ಗೊತ್ತೇ ಇಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಏನು ಹೇಳಿದ್ದಾರೆ? ಈ ಪ್ರಕರಣದ ಹಿಂದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇದ್ದಾರೆ ಎಂಬುದಾಗಿ ಹೇಳಿದ್ದಾರೆ. ಈಗ ನನ್ನ ಪ್ರಶ್ನೆ ಎಂದರೆ ಈ ಪೆನ್‌ಡ್ರೈವ್‌ ರೂವಾರಿ ಕಾರ್ತಿಕ್‌ನನ್ನು ಏಕೆ ಬಿಟ್ಟಿದ್ದೀರಿ? ಎಸ್ಐಟಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದರು.

ಈ ವೇಳೆ ಪ್ರಜ್ವಲ್‌ ಪೆನ್‌ಡ್ರೈವ್‌ ವಿಷಯವಾಗಿ ಹಾಸನದ ನವೀನ್ ಗೌಡ ಮಾತನಾಡಿದ್ದಾರೆನ್ನಲಾದ ಆಡಿಯೊವನ್ನು ಎಚ್‌.ಡಿ. ಕುಮಾರಸ್ವಾಮಿ ಪ್ಲೇ ಮಾಡಿದರು. ಅಲ್ಲದೆ, ನವೀನ್ ಗೌಡ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜತೆ ಇರುವ ಹಾಗೂ ಸಚಿವ ಜಮೀರ್ ಅಹಮದ್ ಜತೆ ಇರುವ ಫೋಟೊವನ್ನು ಬಿಡುಗಡೆ ಮಾಡಿದರು. ನವೀನ್‌ ಗೌಡನ ಮೇಲೆ ಯಾವ ಕ್ರಮವನ್ನು ತೆಗೆದುಕೊಂಡಿದ್ದೀರಿ? ಎಂದು ಪ್ರಶ್ನೆ ಮಾಡಿದರು.

ಪೆನ್‌ಡ್ರೈವ್‌ ಸಂಚಿನ ಹಿಂದಿರುವ ಡಿ.ಕೆ. ಶಿವಕುಮಾರ್‌ ವಜಾಗೆ ಕುಮಾರಸ್ವಾಮಿ ಆಗ್ರಹ

ಈ ಪೆನ್‌ಡ್ರೈವ್‌ ಹಂಚಿಕೆ ಸಂಚಿನ ಹಿಂದೆ ಇರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಸಂಪುಟದಿಂದ ಕೂಡಲೇ ವಜಾ ಮಾಡಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಬಗ್ಗೆ ದಿಢೀರ್‌ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಈ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಒಳಸಂಚಿದೆ. ಕ್ಯಾಬಿನೆಟ್‌ನಿಂದ ಮೊದಲು ಅವರನ್ನು ಕಿತ್ತುಹಾಕಿ. ಈ ಪ್ರಕರಣವನ್ನು ಅಷ್ಟು ಸುಲಭವಾಗಿ ನಾನು ಬಿಡಲ್ಲ. ಈ ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಮೊದಲು ಡಿಕೆಶಿಯನ್ನು ಕೈಬಿಡಲಿ ಎಂದು ಆಗ್ರಹಿಸಿದರು.

ಎಸ್ಐಟಿ ಅಧಿಕಾರಿಗಳು ಸಿಎಂ, ಡಿಸಿಎಂಗೆ ಏಜೆಂಟ್‌

ಎಸ್ಐಟಿ ಅಧಿಕಾರಿಗಳು ಸಿಎಂ, ಡಿಸಿಎಂಗೆ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ದೇವರಾಜೇಗೌಡನನ್ನು ಯಾಕೆ ಕರೆಸಿಕೊಂಡರು? ಯಾಕೆ ಅವರ ಹೇಳಿಕೆಯಲ್ಲಿನ ಒಂದು ಪ್ಯಾರಾವನ್ನು ಡಿಲಿಟ್ ಮಾಡಿ ಎಂದು ಹೇಳಿದರು? ಡಿಕೆಶಿ ಇತಿಹಾಸ ಎಲ್ಲರಿಗೂ ಗೊತ್ತು. ಮೊದಲು ಈ ಒಳಸಂಚು ಮಾಡಿದ್ದರಿಂದ ಅವರ ಮೇಲೆ ಕ್ರಮವಾಗಲಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಸಿಎಂ, ಡಿಕೆಶಿ ಇನ್ವೆಸ್ಟಿಗೇಷನ್‌ ಟೀಮ್

ಪ್ರಜ್ವಲ್‌ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ದೂರು ಸಿದ್ಧಪಡಿಸಿ ಹೊಳೆನರಸೀಪುರಕ್ಕೆ ಕಳಿಸಿದ್ದರು. ಬಳಿಕ ಎಸ್ಐಟಿ ತನಿಖೆಗೆ ಆದೇಶಿಸಿ ದೂರು ದಾಖಲು ಮಾಡಿಕೊಂಡಿದ್ದಾರೆ. ಇದನ್ನು ಒಪ್ಪೋಣ. ಆದರೆ ನಿಷ್ಪಕ್ಷಪಾತ ತನಿಖೆ ಆಗುತ್ತದೆ ಎಂದು ನಾನು ಭಾವಿಸಿದೆ. ಇಲ್ಲಾಗಿದ್ದೇನು? ಸಿಎಂ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್‌ ಟೀಂ, ಡಿ.ಕೆ. ಶಿವಕುಮಾರ್ ಇನ್ವೆಸ್ಟಿಗೇಷನ್‌ ಟೀಮ್ ಎಂದು ಮಾಡಿಕೊಂಡಿದ್ದಾರೆ. ಈ ಕೇಸ್‌ಗೆ ಸಂಬಂಧಪಟ್ಟಂತೆ ನಡೆದ ಕಾಲ್ ರೆಕಾರ್ಡಿಂಗ್ ಹೊರಗೆ ಬರಬೇಕು. ಯಾರು ಯಾರು? ಯಾರ ಜತೆ ಮಾತನಾಡಿದ್ದಾರೆ ಎಂಬುದೆಲ್ಲವೂ ಹೊರಬರಬೇಕು ಎಂದು ಆಗ್ರಹಿಸಿದರು.

ಕೆಲವರ ತೇಜೋವಧೆಗೆ ಈ ಪ್ರಕರಣವನ್ನು ಬಳಸಿಕೊಂಡಿರಿ

ನಾನು ಪ್ರಜ್ವಲ್ ರೇವಣ್ಣ ಅವರನ್ನು ವಹಿಸಿಕೊಂಡು ಮಾತನಾಡುವುದಿಲ್ಲ. ಎಫ್ಐಆರ್ ದಾಖಲು ಮಾಡಿದಾಗ ಜಾಮೀನು ಸಹಿತ ಪ್ರಕರಣವನ್ನು ದಾಖಲು ಮಾಡಿದೆವು. ಎರಡನೇ ದಿನ ಮತ್ತೆ ಇನ್ನೊಂದು ಪ್ರಕರಣವನ್ನು ದಾಖಲು ಮಾಡಿದೆವು. ಗನ್ ಪಾಯಿಂಟ್‌ ಅಡಿ ಬೆದರಿಕೆಯೊಡ್ಡಿ ಅತ್ಯಾಚಾರ ಆಗಿದೆ ಅಂತ ದೂರು ಕೊಟ್ಟರು. ಮಾಧ್ಯಮಗಳ ಮುಂದೆ ಕಥೆ ಕಟ್ಟಿದವರು ಯಾರು? ಸುಪ್ರೀಂ ಕೋರ್ಟ್ ಏನು ಹೇಳಿದೆ? ಇಂಥ ಪ್ರಕರಣದಲ್ಲಿ ಗೌಪ್ಯತೆಯನ್ನು ಉಳಿಸಿಕೊಂಡಿರಾ? ಕೆಲವರ ತೇಜೋವಧೆಗೆ ಈ ಪ್ರಕರಣವನ್ನು ಬಳಸಿಕೊಂಡಿರಿ. ಇದು ಆಘಾತಕಾರಿ ಪ್ರಕರಣವಾಗಿದೆ. 2022ರಲ್ಲಿ ಈ ಘಟನೆ ಆಗಿದೆ ಎಂದು ಹೇಳಿದ್ದೀರಿ. ಮತ್ಯಾಕೆ ಸುಮ್ಮನಿದ್ದಿರಿ? ಎಂದು ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಆಕೆಯ ಹಿಂದೆ ಯಾರಿದ್ದಾರೆ?

22ನೇ ತಾರೀಖು ಪ್ರಜ್ವಲ್ ಪಕ್ಕಾ ಕೂತಿದ್ದ ಹೆಣ್ಣು ಮಗಳು ಯಾರು? ಮೊದಲ ವಿಡಿಯೊದಲ್ಲಿ ಬಂದ ಹೆಣ್ಣು ಮಗಳು 22ನೇ ತಾರೀಖು ಪ್ರಜ್ವಲ್ ಜತೆ ವೇದಿಕೆ ಹಂಚಿಕೆ ಮಾಡಿಕೊಂಡಿದ್ದಾರೆ. ಆಕೆಯ ಹಿಂದೆ ಯಾರಿದ್ದಾರೆ? ಸಿಎಂ ಸಿದ್ದರಾಮಯ್ಯ ಅವರೇ, ಡಿ.ಕೆ. ಶಿವಕುಮಾರ್ ಅವರೇ ಏನಿದು? ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಮಹಿಳೆಯ ಕಿಡ್ನ್ಯಾಪ್‌ ಕೇಸ್‌ ಕತೆ ಏನು?

ರೇವಣ್ಣ ವಿರುದ್ಧ ಇಂದಿಗೂ ಸಹ ಯಾರೂ ದೂರು ಕೊಟ್ಟಿಲ್ಲ. ಬಳಿಕ ಕಿಡ್ನ್ಯಾಪ್ ಕೇಸ್ ದಾಖಲು ಮಾಡಿಕೊಂಡಿರಿ. ಆ ಹೆಣ್ಣು ಮಗಳು ಬದುಕಿದ್ದಾಳೋ, ಮೃತಪಟ್ಟಿದ್ದಾಳೋ ಗೊತ್ತಿಲ್ಲ ಎಂದು ನಿಮ್ಮ ವಕೀಲರು ನ್ಯಾಯಾಧೀಶರ ಮುಂದೆ ಹೇಳುತ್ತಾರೆ. ಆ ಮೇಲೆ ಆಕೆಯನ್ನು ಕರೆದುಕೊಂಡು ಬಂದಿರಿ. ಎಲ್ಲಿಂದ ಕರೆದುಕೊಂಡು ಬಂದಿರಿ? ಏನು ಮಹಜರು ಮಾಡಿದಿರಿ? ಈ ದಿನದವರೆಗೂ ಜಡ್ಜ್ ಮುಂದೆ ಆ ಹೆಣ್ಣು ಮಗಳನ್ನು ಏಕೆ ಹಾಜರುಪಡಿಸಲಿಲ್ಲ? ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Prajwal Revanna Case: ಎಚ್‌.ಡಿ. ರೇವಣ್ಣಗೆ ಇಂದು ಸಿಗದ ಜಾಮೀನು; ಅವಕಾಶ ಇದೆಯೇ ಎಂದು ಕೋರ್ಟ್‌ ಪ್ರಶ್ನೆ; ನಾಳೆಗೆ ವಿಚಾರಣೆ ಮುಂದೂಡಿಕೆ

ಎಚ್.ಡಿ. ರೇವಣ್ಣ ಅವರು ತನಿಖೆಗೆ ಸಹಕಾರ ಕೊಡುತ್ತಿಲ್ಲ ಎಂದು ಹೇಳಿದ್ದೀರಿ. ನೀವು ಹೇಳಿದಂತೆ ಮಾಜಿ‌ ಮಂತ್ರಿ ಹೇಳಿಕೆ ಕೊಡಬೇಕಾ? ಇದು ಯಾವ ಇನ್ವೆಸ್ಟಿಗೇಷನ್ ಎಂದು ಎಚ್‌.ಡಿ. ಕುಮಾರಸ್ವಾಮಿ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

Continue Reading

ಪ್ರಮುಖ ಸುದ್ದಿ

MS Dhoni : ಮಹೇಂದ್ರ ಸಿಂಗ್​ ಧೋನಿಗೆ ಗಾಯ, ಆಂತರಿಕ ಮಾಹಿತಿ ಬಹಿರಂಗ

MS Dhoni: ‘ಯೆಲ್ಲೊ ಆರ್ಮಿ’ ಗೆ ಪೂರಕವಾಗಿರದ ವಿಷಯವೆಂದರೆ ಗಾಯದ ಸಮಸ್ಯೆಗಳು. ಋತುರಾಜ್​ ನೇತೃತ್ವದ ಶಿಬಿರವು ಈ ಋತುವಿನಲ್ಲಿ ಗಾಯಗಳ ಸರಮಾಲೆಯನ್ನು ಎದುರಿಸುತ್ತಿದೆ. ಪಂದ್ಯಾವಳಿಯ ಆರಂಭಿಕ ಹಂತದಲ್ಲಿ, ಅವರು ಗಾಯಗೊಂಡ ಡೆವೊನ್ ಕಾನ್ವೇ ಅವರನ್ನು ಕಳೆದುಕೊಂಡಿದ್ದರು. ನಂತರ ದೀಪಕ್ ಚಾಹರ್, ಮಥೀಶಾ ಪತಿರಾನಾ ಅವರ ಸೇವೆಯಿಂದ ವಂಚಿತವಾಯಿತು.

VISTARANEWS.COM


on

MS Dhoni
Koo

ಚೆನ್ನೈ: ಹೊಸ ನಾಯಕ ಋತುರಾಜ್ ಗಾಯಕ್ವಾಡ್ ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪ್ರಶಂಸನೀಯ ಅಭಿಯಾನ ನಡೆಸುತ್ತಿದೆ. ತಂಡವು ಹನ್ನೊಂದು ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿದೆ ಮತ್ತು 12 ಅಂಕಗಳೊಂದಿಗೆ ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇಆಫ್​ಗೆ ಪ್ರವೇಶ ಪಡೆಯುವ ಎಲ್ಲ ಅವಕಾಶಗಳನ್ನು ಹೊಂದಿದೆ. ಆದರೆ, ಧೋನಿಗೂ (MS Dhoni) ಗಾಯವಾಗಿದೆ ಎಂಬ ವಿಚಾರ ಆ ಬಳಗವನ್ನು ಆತಂಕ್ಕೆ ತಳ್ಳಿದೆ.

‘ಯೆಲ್ಲೊ ಆರ್ಮಿ’ ಗೆ ಪೂರಕವಾಗಿರದ ವಿಷಯವೆಂದರೆ ಗಾಯದ ಸಮಸ್ಯೆಗಳು. ಋತುರಾಜ್​ ನೇತೃತ್ವದ ಶಿಬಿರವು ಈ ಋತುವಿನಲ್ಲಿ ಗಾಯಗಳ ಸರಮಾಲೆಯನ್ನು ಎದುರಿಸುತ್ತಿದೆ. ಪಂದ್ಯಾವಳಿಯ ಆರಂಭಿಕ ಹಂತದಲ್ಲಿ, ಅವರು ಗಾಯಗೊಂಡ ಡೆವೊನ್ ಕಾನ್ವೇ ಅವರನ್ನು ಕಳೆದುಕೊಂಡಿದ್ದರು. ನಂತರ ದೀಪಕ್ ಚಾಹರ್, ಮಥೀಶಾ ಪತಿರಾನಾ ಅವರ ಸೇವೆಯಿಂದ ವಂಚಿತವಾಯಿತು. ಬಳಿಕ ಮುಸ್ತಾಫಿಜುರ್ ರಹಮಾನ್ ಪಂದ್ಯಾವಳಿಯ ಎರಡನೇ ಹಂತದಲ್ಲಿ ಗಾಯದಿಂದಾಗಿ ಐಪಿಎಲ್ 2024 ರಿಂದ ಹೊರಗುಳಿದಿದ್ದರು. ನಂತರ ತಂಡಕ್ಕೆ ಪ್ರವೇಶ ಪಡೆದರೂ ರಾಷ್ಟ್ರೀಯ ಬದ್ಧತೆಗಾಗಿ ತವರಿಗೆ ಮರಳಿದ್ದರು.

ಮಹತ್ವದ ಬೆಳವಣಿಗೆಯೊಂದರಲ್ಲಿ, ಎಂಎಸ್ ಧೋನಿ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಸಮಯದಲ್ಲಿ ಸ್ವಲ್ಪ ಸಮಯದವರೆಗೆ ಗಾಯವನ್ನು ಎದುರಿಸಿದರು. ಆದರೆ ಲೆಜೆಂಡರಿ ಕ್ರಿಕೆಟಿಗ ಆಟವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಮತ್ತು ವಿರಾಮ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ಧೋನಿಗೆ ಆಗಿರುವ ಗಾಯದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ವೈದ್ಯರು ಧೋನಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂಬುದಾಗಿ ಹೇಳಲಾಗಿದೆ. ಸಿಎಸ್​ಕೆ ಮಾಜಿ ನಾಯಕನಿಗೆ ಐಪಿಎಲ್​​ನಿಂದ ವಿರಾಮ ತೆಗೆದುಕೊಳ್ಳಲು ಬಯಸಿಲ್ಲ. , ಬದಲಿಗೆ, ಪಂದ್ಯಾವಳಿಯ ಉಳಿದ ಭಾಗಕ್ಕೆ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಅವರು ಔಷಧಗಳ ಮೂಲಕ ನೋವಿನಿಂದ ಮುಕ್ತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಆಟಕ್ಕೆ ಬದ್ಧತೆ

ಎಂಎಸ್ ಧೋನಿ ಗಾಯವನ್ನು ಎದುರಿಸುವ ಬದಲು ತಮ್ಮ ಆಟ ಮುಂದುವರಿಸಲು ಬಯಸುತ್ತಾರೆ ಎಂದು
ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸಿಎಸ್​ಕೆ ಮಾಜಿ ನಾಯಕ ಈ ಪ್ರಸ್ತುತ ಐಪಿಎಲ್ ಋತುವಿನಲ್ಲಿ ಈ ಗಾಯವನ್ನು ಎದುರಿಸಿದ್ದಾರೆ. ಆದರೆ ದಂತಕಥೆ ನೋವಿನ ನಡುವೆಯೂ ಆಡಲು ಹಠಮಾರಿ ಮತ್ತು ದೃಢನಿಶ್ಚಯ ತೆಗೆದುಕೊಂಡಿರುವುದು ಅಚ್ಚರಿ.

ಇದನ್ನೂ ಓದಿ: ICC Ban : ಮ್ಯಾಚ್​ ಫಿಕಿ ವೆಸ್ಟ್ ಇಂಡೀಸ್​ ಆಟಗಾರನಿಗೆ ಐದು ವರ್ಷ ಬ್ಯಾನ್​

ಐಪಿಎಲ್ ಪ್ರಾರಂಭವಾದಾಗಿನಿಂದ ಎಂಎಸ್ ಧೋನಿ ಚರ್ಚೆಯ ವಿಷಯವಾಗಿದ್ದಾರೆ. ಈ ಆಟಗಾರ ಕೆಲವೊಂದು ಬಾರಿ ಗಮನಾರ್ಹ ಫಾರ್ಮ್​ ತೋರಿದ್ದಾರೆ. ಆದರೆ ತೀರಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದಾರೆ. ಇತ್ತೀಚೆಗೆ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಧೋನಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು.

ಈ ಕ್ರಮವನ್ನು ಭಾರತದ ಮಾಜಿ ಕ್ರಿಕೆಟಿಗರು ತೀವ್ರವಾಗಿ ಟೀಕಿಸಿದರು. ಎಂಎಸ್ ಧೋನಿ ಅವರ ಬ್ಯಾಟಿಂಗ್ ಕ್ರಮಾಂಕವು ಸಿಎಸ್​ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ಹರ್ಭಜನ್ ಸಿಂಗ್ ಸಿಎಸ್​ಕೆ ಹೆಚ್ಚುವರಿ ಬ್ಯಾಟರ್​​ ಮೂಲಕ ಆಡಬಹುದು ಎಂದು ಸಲಹೆ ನೀಡಿದೆ.

ಧೋನಿಯು ಅನುಭವಿಸುತ್ತಿರುವ ಗಾಯದ ಬಗ್ಗೆ ನಿಜವಾದ ವಿಚಾರ ಯಾರಿಗೂ ತಿಳಿದಿರಲಿಲ್ಲ. ಸಿಎಸ್ಕೆ ಮಾಜಿ ನಾಯಕ 11 ಪಂದ್ಯಗಳಲ್ಲಿ 224.49 ಸ್ಟ್ರೈಕ್ ರೇಟ್ನೊಂದಿಗೆ 110 ರನ್ ಗಳಿಸಿದ್ದಾರೆ.

Continue Reading

ಕರ್ನಾಟಕ

Lok Sabha Election 2024: ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 54.20 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು?

Lok Sabha Election 2024: ರಾಜ್ಯದ 14 ಕ್ಷೇತ್ರಗಳಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆವರೆಗೆ ಚಿಕ್ಕೋಡಿ ಕ್ಷೇತ್ರದಲ್ಲಿ ಗರಿಷ್ಠ ಶೇ.59.65 ಮತದಾನವಾಗಿದ್ದು, ಕಲಬುರಗಿಯಲ್ಲಿ ಕನಿಷ್ಠ ಶೇ.47.67 ವೋಟಿಂಗ್‌ ಆಗಿದೆ.

VISTARANEWS.COM


on

Lok Sabha Election 2024
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕುರ್ವೆಯ ಮೋಹನ್ ಮತ್ತು ಸವಿತಾ ದಂಪತಿ ಸ್ವಂತ ದೋಣಿಯ ಮೂಲಕ ದಂಡೆಭಾಗದ ಶಾಲೆ ಮತಗಟ್ಟೆಗೆ ತೆರಳಿ ಸಂತಸದಿಂದ ಮತ ಚಲಾಯಿಸಿದರು.
Koo

ಬೆಂಗಳೂರು: ರಾಜ್ಯದಲ್ಲಿ ಬೆಳಗಾವಿ ಸೇರಿ 14 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ (lok sabha election 2024) ಮಂಗಳವಾರ ನಡೆಯುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯಾಹ್ನ 3ಗಂಟೆವರೆಗೆ ಅಂದಾಜು ಶೇ.54.20 ಮತದಾರರು (Voter Turnout) ಹಕ್ಕು ಚಲಾಯಿಸಿದ್ದಾರೆ. ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ಎಂಬ ಮಾಹಿತಿ ಇಲ್ಲಿದೆ.

14 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದ ಮತದಾನ ಸಂಜೆ 6ಗಂಟೆವರೆಗೆ ನಡೆಯಲಿದೆ. ಬೆಳಗ್ಗೆ ಮೊದಲ ಎರಡು ಗಂಟೆಗಳಲ್ಲಿ ಅಂದರೆ 9 ಗಂಟೆವರೆಗೆ ಶೇ.9.45% ಮತದಾನ ದಾಖಲಾಗಿತ್ತು. ಬಳಿಕ 11 ಗಂಟೆಗೆ ಶೇ.24.48 ಹಾಗೂ 1 ಗಂಟೆವರೆಗೆ ಶೇ.41.59 ಮತದಾನ ವರದಿಯಾಗಿತ್ತು. ಅದೇ ರೀತಿ ಮಧ್ಯಾಹ್ನ 3ಗಂಟೆವರೆಗೆ ಶೇ.54.20 ವೋಟಿಂಗ್‌ ನಡೆದಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಗರಿಷ್ಠ ಶೇ.59.65 ಮತದಾನವಾಗಿದ್ದು, ಕಲಬುರಗಿಯಲ್ಲಿ ಕನಿಷ್ಠ ಶೇ.47.67 ವೋಟಿಂಗ್‌ ಆಗಿದೆ.

ಕ್ಷೇತ್ರವಾರು ಮತದಾನ ಮಾಹಿತಿ

ಬಾಗಲಕೋಟೆ- ಶೇ. 54.95
ಬೆಳಗಾವಿ- ಶೇ.53.85
ಬಳ್ಳಾರಿ-ಶೇ.56.76
ಬೀದರ್-‌ ಶೇ. 49.89
ವಿಜಯಪುರ-ಶೇ.49.88
ಚಿಕ್ಕೋಡಿ-ಶೇ. 59.65
ದಾವಣಗೆರೆ- ಶೇ. 57.31
ಧಾರವಾಡ- ಶೇ. 55
ಕಲಬುರಗಿ-ಶೇ.47.67
ಹಾವೇರಿ-ಶೇ. 58.45
ಕೊಪ್ಪಳ- ಶೇ. 55.06
ರಾಯಚೂರು-ಶೇ.49.49
ಶಿವಮೊಗ್ಗ-ಶೇ.57.96
ಉತ್ತರ ಕನ್ನಡ-ಶೇ.55.98

ಇದನ್ನೂ ಓದಿ | Lok Sabha Election 2024: ಮತ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ; ಮತದಾನ ಮಾಡಲು ಕನ್ನಡದಲ್ಲೇ ಕರೆ

Continue Reading

ದೇಶ

ಎಲ್ಲ ಮೀಸಲಾತಿಯನ್ನು ಮುಸ್ಲಿಮರಿಗೇ ಕೊಡಬೇಕು ಎಂದ ಲಾಲು ಪ್ರಸಾದ್‌ ಯಾದವ್;‌ ಕೆಂಡವಾದ ಮೋದಿ!

ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಲಾಲು ಪ್ರಸಾದ್‌ ಯಾದವ್‌, “ಮುಸ್ಲಿಮರಿಗೆ ಮೀಸಲಾತಿ ಸಿಗಬೇಕು. ಅದರಲ್ಲೂ, ಎಲ್ಲ ಮೀಸಲಾತಿಯೂ ಮುಸ್ಲಿಮರಿಗೆ ಸಿಗಬೇಕು” ಎಂದು ಹೇಳಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಿರುಗೇಟು ನೀಡಿದ್ದಾರೆ. ಲಾಲು ಪ್ರಸಾದ್‌ ಯಾದವ್‌ ಹೇಳಿದ್ದೇನು? ಮೋದಿ ಕುಟುಕಿದ್ದು ಹೇಗೆ? ಇಲ್ಲಿದೆ ವಿವರ.

VISTARANEWS.COM


on

Lalu Prasad Yadav
Koo

ಪಟನಾ: ಲೋಕಸಭೆ ಚುನಾವಣೆ (Lok Sabha Election) ಪ್ರಚಾರದ ಭರಾಟೆಯ ಜತೆಗೆ ರಾಜಕೀಯ ನಾಯಕರು ಪ್ರಸ್ತಾಪಿಸುತ್ತಿರುವ ವಿಷಯಗಳು ಕೂಡ ಸಾರ್ವಜನಿಕವಾಗಿ ಭಾರಿ ಚರ್ಚೆ, ವಿವಾದ, ಟೀಕೆಗಳಿಗೆ ಗುರಿಯಾಗುತ್ತಿವೆ. ಅದರಲ್ಲೂ, ಮುಸ್ಲಿಂ ಮೀಸಲಾತಿಯು (Muslim Reservation) ಪ್ರಮುಖ ವಿಷಯವಾಗಿದ್ದು, ಒಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ ಕೊಡುವುದಿಲ್ಲ ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಇದರ ಬೆನ್ನಲ್ಲೇ, “ಎಲ್ಲ ಮೀಸಲಾತಿಯನ್ನು ಮುಸ್ಲಿಮರಿಗೇ ನೀಡಬೇಕು” ಎಂದು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಹೇಳಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಲಾಲು ಪ್ರಸಾದ್‌ ಯಾದವ್‌, “ಮುಸ್ಲಿಮರಿಗೆ ಮೀಸಲಾತಿ ಸಿಗಬೇಕು. ಅದರಲ್ಲೂ, ಎಲ್ಲ ಮೀಸಲಾತಿಯೂ ಮುಸ್ಲಿಮರಿಗೆ ಸಿಗಬೇಕು” ಎಂದು ಹೇಳಿದ್ದಾರೆ. “ಬಿಹಾರದಲ್ಲಿ ಬಿಜೆಪಿಯನ್ನು ಜನ ದೂರ ಇಟ್ಟಿದ್ದಾರೆ. ಅವರ ಮತಗಳು ಕೂಡ ಆರ್‌ಜೆಡಿಗೇ ಬರುತ್ತವೆ. ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಜಂಗಲ್‌ ರಾಜ್‌ ಆಡಳಿತ ಜಾರಿಗೆ ತರುತ್ತಾರೆ. ಇದರಿಂದಾಗಿ ಅವರನ್ನು ಜನ ನಂಬುತ್ತಿಲ್ಲ” ಎಂದು ಕೂಡ ಲಾಲು ಪ್ರಸಾದ್‌ ಯಾದವ್‌ ಹೇಳಿದ್ದಾರೆ.

ಮೋದಿ ತಿರುಗೇಟು

ಎಲ್ಲ ಮೀಸಲಾತಿ ಮುಸ್ಲಿಮರಿಗೆ ಸಿಗಬೇಕು ಎಂದು ಲಾಲು ಪ್ರಸಾದ್‌ ಯಾದವ್‌ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. “ಇಂಡಿಯಾ ಒಕ್ಕೂಟದ ನಾಯಕರೊಬ್ಬರು ಸಂಪೂರ್ಣ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಬೇಕು ಎಂದಿದ್ದಾರೆ. ಇವರು ಮೇವು ಹಗರಣದಲ್ಲಿ ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಜಾಮೀನು ಪಡೆದು ಹೊರಬಂದಿದ್ದಾರೆ. ಇವರು ಇಂತಹ ಹೇಳಿಕೆ ನೀಡಿದರೂ ಕಾಂಗ್ರೆಸ್‌ ಸುಮ್ಮನಿದೆ ಎಂದರೆ ಇಂಡಿಯಾ ಒಕ್ಕೂಟದ ಆಶಯವೂ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯದವರಿಗೆ (ಮುಸ್ಲಿಮರಿಗೆ) ನೀಡುವುದಾಗಿದೆ” ಎಂದು ಕುಟುಕಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ತೆಲಂಗಾಣದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ಧರ್ಮದ ಆಧಾರದ ಮೇಲೆ ನೀಡುವ ಮೀಸಲಾತಿಯನ್ನು ವಿರೋಧಿಸಿದ್ದರು. “ನಾನು ಬದುಕಿರುವವರೆಗೂ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಸಿಗುತ್ತಿರುವ ಮೀಸಲಾತಿಯ ಪಾಲನ್ನು ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಕೊಡಲು ಅವಕಾಶ ನೀಡುವುದಿಲ್ಲ” ಎಂದು ಹೇಳಿದ್ದರು. ಕಾಂಗ್ರೆಸ್​ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ಪ್ರೇರೇಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: Narendra Modi : ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ಇಲ್ಲ ಎಂದ ಮೋದಿ

Continue Reading
Advertisement
Lok Sabha Election 2024
ಬೀದರ್‌2 mins ago

Lok Sabha Election 2024: ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನ

lok sabha Election 2024 Actor Rishb Shetty
Lok Sabha Election 20243 mins ago

Lok Sabha Election 2024: ಓದಿದ ಶಾಲೆಯಲ್ಲಿ ಮತ ಹಾಕಿದ ನಟ ರಿಷಬ್‌ ಶೆಟ್ಟಿ; ಕಾಂತಾರ 2 ಸೀಕ್ರೆಟ್‌ ರಿವೀಲ್‌!

Prajwal Revanna Case Victim found at relative house Not in a farmhouse Sa Ra Mahesh Explosive Information
ರಾಜಕೀಯ12 mins ago

Prajwal Revanna Case: ಸಂತ್ರಸ್ತ ಮಹಿಳೆ ಸಿಕ್ಕಿದ್ದು ಸಂಬಂಧಿಕರ ಮನೆಯಲ್ಲಿ! ತೋಟದ ಮನೆಯಲ್ಲಲ್ಲ; ಸಾ.ರಾ. ಮಹೇಶ್‌ ಸ್ಫೋಟಕ ಮಾಹಿತಿ

MS Dhoni
ಪ್ರಮುಖ ಸುದ್ದಿ35 mins ago

MS Dhoni : ಮಹೇಂದ್ರ ಸಿಂಗ್​ ಧೋನಿಗೆ ಗಾಯ, ಆಂತರಿಕ ಮಾಹಿತಿ ಬಹಿರಂಗ

Lok sabha Election 2024
Lok Sabha Election 202438 mins ago

Lok Sabha Election 2024: ಮತದಾನಕ್ಕೆ ಬಂದು ಇವಿಎಂಗೆ ಬೆಂಕಿ ಹಾಕಿದ ಯುವಕ; ಸುರಪುರದಲ್ಲಿ ಕಲ್ಲು ತೂರಾಟ

Lok Sabha Election 2024
ಕರ್ನಾಟಕ40 mins ago

Lok Sabha Election 2024: ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 54.20 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು?

viral news
ಕ್ರೀಡೆ42 mins ago

Viral News: ದೆಹಲಿ To ಗೋವಾ ವಿಮಾನ ಟಿಕೆಟ್​​ ಬೆಲೆಗಿಂತ ದುಬಾರಿ ಟೀಮ್​ ಇಂಡಿಯಾದ ಟಿ20 ವಿಶ್ವಕಪ್​ ಜೆರ್ಸಿ

Met Gala Fashion
ಫ್ಯಾಷನ್42 mins ago

Met Gala Fashion: ಮೆಟ್‌ ಗಾಲಾದಲ್ಲಿ ಹೈಲೈಟಾದ ಭಾರತೀಯ ಫ್ಯಾಷೆನಬಲ್‌ ತಾರೆಯರಿವರು!

Lalu Prasad Yadav
ದೇಶ43 mins ago

ಎಲ್ಲ ಮೀಸಲಾತಿಯನ್ನು ಮುಸ್ಲಿಮರಿಗೇ ಕೊಡಬೇಕು ಎಂದ ಲಾಲು ಪ್ರಸಾದ್‌ ಯಾದವ್;‌ ಕೆಂಡವಾದ ಮೋದಿ!

IPL 2024
ಕ್ರೀಡೆ57 mins ago

ICC Ban : ಮ್ಯಾಚ್​ ಫಿಕಿ ವೆಸ್ಟ್ ಇಂಡೀಸ್​ ಆಟಗಾರನಿಗೆ ಐದು ವರ್ಷ ಬ್ಯಾನ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 hour ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ23 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ23 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ23 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ4 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

ಟ್ರೆಂಡಿಂಗ್‌