Site icon Vistara News

Lok Sabha Election : ಚುನಾವಣಾ ಆಯೋಗದಿಂದ ಸಸ್ಪೆಂಡ್ ಆಗಿದ್ದ ವಿವೇಕ್ ಸಹಾಯ್ ಪ. ಬಂಗಾಳದ ಡಿಜಿಪಿ!

Vivek Shahay

ನವದೆಹಲಿ: ಪಶ್ಚಿಮ ಬಂಗಾಳದ ಹೊಸ ಪೊಲೀಸ್ ಮಹಾನಿರ್ದೇಶಕ (DGP) ಆಗಿ ಐಪಿಎಸ್ ಅಧಿಕಾರಿ ವಿವೇಕ್ ಸಹಾಯ್ (IPL Vivek Sahay) ಅವರನ್ನು ಸೋಮವಾರ ನೇಮಿಸಲಾಗಿದೆ. ಕುಮಾರ್ ಅವರ ಸ್ಥಾನಕ್ಕೆ ಮೂವರು ಅರ್ಹ ಅಧಿಕಾರಿಗಳ ಪಟ್ಟಿಯನ್ನು ಇಂದು ಸಂಜೆ 5 ಗಂಟೆಯೊಳಗೆ ನೀಡುವಂತೆ ಚುನಾವಣಾ ಆಯೋಗವು (Lok Sabha Election) ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು. ಅದರಂತೆ ಅವರ ನೇಮಕವಾಗಿದೆ. ರಾಜೀವ್​ ಕುಮಾರ್​ (Rajeev Kumar) ಅವರನ್ನು ಕೇಂದ್ರ ಚುನಾವಣಾ ಆಯೋಗ ಆ ಹುದ್ದೆಯಿಂದ ತೆರವುಗೊಳಿಸಿದ ಬಳಿಕ ಹೊಸ ನೇಮಕ ಮಾಡಲಾಗಿದೆ.

“ಪಶ್ಚಿಮ ಬಂಗಾಳದ ಗೃಹರಕ್ಷಕ ದಳದ ಮಹಾನಿರ್ದೇಶಕ ಮತ್ತು ಕಮಾಂಡೆಂಟ್ ಜನರಲ್ ಶ್ರೀ ವಿವೇಕ್ ಸಹಾಯ್ ಅವರನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಇನ್​ಸ್ಪೆಕ್ಟರ್ಹು ದ್ದೆಗೆ ನೇಮಕ ಮಾಡಲು ರಾಜ್ಯಪಾಲರು ಸಂತೋಷಪಡುತ್ತಾರೆ. ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಈ ನೇಮಕಾತಿಯನ್ನು ಮಾಡಲಾಗಿದೆ” ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ನೋಟಿಸ್​​ನಲ್ಲಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ರಾಜೀವ್ ಕುಮಾರ್ ಅವರನ್ನು ರಾಜ್ಯ ಡಿಜಿಪಿ ಹುದ್ದೆಯಿಂದ ತೆಗೆದುಹಾಕಲಾಗಿದೆ. ಈ ಕ್ರಮವನ್ನು ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಕಾಪಾಡಿಕೊಳ್ಳುವಲ್ಲಿ ಆಯೋಗದ ಪ್ರಯತ್ನಗಳ ಒಂದು ಭಾಗವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ : Lok Sabha Election : ಬಿಹಾರದಲ್ಲಿ ಬಿಜೆಪಿ, ಜೆಡಿಯು ಸೀಟು ಹಂಚಿಕೆ ಅಂತಿಮ; ಯಾರಿಗೆ ಎಷ್ಟು ಸೀಟು?

ವಿವೇಕ್ ಸಹಾಯ್ ಯಾರು?

ವಿವೇಕ್ ಸಹಾಯ್ ಅವರು ಪಶ್ಚಿಮ ಬಂಗಾಳ ಕೇಡರ್​​ನ 1988 ರ ಬ್ಯಾಚ್​​ನ ಐಪಿಎಸ್ ಅಧಿಕಾರಿ. ಅವರು ಈ ಹಿಂದೆ ಡೈರೆಕ್ಟರ್ ಜನರಲ್ (ಡಿಜಿ), ಪ್ರೊವಿಷನಿಂಗ್ ಮತ್ತು ಗೃಹರಕ್ಷಕ ದಳದ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸಹಾಯ್ ಅವರು 2021ರ ಚುನಾವಣೆ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭದ್ರತೆಯ ಉಸ್ತುವಾರಿ ವಹಿಸಿದ್ದರು. ಆದರೆ ಸಿಎಂ ಆ ವೇಳೆ ದಾಳಿ ನಡೆದು ಅವರ ಕಾಲಿಗೆ ಗಾಯವಾಗಿತ್ತು. ಬಳಿಕ ಚುನಾವಣಾ ಆಯೋಗವು ಮಾರ್ಚ್ 2021 ರಲ್ಲಿ ಅವರನ್ನು ಅಮಾನತುಗೊಳಿಸಿತ್ತು. ಇದೀಗ ಅವರನ್ನು ಭದ್ರತಾ ನಿರ್ದೇಶಕರ ಹುದ್ದೆಗೆ ಪುನಃ ನೇಮಿಸಲಾಗಿದೆ.

ಹಲವು ಅಧಿಕಾರಿಗಳ ವರ್ಗಾವಣೆಗೆ ಚುನಾವಣಾ ಆಯೋಗ ಆದೇಶ

ಪಶ್ಚಿಮ ಬಂಗಾಳದ ಮಾಜಿ ಡಿಜಿಪಿಯನ್ನು ತೆಗೆದುಹಾಕುವುದರ ಹೊರತಾಗಿ, ಗುಜರಾತ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ತೆಗೆದುಹಾಕಲು ಮತ್ತು ಮುಂಬಯಿ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್ ಮತ್ತು ಹೆಚ್ಚುವರಿ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳನ್ನು ತೆರವು ಮಾಡಲು ಚುನಾವಣಾ ಆಯೋಗ ಆದೇಶಿಸಿದೆ. ಇದರೊಂದಿಗೆ, ಮಿಜೋರಾಂ ಮತ್ತು ಹಿಮಾಚಲ ಪ್ರದೇಶದ ಸಾಮಾನ್ಯ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳನ್ನು ಸಹ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

Exit mobile version