Site icon Vistara News

IT Raid: ಡಿಕೆ ಬ್ರದರ್ಸ್‌ ಆಪ್ತನ ನಿವಾಸದ ಮೇಲೆ‌ ಐಟಿ ರೇಡ್‌

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್ ಆಪ್ತ ಕೆಂಪರಾಜು ನಿವಾಸದ ಮೇಲೆ‌ ಆದಾಯ ತೆರಿಗೆ ಅಧಿಕಾರಿಗಳು ದಾಳಿ (IT Raid) ನಡೆಸಿ ಪರಿಶೀಲನೆ ನಡೆಸಿದ್ದಾರೆ. ನಗರದ ಕನಕಪುರ ರಸ್ತೆಯ ವಾಜರ ಹಳ್ಳಿಯಲ್ಲಿರುವ ನಿವಾಸದ ಮೇಲೆ‌ ಐಟಿ ದಾಳಿ ನಡೆದಿದೆ.

ಈ ಹಿಂದೆ ಯುವ ಕಾಂಗ್ರೆಸ್ ಚುನಾವಣೆ ಕೆಂಪರಾಜು ಸ್ಪರ್ಧಿಸಿದ್ದರು. ಕನಕಪುರ ಮೂಲದ ಕೆಂಪರಾಜು ಗ್ರಾನೈಟ್, ಕ್ರಷರ್ ಸೇರಿದಂತೆ ಹಲವು ಬ್ಯುಸಿನೆಸ್ ಹೊಂದಿದ್ದಾರೆ. ಇವರ ನಿವಾಸದ‌ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Lok Sabha Election 2024: ಎಚ್‌ಡಿಕೆಯನ್ನು NDA ಮೈತ್ರಿಕೂಟದಲ್ಲಿ ಇಟ್ಟುಕೊಳ್ತೀರಾ? ಮೋದಿಗೆ ಡಿಕೆಶಿ ಪ್ರಶ್ನೆ

ಅಕ್ರಮ ಆಸ್ತಿ ಕೇಸ್;‌ ಡಿಕೆಶಿಗೆ ನೋಟಿಸ್‌ ನೀಡಿದ ಲೋಕಾಯುಕ್ತ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ವಿರುದ್ಧ ಸಿಬಿಐ ತನಿಖೆಯನ್ನು ರದ್ದು ಮಾಡಿದ್ದ ರಾಜ್ಯ ಸರ್ಕಾರ, ಲೋಕಾಯುಕ್ತಕ್ಕೆ ವಹಿಸಿತ್ತು. ಇದಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್ ದಾಖಲಿಸಿದ್ದ ಲೋಕಾಯುಕ್ತ ಇತ್ತೀಚೆಗೆ ಪ್ರಕರಣ ಸಂಬಂಧ ದಾಖಲೆಗಳನ್ನು ನೀಡಲು ಡಿ.ಕೆ.ಶಿವಕುಮಾರ್‌ ಅವರಿಗೆ ನೋಟಿಸ್‌ ನೀಡಿದ್ದರು.

ಲೋಕಾಯುಕ್ತದ ಉಪಾಧೀಕ್ಷಕ-3 ಎಂ.ಎಚ್‌.ಸತೀಶ್‌ ಅವರು ಡಿಕೆಶಿ ಅವರಿಗೆ ನೋಟಿಸ್‌ ನೀಡಿದ್ದು, ನಿಮ್ಮ ವಿರುದ್ಧ 2020 ಅ.3ರಂದು ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಮುಂದಿನ ತನಿಖೆಯನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಪೊಲೀಸ್ ವಿಭಾಗಕ್ಕೆ ರಾಜ್ಯ ಸರ್ಕಾರ ವಹಿಸಿದೆ. ಅದರಂತೆ ನಿಮ್ಮ ವಿರುದ್ಧ ಕರ್ನಾಟಕ ಲೋಕಾಯುಕ್ತ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಉಲ್ಲೇಖ-2 ರೀತ್ಯಾ ಪ್ರಕರಣವನ್ನು ದಾಖಲಿಸಿದ್ದು, ಪ್ರಕರಣದ ತನಿಖೆಗೆ ಸಿಬಿಐ ಪ್ರಕರಣದಲ್ಲಿ ತನಿಖಾಧಿಕಾರಿಗಳಿಗೆ ಇದುವರೆವಿಗೂ ನೀವು ಸಲ್ಲಿಸಿರುವ ಮಾಹಿತಿ ಮತ್ತು ದಾಖಲಾತಿಗಳನ್ನು ಲೋಕಾಯುಕ್ತ ಕಚೇರಿಗೆ ಒದಗಿಸಬೇಕು ಎಂದು ಸೂಚಿಸಿದ್ದರು.

Exit mobile version