Site icon Vistara News

Juice Jacking: ಸಾರ್ವಜನಿಕ ಸ್ಥಳಗಳ ಮೊಬೈಲ್​ ಚಾರ್ಜರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

Juce Jacking

ಬೆಂಗಳೂರು: ವ್ಯಕ್ತಿಗಳು ತಮ್ಮ ಫೋನ್​​ನ ಬ್ಯಾಟರಿ ಕಡಿಮೆಯಾದಾಗ ಚಾರ್ಜಿಂಗ್ ಪೋರ್ಟ್​ಗಳೊಂದಿಗೆ ಸಮೀಪದ ಕಾಫಿ ಶಾಪ್​ಗಳು, ಮಾಲ್​ಗಳು ಸೇರಿದಂತೆ ನಾನಾ ಕಡೆ ಹೋಗಿ ಕುಳಿತು ಚಾರ್ಚ್ ಮಾಡಲು ಯತ್ನಿಸುತ್ತಾರೆ. ಆದರೆ, ಇದು ಅತ್ಯಂತ ಅಪಾಯಕಾರಿ ನಡೆ ಎಂಬುದನ್ನು ವರ್ಷಗಳ ಹಿಂದಿನಿಂದಲೇ ಹೇಳುತ್ತಾ ಬರಲಾಗುತ್ತಿದೆ. ಆದಾಗ್ಯೂ ಜನರ ಹವ್ಯಾಸ ಕಡಿಮೆಯಾಗದಿರುವ ಕಾರಣ ಸರ್ಕಾರ ಪದೇ ಪದೆ ಎಚ್ಚರಿಕೆ ನೀಡುತ್ತಿದೆ. ಇದು ನಿಮ್ಮ ಮಾಹಿತಿಯನ್ನು ಕದಿಯಲು ಸೈಬರ್ ಕಳ್ಳರಿಗೆ ಅವಕಾಶ ಕೊಟ್ಟ (Juice Jacking) ಹಾಗೆ ಎಂದು ಹೇಳಲಾಗುತ್ತದೆ. ಅಂತೆಯೇ ಇದೀಗ ಭಾರತೀಯ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್​ (CRET-in) ಹೊಸ ಸೂಚನೆ (Juice Jacking) ನೀಡಿದ್ದು ಈ ರೀತಿಯ ಸಾಮಾನ್ಯ ಅಭ್ಯಾಸಗಳು ಸೈಬರ್ ವಂಚನೆಗೆ ಬಲಿಯಾಗುವಂತೆ ಮಾಡಬಹುದು ಎಂದು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದೆ.

ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) kUw ಮೊಬೈಲ್ ಫೋನ್ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ನೀಡಿತ್ತು. ಸಾರ್ವಜನಿಕ ಚಾರ್ಜರ್​ಗಳ ಮೂಲಕ ತಮ್ಮ ಎಲೆಕ್ಟ್ರಾನಿಕ್​ ಸಾಧನಗಳನ್ನು ಚಾರ್ಜ್ ಮಾಡದಂತೆ ಸಲಹೆ ನೀಡಿತ್ತು. “ಜ್ಯೂಸ್ ಜಾಕಿಂಗ್” (Juice Jacking) ಸೈಬರ್ ದಾಳಿಯಿಂದ ಉಂಟಾಗುವ ಭದ್ರತಾ ಸುರಕ್ಷತೆಯ ಆತಂಕದ ಕಾರಣಕ್ಕೆ ಈ ಎಲ್ಲ ಸಂಸ್ಥೆಗಳು ಎಚ್ಚರಿಕೆಗಳನ್ನು ನೀಡುತ್ತಿವೆ.

ಜ್ಯೂಸ್ ಜಾಕಿಂಗ್ ಎಂದರೇನು?

“ಜ್ಯೂಸ್ ಜಾಕಿಂಗ್” ಎಂಬ ಪದವನ್ನು ಮೊದಲು 2011 ರಲ್ಲಿ ಸೈಬರ್ ಭದ್ರತಾ ತಜ್ಞ ಬ್ರಿಯಾನ್ ಕ್ರೆಬ್ ರಚಿಸಿದ್ದಾರೆ. ಇದು ಒಂದು ರೀತಿಯ ಸೈಬರ್ ದಾಳಿಯಾಗಿದ್ದು. ಹ್ಯಾಕರ್​ಗಳು ಸಾರ್ವಜನಿಕ ಯುಎಸ್​ಬಿ ಚಾರ್ಜಿಂಗ್ ಕೇಂದ್ರಗಳಲ್ಲಿ ಮಾಲ್ವೇರ್ ಅನ್ನು ಸ್ಥಾಪಿಸಿ ಮಾಹಿತಿ ಕದಿಯುವ ಮಾದರಿ ಇದು. ಯಾರಿಗೂ ಗೊತ್ತಿಲ್ಲದೇ ಇಲ್ಲಿ ಲಿಂಕ್ ಮಾಡಿದ ಸಾಧನಗಳಿಂದ ಡೇಟಾವನ್ನು ಕದಿಯಲಾಗುತ್ತದೆ.

ಪ್ರಮುಖವಾಗಿ ವಿಳಾಸಗಳು, ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳು ಮತ್ತು ಪಾಸ್ವರ್ಡ್​ಗಳು ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಹ್ಯಾಕರ್​ಗಳು ಪಡೆಯುತ್ತಾರೆ. ಮಾಲ್ ಗಳು, ಹೋಟೆಲ್ ಗಳು, ಕೆಫೆಗಳು ಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ದಾಳಿಗಳು ಸುಲಭವಾಗಿ ನಡೆಯುತ್ತವೆ.

ಇದನ್ನೂ ಓದಿ: Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

ಕಿಯೋಸ್ಕ್​ನ ಪರದೆಯ ಮೇಲೆ ಉಚಿತ ಸೆಲ್ ಫೋನ್ ಚಾರ್ಜಿಂಗ್ ಸ್ಟೇಷನ್ ಎಂದು ಬರೆದಿರುತ್ತದೆ. ಆದರೆ ಗ್ರಾಹಕರು ತಮ್ಮ ಫೋನ್​ಗಳನ್ನು ಪ್ಲಗ್ ಇನ್ ಮಾಡಿದ ತಕ್ಷಣ ಮಾಲ್ವೇರ್​ಗಳನ್ನು ಅಪ್​ಲೋಡ್ ಮಾಡಿ ಮಾಹಿತಿ ಕದಿಯುತ್ತಾರೆ.

ಇದು ಹೇಗೆ ಕೆಲಸ ಮಾಡುತ್ತದೆ?

ಮಾಹಿತಿಯೇ ಇರುವುದಿಲ್ಲ: ಇಂಥ ಚಾರ್ಜಿಂಗ್ ಪಾಯಿಂಟ್​ಗಳ ಮೂಲಕ ಜನರನ್ನು ಸುಲಭವಾಗಿ ವಂಚಿಸಬಹುದು. ಯಾಕೆಂದರೆ ಇಲ್ಲಿಗೆ ಚಾರ್ಜ್ ಮಾಡಲು ಬರುವವರಿಗೆ ಸಣ್ಣ ಅರಿವು ಕೂಡ ಇರುವುದಿಲ್ಲ. ಅವರೆಲ್ಲರಿಗೆ ಮಾಹಿತಿ ಕದ್ದರೂ ಗೊತ್ತಾಗುವುದಿಲ್ಲ.

ಡೇಟಾ ಕಳ್ಳತನ: ಹ್ಯಾಕರ್​ಗಳ ಮೋಸಕ್ಕೆ ಬಲಿಯಾಗುವ ಬಳಕೆದಾರರು ತಮ್ಮ ಸಾಧನವನ್ನು ಹ್ಯಾಕ್ ಮಾಡಿದ ಚಾರ್ಜಿಂಗ್ ಸಂಪರ್ಕಕ್ಕೆ ಸಂಪರ್ಕಿಸಿದ ತಕ್ಷಣ ದುರುದ್ದೇಶಪೂರಿತ ಸಾಫ್ಟ್ ವೇರ್ ಅಥವಾ ಹಾರ್ಡ್ ವೇರ್ ಸಂಪರ್ಕಿತ ಸಾಧನಕ್ಕೆ ಲೋಡ್ ಆಗುತ್ತದೆ. ಅದರ ಮೂಲಕ ಕಾಲಕಾಲಕ್ಕೆ ಮಾಹಿತಿ ಕದಿಯಬಹುದು.

ಮಾಲ್ವೇರ್ ಇಂಜೆಕ್ಷನ್: ಕೆಲವು ಹಗರಣಗಳಲ್ಲಿ, ವ್ಯಕ್ತಿಯ ಫೋನ್ ಅಥವಾ ಟ್ಯಾಬ್ಲೆಟ್ ಮಾಲ್ವೇರ್​ಗಳಿಂದ ತುಂಬಿಕೊಳ್ಳುತ್ತದೆ. ಅಂಥ ಸಾಧನಗಳ ಮಾಹಿತಿ ಸೋರಿಕೆಯಾಗುವ ಜತೆಗೆ ಬಳಕೆ ಮಾಡಲಾಗದ ಸ್ಥಿತಿಗೆ ಬರುತ್ತದೆ.

ನೀವು ಏನು ಮಾಡಬಹುದು?

ಜ್ಯೂಸ್-ಜಾಕಿಂಗ್ ಹಗರಣಕ್ಕೆ ಬಲಿಯಾಗದಂತೆ ರಕ್ಷಿಸಲು ನೀವು ಇನ್ನೂ ಕೆಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬಹುದು. “ಯುಎಸ್​ಬಿ ಕಾಂಡೋಮ್​ಗಳು ” ಎಂದೂ ಕರೆಯಲ್ಪಡುವ ಯುಎಸ್​ಬಿ ಡೇಟಾ ಬ್ಲಾಕರ್​ಗಳನ್ನು ಬಳಸಬೇಕು. ಅವು ಸಣ್ಣ ಅಡಾಪ್ಟರ್​ಗಳು. ಅವು ಡೇಟಾದ ಹರಿವನ್ನು ತಡೆಗಟ್ಟುವ ಜತೆಗೆ ಚಾರ್ಜಿಂಗ್​ಗೆ ಮಾತ್ರ ಅವಕಾಶ ಕೊಡತ್ತದೆ. ಚಾರ್ಜಿಂಗ್ ಮಾಡುವಾಗ ಯಾವುದೇ ಡೇಟಾ ವಿನಿಮಯವನ್ನು ಸಾಧ್ಯವಿಲ್ಲ.

ಸಿಇಆರ್​ಟಿ ಎಚ್ಚರಿಕೆಯೇನು?

ಉತ್ತಮ ಅಭ್ಯಾಸಗಳು

Exit mobile version