Site icon Vistara News

Kangana Ranaut : ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್​ ಬಳಿ ಇರುವ ಆಸ್ತಿ ಎಷ್ಟು? ಇಲ್ಲಿದೆ ಎಲ್ಲ ಮಾಹಿತಿ

Kangana Ranaut

ಬೆಂಗಳೂರು: ಬಾಲಿವುಡ್ ನಟಿ ಮತ್ತು ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಲೋಕಸಭಾ (Lok Sabha Election) ಅಭ್ಯರ್ಥಿ ಕಂಗನಾ ರಣಾವತ್​ (Kangana Ranaut) ಮೇ 14 ರಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಚುನಾವಣಾ ಅಫಿಡವಿಟ್ ನಲ್ಲಿ 91 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿದ್ದಾರೆ. ಅವರ ಆಸ್ತಿಯಲ್ಲಿ 28.7 ಕೋಟಿ ರೂ.ಗಳ ಚರಾಸ್ತಿ ಮತ್ತು 62.9 ಕೋಟಿ ರೂ.ಗಳ ಸ್ಥಿರಾಸ್ತಿ ಸೇರಿವೆ. ಅವರ ಬಳಿ 5 ಕೋಟಿ ಮೌಲ್ಯದ 6.7 ಕೆಜಿ ಚಿನ್ನ, 50 ಲಕ್ಷ ಮೌಲ್ಯದ 60 ಕೆಜಿ ಬೆಳ್ಳಿ, 3 ಕೋಟಿ ಮೌಲ್ಯದ 14 ಕ್ಯಾರೆಟ್ ವಜ್ರದ ಆಭರಣಗಳಿವೆ. 2 ಲಕ್ಷ ನಗದು ಮತ್ತು ಸುಮಾರು 1.35 ಕೋಟಿ ರೂ.ಗಳ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವುದಾಗಿ ನಟಿ ಹಾಗೂ ರಾಜಕಾರಣಿ ಘೋಷಿಸಿದ್ದಾರೆ.

ಕಂಗನಾ ಚಂಡೀಗಢದಲ್ಲಿ ನಾಲ್ಕು ವಾಣಿಜ್ಯ ಸಂಕೀರ್ಣಗಳು, ಮುಂಬೈನಲ್ಲಿ ವಾಣಿಜ್ಯ ಆಸ್ತಿ ಮತ್ತು ಮನಾಲಿಯಲ್ಲಿ ವಾಣಿಜ್ಯ ಕಟ್ಟಡ ಸೇರಿದಂತೆ ದೇಶಾದ್ಯಂತ ವಿವಿಧ ಆಸ್ತಿಗಳನ್ನು ಹೊಂದಿದ್ದಾರೆ. ಅವರು ಮುಂಬೈನಲ್ಲಿ 16 ಕೋಟಿ ರೂ ಮೌಲ್ಯದ ಮೂರು ಫ್ಲ್ಯಾಟ್ ಗಳನ್ನು ಮತ್ತು ಮನಾಲಿಯಲ್ಲಿ 15 ಕೋಟಿ ರೂ ಮೌಲ್ಯದ ಬಂಗಲೆಯನ್ನು ಹೊಂದಿದ್ದಾರೆ.

ಕ್ವೀನ್ ಸಿನಿಮಾದ ನಟಿ ಮೂರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 98 ಲಕ್ಷ ರೂ ಮೌಲ್ಯದ ಬಿಎಂಡಬ್ಲ್ಯು, 58 ಲಕ್ಷ ರೂ ಮೌಲ್ಯದ ಮರ್ಸಿಡಿಸ್ ಬೆಂಜ್ ಮತ್ತು 3.91 ಕೋಟಿ ರೂ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಅವರಲ್ಲಿದೆ. ಇದಲ್ಲದೆ, ಅವರು 53,000 ರೂ.ಗಳ ಮೌಲ್ಯದ ವೆಸ್ಪಾ ಸ್ಕೂಟರ್ ಅನ್ನು ಹೊಂದಿದ್ದಾರೆ. ಅಫಿಡವಿಟ್ ಪ್ರಕಾರ, ಅವರು 2 ಲಕ್ಷ ರೂ ನಗದು ಮತ್ತು 1.35 ಕೋಟಿ ರೂ.ಗಳ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದಾರೆ, 17 ಕೋಟಿ ರೂ.ಗಳ ಸಾಲವಿದೆ.

ಇದನ್ನೂ ಓದಿ: Swati Maliwal : ಸ್ವಾತಿ ಮಾಲಿವಾಲ್​​ ಮೇಲೆ ಕೇಜ್ರಿವಾಲ್ ಸಹಾಯಕನಿಂದ ಹಲ್ಲೆ; ಆಪ್​​ನಿಂದ ತಪ್ಪೊಪ್ಪಿಗೆ

2022-23ರ ಆರ್ಥಿಕ ವರ್ಷದಲ್ಲಿ ಅವರ ಆದಾಯ 4 ಕೋಟಿ ರೂ.ಗಳಾಗಿದ್ದರೆ, ಹಿಂದಿನ ವರ್ಷ ಅವರು 12.3 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಕಂಗನಾ ರಣಾವತ್ ಅವರ ಅಫಿಡವಿಟ್ ಪ್ರಕಾರ, ಅವರ ಹೆಸರಿನಲ್ಲಿ 50 ಜೀವ ವಿಮಾ ನಿಗಮ (ಎಲ್ಐಸಿ) ಪಾಲಿಸಿಗಳಿವೆ. ಅವರು ಎಂಟು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಚಂಡೀಗಢದ ಖಾಸಗಿ ಶಾಲೆಯಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರುವುದು ತನ್ನ ಅತ್ಯುನ್ನತ ಶೈಕ್ಷಣಿಕ ಅರ್ಹತೆ ಎಂದು ಅವರು ಘೋಷಿಸಿದ್ದಾರೆ.

Exit mobile version