ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇಂದು 3,71,383 ಕೋಟಿ ರೂ. ಗಾತ್ರದ ಬಜೆಟ್ (Karnataka Budget 2024) ಮಂಡಿಸಿದ್ದಾರೆ. ಕಳೆದ ಸಾಲಿನಲ್ಲಿ ಇದರ ಗಾತ್ರ 3,27,747 ಕೋಟಿ ರೂ.ಗಳಾಗಿತ್ತು. 2024-25ರ ಸಾಲಿನ ಆಯವ್ಯಯದಲ್ಲಿ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ದಾಖಲೆಯ 44,422 ಕೋಟಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 34,406 ಕೋಟಿ ಹಣಕಾಸು ತೆಗೆದಿರಿಸಿದ್ದಾರೆ. ರಾಜ್ಯ ಅಬಕಾರಿಯಿಂದ 38,525 ಕೋಟಿ ಹಾಗೂ ವಾಣಿಜ್ಯ ತೆರಿಗೆಯಿಂದ 1,10,000 ಕೋಟಿ ರೂ ಆದಾಯವನ್ನು ತೋರಿಸಿದ್ದಾರೆ.
ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?
- ಶಿಕ್ಷಣ – 44,422 ಕೋಟಿ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ – 34,406 ಕೋಟಿ
- ಇಂಧನ – 23, 159 ಕೋಟಿ
- ಗ್ರಾಮೀಣಾಭಿವೃದ್ಧಿ ಪಂಚಾಯರ್ ರಾಜ್ – 21,160 ಕೋಟಿ
- ಒಳಾಡಳಿತ ಮತ್ತು ಸಾರಿಗೆ- 19,777 ಕೋಟಿ
- ನೀರಾವರಿ – 19,179 ಕೋಟಿ
- ನಗರಾಭಿವೃದ್ಧಿ ಮತ್ತು ವಸತಿ – 18,155 ಕೋಟಿ
- ಕಂದಾಯ – 16,170 ಕೋಟಿ
- ಆರೋಗ್ಯ – 15,145 ಕೋಟಿ
- ಸಮಾಜ ಕಲ್ಯಾಣ – 13,334 ಕೋಟಿ
- ಲೋಪಯೋಗಿ – 10,424 ಕೋಟಿ
- ಆಹಾರ ಮತ್ತು ನಾಗರೀಕ ಸರಬರಾಜು – 9,963 ಕೋಟಿ
- ಕೃಷಿ ಮತ್ತು ತೋಟಗಾರಿಕೆ – 6688 ಕೋಟಿ
- ಪಶುಸಂಗೋಪನೆ ಮತ್ತು ಮೀನುಗಾರಿಕೆ – 3307 ಕೋಟಿ
- ಇತರೆ – 1,24,593 ಕೋಟಿ
ರಾಜ್ಯದ ಸ್ವಂತ ತೆರಿಗೆ ಸಂಗ್ರಹ ಎಲ್ಲಿಂದ?
- ಮೋಟಾರು ವಾಹನ – 13,000 ಕೋಟಿ
- ನೋಂದಣಿ ಮತ್ತು ಮುದ್ರಾಂಕ – 26,000 ಕೋಟಿ
- ರಾಜ್ಯ ಅಬಕಾರಿ – 38,525 ಕೋಟಿ
- ವಾಣಿಜ್ಯ ತೆರಿಗೆ – 1,10,000 ಕೋಟಿ
- ಇತರೆ – 2,368 ಕೋಟಿ
ಜಮೆ – ರೂಪಾಯಿ ಎಷ್ಟು ಭಾಗ ಯಾವುದರಿಂದ? (ಪೈಸೆ)
- ರಾಜ್ಯ ತೆರಿಗೆ ಆದಾಯದಿಂದ – 52 ಪೈಸೆ
- ಸಾಲದಿಂದ – 28 ಪೈಸೆ
- ಕೇಂದ್ರ ತೆರಿಗೆ ಪಾಲು – 12 ಪೈಸೆ
- ಕೇಂದ್ರ ಸರ್ಕಾರದ ಸಹಾಯಾನುದಾನ – 4 ಪೈಸೆ
- ರಾಜ್ಯ ತೆರಿಗೆಯೇತರ ರಾಜಸ್ವ – 4 ಪೈಸೆ
ವೆಚ್ಚ – ಯಾವ ಭಾಗಕ್ಕೆ ಎಷ್ಟೆಷ್ಟು..? (ಪೈಸೆ)
- ಸಾಲ ತೀರಿಕೆ – 18 ಪೈಸೆ
- ಇತರ ಸಾಮಾನ್ಯ ಸೇವೆ – 17 ಪೈಸೆ
- ಸಮಾಜ ಕಲ್ಯಾಣ – 15 ಪೈಸೆ
- ಇತರ ಆರ್ಥಿಕ ಸೇವೆ – 15 ಪೈಸೆ
- ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ – 14 ಪೈಸೆ
- ಶಿಕ್ಷಣ – 11 ಪೈಸೆ
- ಆರೋಗ್ಯ – 4 ಪೈಸೆ
- ಇತರ ಸಮಾಜಿಕ ಸೇವೆ – 3 ಪೈಸೆ
- ನೀರು ಪೂರೈಕೆ ಮತ್ತು ನೈರ್ಮಲ್ಯ – 3 ಪೈಸೆ
ಇದನ್ನೂ ಓದಿ: Karnataka Budget 2024 : ಬಜೆಟ್ ಪುಸ್ತಕದ ಮುಖಪುಟದಲ್ಲಿ ಸಂವಿಧಾನ ಪೀಠಿಕೆ