Site icon Vistara News

Karnataka Budget 2024: ಇಂದು ಸಿದ್ದರಾಮಯ್ಯ ಬಜೆಟ್‌, ಬೆಟ್ಟದಷ್ಟು ನಿರೀಕ್ಷೆಗಳು; ಯಾವುದು ಗ್ಯಾರಂಟಿ?

CM Siddaramaiah infront of vidhanasouda

ಬೆಂಗಳೂರು: ಇಂದು ಬೆಳಿಗ್ಗೆ ಹತ್ತು ಗಂಟೆ ಹದಿನೈದು ನಿಮಿಷಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಜೆಟ್ (Karnataka budget 2024) ಮಂಡನೆ ಮಾಡಲಿದ್ದಾರೆ. ಕಳೆದ ವರ್ಷ 3.27 ಲಕ್ಷ ಕೋಟಿ ರೂ. ಬೃಹತ್ ಗಾತ್ರದ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಈ ಬಾರಿ ಉಚಿತ ಗ್ಯಾರಂಟಿಗಳನ್ನೂ ಸರಿದೂಗಿಸಿಕೊಂಡು ಹೊಸ ಯೋಜನೆಗಳಿಗೆ ಹೇಗೆ ಹಣ ಹೊಂಚುತ್ತಾರೆ ಎಂಬ ಕುತೂಹಲ ಮೂಡಿದೆ.

ಈ ಬಾರಿ ಬಜೆಟ್ ಗಾತ್ರ 3.4 ಲಕ್ಷ ಕೋಟಿ ರೂ. ಮೀರಲಿದೆ. ಗ್ಯಾರಂಟಿ ಯೋಜನೆಗಳ ಮುಂದುವರಿಕೆಗಾಗಿ ಶೇಕಡಾ 40ರಷ್ಟು ಹಣ ಮೀಸಲಿಡಲಿದ್ದು, ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಸಂದೇಶ ರವಾನೆ ಮಾಡಿ ಲೋಕಸಭಾ ವೋಟ್ ಬ್ಯಾಂಕ್ ಗ್ಯಾರಂಟಿ ಮಾಡಿಕೊಳ್ಳಲು ಮುಂದಾಗಲಿದ್ದಾರೆ ಎಂದು ಊಹಿಸಲಾಗಿದೆ. ಈ ಬಾರಿ ಬಜೆಟ್‌ನಲ್ಲೂ ಅಹಿಂದಗೆ ಬಂಪರ್ ದೊರೆಯಲಿದ್ದು, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳಲ್ಲಿ ಇರುವ ಎಲ್ಲ ಯೋಜನೆಗಳ ಮುಂದುವರಿಕೆ ಮಾಡಬಹುದು.

ಐದು ಗ್ಯಾರಂಟಿಗಳಿಗೆ ಸುಮಾರು 54 ಸಾವಿರ ಕೋಟಿ ರೂಪಾಯಿ ಮೀಸಲು ಇಡಲಿರುವ ಸಿಎಂ ರೈತರಿಗೆ ಬಡ್ಡಿ ರಹಿತ ಸಾಲ ಹಣ ಏರಿಕೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಹಣಕಾಸು ಮೀಸಲು, ಶೂನ್ಯ ಬಡ್ಡಿದರದಲ್ಲಿ ಸಾಲ, ವೃದ್ಧಾಪ್ಯ ವೇತನ ಏರಿಕೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ವಿಶೇಷ ಅನುದಾನ, ಗೋಕಾಕ್ ಇಲ್ಲವೇ ಅಥಣಿಯನ್ನು ನೂತನ ಜಿಲ್ಲಾ ಕೇಂದ್ರವಾಗಿಸಲು ಹಣ ಮೀಸಲು, ಅಂಬೇಡ್ಕರ್ ನಿಗಮ, ವಾಲ್ಮೀಕಿ ನಿಗಮ, ತಾಂಡ ಅಭಿವೃದ್ಧಿ ನಿಗಮಗಳಿಗೆ ಮೀಸಲಿಟ್ಟ ಹಣ ಏರಿಕೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿಗೆ ಏನು?

ತೆರಿಗೆ ಏರಿಕೆ ಫಿಕ್ಸ್

ತೆರಿಗೆ ಸಂಗ್ರಹ ಟಾರ್ಗೆಟ್ ದುಪ್ಪಟ್ಟು ಆಗುವ ಸಾಧ್ಯತೆ ಇದೆ. ಅಬಕಾರಿ ಇಲಾಖೆ 40 ಸಾವಿರ ಕೋಟಿ, ವಾಣಿಜ್ಯ ತೆರಿಗೆ 1,21 ಲಕ್ಷ ಸಾವಿರ ಕೋಟಿ, ನೋಂದಣಿ ಮತ್ತು ಮುದ್ರಾಂಕ 35 ಸಾವಿರ ಕೋಟಿ, ಸಾರಿಗೆ 20 ಸಾವಿರ ಕೋಟಿ ಕೊಡುವ ಸಾಧ್ಯತೆ ಇದ್ದು, ಒಟ್ಟಾರೆ 2.25 ಲಕ್ಷ ಕೋಟಿ ಈ ನಾಲ್ಕು ಇಲಾಖೆಗಳಿಂದ ಸಂಗ್ರಹಿಸಲು ಪ್ಲಾನ್ ಮಾಡಿದ್ದಾರೆ.

ಬೃಹತ್ ಗಾತ್ರದ ಬಜೆಟ್ ಖರ್ಚು ಹೊಂದಿಸಲು ತೆರಿಗೆ ಇನ್ನಷ್ಟು ತುಟ್ಟಿಯಾಗಲಿದೆ ಎನ್ನಲಾಗಿದೆ. ಅಬಕಾರಿ ಮೇಲೆ ತೆರಿಗೆ ಏರಿಕೆ, ಬಿಯರ್ ದರ ಐದು ರೂಪಾಯಿ ಏರಿಕೆ, ಸಿಗರೇಟ್ ದರ ಏರಿಕೆ, ಮುದ್ರಾಂಕ ಮತ್ತು ನೋಂದಣಿ ಮೇಲೆ ತೆರಿಗೆ ಹೆಚ್ಚಳ, ನಗರ ಪ್ರದೇಶಗಳಲ್ಲಿ ನೋಂದಣಿ ಮೇಲೆ ತೆರಿಗೆ ಹೆಚ್ಚಳ, ವಾಹನಗಳ ಮೇಲಿನ ತೆರಿಗೆ ಹೆಚ್ಚಳ, ಗಣಿಗಾರಿಕೆ ಅನುಮತಿ ಇನ್ನಷ್ಟು ಕಠಿಣ ಹಾಗೂ ಎರಡುಪಟ್ಟು ದರ ಏರಿಕೆ, ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ ‌ಇದೆ.

Karnataka Budget Session 2024 BJP leaders are goondas says CM Siddaramaiah

ಯಾರಿಗೆ ಬಂಪರ್?

-‌ ಹಾಲಿನ ದರ ಲೀಟರ್‌ಗೆ ಏರಿಕೆ ಮಾಡಿ ಹೈನೋದ್ಯಮಕ್ಕೆ ಗುಡ್ ನ್ಯೂಸ್

ಇನ್ನಷ್ಟು ಬಜೆಟ್ ನಿರೀಕ್ಷೆಗಳು ಹೀಗಿವೆ:

1)ಸುವರ್ಣ ಮಹೋತ್ಸವ ಹಸರಿನಲ್ಲಿ ಹಲವು ಅಭಿವೃದ್ಧಿ ಪೂರಕ ಯೋಜನಗಳು ತರುವ ಸಾಧ್ಯತೆ..
2)ಬಿಬಿಎಂಪಿ ಚುನಾವಣಾ ದೃಷ್ಟಿಯಿಂದ, ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚು ಒತ್ತು..
3)ಮೇಕೆದಾಟು ಯೋಜನೆ ಗೆ ಹಣ ಘೋಷಣೆ ಸಾಧ್ಯತೆ
4)ಬೆಂಗಳೂರಿನಲ್ಲಿ ಟನಲ್ ನಿರ್ಮಾಣಕ್ಕೆ ಅನುದಾನ
5)ನಮ್ಮ ಮೆಟ್ರೋ ಮಾರ್ಗ ವಿಸ್ತರಣೆ ಹೆಚ್ಚಿನ ಅನುದಾನ ಬಿಡುಗಡೆ ಸಾಧ್ಯತೆ
6)ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ವಿಶೇಷ ಹಣ ಮೀಸಲು
7)100 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ..
8)7ನೇ ವೇತನ ಆಯೋಗದ ವರದಿಯಲ್ಲಿನ ಕೆಲ ಅಂಶಗಳ ಘೋಷಣೆ ಸಾಧ್ಯತೆ..
9)2006ಕ್ಕಿಂತ ಮುಂಚೆ ನೇಮಕಾತಿ ಆದೇಶವಾದ ಸರ್ಕಾರಿ ನೌಕಕರಿಗೆ OPS ಭಾಗ್ಯ..
10)ಮದ್ಯದ ಮೇಲಿನ ಸುಂಕ ಏರಿಕೆ ಸಾಧ್ಯತೆ..
11)ಇಂದಿರಾ ಕ್ಯಾಂಟೀನ್‌ಗಳನ್ನು  ಜಿಲ್ಲಾ ಕೇಂದ್ರ , ತಾಲ್ಲೂಕಿನ ಕೇಂದ್ರಗಳಿಗೆ ವಿಸ್ತರಿಸುವ ಸಾಧ್ಯತೆ..
12) ಚಿಕ್ಕೋಡಿ, ಗೋಕಾಕ್ ಸೇರಿದಂತೆ ಕೆಲ ನೂತನ ಜಿಲ್ಲಾ ಕೇಂದ್ರಗಳ ಘೋಷಣೆ.
13)ಬೆಂಗಳೂರು ಅಥವಾ ಕಲಬುರಗಿಯಲ್ಲಿ ‘ವಚನ ಮಂಟಪ’ ಹಾಗೂ ‘ವಚನ ವಿಶ್ವವಿದ್ಯಾಲಯ’ ಸ್ಥಾಪನೆ..
14) ಸರ್ಕಾರಿ ಆಸ್ಪತ್ರೆಗಳ ದುರಸ್ತಿ ಮತ್ತು ನವೀಕರಣಕ್ಕೆ ಅಂದಾಜು 500 ಮೀಸಲು ಸಾಧ್ಯತೆ.
15)150 ಕೋಟಿ ವೆಚ್ಚದಲ್ಲಿ ಕೆ.ಸಿ.ಜನರಲ್ ಆಸ್ಪತ್ರೆ ಮೇಲ್ದರ್ಜೆಗೆ
16) ತಾಲ್ಲೂಕು ಆಸ್ಪತ್ರೆಗಳಿಗೆ ತಜ್ಞರು ವೈದ್ಯರು
17) ಪೆರಿಫೆರಲ್ ರಿಂಗ್ ರೋಡ್‌ಗೆ ಹೊಸ ಹೆಸರು ನಾಮಕರಣ ಇಕಾನಮಿಕ್‌ ಕಾರಿಡಾರ್ ಎಂದು ಬದಲಾಯಿಸಿ ಅನುಷ್ಠಾನ ಸಾಧ್ಯತೆ..
16 ) ತಾಯಿ ಮಕ್ಕಳ ಜಿಲ್ಲಾ ಆಸ್ಪತ್ರೆಗಳನ್ನ ಮೇಲ್ದರ್ಜೆಏರಿಸುವ ಸಾಧ್ಯತೆ..
17) ಬಿಬಿಎಂಪಿ ಮೂರು ಭಾಗದಲ್ಲಿ ವಿಂಗಡನೆಗೆ ಸೂಚಿಸುವ ಸಾಧ್ಯತೆ..
18) ಸೌಕರ್ಯ ಬಲವರ್ಧನೆ..
19) ಏಳು 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆಗಳ ನಿರ್ಮಾಣ ಸಾಧ್ಯತೆ..
20) ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ನಾಗರಿಕ ಸಹಾಯ ಕೇಂದ್ರ..
21) 50 ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ
22) ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೇರಿಸುವುದು..
23) ಜಿಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿಶಾಮಕ ವ್ಯವಸ್ಥೆಯ ಸ್ಥಾಪನೆ..
24) ರಾಜ್ಯದಲ್ಲಿ ತೀವ್ರ ಅಸ್ವಸ್ಥತೆಯಿಂದ ಪ್ರಾಣಾಪಾಯದಲ್ಲಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಪ್ರಾಣಗಳನ್ನು ಉಳಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ 50 ಹಾಗೂ 100 ಹಾಸಿಗೆಗಳ 7 ಕ್ರಿಟಿಕಲ್ ಕೇರ್ ಬ್ಲಾಕ್‌ಗಳ ಸ್ಥಾಪಿಸುವ ಸಾಧ್ಯತೆ.

ಇದನ್ನೂ ಓದಿ: Karnataka Budget Session 2024: ದೇಶಕ್ಕೆ ‘ಕರ್ನಾಟಕ ಮಾದರಿ’, ಕೇಸರಿ ಯಾರೊಬ್ಬರ ಸ್ವತ್ತಲ್ಲ: ಡಿ.ಕೆ. ಶಿವಕುಮಾರ್

Exit mobile version