Site icon Vistara News

Govt Teachers: ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಆಲಿಸಿದ ಸಚಿವ ಮಧು ಬಂಗಾರಪ್ಪ; ಹೋರಾಟ ನಿಲ್ಲದು ಎಂದ ಸಂಘ

Govt Teachers

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ (ಎಸ್.ಎಸ್.ಕೆ) ಭವನದಲ್ಲಿ ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ (Govt Teachers) ಬಡ್ತಿ ಪ್ರಕ್ರಿಯೆ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಭೆ ನಡೆಸಿದರು. ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಧ್ಯಕ್ಷ ಕೆ.ನಾಗೇಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ, ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ ಕಾವೇರಿ ಸೇರಿ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳೊಂದಿಗೆ ಮಧು ಬಂಗಾರಪ್ಪ (Madhu Bangarappa) ಸಭೆ ನಡೆಸಿದ್ದು, ಬೇಡಿಕೆ ಈಡೇರಿಸುವ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

“ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ್ದು, ಸಚಿವರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ” ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಳಿಸಿದೆ.

“ಸಚಿವರು ಸುದೀರ್ಘವಾಗಿ ಎಲ್ಲ ಅಂಶಗಳನ್ನು ಮುಕ್ತವಾಗಿ ಆಲಿಸಿ, ಹೋರಾಟ ಮಾಡುವುದು ಸಂಘಟನೆಯ ಹಕ್ಕಾಗಿದೆ. ಆದರೆ 12/08/24ರ ಹೋರಾಟದ ಬಗ್ಗೆ ಸಂಘಟನೆಯು ಮರು ಪರಿಶೀಲಿಸಿ. ಈ ಸಮಸ್ಯೆ ಬಗ್ಗೆ ಹರಿಸಲು ಮುಖ್ಯ ಮಂತ್ರಿಗಳ ಸಹಕಾರವೂ ಅತ್ಯಂತ ಅವಶ್ಯಕತೆ ಇದೆ. ಸಿಎಂ ಜತೆ ಶೀಘ್ರವೇ ಚರ್ಚಿಸುತ್ತೇನೆ. ಸಮಸ್ಯೆ ಪರಿಹಾರಕ್ಕಾಗಿ ಸೂಕ್ತ ಕಾಲವಕಾಶದ ಅಗತ್ಯ ಇದೆ” ಎಂದು ಸಂಘ ತಿಳಿಸಿದೆ. ಆದರೆ ಸಂಘವು, “ಸಮಸ್ಯೆಗಳಿಗೆ ಪರಿಹಾರವನ್ನು ಕಾರ್ಯರೂಪದಲ್ಲಿ ಶೀಘ್ರವಾಗಿ ನೀಡಬೇಕು” ಎಂಬ ಒತ್ತಡವನ್ನು ಹೇರಿದೆ.

ಹೋರಾಟ ಮುಂದುವರಿಕೆ

ಸರ್ಕಾರದಿಂದ ಸೂಕ್ತ ಆದೇಶ ಬರುವವರೆಗೂ ರಾಜ್ಯ ಕಾರ್ಯಕಾರಿ ಸಮಿತಿಯ ಒಕ್ಕೊರಲ ತೀರ್ಮಾನದಂತೆ ಹೋರಾಟವನ್ನು ಮುಂದುವರಿಸಲು ಸಂಘವು ನಿರ್ಧರಿಸಿದೆ ಎಂದು ಸಂಘವು ಮಾಹಿತಿ ನೀಡಿದೆ. ಆಗಸ್ಟ್‌ 12ರಂದು ಬೆಂಗಳೂರು ಚಲೋ, ಫ್ರೀಡಂ ಪಾರ್ಕ್ ಹೋರಾಟವನ್ನು ಹಿಂಪಡೆದಿಲ್ಲ. ಹೋರಾಟ ನಿಶ್ಚಿತವಾಗಿದ್ದು, ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗುವವರೆಗೂ ಸರಣಿ ಹೋರಾಟ ಮುಂದುವರಿಸಲಾಗುತ್ತದೆ” ಎಂದು ಸಂಘ ತಿಳಿಸಿದೆ.

ಆಗಸ್ಟ್‌ 12ರಂದು ನಮ್ಮ ನ್ಯಾಯಯುತ ಬೇಡಿಕೆಯ ತೀವ್ರತೆಯನ್ನು ನಮ್ಮ ಬೃಹತ್ ಸಂಖ್ಯೆ ಭಾಗವಹಿಸುವಿಕೆಯಿಂದ ಜಾಹಿರು ಮಾಡಬೇಕಿದೆ. ರಾಜ್ಯಾದ್ಯಂತ ಹೋರಾಟಕ್ಕೆ ತೋರುತ್ತಿರುವ ಉತ್ಸಾಹವು, ಈ ಕ್ಷಣದಿಂದ ನೂರ್ಮಡಿ ಗೊಳಿಸಬೇಕಿದೆ. ಪ್ರತಿ ಶಿಕ್ಷಕರ ಸಮಸ್ಯೆಯ ಪ್ರಯಧ್ವನಿಯಂತೆ ಮಾರ್ಧನಿಸಬೇಕಿದೆ. ತಾಲೂಕು, ಜಿಲ್ಲಾ ಘಟಕಗಳು ಬೆಂಗಳೂರಿಗೆ ಬರಲು ಸಕಲ ಸಿದ್ಧತೆಗಳನ್ನು ಬಹು ಕಾಳಜಿ, ಉತ್ಸಾಹದಿಂದ ಮಾಡಿಕೊಳ್ಳಬೇಕಿದೆ ಎಂದು ಸಂಘವು ಕರೆ ನೀಡಿದೆ.

ಪ್ರಮುಖ ಬೇಡಿಕೆಗಳು

ಇದನ್ನೂ ಓದಿ: Government Job: ಅಂತಾರಾಷ್ಟ್ರೀಯ ಕ್ರೀಡಾಕೂಟ ಪದಕ ಗೆದ್ದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ

Exit mobile version