ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ನೀಡುವ ವಿಚಾರವನ್ನು (Karnataka Job Reservation) ಮುನ್ನೆಲೆಗೆ ತಂದಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ. ವಿಧಾನಸೌಧದ ಪಡಸಾಲೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರದ ಮೇಲೆ ಹಗರಣಗಳು ಸುತ್ತಿಕೊಂಡಿವೆ. ಅವುಗಳನ್ನು ವಿಷಯಾಂತರ ಮಾಡುವುದಕ್ಕೆ ಮೀಸಲಾತಿ ವಿಚಾರವನ್ನು ಎತ್ತಿದ್ದಾರೆ ಎಂದು ಹೇಳಿದ್ದಾರೆ.
ಮೀಸಲಾತಿ ಕುರಿತು ಸರ್ಕಾರ ತನ್ನ ಪ್ರಕಟಣೆ ಹೊರಡಿಸಿದೆ. ಬಳಿಕ ಅದಕ್ಕೆ ತಡೆದಿದೆ. ಕರ್ನಾಟಕದಿಂದ ಖಾಸಗಿ ವಲಯದಲ್ಲಿ ಸಿ ಮತ್ತು ಡಿ ವಲಯದಿಂದ ಉದ್ಯೋಗ ಮೀಸಲಿಡಬೇಕು ಎಂಬುದರ ಕುರಿತು ಸಿಎಂ ತಮ್ಮ ನಿಲುವು ಪ್ರಕಟಿಸಬೇಕು. ನಿಮ್ಮ ಸರ್ಕಾರದ ಮೇಲೆ ಹಗರಣ ಸುತ್ತಿಕೊಂಡಿದೆ. ಅದಕ್ಕಾಗಿ ಈ ವಿಷಯವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದಿರು
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಹಣ ವರ್ಗಾವಣೆ ಮಾಡಿ ವಂಚನೆ ಮಾಡಿರೋದು ಸಿಎಂ ಗಮನಕ್ಕೂ ಬಂದಿದೆ. ಇದರಿಂದಾ ನಿಮ್ಮ ಸರ್ಕಾರದ ಘನತೆಗೆ ಚ್ಯುತಿ ತಂದಿದೆ. ಹೀಗಾಗಿ ಜನರನ್ನು ಭಾವನಾತ್ಮಕವಾಗಿ ಬದಲಾಯಿಸಲು ಮೀಸಲಾತಿ ವಿಚಾರವನ್ನು ಎತ್ತಲಾಗಿದೆ ಎಂದು ಸಿಟಿ ರವಿ ಆರೋಪಿಸಿದರು.
ಇದನ್ನೂ ಓದಿ: Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇತ್ತು ಆ 6 ಪ್ರಮುಖ ಕಾರಣಗಳು
ಉದ್ದಿಮೆಯಲ್ಲಿ ಎಷ್ಟು ಉದ್ಯೋಗ ಇದೆ. ಕನ್ನಡಿಗರಿಗೆ ಎಷ್ಟು, ಹೊರಗಿನವರಿಗೆ ಎಷ್ಟು ಅಂತಮಾಹಿತಿ ಪಡೆಯಬೇಕಿತ್ತು. ಯಾವ ಉದ್ಯೋಗಕ್ಕೆ ಕೌಶಲದ ಅವಶ್ಯಕತೆ ಇದೆ ಅಂತ ಮಾಹಿತಿ ಪಡೆಯಬೇಕಿತ್ತು. ಹಾಗಾದರೆ ಮಾತ್ರ ಅದು ಸರ್ಕಾರದ ಬದ್ಧತೆಯಾಗಲಿದೆ.
ಮೀಸಲಾತಿ ವಿಷಯದ ಕುರಿತು ಚರ್ಚಿಸಲು ಎಷ್ಟು ಸಭೆ ನಡೆಸಲಾಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿಗೆ ಬದ್ಧತೆ ಇದೆಯೇ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಬದಲಾಗಿದ್ದಾರೆ. ಈ ಹಗರಣಗಳೇ ಅದಕ್ಕೆ ಸ್ಪಷ್ಟ ಉದಾಹರಣೆ. ಚಾಮುಂಡೇಶ್ವರಿ ಉಪಚುನಾವಣೆ ಬಂದಾಗ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ಆಗ ನಾನು ಹೋರಾಟಗಾರರು ಸೋಲಬಾರದು ಎಂದು ಹೇಳಿದ್ದೆ. ಅಹಿಂದ ನಾಯಕರು ಗೆಲ್ಲಬೇಕು ಎಂದಿದ್ದೆ ಎಂದು ಸಿಟಿ ರವಿ ಹೇಳಿದ್ದಾರೆ.
ನಿಗಮದ ಹಣ, ಎಸ್ಸಿಪಿ ಮತ್ತು ಟಿಎಸ್ಪಿ ಹಣ ದುರ್ಬಳಕೆಗೆ ನಿಮ್ಮ ಸರ್ಕಾರವೇ ಹೊಣೆಯಾಗಿದೆ. ಅದರ ಲೂಟಿಯಲ್ಲಿ ಸಿಎಂ ಸಚಿವ ಸಂಪುಟ ಸಹೋದ್ಯೋಗಿ ಭಾಗಿಯಾಗಿದ್ದಾರೆ. ಹಿಂದಿನ ನಾಯಕ ಸಿದ್ದರಾಮಯ್ಯ ಇಂಥದ್ದನ್ನು ಸಹಿಸುತ್ತಿರಲಿಲ್ಲ. ಇದು ಕೇವಲ ಆಷಾಢ ಭೂತಿತನ ಅಷ್ಟೆ ಎಂದು ಸಿಟಿ ರವಿ ಹೇಳಿದ್ದಾರೆ.
ಎಸ್ಸಿಪಿ- ಟಿಎಸ್ಪಿ ಹಣ ದುರ್ಬಳಕೆ ಆಗಿದೆ. ಆ ಹಣ ಅವರಿಗೆ ಮಾತ್ರ ಬಳಕೆ ಆಗಬೇಕು. ಸರ್ಕಾರದ ಗ್ಯಾರಂಟಿ ಉದ್ದೇಶಕ್ಕೆ ಅಲ್ಲ. ಹೀಗಾಗಿ ಹಣ ಬಳಕೆಯನ್ನು ಕೂಡಲೇ ನಿಲ್ಲಿಸಬೇಕು. ವಾಲ್ಮೀಕಿ ನಿಗಮ, ಮುಡಾ, ಪರಿಶಿಷ್ಟರ ಹಣದ ಬಳಕೆಯ ಹೊಣೆಯನ್ನು ಸಿಎಂ ಹೊರಬೇಕು ಎಂದು ಸಿಟಿ ರವಿ ನುಡಿದಿದ್ದಾರೆ.
ಅರ್ಕಾವತಿ ರೀಡು ಹಗರಣ ಸಿಎಂ ಮೇಲೆ ಬಂದಿತ್ತು. ರಿಯಲ್ ಎಸ್ಟೇಟ್ ಉದ್ಯಮಗಳಿಂದ ಕೋಟ್ಯಂತ ರೂಪಾಯಿ ಪಡೆದಿರೋ ಆರೋಪ ಬಂದಿತ್ತು. ವಿಚಾರಣೆಗೆ ಕೆಂಪಣ್ಣ ಆಯೋಗ ರಚನೆ ಮಾಡಿದ್ದೀರಿ. ಬಳಿಕ ದೇಸಾಯಿ ಆಯೋಗ ರಚನೆ ಮಾಡಿದ್ದೀರಿ. ಸದನದಲ್ಲಿ ಮೊದಲು ಕೆಂಪಣ್ಣ ಆಯೋಗದ ವರದಿ ತಂದು ಬಳಿಕ ಅನ್ನು ಮುಚ್ಚಿಟ್ರಿ. ಬಳಿಕ ಸಾಯಿ ಆಯೋಗ ಸಿದ್ದಪಡಿಸಿದ್ದೀರಿ. ಬಳಿಕ ತಪ್ಪನ್ನು ಮುಚ್ಚಿಟ್ಟಿರಿ ಎಂದು ರವಿ ಅವರು ಆರೋಪಿಸಿದರು.
ಲೋಕಾಯುಕ್ತ ಪವರ್ ಕಡಿಮೆ ಮಾಡಿ, ಎಸಿಬಿ ರಚನೆ ಮಾಡಿದವರು ಸಿಎಂ ಸಿದ್ದರಾಮಯ್ಯ. ಎರಡೂ ಇಲಾಖೆ ದುರ್ಬಳಕೆ ಮಾಡಿಕೊಂಡವರು ನೀವೇ. ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಸಿಟಿ ರವಿ ಆಗ್ರಹಿಸಿದರು.