ಬೆಂಗಳೂರು: ರಾಜ್ಯದ ಖಾಸಗಿ ಕೈಗಾರಿಕೆಗಳು (Private industry) ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ (Kannadiga employees) ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ (karnataka jobs reservation) ನಿಗದಿಪಡಿಸುವ ವಿಧೇಯಕಕ್ಕೆ (private jobs quota for locals bill) ಸೋಮವಾರ ನಡೆದ ಸಚಿವ ಸಂಪುಟ ಸಭೆಯು (karnataka Cabinet meeting) ಒಪ್ಪಿಗೆ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramiah) ತಿಳಿಸಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ಇಂದು ಮುಂಜಾನೆ ಹಾಕಿದ್ದ ಪೋಸ್ಟ್ ಅನ್ನು ಅಳಿಸಿ ಬೇರೊಂದು ಪೋಸ್ಟ್ ಹಾಕಿದ್ದು, ಅದರಲ್ಲಿ ಈ ವಿಚಾರ ತಿಳಿಸಿದ್ದಾರೆ. ಪೋಸ್ಟ್‌ನಲ್ಲಿ ಹೀಗಿದೆ:
ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.
— CM of Karnataka (@CMofKarnataka) July 17, 2024
ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ… pic.twitter.com/efmv4gJ25d
“ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ.”
ಮುಂಜಾನೆ ಅವರು ಮಾಡಿದ್ದ ಪೋಸ್ಟ್‌ನಲ್ಲಿ, “ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ ʼಸಿʼ ಮತ್ತು ʼಡಿʼ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು ಕಡ್ಡಾಯಗೊಳಿಸುವ ವಿಧೇಯಕಕ್ಕೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ” ಎಂದು ಬರೆದಿದ್ದರು. ಈ ಬಗ್ಗೆ ಖಾಸಗಿ ಉದ್ಯಮ ವಲಯದಲ್ಲಿ ಕೋಲಾಹಲವೇ ಎದ್ದಿತ್ತು. ಕಿರಣ್ ಮಜುಂದಾರ್ ಶಾ, ಮೋಹನದಾಸ ಪೈ ಮುಂತಾದವರು ಈ ವಿಧೇಯಕವನ್ನು ಆಕ್ಷೇಪಿಸಿದ್ದರು. ಇದಾದ ಬಳಿಕ ಪೋಸ್ಟ್ ಅಳಿಸಿದ್ದ ಸಿಎಂ, ಇದೀಗ ಹೊಸ ಪೋಸ್ಟ್ ಮಾಡಿದ್ದಾರೆ.
ಎಚ್ಚರದಿಂದ ಕಾನೂನು ರೂಪಿಸುತ್ತೇವೆ: ಪೊನ್ನಣ್ಣ
“ಖಾಸಗಿ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳ ಮೇಲೆ ಕಾನೂನು ತರಬೇಕಾದರೆ ಸಂವಿಧಾನದ ಆಶಯಗಳಡಿಯ ಹಕ್ಕುಗಳ ಉಲ್ಲಂಘನೆಯಾಗದಂತೆ ಕಾನೂನು ಜಾರಿ ಮಾಡಬೇಕುʼ ಎಂದು ಸಿಎಂ ಕಾನೂನು ಸಲಹೆಗಾರರು ಪೊನ್ನಣ್ಣ ಹೇಳಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರದಲ್ಲಿ ಮಾತನಾಡಿರುವ ಅವರು, ʼಈ ಕಾನೂನುಗಳನ್ನ ನಾನು ಓದಿಲ್ಲ. ಓದಿದ ಮೇಲೆ ಮಾತನಾಡಬಹುದು. ಗಂಭೀರವಾಗಿ ಅಧ್ಯಯನ ಮಾಡಿ ಅದನ್ನು ಜಾರಿಮಾಡುವ ಕೆಲಸವಾಗುತ್ತೆʼ ಎಂದಿದ್ದಾರೆ.
ʼಖಾಸಗಿ ಕಂಪನಿಗಳಿಗೆ ಹಾಗೂ ವ್ಯಕ್ತಿಗಳಿಗೆ ರಾಜ್ಯಾಂಗ, ರಾಜ್ಯದ ಸಂಸ್ಥೆಗಳಿಗಿಂತ ಹೆಚ್ಚಿನ ಮೂಲಭೂತ ಹಕ್ಕುಗಳಿರುತ್ತವೆ. ಸರ್ಕಾರ ಅದರಲ್ಲಿ ಹಸ್ತಕ್ಷೇಪ ಮಾಡುವ ಅವಕಾಶ ಕಡಿಮೆ. ಕನ್ನಡಿಗರಿಗೆ ಮೀಸಲಾತಿ ಕೋಡುವುದರಲ್ಲಿ ಸಂಶಯವಿಲ್ಲ. ಅದರಲ್ಲಿ ಶಾಲೆಗಳು, ಸರ್ಕಾರದ ಅನುದಾನ ಪಡೆಯುವಂತಹ ಸಂಸ್ಥೆಗಳಲ್ಲಿ ಮೀಸಲಾತಿ ಕೊಡಬಹುದು. ಸಂಪೂರ್ಣ ಖಾಸಗಿ ಸಂಸ್ಥೆಗಳಿಗೆ ಮೀಸಲಾತಿ ಕೋಡುವ ವೇಳೆ ಅದನ್ನು ಸಂಪೂರ್ಣ ಪರಿಶೀಲನೆ ಮಾಡಿ ಕೊಡಬೇಕಾಗುತ್ತದೆ. ಕೋರ್ಟ್‌ಗಳಲ್ಲಿ ನಾಳೆ ಪ್ರಶ್ನೆ ಮಾಡಿದರೆ ಅದರಲ್ಲೂ ಯಶಸ್ವಿಯಾಗಬೇಕು. ಕ್ಯಾಬಿನೆಟ್‌ನಲ್ಲಿ ಮಾಡಿರುತ್ತಾರೆ ಅಂದ್ರೆ ಸಂಪೂರ್ಣ ಅಧ್ಯಯನ ಮಾಡಿರುತ್ತಾರೆ. ಸಿದ್ದರಾಮಯ್ಯ ಅವರ ಸರ್ಕಾರ ಕನ್ನಡಿಗರ ಏಳ್ಗೆಗೆ ಬದ್ಧವಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: CM Siddaramaiah : ಅಸಮಾನತೆ ತೊಲಗಿದಾಗ ಮಾತ್ರ ಸ್ವಾತಂತ್ರ್ಯಕ್ಕೆ ಬೆಲೆ ಎಂದ ಸಿಎಂ ಸಿದ್ದರಾಮಯ್ಯ