Site icon Vistara News

Karnataka Live News: ಎಚ್‌ಡಿಕೆ ಪೆನ್‌ಡ್ರೈವ್‌ ವಾರ್‌ನಿಂದ, ಬೆಂಗಳೂರಿನಲ್ಲಿ ಮಳೆ ವಾರ್ನಿಂಗ್‌ವರೆಗಿನ ಪ್ರಮುಖ ಸುದ್ದಿಗಳಿವು

Karnataka Live News Updates

ಬೆಂಗಳೂರು: ನೂತನ ವಿಧಾನಸಭೆ ಮೂರನೇ ದಿನದ ಅಧಿವೇಶನ ಇಂದು ರಂಗೇರಲಿದೆ. ಇದೂ ಸೇರಿದಂತೆ ಇನ್ನೂ ಹಲವಾರು ರಾಜಕೀಯ ಮತ್ತಿತರ ಬೆಳವಣಿಗೆಗಳ ಕ್ಷಣಕ್ಷಣದ ಸುದ್ದಿ ಅಪ್‌ಡೇಟ್‌ಗಳಿಗೆ (Karnataka Live News) ಇಲ್ಲಿ ಗಮನಿಸಿ.

Ramesha Doddapura

Vistara Top 10 News: ಎಚ್‌ಡಿಕೆ ಪೆನ್‌ಡ್ರೈವ್‌ ವಾರ್‌ನಿಂದ, ಬೆಂಗಳೂರಿನಲ್ಲಿ ಮಳೆ ವಾರ್ನಿಂಗ್‌ವರೆಗಿನ ಪ್ರಮುಖ ಸುದ್ದಿಗಳಿವು

ರಾಜ್ಯದಲ್ಲಿ ಕೇಳಿಬರುತ್ತಿದ್ದ ಸಿಡಿ ರಾಜಕಾರಣ ಈಗ ತಂತ್ರಜ್ಞಾನ ಬೆಳವಣಿಗೆ ಹಿನ್ನೆಲೆಯಲ್ಲಿ ಪೆನ್‌ಡ್ರೈವ್‌ನತ್ತ ತಿರುಗಿದೆ, ಮಹಾರಾಷ್ಟ್ರದಲ್ಲಿ ಮತ್ತೊಂದು ʼಶಿವಸೇನೆʼ ಎಪಿಸೋಡ್‌ ನಡೆಯುತ್ತಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಧ vistara TOP 10 NEWS ನಲ್ಲಿ.

Vistara Top 10 News: ಎಚ್‌ಡಿಕೆ ಪೆನ್‌ಡ್ರೈವ್‌ ವಾರ್‌ನಿಂದ, ಬೆಂಗಳೂರಿನಲ್ಲಿ ಮಳೆ ವಾರ್ನಿಂಗ್‌ವರೆಗಿನ ಪ್ರಮುಖ ಸುದ್ದಿಗಳಿವು
Adarsha Anche

Weather Report : ನಾಳೆ, ನಾಡಿದ್ದು ಭಯಂಕರ ಮಳೆ; ಗಾಳಿಯ ಶರವೇಗ 65 ಕಿ.ಮೀ!

ಕರಾವಳಿ ಭಾಗವಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಅತಿಯಾದ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುರುವಾರ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

Ramesha Doddapura

ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಸಿಡಿದೆದ್ದ 40% ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘ

ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್‌ ಆರೋಪ ಮಾಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದ್ದ ಕರ್ನಾಟಕ ಸ್ಟೇಟ್‌ ಕಾಂಟ್ರಾಕ್ಟರ್ಸ್‌ ಅಸೋಸಿಯೇಷನ್‌ ಇದೀಗ ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಸಿಡಿದೆದ್ದಿದೆ. ಸರ್ಕಾರ ರಚನೆಯಾಗಿ ಒಂದೂವರೆ ತಿಂಗಳಾದರೂ ಗುತ್ತಿಗೆದಾರರ ಬಿಲ್‌ ಪಾವತಿ ಮಾಡುತ್ತಿಲ್ಲ ಎಂದಿರುವ ಸಂಘ, ಈ ಕುರಿತು ನಿರ್ಧಾರ ಕೈಗೊಳ್ಳಲು ಜುಲೈ 15ರ ಗಡುವು ನೀಡಿದೆ.

Karnataka Politics: ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಸಿಡಿದೆದ್ದ 40% ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘ

Adarsha Anche

Rain News : ವರ್ಷಧಾರೆಗೆ ಕರಾವಳಿ ತತ್ತರ; ಬುಧವಾರ ಒಂದೇ ದಿನ ಉ.ಕ.ದಲ್ಲಿ 18, ದ.ಕ.ದಲ್ಲಿ 17 ಸೆಂ.ಮೀ. ಮಳೆ!

ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದೆ. ಅಲ್ಲದೆ, ಬುಧವಾರ ಒಂದೇ ದಿನ ಕರಾವಳಿ ತೀರದ ಜಿಲ್ಲೆಗಳಲ್ಲಿ ಭಾರಿ ವರ್ಷಧಾರೆಯಾಗಿದೆ. ಇನ್ನು ದಕ್ಷಿಣ ಕನ್ನಡದ ಸಮುದ್ರತೀರದಲ್ಲಿ ಗಾಳಿಯ ವೇಗವು ಸುಮಾರು 80 ಕಿ.ಮೀ. ಇದ್ದು, ಸಮುದ್ರದಲ್ಲಿ ದೊಡ್ಡ ಗಾತ್ರದ ಅಲೆಗಳು ಎದ್ದು ಆತಂಕವನ್ನು ಸೃಷ್ಟಿ ಮಾಡಿತ್ತು.

Rain News : ವರ್ಷಧಾರೆಗೆ ಕರಾವಳಿ ತತ್ತರ; ಬುಧವಾರ ಒಂದೇ ದಿನ ಉ.ಕ.ದಲ್ಲಿ 18, ದ.ಕ.ದಲ್ಲಿ 17 ಸೆಂ.ಮೀ. ಮಳೆ!
Krishna Bhat

Traffic fine rebate : ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದವರಿಗೆ ಶುಭ ಸುದ್ದಿ, ಮತ್ತೆ ಬಂದಿದೆ 50% ರಿಯಾಯಿತಿ!

ಬೆಂಗಳೂರು: ನೀವು ಇತ್ತೀಚೆಗೆ ಟ್ರಾಫಿಕ್‌ ರೂಲ್ಸ್‌ (Traffic rules) ಬ್ರೇಕ್‌ ಮಾಡಿದ್ದೀರಾ? ಸಿಗ್ನಲ್‌ ಜಂಪ್‌ ಆಗಿದೆಯಾ? ಹೆಲ್ಮೆಟ್‌ ಇಲ್ಲದೆ ಓಡಾಡಿದ್ದೀರಾ? ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನ ನಿಲ್ಲಿಸಿದ್ದೀರಾ? ಏನೋ ತಪ್ಪು ಮಾಡಿದ್ದಕ್ಕೆ ಪೊಲೀಸರು ಹಿಡಿದು ಫೈನ್‌ ಹಾಕಿದ್ದಾರಾ? ಹೀಗೊಮ್ಮೆ ನಿಮಗೆ ಫೈನ್‌ ಬಿದ್ದಿದ್ದರೆ ಬಿದ್ದ ದಂಡದ ಅರ್ಧದಷ್ಟು ಕಟ್ಟಿ ಕ್ಲಿಯರ್‌ ಮಾಡಿಸಿಕೊಳ್ಳುವ ಮತ್ತೊಂದು ಅವಕಾಶವನ್ನು (Traffic Fine Rebate) ಸರ್ಕಾರ ನೀಡಿದೆ.

Exit mobile version