ಬೆಂಗಳೂರು: ನೂತನ ವಿಧಾನಸಭೆ ಮೂರನೇ ದಿನದ ಅಧಿವೇಶನ ಇಂದು ರಂಗೇರಲಿದೆ. ಇದೂ ಸೇರಿದಂತೆ ಇನ್ನೂ ಹಲವಾರು ರಾಜಕೀಯ ಮತ್ತಿತರ ಬೆಳವಣಿಗೆಗಳ ಕ್ಷಣಕ್ಷಣದ ಸುದ್ದಿ ಅಪ್‌ಡೇಟ್‌ಗಳಿಗೆ (Karnataka Live News) ಇಲ್ಲಿ ಗಮನಿಸಿ.
KSP Recruitment : ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕ; ಆಗಸ್ಟ್ 6 ರಂದು ಲಿಖಿತ ಪರೀಕ್ಷೆ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯು ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) 3,484 (ಕಲ್ಯಾಣ ಕರ್ನಾಟಕದ 420) ಹುದ್ದೆಗಳ (KSP Recruitment) ನೇಮಕಕ್ಕೆ ಆಗಸ್ಟ್ 6 ರಂದು ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಸದ್ಯವೇ ಈ ಸಂಬಂಧ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟವಾಗಲಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
Bitcoin Scam : SIT ತನಿಖೆ ಆದೇಶದ ಬೆನ್ನಿಗೇ ಶ್ರೀಕಿ ವಿರುದ್ಧ ಚಾರ್ಜ್‌ಶೀಟ್ ಹಾಕಿದ ಇ.ಡಿ
ನವದೆಹಲಿ : ಕರ್ನಾಟಕದಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಿಟ್ ಕಾಯಿನ್ ಹಗರಣದ ಬಗ್ಗೆ ಕಾಂಗ್ರೆಸ್ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ನೀಡಿದ ಬೆನ್ನಿಗೇ ಜಾರಿ ನಿರ್ದೇಶನಾಲಯವೂ ಕಣಕ್ಕಿಳಿದಿದೆ. ಪ್ರಧಾನ ಆರೋಪಿ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಮತ್ತು 19 ಮಂದಿಯ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಸಿದೆ. 2019ರಲ್ಲಿ ಕರ್ನಾಟಕ ಸರ್ಕಾರದ ಇ-ಗವರ್ನೆನ್ಸ್ ಘಟಕವನ್ನು ಹ್ಯಾಕ್ ಮಾಡಿ 11.5 ಕೋಟಿ ರೂ. ಕಳವು ಮಾಡಿದ ಪ್ರಕರಣದಲ್ಲಿ ಜಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
Rain News : ಮಳೆಯಬ್ಬರಕ್ಕೆ ಹಲವೆಡೆ ಗುಡ್ಡ, ಮನೆ ಕುಸಿತ; ಅವಘಡಕ್ಕೆ ಮೂವರ ಸಾವು
ರಾಜ್ಯದ ಹಲವು ಕಡೆ ಭಾರಿ ಮಳೆಯಾಗುತ್ತಿದೆ. ಹಾಗೇ ಅವಘಡಗಳೂ ಹೆಚ್ಚುತ್ತಿವೆ. ಮಂಗಳವಾರ ರಾತ್ರಿಯಿಂದ ಸುರಿದ ಮಳೆಗೆ ಒಟ್ಟು ಮೂವರು ಬಲಿಯಾಗಿದ್ದಾರೆ. ಕೆಲವು ಕಡೆ ಗುಡ್ಡ, ಮನೆಗಳು ಕುಸಿದಿವೆ. ಆತಂಕದ ಛಾಯೆ ನಿರ್ಮಾಣವಾಗಿದೆ.
Rain News : ಮಳೆಯಬ್ಬರಕ್ಕೆ ಹಲವೆಡೆ ಗುಡ್ಡ, ಮನೆ ಕುಸಿತ; ಅವಘಡಕ್ಕೆ ಮೂವರ ಸಾವು
PDO Recruitment 2023 : 150 ಪಿಡಿಒ ಹುದ್ದೆಗಳಿಗೆ ನೇಮಕ ಖಚಿತ; ಸದ್ಯವೇ ಅಧಿಸೂಚನೆ
ಬೆಂಗಳೂರು: ನೇರ ನೇಮಕಾತಿ ಕೋಟಾದಲ್ಲಿ ಪ್ರಸ್ತುತ 385 ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳು ಖಾಲಿ ಇದ್ದು, ಈ ಪೈಕಿ 150 ಹುದ್ದೆಗಳಿಗೆ ನೇರ ನೇಮಕಾತಿ (PDO Recruitment 2023) ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (Rural Development and Panchayath Raj Department-RDPR) ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ವಿಹಿಂಪ ನಾಯಕ ಕೇಶವ ಹೆಗಡೆ ಹೃದಯಾಘಾತದಿಂದ ನಿಧನ
ವಿಶ್ವ ಹಿಂದು ಪರಿಷತ್ತಿನ (Vishwa Hindu Parishad) ಹಿರಿಯ ಮುಖಂಡ ಹಾಗೂ ಕ್ಷೇತ್ರೀಯ ಸಂಘಟನಾ ಮಂತ್ರಿ ಕೇಶವ ಹೆಗಡೆ(63) ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.
Vishwa Hindu Parishad: ವಿಹಿಂಪ ನಾಯಕ ಕೇಶವ ಹೆಗಡೆ ಹೃದಯಾಘಾತದಿಂದ ನಿಧನ