ಬೆಂಗಳೂರು: ನೂತನ ವಿಧಾನಸಭೆ ಮೂರನೇ ದಿನದ ಅಧಿವೇಶನ ಇಂದು ರಂಗೇರಲಿದೆ. ಇದೂ ಸೇರಿದಂತೆ ಇನ್ನೂ ಹಲವಾರು ರಾಜಕೀಯ ಮತ್ತಿತರ ಬೆಳವಣಿಗೆಗಳ ಕ್ಷಣಕ್ಷಣದ ಸುದ್ದಿ ಅಪ್‌ಡೇಟ್‌ಗಳಿಗೆ (Karnataka Live News) ಇಲ್ಲಿ ಗಮನಿಸಿ.
Rain News: ಹೊಸನಗರದ ಮಾಣಿಯಲ್ಲಿ ಒಂದೇ ದಿನ 14 ಸೆಂ.ಮೀ. ಮಳೆ! ತುಂಬಿತು ತುಂಗಾ ಜಲಾಶಯ
ರಾಜ್ಯದಲ್ಲಿ ಅತ್ಯಂತ ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾದ ಮಾಣಿಯಲ್ಲಿ ವರುಣ ಅಬ್ಬರಿಸಿದ್ದಾನೆ. ಇಲ್ಲಿ ಮಂಗಳವಾರ (ಜೂನ್ 4) ಒಂದೇ ದಿನ 14 ಸೆಂ.ಮೀ. ಮಳೆ ಸುರಿದಿದೆ.
ನಿಲುವಳಿಯನ್ನು 69ಕ್ಕೆ ಬದಲಿಸಿದ ಸ್ಪೀಕರ್: ಗ್ಯಾರಂಟಿ ಚರ್ಚೆಯಲ್ಲಿ ಬಿಜೆಪಿ ವಿರುದ್ಧ ಸರ್ಕಾರಕ್ಕೆ ಮೇಲುಗೈ
ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಹಾಗೂ ರಾಜ್ಯದ ಹಣಕಾಸು ಸ್ಥಿತಿಗತಿಯ ಕುರಿತು ವಿಧಾನಸಭೆಯಲ್ಲಿ (Assembly Session) ನಿಯಮ 61ರ ಅಡಿಯಲ್ಲಿ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂಬ ಬಿಜೆಪಿ ಬೇಡಿಕೆಯನ್ನು ಸ್ಪೀಕರ್ ಯು.ಟಿ. ಖಾದರ್ ತಳ್ಳಿಹಾಕಿದ್ದಾರೆ.
Assembly Session: ನಿಲುವಳಿಯನ್ನು 69ಕ್ಕೆ ಬದಲಿಸಿದ ಸ್ಪೀಕರ್: ಗ್ಯಾರಂಟಿ ಚರ್ಚೆಯಲ್ಲಿ ಬಿಜೆಪಿ ವಿರುದ್ಧ ಸರ್ಕಾರಕ್ಕೆ ಮೇಲುಗೈ
ICAI CA Results 2023 : ಸಿಎ ಫಲಿತಾಂಶ ಪ್ರಕಟ; ಅಹ್ಮದಾಬಾದ್‌ನ ಅಕ್ಷಯ್ ಜೈನ್ ಫಸ್ಟ್ ರ‍್ಯಾಂಕ್
ನವ ದೆಹಲಿ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾವು (ಐಸಿಎಐ) ಚಾರ್ಟರ್ಡ್ ಅಕೌಂಟೆನ್ಸಿ ಅಂತಿಮ ಪರೀಕ್ಷೆ (ICAI CA Results 2023) ಮತ್ತು ಇಂಟರ್ ಫೈನಲ್ ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.
Road Accident : ವೇಗವಾಗಿ ಬಂದು ನವಿಲಿಗೆ ಗುದ್ದಿದ ಬೈಕ್; ಗಿಡದ ಮೇಲೆ ಹಾರಿ ಬಿದ್ದ ಬೈಕ್: ನವಿಲು ಸಾವು
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ವೇಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆಗೆ ನವಿಲೊಂದು ಅಡ್ಡ ಬಂದು ಅಪಘಾತವಾಗಿದೆ. ಈ ವೇಳೆ ನವಿಲು ಮೃತಪಟ್ಟಿದೆ.
Road Accident : ವೇಗವಾಗಿ ಬಂದು ನವಿಲಿಗೆ ಗುದ್ದಿದ ಬೈಕ್; ಗಿಡದ ಮೇಲೆ ಹಾರಿ ಬಿದ್ದ ಬೈಕ್: ನವಿಲು ಸಾವು
ಇಂಧನ ಇಲಾಖೆಯಲ್ಲಿ 10 ಕೋಟಿ ರೂ.ಗೆ ಒಂದು ಟ್ರಾನ್ಸ್‌ಫರ್: ಪೆನ್‌ಡ್ರೈವ್ ಹಿಡಿದೇ ಸದನಕ್ಕೆ ಬಂದ HDK
ರಾಜ್ಯ ಸರ್ಕಾರದ (Karnataka Politics) ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮುಂದುವರಿಸಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಈ ಬಾರಿ ಭ್ರಷ್ಟಾಚಾರದ ದಾಖಲೆಯಾಗಿ ಆಡಿಯೋ ಫೈಲ್ ಇರುವ ಪೆನ್‌ಡ್ರೈವ್ ಹಿಡಿದೇ ಸದನಕ್ಕೆ ಆಗಮಿಸಿದ್ದಾರೆ.
Karnataka Politics: ಇಂಧನ ಇಲಾಖೆಯಲ್ಲಿ 10 ಕೋಟಿ ರೂ.ಗೆ ಒಂದು ಟ್ರಾನ್ಸ್‌ಫರ್: ಪೆನ್‌ಡ್ರೈವ್ ಹಿಡಿದೇ ಸದನಕ್ಕೆ ಬಂದ HDK