Site icon Vistara News

Karnataka live news: ಅಕ್ಬರ್‌-ಆಂಟನಿ ಖುಷ್‌, ಅಮರ್‌ ಮಟ್ಯಾಷ್‌ ಎಂದ ಸಿಸಿ ಪಾಟೀಲ್‌: 1 ವರ್ಷ ಕಾಯಿರಿ ಎಂದ ಎಂ.ಬಿ. ಪಾಟೀಲ್‌

Karnataka Live News

ಬೆಂಗಳೂರು: ಈ ವರ್ಷದ ಬಜೆಟ್‌ನಲ್ಲಿ ಐದು ಗ್ಯಾರಂಟಿಗಳ ಕಡೆಗೆ ಗಮನಹರಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ಅನುದಾನ ನೀಡಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.
ಕೆಬಿಜೆಎನ್ಎಲ್ ಮುಳವಾಡ ಏತ ನೀರಾವರಿ ಹಂತ 3 ರಡಿಯ ಬಬಲೇಶ್ವರ ಶಾಖಾ ಕಾಲುವೆ 1 ಹಾಗೂ 2 ವಿತರಣಾ ಕಾಲುವೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದರು.

Krishna Bhat

Siddaramaiah : ಬಜೆಟ್‌ ಮಂಡನೆ ಬಳಿಕ ವಿಪರೀತ ಕೆಮ್ಮಿನಿಂದ ಬಳಲುತ್ತಿರುವ ಸಿದ್ದರಾಮಯ್ಯ, ಯಾರ ಭೇಟಿಯೂ ಇಲ್ಲ

ಬೆಂಗಳೂರು: ಎರಡನೇ ಬಾರಿ ಮುಖ್ಯಮಂತ್ರಿ (Chief Minister) ಪಟ್ಟಕ್ಕೇರಿರುವ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ತಮ್ಮ ಎರಡನೇ ಅವಧಿಯ ಮೊದಲ ಮತ್ತು ರಾಜಕೀಯ ಬದುಕಿನ 14ನೇ ಬಜೆಟನ್ನು (Karnataka Budget 2023-24) ಮಂಡಿಸಿದ್ದರು. ಸುಮಾರು 2 ಗಂಟೆ 54 ನಿಮಿಷಗಳ ಕಾಲ ಸುದೀರ್ಘ ಬಜೆಟ್‌ ಭಾಷಣ ಮಾಡಿದ ಅವರು ನಡು ನಡುವೆ ಕೆಮ್ಮುತ್ತಿದ್ದರು. ಬಜೆಟ್‌ ಮಂಡನೆ ಮುಕ್ತಾಯದ ಬಳಿಕ ಈ ಕೆಮ್ಮು ಹೆಚ್ಚಾಗಿದ್ದು, ಹೀಗಾಗಿ ಮುಖ್ಯಮಂತ್ರಿಗಳು ಶನಿವಾರ (ಜುಲೈ 8) ವಿಶ್ರಾಂತಿಯಲ್ಲಿದ್ದಾರೆ.

Deepa S

ಸೊಪ್ಪು ತರಕಾರಿಗಳ ರೇಟು ಇಳಿಕೆ ಯಾವಾಗ?

ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದೀಗ ದಿನನಿತ್ಯ ಬಳಸುವ ಸೊಪ್ಪು-ತರಕಾರಿ ಬೆಲೆ ಗಗನಕ್ಕೇರಿದ್ದು (Vegetable Price Hike) ಜನಸಾಮಾನ್ಯರನ್ನು ಕಂಗೆಡಿಸಿದೆ. ಮದುವೆ ಸೀಸನ್, ಹಬ್ಬಹರಿದಿನಗಳು ಇಲ್ಲದಿದ್ದರೂ ತರಕಾರಿ ಬೆಲೆಗಳು ಮಾತ್ರ ಏರುತ್ತಿವೆ. ಟೊಮ್ಯಾಟೊ ನೂರರ ಗಡಿ ದಾಟಿದ್ದು ಆಗಿದೆ. ವಾರ ಕಳೆದರೂ ಸೊಪ್ಪು- ತರಕಾರಿ ದರಗಳು ಕಡಿಮೆಯಾಗಿಲ್ಲ. ಹೀಗಾಗಿ ರೇಟು ಇಳಿಕೆ ಯಾವಾಗ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.

Vegetable Price Hike : ಮಳೆ ಅಬ್ಬರ; ಸೊಪ್ಪು ತರಕಾರಿಗಳ ರೇಟು ಇಳಿಕೆ ಯಾವಾಗ?
Krishna Bhat

Namma Metro : ಗಮನಿಸಿ, ಜುಲೈ 10ರಿಂದ 1 ತಿಂಗಳ ಕಾಲ ಮೆಟ್ರೋ ಸಂಚಾರ ಬಂದ್‌; ಎಲ್ಲಿ?

ಬೆಂಗಳೂರು: ಬೆಂಗಳೂರನ್ನು ಮೆಟ್ರೋ ಹಬ್‌ (Namma Metro) ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಬಜೆಟ್‌ನಲ್ಲಿ ಕೆಲವು ಯೋಜನೆಗಳನ್ನು ಪ್ರಕಟಿಸಿದೆ. ಈ ನಡುವೆ ಮೆಟ್ರೋ ಸಂಚಾರ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಕೆಲವು ಬದಲಾವಣೆಗಳನ್ನು ಪ್ರಕಟಿಸಲಾಗಿದೆ. ಇದರ ಪ್ರಕಾರ ಜು.10ರಿಂದ ಆಗಸ್ಟ್​ 9ರವರೆಗೆ ಒಂದು ತಿಂಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ (Metro operation) ಉಂಟಾಗಲಿದೆ. ಈ ಅವಧಿಯಲ್ಲಿ ಪ್ರತಿ ದಿನ ಎರಡು ಗಂಟೆಗಳ ಕಾಲ ಮೆಟ್ರೋ ಸಂಚಾರ ಬಂದ್‌ ಆಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.

Deepa S

ಕರಾವಳಿಗೆ ಆರೆಂಜ್‌, ಮಲೆನಾಡಿಗೆ ಯೆಲ್ಲೋ ಅಲರ್ಟ್‌

ಕರ್ನಾಟಕ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮುಂಗಾರು (Southwest monsoon) ಸಕ್ರಿಯಗೊಂಡಿದ್ದು, ವಾರಂತ್ಯದಲ್ಲಿ ಗುಡುಗು ಸಹಿತ ಭಾರಿ (Heavy rain alert) ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Weather report) ಸಾಧ್ಯತೆ ಇದ್ದರೆ, ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ (Rain News) ಮಳೆಯಾಗಲಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ.

Weather Report : ಕರಾವಳಿಗೆ ಆರೆಂಜ್‌, ಮಲೆನಾಡಿಗೆ ಯೆಲ್ಲೋ ಅಲರ್ಟ್‌; ಬೆಂಗಳೂರಿನಲ್ಲಿ ಹೇಗಿರಲಿದೆ ಮಳೆ ಅಬ್ಬರ
Deepa S

ಕುಡಿತದ ಮತ್ತಿನಲ್ಲಿ ಬಸ್ಸಿಗೆ ಮದ್ಯದ ಬಾಟಲ್‌ ಎಸೆತ

ಚಿಕ್ಕಮಗಳೂರಿನ ಕಡೂರು ತಾಲೂಕಿನ ಬೀರೂರು ಸಮೀಪ ಕುಡಿತದ ಮತ್ತಿನಲ್ಲಿ (drunk and drive) ಯುವಕರು ರಂಪಾಟ ಮಾಡಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸಿನ ಮೇಲೆ ಮದ್ಯದ ಬಾಟಲ್ (Assault Case) ಎಸೆದಿದ್ದಾರೆ. ಮದ್ಯದ ಬಾಟೆಲ್‌ ತಗುಲಿ ಬಸ್ಸಿನ ಮುಂಭಾಗದ ಗಾಜು ಪುಡಿ ಪುಡಿಯಾಗಿದೆ.

Assault Case : ಕುಡಿತದ ಮತ್ತಿನಲ್ಲಿ ಬಸ್ಸಿಗೆ ಮದ್ಯದ ಬಾಟಲ್‌ ಎಸೆತ; ಡ್ರೈವರ್‌ ಜತೆ ಪುಂಡ ಯುವಕರ ರೌಡಿಸಂ
Exit mobile version