ಬೆಂಗಳೂರು: ಈ ವರ್ಷದ ಬಜೆಟ್ನಲ್ಲಿ ಐದು ಗ್ಯಾರಂಟಿಗಳ ಕಡೆಗೆ ಗಮನಹರಿಸಲಾಗಿದ್ದು, ಮುಂದಿನ ಬಜೆಟ್ನಲ್ಲಿ ಮಠಮಾನ್ಯಗಳಿಗೆ ಅನುದಾನ ನೀಡಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಕೆಬಿಜೆಎನ್ಎಲ್ ಮುಳವಾಡ ಏತ ನೀರಾವರಿ ಹಂತ 3 ರಡಿಯ ಬಬಲೇಶ್ವರ ಶಾಖಾ ಕಾಲುವೆ 1 ಹಾಗೂ 2 ವಿತರಣಾ ಕಾಲುವೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದರು.
ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆಯಾದ ಜೈನಮುನಿ
ಚಿಕ್ಕೋಡಿ: ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ಹಿಂದಿನ ರಹಸ್ಯ ಬಯಲಾಗಿದ್ದು, ಆರೋಪಿ ಜೊತೆಗಿದ್ದುಕೊಂಡೇ ಮುನಿಗಳ ಹತ್ಯೆಗೈದಿದ್ದಾನೆ. ಮುನಿಗಳ ವಿಶ್ವಾಸ ಗಳಿಸಿ ಅವರಿಂದ ಲಕ್ಷಾಂತರ ರೂ. ಹಣ ಪಡೆದಿದ್ದ ಆರೋಪಿ, ನೀಡಿದ ಹಣ ವಾಪಸ್ ಕೇಳಿದ್ದಕ್ಕೆ ಅವರನ್ನು ಹತ್ಯೆ ಮಾಡಿದ್ದಾನೆ.
ಹೆಚ್ಡಿಕೆ ಪೆನ್ ಡ್ರೈವ್ನಲ್ಲಿ ಏನಿದೆ?
ಬೆಂಗಳೂರು: ದಾಖಲೆ ಇಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಮಾಜಿ ಸಿಎಂ ಹೆಚ್ಡಿಕೆ ಅವರ ಪೆನ್ಡ್ರೈವ್ನಲ್ಲಿ ಏನಿದೆ ಎಂಬ ಕುತೂಹಲ ಇನ್ನೂ ಬೆಳೆದಿದ್ದು, ಸರ್ಕಾರದೊಳಗಿನ ಭ್ರಷ್ಟಾಚಾರದ ದಾಖಲೆ ಹೊಂದಿದೆ ಎಂದು ಹೇಳಲಾಗಿದೆ. ಸಮಯ ಬಂದಾಗ ಅದರಲ್ಲಿನ ದಾಖಲೆ ಬಿಡುಗಡೆ ಮಾಡುವುದಾಗಿ ಹೆಚ್ಡಿಕೆ ತಿಳಿಸಿದ್ದು, ಅದರಲ್ಲಿ ಸಚಿವರಿಬ್ಬರ ನಡುವಿನ ಸಂಭಾಷಣೆಯ ಆಡಿಯೋ ಇದೆ ಎಂದು ತಿಳಿದುಬಂದಿದೆ.
ನಿರ್ಮಾಪಕರ ಮೇಲೆ 10 ಕೋಟಿ ರೂ. ಮಾನನಷ್ಟ ಕೇಸ್ ದಾಖಲಿಸಿದ ಕಿಚ್ಚ ಸುದೀಪ್
ಬೆಂಗಳೂರು: ಸ್ಯಾಂಡಲ್ವುಡ್ ನಿರ್ಮಾಪಕ, ವಿತರಕ ಎಂ.ಎನ್. ಕುಮಾರ್ ಮಾಡಿದ ಆರೋಪಗಳಿಗೆ ನಟ ಕಿಚ್ಚ ಸುದೀಪ್ (Kichcha Sudeep) ಕೊನೆಗೂ ಮೌನ ಮುರಿದಿದ್ದಾರೆ. “ಕಿಚ್ಚ ಸುದೀಪ್ ಅವರು ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ತೆಗೆದುಕೊಂಡು ಕೈಗೆ ಸಿಗುತ್ತಿಲ್ಲ” ಎಂಬುದು ಸೇರಿ ಹಲವು ಆರೋಪ ಮಾಡಿದ ಕುಮಾರ್ ಅವರಿಗೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ ನೀಡಿದ್ದಾರೆ. ಹಾಗೆಯೇ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಿದ್ದಾರೆ.