Site icon Vistara News

Vistara news launch | ಗಿರೀಶ್ ಕಾಸರವಳ್ಳಿಗೆ ಕಾಯಕಯೋಗಿ ಪುರಸ್ಕಾರದ ಗೌರವ

kasaravallli

ಬೆಂಗಳೂರು : ದೇಶ ಕಂಡ ಅತ್ಯಂತ ಸೃಜನಶೀಲ, ಪ್ರತಿಭಾವಂತ ಚಲನಚಿತ್ರ ನಿರ್ದೇಶಕ, ಕರುನಾಡಿನ ಹೆಮ್ಮೆ ಗಿರೀಶ್ ಕಾಸರವಳ್ಳಿ ಅವರಿಗೆ ವಿಸ್ತಾರ ನ್ಯೂಸ್‌ ಅನಾವರಣ ಸಮಾರಂಭದಲ್ಲಿ (Vistara news launch) ಕಾಯಕ ಯೋಗಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರಾಗಿರುವ ಶ್ರೀ ಗಿರೀಶ್‌ ಕಾಸರವಳ್ಳಿಯವರು ಇದುವರೆಗೆ ನಿರ್ದೇಶಿಸಿದ 18 ಸಿನಿಮಾಗಳಲ್ಲಿ 4 ಸಿನಿಮಾಗಳು ಭಾರತೀಯ ಸಿನಿಮಾದ ಅತಿಶ್ರೇಷ್ಠ ಪ್ರಶಸ್ತಿಯಾದ ಸ್ವರ್ಣ ಕಮಲ ಪ್ರಶಸ್ತಿಗಳನ್ನು ಪಡೆದಿವೆ. 14 ಸಿನಿಮಾಗಳು 25 ರಾಷ್ಟ್ರಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ.
45 ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ 21 ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರ ಚಿತ್ರಗಳ ಮುಡಿಗೇರಿವೆ.
ಶ್ರೀ ಗಿರೀಶ್ ಕಾಸರವಳ್ಳಿ 27ನೇ ವಯಸ್ಸಿನಲ್ಲೇ ಘಟಶ್ರಾದ್ಧ ಎಂಬ ಸಿನಿಮಾವನ್ನು ನಿರ್ದೇಶಿಸಿ ಮೊದಲ ಚಿತ್ರಕ್ಕೇ ಸ್ವರ್ಣ ಕಮಲವನ್ನು ಪಡೆದವರು. ನಂತರ ತಬರನ ಕಥೆ, ತಾಯಿ ಸಾಹೇಬ, ದ್ವೀಪ ಇತ್ಯಾದಿ ಶ್ರೇಷ್ಠ ಚಿತ್ರಗಳನ್ನು ನಿರ್ದೇಶಿಸಿ ಸ್ವರ್ಣ ಕಮಲ ಪ್ರಶಸ್ತಿಗೆ ಪಾತ್ರರಾದರು. Neo Realistic ಸಿನಿಮಾ ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿ ಕನ್ನಡ ಚಿತ್ರರಂಗದ ಕಡೆ ಇಡೀ ದೇಶ ತಿರುಗಿ ನೋಡುವಂತೆ ಮಾಡಿದವರು. ಬದುಕಿನ ತಲ್ಲಣಗಳನ್ನು ಸಶಕ್ತ ಹಾಗೂ ಮನೋಜ್ಞವಾಗಿ ತೆರೆ ಮೇಲೆ ಮೂಡಿಸುವ ಉತ್ಕೃಷ್ಟ ನಿರ್ದೇಶಕರು. ಇವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ

Exit mobile version