Site icon Vistara News

Kerala Floods : ಬಾನೆಟ್​ ಎತ್ತರಕ್ಕೆ ತುಂಬಿದ್ದ ಪ್ರವಾಹದ ನೀರಿನಲ್ಲಿ ಸಾಗಿ ಕುಟುಂಬವೊಂದನ್ನು ರಕ್ಷಿಸಿದ ಮಹೀಂದ್ರಾ ಬೊಲೆರೊ! video ಇದೆ

Kerala Floods

ಬೆಂಗಳೂರು: ಕೇರಳದಲ್ಲಿ ಮಳೆಯಿಂದ ಎಲ್ಲೆಡೆ ಅನಾಹುತಗಳು ಸಂಭವಿಸುತ್ತಿವೆ. ವಯನಾಡಲ್ಲಿ ಗುಡ್ಡ ಕುಸಿತ ಸಂಭವಿಸಿ ನೂರಾರು ಜೀವಗಳು ಮಣ್ಣು ಪಾಲಾದರೆ, ಇನ್ನೂ ಹಲವು ಕಡೆಗಳಲ್ಲಿ ಜನವಸತಿ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿವೆ. ಪ್ರವಾಹ ಮತ್ತು ಗುಡ್ಡ ಕುಸಿತದಿಂದಾಗಿ ಕೇರಳದ ಜನರ ಜೀವನವೇ ಅಸ್ತವ್ಯಸ್ತಗೊಂಡಿದೆ. ಏತನ್ಮಧ್ಯೆ, ಪ್ರವಾಹ ಹಾಗೂ ಇನ್ನಿತರ ಪ್ರಾಕೃತಿಕ ವಿಕೋಪಗಳಿಗೆ ಸಿಲುಕಿರುವವರನ್ನು ರಕ್ಷಿಸುವ ಹಲವಾರು ಸಾಹಸಗಾಥೆಗಳು ಕೇಳಿ ಬರುತ್ತಿವೆ. ಅಂತೆಯೇ ಇಲ್ಲ ಮಲಪ್ಪುರಂನಲ್ಲಿ ಬಾನೆಟ್ ಎತ್ತರಕ್ಕೆ ತುಂಬಿದ್ದ ನೀರಿನ ನಡುವೆ ಮಹೀಂದ್ರಾ ಬೊಲೆರೊ ಕಾರೊಂದು ಸಾಗಿ ಕುಟುಂಬವನ್ನು ರಕ್ಷಿಸಿದ ಪ್ರಸಂಗ ನಡೆದಿದೆ. ಇಲ್ಲಿ ಮಹೀಂದ್ರಾ ಬೊಲೆರೊ ಕಾರಿನ ಸಾಮರ್ಥ್ಯ ಹಾಗೂ ಚಾಲಕನ ಸಾಹಕ್ಕೆ ಶಹಬ್ಬಾಸ್​ ದೊರಕಿದೆ.

ಆಟೋಜರ್ನಲ್ ಇಂಡಿಯಾ ಇನ್​​ಸ್ಟಾಗ್ರಾಮ್​ ಪೋಸ್ಟ್​​ನಲ್ಲಿ ಇದರ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಕರಿ ಬಣ್ಣದ ಬೊಲೆರೊ ಕಾರಿನ ಚಾಲಕ ರಸ್ತೆಯೇ ಕಾರಣದಿದ್ದರೂ ಸಾಗಿ ಹಲವರನ್ನು ರಕ್ಷಿಸಿಕೊಂಡು ಬಂದಿರುವುದನ್ನು ಕಾಣಬಹುದು.

ಕೇರಳದಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದವರಿಗೆ ಆಪತ್ಬಾಂಧವ ಎನಿಕೊಂಡಿದ್ದ ಮಹೀಂದ್ರಾ ಬೊಲೆರೊ. ಲಕ್ಷಾಂತರ ಜನರನ್ನು ತಮ್ಮ ಗಮ್ಯಸ್ಥಾನಕ್ಕೆ ಸಾಗಿಸಿದ ಮಹೀಂದ್ರಾ ಬೊಲೆರೊ ಎಸ್​​ಯುವಿ ಈಗ ಕೇರಳದ ಮಲಪ್ಪುರಂನಲ್ಲಿ ಅತ್ಯಂತ ಪ್ರಭಾವಿ ಕೆಲಸ ಮಾಡುತ್ತಿದೆ. ಬೊಲೆರೊ ತನ್ನ ಜನರನ್ನು ಉಳಿಸಿದೆ ಮತ್ತು ಸುತ್ತಮುತ್ತಲಿನ ಕುಟುಂಬಗಳನ್ನು ರಕ್ಷಿಸಿದೆ, ಮಹೀಂದ್ರಾ ಬೊಲೆರೊದ ರಕ್ಷಣಾ ಕಾರ್ಯಾಚರಣೆಯನ್ನು ನೀವು ಇಷ್ಟಪಟ್ಟಿದ್ದೀರಾ ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಪ್ರಾಣವನ್ನೇ ಒತ್ತೆ ಇಟ್ಟು ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದ ಪತಿ

ದೇವರ ನಾಡು ಕೇರಳ ಈಗ ವರುಣನ (Kerala Floods) ಆರ್ಭಟಕ್ಕೆ ತತ್ತರಿಸಿ ಹೋಗಿದೆ. ವಯನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ (Wayanad Floods) ಉಂಟಾಗಿದ್ದು, ಸಾವಿನ ಸಂಖ್ಯೆ 300 ಸಮೀಪಿಸಿದೆ. 200ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದು, ಕಾರ್ಯಾಚರಣೆ ನಡೆಯುತ್ತಲೇ ಇದೆ. ಇನ್ನು, ವಯನಾಡು ಮಾತ್ರವಲ್ಲ, ಇಡುಕ್ಕಿ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. ಇನ್ನು, ಇಡುಕ್ಕಿಯಲ್ಲಿ ವ್ಯಕ್ತಿಯೊಬ್ಬರು ಉಕ್ಕಿ ಹರಿಯುತ್ತಿರುವ ನದಿಯ ಸೇತುವೆ ಮೇಲೆಯೇ ಪ್ರಾಣವನ್ನೂ ಲೆಕ್ಕಿಸದೆ ಕಾರಿನಲ್ಲಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ

ಹೌದು, ಇಡುಕ್ಕಿ ಜಿಲ್ಲೆಯಲ್ಲಿ ನದಿಯೊಂದು ಉಕ್ಕಿ ಹರಿಯುತ್ತಿದೆ. ಸೇತುವೆ ಮೇಲೆಯೂ ನೀರು ರಭಸವಾಗಿ ಹರಿಯುತ್ತಿದೆ. ಆದರೆ, ಗರ್ಭಿಣಿ ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾದ ಕಾರಣ ವ್ಯಕ್ತಿಯು ಪತ್ನಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಇಡುಕ್ಕಿ ಆಸ್ಪತ್ರೆಯತ್ತ ಹೊರಟಿದ್ದಾರೆ. ಸೇತುವೆಯ ಮೇಲೆಯೂ ನೀರು ಹರಿಯುವುದನ್ನು ಕಂಡ ಅವರು ಆತಂಕಕ್ಕೀಡಾಗಿದ್ದಾರೆ.

ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲೇಬೇಕಾದ ಕಾರಣ ಅವರು ರಭಸವಾಗಿ ಹರಿಯುತ್ತಿದ್ದ ನೀರನ್ನೂ ಲೆಕ್ಕಿಸದೆ, ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಇಬ್ಬರೂ ಸುರಕ್ಷಿತವಾಗಿ ಇಡುಕ್ಕಿ ಆಸ್ಪತ್ರೆ ತಲುಪಿದ್ದಾರೆ. ವ್ಯಕ್ತಿಯ ಪತ್ನಿ ಈಗ ಆರೋಗ್ಯದಿಂದ ಇದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್‌ ಆಗುತ್ತಲೇ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ನಿಗಾಗಿ ಶೌರ್ಯತನ ಮೆರೆದ ಈತನೇ ನಿಜವಾದ ಪತಿ ಎಂದೆಲ್ಲ ಹೊಗಳಿದ್ದಾರೆ.

Exit mobile version